Expensive Wedding: 17 ಕೋಟಿ ರೂಪಾಯಿ ಲೆಹೆಂಗಾ, ಎಲ್‌ಸಿಡಿ ಆಮಂತ್ರಣ, ದುಬಾರಿ ವಿವಾಹದ ಬಗ್ಗೆ ತಿಳಿಯಿರಿ

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆಗಳು ಒಂದು ಮಹತ್ವದ ಘಟ್ಟವಾಗಿದೆ. ಈ ದಿನವನ್ನು ವಿಶೇಷವಾಗಿಸಲು ವಧು-ವರರ ಪೋಷಕರು ಕೂಡಾ ತಮ್ಮ ಜೀವನದ ಸಂಪಾದನೆಯನ್ನೆಲ್ಲಾ ಮುಡಿಪಾಗಿಡುತ್ತಾರೆ. ಮಧ್ಯಮ ವರ್ಗದ ಜನರಾದರೆ 100 ಕ್ಕೂ ಅಧಿಕ ಮಂದಿಯನ್ನು ವಿವಾಹಕ್ಕೆ ಆಹ್ವಾನಿಸುವಲ್ಲಿ ಮದುವೆ ಕೊನೆಯಾಗುತ್ತದೆ.

ಆದರೆ ಬಿಲಿಯನೇರ್‌ಗಳ ಮದುವೆಯ ಶೈಲಿಯೇ ಬೇರೆ ರೀತಿಯದ್ದು. ಬಿಲಿಯನೇರ್‌ಗಳು ಮತ್ತು ಶ್ರೀಮಂತರು ತಮ್ಮ ಸಂಪತ್ತನ್ನು ಮದುವೆಯ ವೇಳೆ ಬೇಕಾಬಿಟ್ಟಿಯಾಗಿ ಖರ್ಚು ಮಾಡುವುದು ಸಾಮಾನ್ಯವಾಗಿಯೇ ಕಾಣುತ್ತದೆ. ತಮ್ಮ ಮಕ್ಕಳ ಮದುವೆಗಳಲ್ಲಿ ಸಾಮಾನ್ಯ ಜನರಿಗೆ ಹುಚ್ಚು ಎನಿಸುವ ವ್ಯವಸ್ಥೆಯನ್ನು ಕೂಡಾ ಶ್ರೀಮಂತರು ಮಾಡುತ್ತಾರೆ.

 17 ಕೋಟಿ ರೂಪಾಯಿ ಲೆಹೆಂಗಾ, ದುಬಾರಿ ವಿವಾಹದ ಬಗ್ಗೆ ತಿಳಿಯಿರಿ

ಹಾಗೆಯೇ ಎಲ್ಲದರಲ್ಲೂ ಅತಿ ಐಷಾರಾಮಿ ವ್ಯವಸ್ಥೆಗಳನ್ನು ಮಾಡುವುದು ಶ್ರೀಮಂತರ ವಿವಾಹದಲ್ಲಿ ಸಾಮಾನ್ಯವಾಗಿದೆ. ಇದರಿಂದಾಗಿಯೇ ಭಾರತದಲ್ಲಿನ ಬಿಲಿಯನೇರ್‌ಗಳ ವಿವಾಹವು ಜಗತ್ತಿನಲ್ಲೇ ಅತೀ ಹೆಚ್ಚು ಚರ್ಚೆಗೆ ಕಾರಣವಾಗುತ್ತದೆ, ನಮ್ಮಂತವರಲ್ಲಿ ಆಶ್ಚರ್ಯ ಹುಟ್ಟಿಸುತ್ತದೆ.

ದುಬಾರಿ ವಿವಾಹದ ಬಗ್ಗೆ ತಿಳಿಯಿರಿ

ಇಂದು ನಾವು ಗಣಿ ಉದ್ಯಮಿ ಜಿ ಜನಾರ್ಧನ್ ರೆಡ್ಡಿ ಅವರ ಪುತ್ರಿ ಬ್ರಹ್ಮಣಿ ರೆಡ್ಡಿ ಮತ್ತು ಕೈಗಾರಿಕೋದ್ಯಮಿ ವಿಕ್ರಮ್ ದೇವಾ ರೆಡ್ಡಿ ಅವರ ಪುತ್ರ ರಾಜೀವ್ ರೆಡ್ಡಿ ಅವರ ಅದ್ದೂರಿ ವಿವಾಹದ ಬಗ್ಗೆ ಮಾತನಾಡುತ್ತಿರುವುದು. ಭಾರತದಲ್ಲಿ ಇದುವರೆಗಿನ ಅತ್ಯಂತ ದುಬಾರಿ ಮದುವೆ ಎಂದು ಇದನ್ನು ಹೇಳಲಾಗುತ್ತದೆ.

ಈ ಮದುವೆಯು ಈ ಕುಟುಂಬಗಳು ಹೊಂದಿರುವ ಸಂಪತ್ತಿನ ವೈಭವೀಕರಣ ಎಂದರೆ ತಪ್ಪಾಗಲಾರದು. ಎಲ್‌ಸಿಡಿ ಆಮಂತ್ರಣ ಕಾರ್ಡ್‌ಗಳಿಂದ 17 ಕೋಟಿ ರೂಪಾಯಿ ಮೌಲ್ಯದ ಮದುವೆಯ ಲೆಹೆಂಗಾದವರೆಗೆ ಇದೊಂದು ಅತೀ ದುಬಾರಿ ವಿವಾಹವಾಗಿದೆ.

