ಟಾಟಾ ಗ್ರೂಪ್ ನೇತೃತ್ವದ ಏರ್‌ಲೈನ್ ಸಂಸ್ಥೆಯಾದ ಏರ್ ಇಂಡಿಯಾ ತನ್ನ ವೇತನ ರಚನೆಯನ್ನು ಪರಿಷ್ಕರಣೆ ಮಾಡಿದೆ. ಏರ್ ಇಂಡಿಯಾ ತನ್ನ ಪೈಲಟ್‌ಗಳು ಮತ್ತು ಸಿಬ್ಬಂದಿಗಳ ವೇತನವನ್ನು ಏರ್ ಇಂಡಿಯಾ ಏಪ್ರಿಲ್ 1, 2023ರಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡಿದೆ. ಈ ಪರಿಷ್ಕೃತ ವೇತನ ರಚನೆಯ ಪ್ರಕಾರ ಏರ್ ಇಂಡಿಯಾದಲ್ಲಿ ಪೈಲಟ್‌ಗೆ ಕನಿಷ್ಠ ಮಾಸಿಕ ವೇತನವು 50 ಸಾವಿರ ರೂಪಾಯಿ ಆಗಿದೆ.
ಹೌದು, ವೇತನ ನೂತನ ವೇತನ ರಚನೆಯ ಪ್ರಕಾರ ಪೈಲಟ್‌ಗೆ ಕನಿಷ್ಠ ವೇತನವು 50 ಸಾವಿರ ರೂಪಾಯಿ ಆಗಿದೆ. ಹಾಗೆಯೇ ಏರ್ ಇಂಡಿಯಾದ ಪೈಲೆಟ್‌ಗೆ ಗರಿಷ್ಠ ವೇತನವು 8.5 ಲಕ್ಷ ರೂಪಾಯಿ ಆಗಿದೆ. ಕ್ಯಾಬಿನ್ ಸಿಬ್ಬಂದಿಗಳಿಗೆ ಕನಿಷ್ಠ ವೇತನವು ಮಾಸಿಕವಾಗಿ 25 ಸಾವಿರ ರೂಪಾಯಿ ಆಗಿದೆ. ಹಾಗೆಯೇ ಗರಿಷ್ಠ ವೇತವು ಮಾಸಿಕವಾಗಿ 78 ಸಾವಿರ ರೂಪಾಯಿ ಆಗಿದೆ. ಈ ವೇತನವು ಹಿರಿಯರು ಅಥವಾ ಅನುಭವದ ಆದಾರದಲ್ಲಿ ನೀಡಲಾಗುತ್ತದೆ ಮತ್ತು ನಿರ್ಧಾರ ಮಾಡಲಾಗುತ್ತದೆ.

ಏರ್ ಇಂಡಿಯಾದ ನೂತನ ವೇತನ ಪಟ್ಟಿ ಇಲ್ಲಿದೆ
ಟ್ರೈನಿ (ತರಬೇತಿ ಪಡೆಯುತ್ತಿರುವ ಕಿರಿಯ ಅಧಿಕಾರಿ) ಪೈಲಟ್‌ಗೆ ಮಾಸಿಕವಾಗಿ 50 ಸಾವಿರ ರೂಪಾಯಿ ವೇತನವನ್ನು ನೀಡಲಾಗುತ್ತದೆ. ಕಿರಿಯ ಮೊದಲ ಅಧಿಕಾರಿ ಒಂದು ವರ್ಷದ ಬಳಿಕ ಮಾಸಿಕವಾಗಿ 2.35 ಲಕ್ಷ ರೂಪಾಯಿವರೆಗೆ ವೇತನವನ್ನು ಪಡೆಯಬಹುದಾಗಿದೆ. ಮೊದಲ ಅಧಿಕಾರಿಗೆ ಮಾಸಿಕವಾಗಿ 3.45 ಲಕ್ಷ ರೂಪಾಯಿ ವೇತನ ನೀಡಿದರೆ, ಕ್ಯಾಪ್ಟನ್ (ಎಸ್‌ಎಫ್‌ಒ) ಮಾಸಿಕವಾಗಿ 4.75 ಲಕ್ಷ ರೂಪಾಯಿ ವೇತನವನ್ನು ಪಡೆಯುತ್ತಾರೆ.
ಇನ್ನು ಆಂತರಿಕವಾಗಿ ಅಪ್‌ಗ್ರೇಡ್ ಆದ ಕ್ಯಾಪ್ಟನ್/ಎಸ್‌ಎಫ್‌ಒ ಪೈಲಟ್ ಆಗಿರುವ ಕಮಾಂಡರ್ ತಿಂಗಳಿಗೆ 7.50 ಲಕ್ಷ ರೂಪಾಯಿವರೆಗೆ ವೇತನ ಗಳಿಸುತ್ತಾರೆ. 4 ವರ್ಷಕ್ಕಿಂತ ಹೆಚ್ಚು ಪಿ1 ರೇಟಿಂಗ್ ಹೊಂದಿರುವ ಹಿರಿಯ ಕಮಾಂಡರ್‌ಗೆ ತಿಂಗಳಿಗೆ 8.50 ಲಕ್ಷ ರೂಪಾಯಿ ನೀಡಲಾಗುತ್ತದೆ. ಜೂನಿಯರ್ ಪೈಲಟ್‌ಗೆ 0 ಗಂಟೆಯಿಂದ 90+ ಗಂಟೆಗಳ ನಡುವಿನ ಅವಧಿಯ ಹಾರಾಟದ ಅವಧಿಗೆ 1,500 ರೂಪಾಯಿಯಿಂದ 1,950 ರೂಪಾಯಿ ಭತ್ಯೆ ನೀಡಲಾಗುತ್ತದೆ.
