ಇತ್ತೀಚೆಗೆ ಬಾಲಿವುಡ್ ಸ್ಟಾರ್‌ಗಳು, ಕ್ರಿಕೆಟಿಗರು, ಸೆಲೆಬ್ರೆಟಿಗಳು ಹೊಸ ಹೊಸ ಮಾಡೆಲ್‌ನ ಕಾರುಗಳನ್ನು ಖರೀದಿ ಮಾಡುತ್ತಿರುವ ಸುದ್ದಿ ಹೆಚ್ಚಾಗಿ ಕೇಳಿಬರುತ್ತಿದೆ. ಇತ್ತೀಚಿಗಷ್ಟೆ ಅಜಯ್ ದೇವ್‌ಗನ್ ಹಾಗೂ ಕಿಯಾರಾ ಅಡ್ವಾನಿ ಐಷಾರಾಮಿ ಕಾರು ಖರೀದಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಈಗ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಲ್ಯಾಂಬೋರ್ಗಿನಿ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.
ಜನಪ್ರಿಯ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಭಾರತದಲ್ಲಿ ಈಗ ಅತೀ ದುಬಾರಿಯಾದ, ಅತೀ ವೇಗವಾದ ಎಸ್‌ಯುವಿ ಲ್ಯಾಂಬೋರ್ಗಿನಿ ಉರುಸ್ ಎಸ್ ಅನ್ನು ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ ಹೆಚ್ಚಾಗಿ ಅತೀ ವೇಗವಾಗಿ ಓಡಬಲ್ಲ ಕಾರುಗಳನ್ನು ಖರೀದಿ ಮಾಡುತ್ತಾ ಬಂದಿದ್ದಾರೆ. ಈ ಕ್ರಿಕೆಟ್ ದಿಗ್ಗಜನ ಗ್ಯಾರೇಜ್‌ನಲ್ಲಿ ಈಗಾಗಲೇ ಹಲವಾರು ದುಬಾರಿ ಕಾರುಗಳು ಇದೆ.

ಟೀಮ್-ಬಿಎಚ್‌ಪಿ ಹಂಚಿಕೊಂಡ ಇಮೇಜ್ ಪ್ರಕಾರ ಸಚಿನ್ ತೆಂಡೂಲ್ಕರ್ ಬಳಿ ಇರುವ ಲ್ಯಾಂಬೋರ್ಗಿನಿ ಉರುಸ್ ಎಸ್ ನೀಲಿ ಶೇಡ್ ಅನ್ನು ಹೊಂದಿದೆ. ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯಾದ ನೀಲಿ ಜೆರ್ಸಿಯ ಬಣ್ಣದ ಕಾರು ಇದಾಗಿದೆ. ಈ ಲ್ಯಾಂಬೋರ್ಗಿನಿ ಉರುಸ್ ಎಸ್ ಸುಮಾರು 4.18 ಕೋಟಿ ರೂಪಾಯಿಯ ಕಾರು ಆಗಿದೆ.
ಮುಕೇಶ್ ಅಂಬಾನಿ ಬಳಿಯೂ ಇಲ್ಲ
ಭಾರತದಲ್ಲಿನ ಇತ್ತೀಚಿನ ಲ್ಯಾಂಬೋರ್ಗಿನಿಗಳಲ್ಲಿ ಲ್ಯಾಂಬೋರ್ಗಿನಿ ಉರುಸ್ ಎಸ್ ಕೂಡಾ ಒಂದಾಗಿದೆ. ಹಾಗೆಯೆ ಇದು ನೂತನ ಮಾಡೆಲ್ ಆಗಿದೆ. ಈ ಮಾಡೆಲ್ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿ ಬಳಿಯೂ ಇಲ್ಲ. ಆದರೆ ಮುಕೇಶ್ ಅಂಬಾನಿಯ ಬಳಿ ಲ್ಯಾಂಬೋರ್ಗಿನಿ ಉರುಸ್ ಇದೆ. ಹಾಗೆಯೆ ಲ್ಯಾಂಬೋರ್ಗಿನಿಯ ಹಲವಾರು ಮಾಡೆಲ್‌ಗಳು ಇದೆ.
ಹೊಸ ಲ್ಯಾಂಬೋರ್ಗಿನಿ ಉರುಸ್ ಎಸ್ ಮೂಲ ಉರುಸ್ ಸೂಪರ್ ಎಸ್‌ಯುವಿಯ ಒಂದು ಮಾಡೆಲ್ ಆಗಿದೆ. ಈ ಸೂಪರ್‌ಕಾರ್‌ನಲ್ಲಿ, ಸಚಿನ್ ತೆಂಡೂಲ್ಕರ್ 0-100 ಕಿಮೀ / ಗಂ ವೇಗವನ್ನು 3.5 ಸೆಕೆಂಡುಗಳಲ್ಲಿ ಮತ್ತು 0-200 ಕಿಮೀ / ಗಂ ವೇಗವನ್ನು 12.5 ಸೆಕೆಂಡ್‌ಗಳಲ್ಲಿ ಚಲಿಸಬಹುದಾಗಿದೆ. 305 ಕಿಮೀ/ಗಂಟೆಯ ಗರಿಷ್ಠ ವೇಗವನ್ನು ಹೊಂದಿದೆ. ಇದರ ಟ್ವಿನ್-ಟರ್ಬೊ ಎಂಜಿನ್ 850 Nm ಗರಿಷ್ಠ ಟಾರ್ಕ್ ಅನ್ನು ಹೊಂದಿದೆ.
