ಸಿನಿಮಾ ಇಂಡಸ್ಟ್ರೀಯಲ್ಲಿ ಒಂದು ಸಿನಿಮಾದ ಜನಪ್ರಿಯತೆ ಮತ್ತು ಎಷ್ಟು ಹಿಟ್ ಆಗಿದೆ ಎಂಬುವುದು ಆ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಆಧಾರಿತವಾಗಿರುತ್ತದೆ. ಕಳೆದ ವರ್ಷಕ್ಕೆ ನಾವು ಹೋಲಿಕೆ ಮಾಡಿದಾಗ ಈ ವರ್ಷದಲ್ಲಿ ಅರ್ಧ ವರ್ಷದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಕೊಂಚ ಕಡಿಮೆ ಹಿಟ್ ಸಿನಿಮಾಗಳು ತೆರೆಕಂಡಿದೆ. ನಾಲ್ಕು ಸಿನಿಮಾಗಳನ್ನು ಹೊರತುಪಡಿಸಿ ಉಳಿದ ಯಾವ ಸಿನಿಮಾಗಳು ಹಿಟ್ ಆಗಿಲ್ಲ.
ಇನ್ನು ನಾವು ಭಾರತೀಯ ಸಿನಿಮಾ ಇಂಡಸ್ಟ್ರೀಯನ್ನು ನೋಡಿದಾಗ ಈ ವರ್ಷದ ಆರು ತಿಂಗಳ ಅವಧಿಯಲ್ಲಿ ಭಾರತದ ಬಾಕ್ಸ್ ಆಫೀಸ್‌ಗೆ ಕನ್ನಡ ಸಿನಿಮಾದ ಕೊಡುಗೆ ಕೊಂಚ ಕಡಿಮೆಯೇ ಹೌದು. ಇತ್ತೀಚೆಗೆ ಭಾರತದ ಬಾಕ್ಸ್ ಆಫೀಸ್ ಸಂಗ್ರಹದ ಬಗ್ಗೆ ಓರ್‌ಮಾಕ್ಸ್ ವರದಿ ಬಿಡುಗಡೆಯಾಗಿದೆ. ಈ ವರದಿಯನ್ನು ನಾವು ನೋಡಿದಾಗ ಭಾರತೀಯ ಸಿನಿಮಾ ಇಂಡಸ್ಟ್ರೀಯಲ್ಲಿ ಕನ್ನಡದ ಪಾತ್ರ ಅತೀ ಕಡಿಮೆಯಾಗಿದೆ.

ಯಾವ ಸಿನಿಮಾ ಇಂಡಸ್ಟ್ರೀಯ ಕೊಡುಗೆ ಎಷ್ಟಿದೆ?
ಭಾರತೀಯ ಸಿನಿಮಾ ಇಂಡಸ್ಟ್ರೀಗೆ ಹಿಂದಿ (ಬಾಲಿವುಡ್) ಕೊಡುಗೆ ಶೇಕಡ 37ರಷ್ಟಿದೆ. ತೆಲುಗು ಇಂಡಸ್ಟ್ರೀಯು ಶೇಕಡ 20ರಷ್ಟು ಕೊಡುಗೆಯನ್ನು ನೀಡಿದೆ. ಇನ್ನು ಹಾಲಿವುಡ್ ಕೊಡುಗೆ ಶೇಕಡ 12ರಷ್ಟಿದ್ದರೆ, ಮಲಯಾಳಂ ಸಿನಿಮಾ ಇಂಡಸ್ಟ್ರೀ ಕೊಡುಗೆ ಶೇಕಡ 5ರಷ್ಟಿದೆ ಎಂದು ಓರ್‌ಮಾಕ್ಸ್ ವರದಿ ಹೇಳುತ್ತದೆ.
2022 ರಲ್ಲಿ ಭಾರತೀಯ ಸಿನಿಮಾ ಇಂಡಸ್ಟ್ರೀಗೆ ನಮ್ಮ ಚಂದನವನದ ಕೊಡುಗೆ ಅಪಾಯವಾಗಿದೆ. ಅದಕ್ಕೆ ಮುಖ್ಯ ಕಾರಣ ಕೆಜಿಎಫ್ ಚಾಪ್ಟರ್ 2 ಆಗಿದೆ. ದಕ್ಷಿಣ ಭಾರತದ ಸಿನಿಮಾಗಳಾದ ಆರ್‌ಆರ್‌ಆರ್ ಹಾಗೂ ಕೆಜಿಎಫ್ ಚಾಪ್ಟರ್ 2 ಕೊಡುಗೆಯೇ ಸುಮಾರು ಶೇಕಡ 50ರಷ್ಟಿದೆ. ಆದರೆ ಈ ವರ್ಷ ಆರು ತಿಂಗಳ ಅವಧಿಯಲ್ಲಿ ದಕ್ಷಿಣ ಭಾರತದ ಕೊಡುಗೆ ಶೇಕಡ 44ಕ್ಕೆ ಇಳಿಕೆಯಾಗಿದೆ.
