ಕಳೆದ ಎರಡು ದಶಕಗಳಲ್ಲಿ ಮೊಮೊಸ್ ದೇಶದ ಅತ್ಯಂತ ಜನಪ್ರಿಯ ತಿನಿಸುಗಳಲ್ಲಿ ಒಂದಾಗಿ ಬದಲಾವಣೆಯಾಗಿದೆ. ನಾವು ಇನ್‌ಸ್ಟಾ ನೋಡಲಿ, ಫೇಸ್‌ಬುಕ್ ನೋಡಲಿ, ಎಲ್ಲಿ ನೋಡಿದರೂ ಮೊಮೊಸ್‌ಗಳ ಟ್ರೋಲ್‌ಗಳು, ರೀಲ್ಸ್‌ಗಳು, ಸ್ಟೋರಿಗಳನ್ನು ನಾವು ನೋಡಬಹುದು. ಈ ನಡುವೆ ವ್ಯಕ್ತಿಯೊಬ್ಬರು ಜನರ ಈ ಮೊಮೊಸ್ ಕ್ರೇಜ್ ಅನ್ನೇ ತನ್ನ ಬಂಡವಾಳವನ್ನಾಗಿಸಿದ್ದಾರೆ!
ಹೌದು, ಈ ಕೋಲ್ಕತ್ತಾದ ವ್ಯಕ್ತಿ ಮೊಮೊಸ್ ಮೇಲಿನ ಈ ಕ್ರೇಜ್ ಅನ್ನು 2100 ಕೋಟಿ ರೂಪಾಯಿಯ ದೊಡ್ಡ ಸಂಸ್ಥೆಯನ್ನಾಗಿ ರಚನೆ ಮಾಡುವಲ್ಲಿ ಬಳಕೆ ಮಾಡಿಕೊಂಡಿದ್ದಾರೆ. ಅದರಲ್ಲಿ ಸಫಲವಾಗಿದ್ದಾರೆ. ಆ ವ್ಯಕ್ತಿಯ ಹೆಸರು ಸಾಗರ್ ದರಿಯಾನಿ. ವಾವ್ ಮೊಮೊ ಸಹ-ಸಂಸ್ಥಾಪಕರಾಗಿರುವ ಸಾಗರ್ ದರಿಯಾನಿ ಅವರ ಕಂಪನಿಯು ಪ್ರತಿದಿನ 6 ಲಕ್ಷ ಮೊಮೊಸ್‌ಗಳನ್ನು ಮಾರಾಟ ಮಾಡುತ್ತಿದೆ ಎಂದರೆ ನೀವು ನಂಬುತ್ತೀರಾ?

ಸಾಗರ್ ದರಿಯಾನಿ ಯಾರು ತಿಳಿಯಿರಿ
ತನ್ನ ಮಕ್ಕಳು ಮುಂದೆ ಏನಾದರೂ ಮಾಡಬೇಕು, ದೊಡ್ಡ ವ್ಯಕ್ತಿ ಎನಿಸಿಕೊಳ್ಳಬೇಕು ಎಂದು ಯಾವ ತಂದೆ ತಾಯಿ ಬಯಸುವುದಿಲ್ಲ ಹೇಳಿ?. ಅದರಂತೆಯೇ ಸಾಗರ್ ದರಿಯಾನಿಯ ತಂದೆ, ತಾಯಿಯ ಆಸೆಯಾಗಿತ್ತು. ಈ ಬಗ್ಗೆ ತಮ್ಮ ಪುತ್ರನಲ್ಲಿ ಪೋಷಕರು ಮಾತಾನಾಡುವಾಗ ಸಾಗರ್ ದರಿಯಾನಿ ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಪಡೆಯುತ್ತಿದ್ದರು.
ಆದರೆ ಸಾಗರ್ ದರಿಯಾನಿ ಮೊಮೊಸ್‌ಗಳನ್ನು ಮಾರಾಟ ಮಾಡುವ ಕಲ್ಪನೆಯನ್ನು ತನ್ನ ಪೋಷಕರ ಮುಂದೆ ಇರಿಸಿ, ಈಗ ಮೊಮೊಸ್ ಮಾರಾಟ ಮಾಡುವ ದೊಡ್ಡ ಸಂಸ್ಥೆಯನ್ನೇ ನಿರ್ಮಾಣ ಮಾಡಿದ್ದಾರೆ. ಕಂಪನಿಯು ಪ್ರಾರಂಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದೆ. ಆದರೆ ಈಗ ದೇಶದಾದ್ಯಂತ ವಿಸ್ತರಿಸಿಕೊಂಡಿದೆ.
2008 ರಲ್ಲಿ, ಸಾಗರ್ ದರಿಯಾನಿ ಮತ್ತು ಅವರ ಸ್ನೇಹಿತ ಬಿನೋದ್ ಕುಮಾರ್ ತಮ್ಮ 30000 ರೂಪಾಯಿ ಉಳಿತಾಯದಿಂದ ಸಣ್ಣ ಮೊಮೊಸ್ ಅಂಗಡಿಯನ್ನು ಪ್ರಾರಂಭಿಸಿದರು. ಆರಂಭದಲ್ಲಿ ಕೇವಲ 1 ಟೇಬಲ್ ಮತ್ತು ಇಬ್ಬರು ಅರೆಕಾಲಿಕ ಮೊಮೊಸ್ ತಯಾರಿಕರು ಇವರ ಈ ಮೊಮೊಸ್ ಅಂಗಡಿಯಲ್ಲಿ ಇದ್ದರು. ಈಗ ದೊಡ್ಡ ಸಂಸ್ಥೆಯಾಗಿದೆ.
ಐಡಿಯಾ ಬಂದಿದ್ದು ಹೇಗೆ?
ತಡರಾತ್ರಿಯಲ್ಲಿ ಓದುವಾಗ ಪಿಜ್ಜಾ ಮತ್ತು ಬರ್ಗರ್ ಆರ್ಡರ್ ಮಾಡುತ್ತಿದ್ದರು, ಈ ಸಂದರ್ಭದಲ್ಲಿ ಈ ಸ್ನೇಹಿತರಿಬ್ಬರಿಗೆ ಮೊಮೊಸ್ ಶಾಪ್ ತೆರೆಯಬಹುದಲ್ಲವೇ ಎಂದು ಮಾತನಾಡಿಕೊಂಡಿದ್ದಾರೆ. ಮೊಮೊಸ್‌ಗೆ ಪ್ರತ್ಯೇಕವಾಗಿ ಯಾವುದೇ ಒಂದು ಬ್ರ್ಯಾಂಡ್ ಇಲ್ಲ ಎಂದು ಅವರ ತಲೆಗೆ ಈ ಸಂದರ್ಭದಲ್ಲಿ ಬಂದಿದೆ.
ಬಳಿಕ ಸಂಸ್ಥೆಯನ್ನು ಆರಂಭ ಮಾಡಿದರು. ಮೊದಲ ಎರಡು ವರ್ಷ ಹಣಕ್ಕಾಗಿ ಹೆಣಗಾಡಿದರು. ಕಂಪನಿಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಅವರು ವಾವ್ ಮೊಮೊಸ್ ಟೀ ಶರ್ಟ್‌ಗಳನ್ನು ಧರಿಸುತ್ತಿದ್ದರು. ಮೊಮೊಸ್ ರೆಸಿಪಿಗಳನ್ನು ಹೊಸತನವನ್ನು ತರುವ ಪ್ರಯತ್ನಗಳನ್ನು ಮಾಡಿದರು.
ಸಾಗರ್ ದರಿಯಾನಿ ಮತ್ತು ಅವರ ಸ್ನೇಹಿತ ಬಿನೋದ್ ಕುಮಾರ್ ಅವರ ಸಣ್ಣ ಮೊಮೊಸ್ ಸ್ಟಾಲ್ ಈಗ ಯಶಸ್ವಿಯಾಗಿದೆ. ಈಗ ಫ್ರ್ಯಾಂಚೈಸ್ ಮಾದರಿಯನ್ನು ಬಳಸಿಕೊಂಡು ಹಲವಾರು ಇತರ ಮಳಿಗೆಗಳನ್ನು ತೆರೆದಿದ್ದಾರೆ. ಈಗ ಅವರು ದೇಶದಾದ್ಯಂತ ಸುಮಾರು 800 ಪಾಯಿಂಟ್‌ಗಳಲ್ಲಿ ಮೊಮೊಸ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಂಸ್ಥೆಯ ಮೌಲ್ಯವು 2130 ಕೋಟಿ ರೂಪಾಯಿ ಆಗಿದ್ದು, ಕಂಪನಿಯ ಆದಾಯವು 2023 ರಲ್ಲಿ 222 ಕೋಟಿ ರೂಪಾಯಿಯಿಂದ 400 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
More From GoodReturns

Silver Rate Today: ಭಾರತದಲ್ಲಿ ಪಾತಾಳಕ್ಕಿಳಿದ ಬೆಳ್ಳಿ; ಎಷ್ಟಿದೆ ಗೊತ್ತಾ ಇಂದಿನ ದರ?

LPG Crisis: ಭಯಪಡಬೇಡಿ, ಅವಸರದಲ್ಲಿ ಬುಕ್ ಮಾಡ್ಬೇಡಿ; ಗೃಹಬಳಕೆಯ ಎಲ್ಪಿಜಿ ಬಳಕೆದಾರರಿಗೆ ಕೇಂದ್ರ ಭರವಸೆ

LPG E-KYC: ಎಲ್ಪಿಜಿ ಸಿಗಬೇಕೆಂದರೆ ಈ ಕೆಲಸ ಮಾಡಲೇಬೇಕು! ಕೇಂದ್ರದ ಖಡಕ್ ಸೂಚನೆ

Gold-Silver Rate Live Updates: ಇಂದು ಚಿನ್ನ, ಬೆಳ್ಳಿ ದರ ಇಳಿಕೆಯೋ, ಏರಿಕೆಯೋ? ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

Silver Rate Today: ಬೆಳ್ಳಿ ಪ್ರಿಯರಿಗೆ ಜಾಕ್ ಪಾಟ್! ಶನಿವಾರ ಬೆಲೆ ಭರ್ಜರಿ ಕುಸಿತ

Silver Price Today: ಪಾತಾಳಕ್ಕಿಳಿದ ಬೆಳ್ಳಿ ದರ; ಬರೋಬ್ಬರಿ 5000 ರೂ. ಇಳಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Silver Rate Today: ಚಿನ್ನದಂತೆ ಬೆಳ್ಳಿ ದರವೂ ಭಾರೀ ಕುಸಿತ; ಒಂದೇ ದಿನ 10,000 ರೂ. ಇಳಿಕೆ

LPG-Milk: ಎಲ್ಪಿಜಿ ಪೂರೈಕೆ ಕೊರತೆ; ಹಾಲು ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ!

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Fixed Deposits vs NSC: ತೆರಿಗೆ ಉಳಿತಾಯಕ್ಕಾಗಿ ಎಫ್ಡಿ vs ಎನ್ಎಸ್ಸಿ; ಯಾವುದು ಬೆಸ್ಟ್?



Click it and Unblock the Notifications