ಸಚಿನ್ ತೆಂಡೂಲ್ಕರ್ ಬಳಿ ಇರುವ ಕಾರುಗಳು
ಸಚಿನ್ ತೆಂಡೂಲ್ಕರ್ ಹಲವಾರು ಉನ್ನತ ಶ್ರೇಣಿಯ ಕಾರುಗಳನ್ನು ಹೊಂದಿದ್ದರೂ ಕೂಡಾ ಇದು ಅವರ ಮೊದಲ ಲ್ಯಾಂಬೋರ್ಗಿನಿ ಕಾರು ಆಗಿದೆ. ಕ್ರಿಕೆಟ್‌ನ ದೇವರು ಎಂದು ಕರೆಯಲ್ಪಡುವ ಈ ದಿಗ್ಗಜನ ಬಳಿ ಹಲವಾರು ಐಷಾರಾಮಿ ಕಾರುಗಳು ಇದೆ. ಪೋರ್ಷೆ 911 ಟರ್ಬೊ ಎಸ್, ಪೋರ್ಷೆ ಕಯೆನ್ನೆ ಟರ್ಬೊ, ಬಿಎಂಡಬ್ಲ್ಯೂ i8 ಮತ್ತು ಇತರ ಹಲವಾರು ದುಬಾರಿಯ ಕಾರುಗಳಿದೆ.
ಅಜಯ್ ದೇವ್‌ಗನ್, ಕಿಯಾರಾ ಕಾರುಗಳು
ಕಿಯಾರಾ ಅಡ್ವಾಣಿ ಪ್ರಸ್ತುತ ಬಾಲಿವುಡ್‌ನ ಅತ್ಯಂತ ಜನಪ್ರಿಯ ಮತ್ತು ಹೆಚ್ಚಾಗಿ ಜನರ ಬಾಯಲ್ಲಿ ಕೇಳಿ ಬರುವ ಹೆಸರು ಆಗಿದೆ. ಈ ಜನಪ್ರಿಯ ನಟಿ ಕಿಯಾರಾ ಅಡ್ವಾಣಿ 2.69 ಕೋಟಿ ರೂಪಾಯಿ ಮೌಲ್ಯದ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್580 ಐಷಾರಾಮಿ ಸೆಡಾನ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಭೂಲ್ ಭೂಲೈಯಾ 2 ಸ್ಟಾರ್ ಕಿಯಾರಾ ಅಡ್ವಾಣಿ ಈಗಾಗಲೇ ತನ್ನ ದುಬಾರಿ ಕಾರು ಸಂಗ್ರಹಣೆಗೆ ಹೆಸರುವಾಸಿಯಾಗಿದ್ದಾರೆ. ರಿಜಿಸ್ಟಾರ್ ಪ್ಲೇಟ್‌ನ ಪ್ರಕಾರ ಕಿಯಾರಾ ಅಡ್ವಾಣಿ ಈ ಕಾರನ್ನು ಮೇ 26ರಂದು ಖರೀದಿ ಮಾಡಿದ್ದಾರೆ. ಮರ್ಸಿಡಿಸ್-ಮೇಬ್ಯಾಕ್ ಸೆಡಾನ್‌ಗಳು ಆರಾಮ ಮತ್ತು ಐಷಾರಾಮಿ ಫೀಚರ್‌ಗಳಿಗೆ ಹೆಸರುವಾಸಿಯಾಗಿದೆ. ಮೇಬ್ಯಾಕ್ S580 ಕಾರು ವಿಶೇಷವಾದ ಕಾರು ಆಗಿದೆ. ಯಾಕೆಂದರೆ ಇದು ಮೊದಲ 'ಮೇಡ್-ಇನ್ ಇಂಡಿಯಾ' ಮರ್ಸಿಡಿಸ್-ಮೇಬ್ಯಾಕ್ ಆಗಿದೆ.
ವರದಿಯ ಪ್ರಕಾರ ನಟ ಅಜಯ್ ದೇವ್‌ಗನ್ ಸುಮಾರು 1.95 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ i7 ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದಾರೆ. ಬಿಎಂಡಬ್ಲ್ಯೂ i7 ಭಾರತದಲ್ಲಿ ಬ್ರ್ಯಾಂಡ್‌ನ ಪ್ರಮುಖ ಇವಿ ಆಗಿದೆ. ಕಾರ್ಟೊಕ್ ವರದಿಯ ಪ್ರಕಾರ, ನಟ ಅಜಯ್ ದೇವ್‌ಗನ್ ಖರೀದಿ ಮಾಡಿರುವ ಬಿಎಂಡಬ್ಲ್ಯೂ i7 ಇವಿ ಟ್ವಿಲೈಟ್ ಪರ್ಪಲ್ ಪರ್ಲ್ ಮೆಟಾಲಿಕ್‌ನ ಕ್ಲಾಸಿ ಶೇಡ್ ಅನ್ನು ಹೊಂದಿದೆ.


Click it and Unblock the Notifications