ಸ್ಯಾಂಡಲ್‌ವುಡ್‌ನ ಟಾಪ್ 4 ಹಿಟ್ ಸಿನಿಮಾಗಳು
ಸ್ಯಾಂಡಲ್‌ವುಡ್‌ನಲ್ಲಿ 2023 ರ ಜನವರಿಯಿಂದ ಜೂನ್‌ವರೆಗಿನ ಆರು ತಿಂಗಳ ಅವಧಿಯಲ್ಲಿ ಒಟ್ಟಾಗಿ ನೂರು ಸಿನಿಮಾಗಳು ಬಿಡುಗಡೆಯಾಗಿದೆ. ಆದರೆ ಹಿಟ್ ಆದ ಸಿನಿಮಾಗಳು ಬೆರಳೆಣಿಕೆಯದ್ದಾಗಿದೆ. ಇನ್ನು ಪ್ರಮುಖವಾಗಿ ಯಾವುದೇ ಬ್ಲಾಕ್‌ಬಾಸ್ಟರ್ ಸಿನಿಮಾಗಳು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇಲ್ಲ. ಎರಡು ಸಿನಿಮಾಗಳು ಹಿಟ್ ಆದರೆ, ಎರಡು ಸರಾಸರಿ ಆಗಿದೆ.
ಕ್ರಾಂತಿ ಸಿನಿಮಾವು ಹಿಟ್ ಆಗಿದ್ದು, ವಿಶ್ವದಾದ್ಯಂತ 48.20 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಸಂಗ್ರಹವಾಗಿದೆ. ಕಬ್ಜಾ ಸಿನಿಮಾವು ಎರಡನೇ ಸ್ಥಾನದಲ್ಲಿದ್ದು 34.50 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇದು ಹಿಟ್ ಸಿನಿಮಾವಾಗಿದೆ. ಇನ್ನು ಗುರುದೇವ ಹೊಯ್ಸಳ, ಶಿವಾಜಿ ಸುರತ್ಕಲ್ ಅತ್ತ ಪ್ಲಾಫ್ ಅಲ್ಲ ಹಿಟ್ ಕೂಡಾ ಅಲ್ಲ ಎಂಬ ಸರಾಸರಿ ಆದಾಯದ ಸಿನಿಮಾವಾಗಿದೆ. ಕ್ರಮವಾಗಿ 5.70 ಕೋಟಿ ರೂಪಾಯಿ ಮತ್ತು 2.45 ಕೋಟಿ ರೂಪಾಯಿ (ಅಂದಾಜು) ಬಾಕ್ಸ್ ಆಫೀಸ್ ಸಂಗ್ರಹವಾಗಿದೆ.
ಕಾಕ್‌ಟೇಲ್, ಮಿಸ್ಟರ್ ಬಾಚ್ಯುಲರ್, ಮಿಸ್ ನಂದಿನಿ, ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ, ನಟ ಭಯಂಕರ, ಹೊಂದಿಸಿ ಬರೆಯಿರಿ, ರುಪಾಯಿ, ಒಂದೊಳ್ಳೆ ಲವ್ ಸ್ಟೋರಿ, 19.20.21, ದೂರದರ್ಶನ, ಕಡಲತೀರದ ಭಾರ್ಗವ, ಚೌಕಾಬಾರ, ಪೆಂಟಾಗನ್, ಅವಂತಿಕಾ, ಬಿಸಿಲು ಕುದುರೆ, ಮಾವು ಬೇವು, ರಾಘವೇಂದ್ರ ಸ್ಟೋರ್, ಡೇರ್‌ಡೇವಿಲ್ ಮುಸ್ತಾಫಾ ಮೊದಲಾದ ಸಿನಿಮಾಗಳು ತೆರೆಕಂಡಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications