ಸಾಮಾನ್ಯವಾಗಿ ಸಿನಿಮಾ ನಟರು, ಸೆಲೆಬ್ರೆಟಿಗಳು ಅತೀ ದುಬಾರಿಯಾದ ಕಾರುಗಳನ್ನು, ಎಸ್‌ಯುವಿಗಳನ್ನು ಖರೀದಿ ಮಾಡುವುತ್ತಾರೆ. ಅದರಲ್ಲೂ ಮುಖ್ಯವಾಗಿ ನಟರು ಬುಲೆಟ್‌ಪ್ರೂಫ್ ಇದ್ದ ಎಸ್‌ಯುವಿಗಳಿಗೆ ಆದ್ಯತೆ ನೀಡುವುದನ್ನು ನಾವು ಕಾಣಬಹುದು. ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಅತೀ ದುಬಾರಿ ಎಸ್‌ಯುವಿಯನ್ನು ಆಮದು ಮಾಡಿಕೊಂಡಿದ್ದಾರೆ. ನಿಸ್ಸಾನ್‌ನ ಈ ಪಟ್ರೋಲ್ ಎಸ್‌ಯುವಿ ಬುಲೆಟ್ ಪ್ರೂಫ್ ಅನ್ನು ಹೊಂದಿದ್ದು, ಇದು ಈವರೆಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗದ ಎಸ್‌ಯುವಿ ಆಗಿದೆ.
ಈ ವಾರ ಮುಂಬೈನಲ್ಲಿ ತನ್ನ ವೈಯಕ್ತಿಕ ಭದ್ರತೆ ಮತ್ತು ಸ್ಥಳೀಯ ಪೊಲೀಸರ ಭದ್ರತೆಯೊಂದಿಗೆ ತನ್ನ ಹೊಸ ಬುಲೆಟ್ ಪ್ರೂಫ್ ವಾಹನದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರಯಾಣ ಮಾಡುತ್ತಿರುವುದು ಕಂಡು ಬಂದಿದೆ. ನಿಸ್ಸಾನ್ ಸಂಸ್ಥೆಯು ಈವರೆಗೂ ತಯಾರಿಸಿರುವ ಎಸ್‌ಯುವಿಗಳ ಪೈಕಿ ನಿಸಾನ್ ಪಟ್ರೋಲ್ ಎಸ್‌ಯುವಿ ಅತೀ ದುಬಾರಿ ಎಸ್‌ಯುವಿ ಆಗಿದೆ. ಹಾಗೆಯೇ ಆಗ್ನೇಯ ಏಷ್ಯಾದ ಮಾರುಕಟ್ಟೆಯಲ್ಲಿ ಅತೀ ಪ್ರಸಿದ್ಧವಾದ ಕಾರು ಇದಾಗಿದೆ. ಸಲ್ಮಾನ್ ಖಾನ್‌ನ ಬುಲೆಟ್‌ಪ್ರೂಫ್ ಹೊಂದಿರುವ ಅತೀ ದುಬಾರಿ ಎಸ್‌ಯುವಿ ಇದಾಗಿದೆ, ಮುಂದೆ ಓದಿ...

ಅತೀ ದುಬಾರಿ ಎಸ್‌ಯುವಿ ಬಗ್ಗೆ ಇಲ್ಲಿದೆ ಮಾಹಿತಿ
ನಿಸ್ಸಾನ್‌ನ ಈ ಪಟ್ರೋಲ್ ಎಸ್‌ಯುವಿ ಈವರೆಗೂ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿಲ್ಲ, ಹಾಗೂ ಮಾರಾಟದಲ್ಲಿಯೂ ಇಲ್ಲ. ಆದ್ದರಿಂದಾಗಿ ಈ ಕಾರನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಸಲ್ಮಾನ್ ಖಾನ್ ಖಾಸಗಿಯಾಗಿ ಆಮದು ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಎಸ್‌ಯುವಿ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಹಾಗೆಯೇ ಬುಲೆಟ್ ಪ್ರೂಫ್ ಇರುವ ಕಾರುಗಳ ಪೈಕಿ ನಿಸ್ಸಾನ್‌ನ ಎಸ್‌ಯುವಿಯನ್ನು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ.
ಸಲ್ಮಾನ್ ಖಾನ್ ತನ್ನ ಹೊಸ ಬುಲೆಟ್ ಪ್ರೂಫ್ ನಿಸ್ಸಾನ್ ಪೆಟ್ರೋಲ್ ಎಸ್‌ಯುವಿಯಲ್ಲಿ ಪ್ರಯಾಣಿಸುವ ವೀಡಿಯೊವನ್ನು ಹಲವಾರು ಯೂಟ್ಯೂಬ್ ಚಾನೆಲ್‌ಗಳು ಹಂಚಿಕೊಂಡಿವೆ. ಈ ವಿಡಿಯೋಗಳನ್ನು ನಾವು ನೋಡಿದಾಗ ಎಸ್‌ಯುವಿ ಅತೀ ದಪ್ಪವಾದ ಬಾರ್ಡರ್ ಅನ್ನು ಕಾರಿನ ಬಾಗಿಲಿನಲ್ಲಿ ಹೊಂದಿರುವುದು ಕಾಣುತ್ತಿದೆ. ಹಾಗೆಯೇ ಕಾರು ಸಂಪೂರ್ಣವಾಗಿ ಬುಲೆಟ್ ಪ್ರೂಫ್ ಎಂಬುವುದು ಕೂಡಾ ತಿಳಿದು ಬರುತ್ತದೆ. ವಿಂಡೋ ಗ್ಲಾಸ್‌ಗಳು ಅತೀ ದಪ್ಪವಾಗಿದ್ದು, ಹೊಸದಾದ ವಿಂಡ್ ಶೀಲ್ಡ್‌ಗಳು ಕೂಡಾ ಇದೆ. ವಿಂಡ್ ಶೀಲ್ಡ್‌ಗಳು ಸಾಮಾನ್ಯ ಕಾರಿಗಿಂತ ಅತೀ ದಪ್ಪವಾಗಿದೆ.
ಸಲ್ಮಾನ್ ಖಾನ್ ಅವರ ಹೊಸ ವಾಹನವು ಗರಿಷ್ಠ 5.6-ಲೀಟರ್ V8 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 405hp ಮತ್ತು 560Nm ಟಾರ್ಕ್ ಅನ್ನು ಹೊಂದಿದೆ. ಎಂಜಿನ್ ಅನ್ನು 7-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ತಯಾರಿಸಲಾಗಿದೆ. ಇನ್ನು ಇದು ಸಲ್ಮಾನ್ ಖಾನ್ ಬಳಿ ಇರುವ ಮೊದಲ ಬುಲೆಟ್ ಪ್ರೂಫ್ ಎಸ್‌ಯುವಿ ಏನಲ್ಲ. ಸಲ್ಮಾನ್ ಖಾನ್‌ನ ಗ್ಯಾರೇಜ್‌ನಲ್ಲಿರುವ ದುಬಾರಿ ಕಾರುಗಳಲ್ಲಿ ಈಗಾಗಲೇ ಕೆಲವು ಬುಲೆಟ್ ಪ್ರೂಫ್ ಕಾರುಗಳು ಕೂಡಾ ಇದೆ.
ಬಾಲಿವುಡ್ ತಾರೆ ಇತ್ತೀಚೆಗೆ ತಮ್ಮ ಟೊಯೋಟಾ ಲ್ಯಾಂಡ್ ಕ್ರೂಸರ್ ಎಸ್‌ಯುವಿಗೆ ರಕ್ಷಾಕವಚ ಮತ್ತು ಬುಲೆಟ್ ಪ್ರೂಫ್ ಗ್ಲಾಸ್ ಹಾಕಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಹೊಂದಿರುವ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‌ಯುವಿ ಇತ್ತೀಚಿನ ಲೇಟೆಸ್ಟ್ ವರ್ಜನ್ ಅಲ್ಲ. ಹಾಗೆಯೇ ಟೊಯೊಟಾದಲ್ಲಿ ಈ ಶಸ್ತ್ರಸಜ್ಜಿತ ಕಾರುಗಳನ್ನು ಮಾರಾಟ ಕೂಡಾ ಮಾಡಲಾಗುವುದಿಲ್ಲ. ಈ ಬುಲೆಟ್‌ಪ್ರೂಫ್ ಎಸ್‌ಯುವಿಗಳ ಹೊರತಾಗಿ, ಸಲ್ಮಾನ್ ಖಾನ್ ಬಳಿ ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್, ಲೆಕ್ಸಸ್ ಎಲ್‌ಎಕ್ಸ್ 470, ಆಡಿ ಎ8, ಪೋರ್ಷೆ ಕಯೆನ್ನೆ, ರೇಂಜ್ ರೋವರ್ ಆಟೋಬಯೋಗ್ರಫಿ, ಆಡಿ ಆರ್‌ಎಸ್ 7, ಮರ್ಸಿಡಿಸ್ ಎಎಂಜಿ ಜಿಎಲ್‌ಇ 63 ಎಸ್ ಮತ್ತು ಮರ್ಸಿಡಿಸ್ ಬೆಂಜ್ ಜಿಎಲ್-ಕ್ಲಾಸ್ ಕಾರನ್ನು ಹೊಂದಿದ್ದಾರೆ.


Click it and Unblock the Notifications