ಏರ್ ಇಂಡಿಯಾ ಕಮಾಂಡರ್‌ಗಳು ಮತ್ತು ಹಿರಿಯ ಕಮಾಂಡರ್‌ಗಳಿಗೆ ಮಾಸಿಕವಾಗಿ 75,000 ರೂಪಾಯಿ ಭತ್ಯೆಯನ್ನು ನೀಡುತ್ತದೆ. ಇತರ ವರ್ಗದ ಪೈಲಟ್‌ಗಳಿಗೆ ತಿಂಗಳಿಗೆ 25,000 ರೂಪಾಯಿ ಪಾವತಿ ಮಾಡುತ್ತದೆ. ಕಮಾಂಡರ್‌ಗಳು ಮತ್ತು ಸೀನಿಯರ್ ಕಮಾಂಡರ್‌ಗಳಿಗೆ ಪ್ರತಿ ರಾತ್ರಿಗೆ 2,200 ರೂಪಾಯಿ ಭತ್ಯೆಯನ್ನು ನೀಡುತ್ತದೆ.
ಕ್ಯಾಬಿನ್ ಸಿಬ್ಬಂದಿಗಳು
ತರಬೇತಿ ಪಡೆಯುವ ಕ್ಯಾಬಿನ್ ಸಿಬ್ಬಂದಿಗೆ ಕ್ರಮವಾಗಿ ತಿಂಗಳಿಗೆ 25,000 ರೂಪಾಯಿ (ಹೊಸ ಸಿಬ್ಬಂದಿಗೆ ಸ್ಟೈಫಂಡ್) ಮತ್ತು ತಿಂಗಳಿಗೆ 30,000 (ಅನುಭವಿ ಸಿಬ್ಬಂದಿಗೆ ಸ್ಟೈಫಂಡ್) ಲಭ್ಯವಾಗುತ್ತದೆ. ಕ್ಯಾಬಿನ್ ಸಿಬ್ಬಂದಿಗೆ ಮಾಸಿಕವಾಗಿ 53,000 ರೂಪಾಯಿ, ಹಿರಿಯ ಕ್ಯಾಬಿನ್‌ಗೆ ತಿಂಗಳಿಗೆ 64,000 ರೂಪಾಯಿ ಮತ್ತು ಎಕ್ಸಿಕ್ಯೂಟಿವ್ ಕ್ಯಾಬಿನ್‌ಗೆ ತಿಂಗಳಿಗೆ 78,000 ರೂಪಾಯಿ ನೀಡಲಾಗುತ್ತದೆ.
ಶೂನ್ಯದಿಂದ 90+ ಗಂಟೆಗಳ ನಡುವಿನ ಅವಧಿಯ ಹಾರಾಟಕ್ಕೆ ಕ್ಯಾಬಿನ್ ಸಿಬ್ಬಂದಿಗೆ 375 ರೂಪಾಯಿಯಿಂದ 750 ರೂಪಾಯಿವರೆಗೆ ಭತ್ಯೆಗಳನ್ನು ಪಾವತಿಸಲಾಗುತ್ತದೆ. ಹಿರಿಯ ಕ್ಯಾಬಿನ್ 475 ರೂಪಾಯಿಯಿಂದ 950 ರೂಪಾಯಿವರೆಗೆ ಪಾವತಿ ಮಾಡಲಾಗುತ್ತದೆ. ಕಾರ್ಯನಿರ್ವಾಹಕ ಉದ್ಯೋಗಿಗಳು 525 ರೂಪಾಯಿಯಿಂದ 1,050 ರೂಪಾಯಿವರೆಗೆ ಭತ್ಯೆಗಳನ್ನು ಗಳಿಸುತ್ತಾರೆ.
ಆದರೆ ಖಾಯಂ ಕ್ಯಾಬಿನ್ ಸಿಬ್ಬಂದಿಗೆ 0-60 ಗಂಟೆಗಳ ಹಾರಾಟಕ್ಕೆ ಏರ್ ಇಂಡಿಯಾವು 300 ರೂಪಾಯಿ ನೀಡುತ್ತದೆ. ಇನ್ನು 65-70 ಗಂಟೆಗಳಿಗೆ 375 ಸಾಮಾನ್ಯ ಭತ್ಯೆ ನಿಗದಿಪಡಿಸಲಾಗಿದೆ. ಹಿರಿಯ ಉದ್ಯೋಗಿಗಳು 0-65 ಗಂಟೆಗಳವರೆಗೆ ವಿಮಾನಯಾನದಲ್ಲಿ 400 ರೂಪಾಯಿಯಿಂದ 650 ರೂಪಾಯಿವರೆಗೆ ಮತ್ತು 65-70 ಗಂಟೆಗಳವರೆಗೆ 525 ರೂಪಾಯಿಯಿಂದ 700 ರೂಪಾಯಿವರೆಗೆ ಗಳಿಕೆಯನ್ನು ಪಡೆಯಬಹುದಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications