ಭಾರತದಲ್ಲಿ ಮುಂಚೂಣಿಗೆ ಬರುತ್ತಿರುವ, ಹೆಚ್ಚಾಗಿ ಬೆಳವಣಿಗೆ ಕಾಣುತ್ತಿರುವ ಉದ್ಯಮ, ವ್ಯವಹಾರದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಕೂಡಾ ಒಂದಾಗಿದೆ. ಭಾರತದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡುವವರು ಅಧಿಕ ವೇತನವನ್ನು ಪಡೆಯುತ್ತಾರೆ. ಆ ಪೈಕಿ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವವರ ಸಾಲಿನಲ್ಲಿ ಟಾಪ್ ಬ್ಯಾಂಕರ್ ಗಳು ನಿಲ್ಲುತ್ತಾರೆ. ಪ್ರತಿ ತಿಂಗಳು ಕೋಟಿ ರೂಪಾಯಿ ವೇತನ ಎಣಿಸುವ ಭಾರತದ ಕೆಲವು ಶ್ರೀಮಂತ ಬ್ಯಾಂಕರ್‌ಗಳು ಯಾರು ಯಾರಿದ್ದಾರೆ ಮತ್ತು ಅವರ ಮಾಸಿಕ ವೇತನವೆಷ್ಟು ಎಂಬ ಮಾಹಿತಿ ಇಲ್ಲಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉದಯ್ ಕೋಟಕ್: ಕೋಟಕ್ ಮಹೀಂದ್ರಾ ಬ್ಯಾಂಕ್ ಭಾರತೀಯ ಖಾಸಗಿ ವಲಯದ ಬ್ಯಾಂಕ್ ಆಗಿದ್ದು, ಇದರ ಸಿಇಒ ಉದಯ್ ಕೋಟಕ್ ಅವರು 2022 ರ ವೇಳೆಗೆ ಸುಮಾರು USD 16 ಶತಕೋಟಿ (Rs 12,14,03,20,00,000) ನಿವ್ವಳ ಮೌಲ್ಯ ಹೊಂದಿದ್ದು ಭಾರತದ ಅತ್ಯಂತ ಪವರ್ ಫುಲ್ ಮತ್ತು ಶ್ರೀಮಂತ ಬ್ಯಾಂಕರ್‌ಗಳಲ್ಲಿ ಒಬ್ಬರಾಗಿದ್ದಾರೆ. ಇವರು ಓರ್ವ ಸ್ವಯಂ ನಿರ್ಮಿತ ಬಿಲಿಯನೇರ್ ಬ್ಯಾಂಕರ್ ಆಗಿ ಪ್ರಸಿದ್ಧರಾಗಿದ್ದಾರೆ. ಯಾವುದೇ ಹಣಕಾಸು ಸೇವೆಗಳಿಗೆ ನಂಬಿಕೆಯೇ ಪ್ರಮುಖ ಎಂದು ಉದಯ್ ಕೋಟಕ್ ಅವರ ಬಲವಾದ ನಂಬಿಕೆಯಾಗಿದೆ.ಅವರ ವಾರ್ಷಿಕ ವೇತನವು 3.24 ಕೋಟಿ ರೂಪಾಯಿಗಳಷ್ಟಿದ್ದು , ಹೂಡಿಕೆ ಮತ್ತು ಷೇರು ಮಾರುಕಟ್ಟೆಯಿಂದ ದ್ವಿತೀಯ ಆದಾಯವನ್ನು ಗಳಿಸುತ್ತಿದ್ದಾರೆ.

ಐಸಿಐಸಿಐ ಬ್ಯಾಂಕ್ ನ ಸಂದೀಪ್ ಭಕ್ಷಿ: ಐಸಿಐಸಿಐ ಬ್ಯಾಂಕ್ ಭಾರತದ ದೊಡ್ಡ ನಾಲ್ಕು ಬ್ಯಾಂಕುಗಳಲ್ಲಿ ಒಂದಾಗಿದ್ದು, ಎಚ್‌ಡಿಎಫ್‌ಸಿ ನಂತರ ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್‌ನ ಇದಾಗಿದೆ. ಇದರ ಸಿಇಒ ಸಂದೀಪ್ ಭಕ್ಷಿಆಗಿದ್ದಾರೆ. 2018 ರಲ್ಲಿ ಬ್ಯಾಂಕಿನ ಆಡಳಿತವನ್ನು ವಹಿಸಿಕೊಂಡ ಅವರು ಐದು ವರ್ಷಗಳಲ್ಲಿ, ಅವರು ಅದನ್ನು ಮತ್ತೆ ಬೆಳವಣಿಗೆಯ ಪಥಕ್ಕೆ ತಂದಿದ್ದಾರೆ. ಐಸಿಐಸಿಐ ಬ್ಯಾಂಕ್ 2019-2020ರ ಅವಧಿಯಲ್ಲಿ 7,931 ಕೋಟಿ ರೂಪಾಯಿ ಹಾಗೂ 2020-21 ರಲ್ಲಿ 16,193 ಕೋಟಿ ರೂಪಾಯಿಗಳ ಲಾಭ ಪಡೆದ ವರದಿ ಆಗಿದೆ. ಇನ್ನು ಭಕ್ಷಿ ಅವರು ವರ್ಷಕ್ಕೆ 7.08 ಕೋಟಿ ರೂ. ವೇತನ ಪಡೆಯುತ್ತಾರೆ.
ಆಕ್ಸಿಸ್ ಬ್ಯಾಂಕ್ ನ ಅಮಿತಾಭ್ ಚೌಧರಿ: ಆಕ್ಸಿಸ್ ಬ್ಯಾಂಕ್ ಭಾರತದ ಮೂರನೇ ಅತೀ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿದೆ. ಪ್ರಸ್ತುತ ಇದರ ವ್ಯವಸ್ಥಾಪಕ ನಿರ್ದೇಶಕರಾಗಿ ಅಮಿತಾಭ್ ಚೌಧರಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಈ ಹಿಂದೆ ಇನ್ಫೋಸಿಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದು ಪ್ರಸ್ತುತ ದಿ ಎಕನಾಮಿಕ್ ಟೈಮ್ಸ್ ಪ್ರಕಾರ ವಾರ್ಷಿಕವಾಗಿ 6.01 ಕೋಟಿ ರೂ. ವೇತನ ಪಡೆಯುತ್ತಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶಶಿಧರ್ ಜಗದೀಶ್: ಇದು ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿದ್ದು, ದೇಶಾದ್ಯಂತ ಹೆಚ್ಚು ಲಾಭ ಗಳಿಸುತ್ತಿದೆ. ಶಶಿಧರ್ ಜಗದೀಶ್ ಅವರು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಇಒ ಆಗಿದ್ದಾರೆ. ಇವರು ಬ್ಯಾಂಕಿಂಗ್, ಹಣಕಾಸು ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ವ್ಯಾಪಕ ಜ್ಞಾನ ಮತ್ತು ಅನುಭವ ಉಳ್ಳವರಾಗಿದ್ದಾರೆ. 1996 ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಹಣಕಾಸು ಇಲಾಖೆಯಲ್ಲಿ ವ್ಯವಸ್ಥಾಪಕರಾಗಿ ಸೇರ್ಪಡೆಗೊಂಡ ಾವರು ಅಂದಿನಿಂದ ಅದರ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. 2022 ರ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಶಶಿಧರ್ ಜಗದೀಶ್‌ನ ಒಟ್ಟು 6.51 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.


Click it and Unblock the Notifications