ಸಹಾರಾ ಸಹಕಾರಿ ಸಂಸ್ಥೆಯು ಕೆಲವು ವರ್ಷಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಹಕಾರಿ ಸಂಸ್ಥೆಯಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಿ ಹಣ ಕಳೆದುಕೊಂಡವರು ಅದೆಷ್ಟೋ ಮಂದಿ ಇದ್ದಾರೆ. ಆದರೆ ಈಗ ಹಣ ಕಳೆದುಕೊಂಡವರು ತಮ್ಮ ಹಣವನ್ನು ರಿಫಂಡ್ ಪಡೆಯಲು ಸಾಧ್ಯವಾಗುತ್ತದೆ. ಹೌದು, ಮಾರ್ಚ್ 29 ರಂದು ನೀಡಿದ ಸುಪ್ರೀಂ ಕೋರ್ಟ್ ಆದೇಶದಂತೆ ಹಣ ರಿಫಂಡ್ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸದಾಗಿ ಸಹಾರಾ ರಿಫಂಡ್ ಪೋರ್ಟಲ್ ಅನ್ನು ಆರಂಭ ಮಾಡಿದೆ.
ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಮಂಗಳವಾರ ಸೆಂಟ್ರಲ್ ರಿಜಿಸ್ಟಾರ್ ಆಫ್ ಕೋಆಪರೇಟಿವ್ ಸೊಸೈಟೀಸ್ (ಸಿಆರ್‌ಸಿಎಸ್) ಸಹಾರಾ ರಿಫಂಡ್ ಪೋರ್ಟಲ್ ಅನ್ನು ಚಾಲನೆ ನೀಡಿದ್ದಾರೆ. ಈ ಪೋರ್ಟಲ್ ಮೂಲಕ ಹಣ ಕಳೆದುಕೊಂಡವರು ತಮ್ಮ ದಾಖಲೆ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಹಾಗೆಯೇ ಅರ್ಜಿ ಸಲ್ಲಿಸಿದ 45 ದಿನದಲ್ಲಿ ನಿಮ್ಮ ಖಾತೆಗೆ ರಿಫಂಡ್ ಮೊತ್ತ ಜಮೆಯಾಗಲಿದೆ. ಯಾರು ಅರ್ಹರು, ಹೇಗೆ ರಿಫಂಡ್ ಪಡೆಯುವುದು ಎಂದು ತಿಳಿಯಲು ಮುಂದೆ ಓದಿ...

ಯಾರು ಅರ್ಹರು, ಕೊನೆಯ ದಿನಾಂಕ ಯಾವಾಗ?
ಹತ್ತು ಸಾವಿರ ಅಥವಾ ಅದಕ್ಕಿಂತ ಅಧಿಕ ಮೊತ್ತವನ್ನು ಡೆಪಾಸಿಟ್ ಮಾಡಿದ ಹತ್ತು ಕೋಟಿ ಹೂಡಿಕೆದಾರರಿಗೆ ಮೊದಲ ಬಾರಿಗೆ ಹತ್ತು ಸಾವಿರ ರೂಪಾಯಿವರೆಗೆ ರಿಫಂಡ್ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಅಮಿತ್ ಶಾ ತಿಳಿಸಿದ್ದಾರೆ. 5000 ಕೋಟಿ ರೂಪಾಯಿ ಪಾವತಿಯು ಮುಗಿದ ಬಳಿಕ ಉಳಿದ ಮೊತ್ತವನ್ನು ರಿಫಂಡ್ ಮಾಡಲು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಸಹಾರಾ ಗ್ರೂಪ್‌ನ ಕೋಆಪರೇಟಿವ್ ಸೊಸೈಟಿಗಳಲ್ಲಿ ಈ ಕೆಳಗಿನ ದಿನಾಂಕದಂತೆ ಡೆಪಾಟಿಟ್ ಮಾಡಿರುವವರು ರಿಫಂಡ್ ಪಡೆಯಲು ಅರ್ಹರಾಗಿರುತ್ತಾರೆ:
* ಮಾರ್ಚ್ 22, 2022ಕ್ಕೂ ಮುನ್ನ ಸಹಾರಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್, ಸಹರಾಯನ್ ಯೂನಿವರ್ಸಲ್ ಮಲ್ಟಿಪರ್ಪಸ್ ಸೊಸೈಟಿ ಲಿಮಿಟೆಡ್, ಹಮಾರಾ ಇಂಡಿಯಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್‌ನಲ್ಲಿ ಡೆಪಾಸಿಟ್ ಮಾಡಿದವವರು
* ಮಾರ್ಚ್ 29, 2023ಕ್ಕೂ ಮುನ್ನ ಸ್ಟಾರ್ಸ್ ಮಲ್ಟಿಪರ್ಪಸ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್‌ನಲ್ಲಿ ಡೆಪಾಸಿಟ್ ಮಾಡಿದವರು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
1. ಮೆಂಬರ್‌ಶಿಪ್ ನಂಬರ್
2. ಡೆಪಾಸಿಟ್ ಅಕೌಂಟ್ ನಂಬರ್
3. ಆಧಾರ್‌ನೊಂದಿಗೆ ಲಿಂಕ್ ಆದ ಮೊಬೈಲ್ ನಂಬರ್ (ಕಡ್ಡಾಯ)
4. ಡೆಪಾಸಿಟ್ ಮಾಡಿದ ದೃಢೀಕರಣ/ ಪಾಸ್‌ಬುಕ್
5. ಪ್ಯಾನ್ ಕಾರ್ಡ್ (50 ಸಾವಿರ ಅಥವಾ ಅದಕ್ಕಿಂತ ಅಧಿಕ ಹಣ ಕ್ಲೈಮ್ ಮಾಡುವುದಾದರೆ ಮಾತ್ರ ಕಡ್ಡಾಯ)
ಸಹಾರಾ ರಿಫಂಡ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: https://mocrefund.crcs.gov.in/ ಪೋರ್ಟಲ್ ಅನ್ನು ತೆರೆಯಿರಿ ಅಥವಾ ಇಲ್ಲಿ ಕ್ಲಿಕ್ ಮಾಡಿ. ರಿಜಿಸ್ಟಾರ್ ಮಾಡಲು 12 ಡಿಜಿಟ್‌ನ ಮೆಂಬರ್‌ಶಿಪ್ ನಂಬರ್, ಆಧಾರ್‌ನ ಕೊನೆಯ ನಾಲ್ಕು ಸಂಖ್ಯೆ, ಆಧಾರ್ ಲಿಂಕ್ ಆದ ಹತ್ತು ಡಿಜಿಟ್‌ನ ಮೊಬೈಲ್ ಸಂಖ್ಯೆ, ಕ್ಯಾಪ್ಚಾ ನಮೂದಿಸಿ "Get OTP" ಕ್ಲಿಕ್ ಮಾಡಿ.
ಹಂತ 2: ಆಧಾರ್ ಲಿಂಕ್ ಆದ ಮೊಬೈಲ್‌ಗೆ ಬಂದ ಒಟಿಪಿಯನ್ನು ನಮೂದಿಸಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ
ಹಂತ 3: ಡೆಪಾಸಿಟರ್ ಲಾಗಿನ್ ಸ್ಕ್ರೀನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್‌ನ ಕೊನೆಯ 4 ಡಿಜಿಟ್, ಆಧಾರ್‌ನ ಕೊನೆಯ ನಾಲ್ಕು ಸಂಖ್ಯೆ, ಆಧಾರ್ ಲಿಂಕ್ ಆದ ಹತ್ತು ಡಿಜಿಟ್‌ನ ಮೊಬೈಲ್ ಸಂಖ್ಯೆ, ಕ್ಯಾಪ್ಚಾ ನಮೂದಿಸಿ.
ಹಂತ 4: ಮತ್ತೆ "Get OTP" ಕ್ಲಿಕ್ ಮಾಡಿ. ಬಂದ ಒಟಿಪಿಯನ್ನು ನಮೂದಿಸಿ.
ಹಂತ 5: ಲಾಗಿನ್ ಆದ ಬಳಿಕ ಆಧಾರ್ ನಮೂದಿಸಿ ನಿಮ್ಮ ಒಪ್ಪಿಗೆ ಸೂಚಿಸಿ. ಮುಂದಿನ ಪೇಜ್‌ನಲ್ಲಿ ಎಲ್ಲ ಷರತ್ತುಗಳನ್ನು ಸರಿಯಾಗಿ ಓದಿ ಬಳಿಕ "I agree." ಕ್ಲಿಕ್ ಮಾಡಿ.
ಹಂತ 6: ವೈಯಕ್ತಿಕ ಮಾಹಿತಿ ಅಡಿಯಲ್ಲಿ ನಿಮ್ಮ 12 ಡಿಜಿಟ್‌ನ ಆಧಾರ್ ಸಂಖ್ಯೆ ನಮೂದಿಸಿ ಮತ್ತೆ "Get OTP" ಕ್ಲಿಕ್ ಮಾಡಿ.
ಹಂತ 7: ನಿಮ್ಮ ಆಧಾರ್ ಲಿಂಕ್ ಆದ ಮೊಬೈಲ್‌ಗೆ ಒಟಿಪಿ ಬರಲಿದೆ, ಅದನ್ನು ನಮೂದಿಸಿ "Verify OTP" ಕ್ಲಿಕ್ ಮಾಡಿ.
ಹಂತ 8: ಒಟಿಪಿ ವೆರಿಫೈ ಆದ ಬಳಿಕ ನಿಮ್ಮ ಆಧಾರ್ ಮಾಹಿತಿಯಾದ ಮೊದಲ ಹೆಸರು ಕೊನೆಯ ಹೆಸರು, ಜನನ ದಿನಾಂಕ, ಮೊದಲಾದವುಗಳು ಕಾಣಿಸಲಿದೆ.
ಹಂತ 9: ಹೆಚ್ಚುವರಿಯಾಗಿ ನೀವು ನಿಮ್ಮ ಇಮೇಲ್ ವಿಳಾಸವನ್ನು ಹಾಕಬಹುದಾಗಿದೆ. "Save Email," ಕ್ಲಿಕ್ ಮಾಡಿ "Next" ಕ್ಲಿಕ್ ಮಾಡಬೇಕಾಗುತ್ತದೆ.
ಹಂತ 10: ಡೆಪಾಸಿಟ್ ಮಾಡಿದ ಬಗ್ಗೆ ಇರುವ ಎಲ್ಲ ಮಾಹಿತಿಯನ್ನು ನೀವು ಮುಂದಿನ ಪೇಜ್‌ನಲ್ಲಿ ನಮೂದಿಸಿ.
ಹಂತ 11: ಎಲ್ಲ ಮಾಹಿತಿಯನ್ನು ಪರಿಶೀಲಿಸಲು "Submit Claim" ಕ್ಲಿಕ್ ಮಾಡಿ. ಇಲ್ಲಿ ನೀವು ಹಲವಾರು ಕ್ಲೈಮ್ ಮನವಿಗಳನ್ನು ಕಾಣಬಹುದಾಗಿದೆ.
ಹಂತ 12: ಎಲ್ಲ ಕ್ಲೈಮ್ ಮಾಹಿತಿಯನ್ನು ನಮೂದಿಸಿದ ಬಳಿಕ ಎಲ್ಲ ಮಾಹಿತಿಯನ್ನು ನಮೂದಿಸಲಾದ ಕ್ಲೈಮ್ ಮನವಿ ಫಾರ್ಮ್ ಸಿದ್ಧವಾಗಲಿದೆ. ಫಾರ್ಮ್ ಸಿದ್ಧವಾಗುವುದಕ್ಕೂ ಮುನ್ನ ನೀವು ಎಲ್ಲ ಕ್ಲೈಮ್ ಅನ್ನು ನಮೂದಿಸಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಅದಾದ ಬಳಿಕ ಯಾವುದೇ ಬದಲಾವಣೆಯನ್ನು ಮಾಡಲು ಸಾಧ್ಯವಾಗುವುದಿಲ್ಲ.
ಹಂತ 13: ನಿಮ್ಮ ನೂತನ ಫೋಟೋಗ್ರಾಫ್ ಅಟೆಸ್ಟ್ ಮಾಡಿ. ನಿಮ್ಮ ಕ್ಲೈಮ್ ಫಾರ್ಮ್‌ಗೆ ಫೋಟೋಗ್ರಾಫ್ ಜೊತೆ ಸಹಿ ಮಾಡಿ.
ಹಂತ 14: "Upload Document" ಸ್ಕ್ರೀನ್‌ನಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಕ್ಲೈಮ್ ಫಾರ್ಮ್ ಅನ್ನು ಅಪ್‌ಲೋಡ್ ಮಾಡಿ. (50 ಸಾವಿರ ಅಥವಾ ಅದಕ್ಕಿಂತ ಅಧಿಕ ಹಣ ಕ್ಲೈಮ್ ಮಾಡುವುದಾದರೆ ಪ್ಯಾನ್ ಕಾರ್ಡ್ ಕಡ್ಡಾಯ). ಫೋಟೋಗ್ರಾಫ್ ಇರುವ ಕ್ಲೈಮ್ ಮನವಿ ಫಾರ್ಮ್‌ನ ಸೈಸ್ ಲಿಮಿಟ್ 12MB ಮತ್ತು ಪ್ಯಾನ್ ಕಾರ್ಡ್‌ನ ಸೈಸ್ ಲಿಮಿಟ್ 50KB ಆಗಿದೆ.
ಹಂತ 15: thank you ಎಂಬ ಪೇಜ್ ಕಾಣಲಿದೆ, ಅಲ್ಲಿಯೇ claim request number ಇರಲಿದೆ. ಈ ಕ್ಲೈಮ್ ನಂಬರ್ ಅಗತ್ಯವಾಗಿದೆ. ಇದನ್ನು ಬರೆದಿಟ್ಟುಕೊಳ್ಳಿ.


Click it and Unblock the Notifications