ಆಮಂತ್ರಣ ಕಾರ್ಡ್‌ಗಳು 'ಮೊದಲ ಆಕರ್ಷಣೆ' ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುವುದು ಸಾಮಾನ್ಯ. ಆದರೆ ರೆಡ್ಡಿಗಳ ಈ ಎಲ್‌ಸಿಡಿ ವೆಡ್ಡಿಂಗ್ ಕಾರ್ಡ್ ಶೋ ಸ್ಟಾಪರ್ ಆಗಿದೆ. ಆಮಂತ್ರಣ ಕಾರ್ಡ್‌ಗಳು ನೀಲಿ ಪೆಟ್ಟಿಗೆಯಲ್ಲಿದ್ದವು. ಹಾಗೆಯೇ ಆಮಂತ್ರಣ ಕಾರ್ಡ್‌ನಲ್ಲಿ ಎಲ್‌ಸಿಡಿ ಪರದೆಯಿದೆ. ರೆಡ್ಡಿಗಳು ಮದುವೆಗೆ ಅತಿಥಿಗಳನ್ನು ಆಹ್ವಾನಿಸುವ ಮೂರು ನಿಮಿಷಗಳ ವೀಡಿಯೊವನ್ನು ಕೂಡಾ ಇದರಲ್ಲಿ ಹೊಂದಿದ್ದಾರೆ.

ಕೇವಲ ಮದುವೆ ಕಾರ್ಡ್‌ಗೆ ಅಂದಾಜು 5 ಕೋಟಿ ರೂಪಾಯಿ ಖರ್ಚಾಗಿದೆ ಎಂದು ವರದಿ ಹೇಳುತ್ತದೆ. ವರದಿಯ ಪ್ರಕಾರ, 50,000 ಕ್ಕೂ ಹೆಚ್ಚು ಜನರನ್ನು 550 ರೂಪಾಯಿಗಳ ಮದುವೆಯ ಐದು ದಿನಗಳ ಆಚರಣೆಗೆ ಆಹ್ವಾನಿಸಲಾಗಿದೆ. ಸಂಪೂರ್ಣ ಮದುವೆಯ ನಿಖರವಾದ ವೆಚ್ಚವು ಈಗಲೂ ಚರ್ಚಾಸ್ಪದವಾಗಿದೆ.

ಕೆಲವರು ಇದು ಕೇವಲ 100 ಕೋಟಿ ರೂಪಾಯಿಯ ಮದುವೆ ಎಂದು ಹೇಳಿದರೆ, ಇತರ ವರದಿಗಳು 500 ಕೋಟಿ ರೂಪಾಯಿಗಳ ಮದುವೆ ಎಂದು ಹೇಳುತ್ತವೆ. ಅಲಂಕಾರಿಕ ಮತ್ತು ಅತ್ಯಂತ ದುಬಾರಿ ಆಮಂತ್ರಣ ಪತ್ರಗಳು ಮಾತ್ರವಲ್ಲದೆ ವಿಜಯನಗರ ಸಾಮ್ರಾಜ್ಯದಲ್ಲಿ ಅದ್ದೂರಿಯಾಗಿ ವಿವಾಹ ನಡೆಸಲಾಗಿದೆ.

ಬ್ರೆಜಿಲಿಯನ್ ಸಾಂಬಾ ನೃತ್ಯಗಾರರು, ಕಂಸಲೆ, ನಂದಿಕೋಲು ಕುಣಿತ ಮತ್ತು ಬುಡಕಟ್ಟು ನೃತ್ಯ ಸೇರಿದಂತೆ 100 ಸಾಂಸ್ಕೃತಿಕ ತಂಡಗಳು ಸೇರಿದಂತೆ ವಧುವಿನ ಮೆರವಣಿಗೆಯನ್ನು ನಡೆಸಲಾಗಿದೆ. ಮದುವೆಯ ದಿನ ವಧು ಧರಿಸಿರುವ ಲೆಹೆಂಗಾ ಅಂದಾಜು 17 ಕೋಟಿ ರೂಪಾಯಿ ಮತ್ತು ಆಭರಣಗಳು 90 ಕೋಟಿ ರೂಪಾಯಿ ಆಗಿದೆ.

ಬ್ರಹ್ಮಣಿ ರೆಡ್ಡಿ ಮತ್ತು ರಾಜೀವ್ ರೆಡ್ಡಿ ಅವರು 2016 ರಲ್ಲಿ ನೋಟು ರದ್ದಾದ ಸಂದರ್ಭದಲ್ಲಿ ವಿವಾಹವಾಗಿದ್ದಾರೆ. ಈ ವಿವಾಹವು ಎಷ್ಟು ಅಲಂಕಾರಿಕ ಮತ್ತು ಆಕರ್ಷಕವಾಗಿತ್ತೋ, ಜನರಿಂದ ಅಷ್ಟೇ ಆಕ್ರೋಶಕ್ಕೂ ಕೂಡಾ ಕಾರಣವಾಗಿತ್ತು. ಜನಾರ್ದನ ರೆಡ್ಡಿ ವಿರುದ್ಧವೂ ತನಿಖೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+