ಈಗ ಹಲವಾರು ಜನರು ನಗದು ಬಳಕೆ ಮಾಡುವುದಕ್ಕಿಂತ ಹೆಚ್ಚಾಗಿ ನಗದುರಹಿತ ವಹಿವಾಟು ಮಾಡುವುದನ್ನು ನಾವು ಕಾಣುತ್ತೇವೆ. ಆನ್‌ಲೈನ್, ಯುಪಿಐ ವಹಿವಾಟು ಹಾಗೂ ಎಟಿಎಂ ಕಾರ್ಡ್‌ಗಳ ಬಳಕೆ ಹೆಚ್ಚಾಗಿ ಮಾಡಲಾಗುತ್ತದೆ. ಈ ಮಧ್ಯೆ ನಾವು ಎಟಿಎಂ ಕಾರ್ಡ್ ವಿಚಾರಕ್ಕೆ ಬಂದಾಗ, ಹೆಚ್ಚಿನ ಜನರು ಈಗ ಡೆಬಿಟ್ ಕಾರ್ಡ್‌ಗಿಂತ ಅಧಿಕವಾಗಿ ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಾರೆ. ತಮ್ಮ ದಿನನಿತ್ಯದ ವಹಿವಾಟಿಗು ಕೂಡಾ ಕ್ರೆಡಿಟ್ ಕಾರ್ಡ್ ಅನ್ನು ಜನರು ಬಳಸುತ್ತಿದ್ದಾರೆ. ಆದರೆ ಅದರ ಹೊರೆ ತೀರಾ ಹೆಚ್ಚಾದಾಗಲೇ ಗಮನಕ್ಕೆ ಬರುವುದು ಬಿಡಿ.
ಈ ನಡುವೆ ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದಾದರೆ ಇಲ್ಲಿ ನಾವು ವಿವರ ನೀಡಿದ್ದೇವೆ. ನಾವು ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಅದರಲ್ಲಿ ಕ್ರೆಡಿಟ್ ಕಾರ್ಡ್‌ಗೆ ವಿಧಿಸುವ ಶುಲ್ಕದ ಬಗ್ಗೆ ನಮಗೆ ತಿಳಿದಿರಬೇಕಾಗುತ್ತದೆ. ನಿಯಮದ ಪ್ರಕಾರ ಒಬ್ಬ ಗ್ರಾಹಕನು ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಶುಲ್ಕ, ಇತರೆ ಮಾಹಿತಿಗಳ ಬಗ್ಗೆ ತಿಳಿದಿರಬೇಕಾಗುತ್ತದೆ. ಎಸ್‌ಬಿಐ ಹೊಸದಾಗಿ ಶುಲ್ಕವನ್ನು ಪರಿಷ್ಕರಣೆ ಮಾಡಿದೆ. ಈ ಹೊಸ ಶುಲ್ಕವು ಮಾರ್ಚ್ 17, 2023ರಿಂದ ಅನ್ವಯವಾಗುತ್ತದೆ.

ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ದಾರರಿಗೆ ಎಸ್‌ಎಂಎಸ್ ಹಾಗೂ ಇಮೇಲ್ ಮೂಲಕ ಈ ನೂತನ ಶುಲ್ಕದ ಬಗ್ಗೆ ಮಾಹಿತಿ ನೀಡಲಾಗಿದೆ. ಗ್ರಾಹಕರು ಯಾರು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಬಾಡಿಗೆಯನ್ನು ಪಾವತಿಸುತ್ತಾರೋ ಅವರಿಗೆ 199 ರೂಪಾಯಿ ಶುಲ್ಕ + ತೆರಿಗೆ ಅನ್ವಯವಾಗಲಿದೆ. 99 ರೂಪಾಯಿಗಿಂತ ಅಧಿಕ ತೆರಿಗೆ ಅನ್ವಯವಾಗಲಿದೆ. ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ನ ಶುಲ್ಕ, ಇತರೆ ಮಾಹಿತಿ ಇಲ್ಲಿದೆ ಮುಂದೆ ಓದಿ...
ವಾರ್ಷಿಕ & ರಿನಿವಲ್ ಶುಲ್ಕ
ಎಸ್‌ಬಿಐ ಕ್ರೆಡಿಡ್ ಕಾರ್ಡ್‌ಗೆ ವಾರ್ಷಿಕ ಹಾಗೂ ರಿನಿವಲ್ ಶುಲ್ಕ ಇರುತ್ತದೆ. ಎರಡು ಶುಲ್ಕಗಳನ್ನು ಕೂಡಾ ನೀವು ತಿಳಿದಿರಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಅನ್ನು ಪಡೆಯುವ ಸಂದರ್ಭದಲ್ಲಿ ಇವರೆಡು ಶುಲ್ಕಗಳನ್ನು ನಾವು ಪಾವತಿ ಮಾಡಬೇಕಾಗುತ್ತದೆ. ಕಾರ್ಡ್‌ನ ವಿಧ ಹಾಗೂ ಕಾರ್ಡ್‌ದಾರರ ಆಧಾರದಲ್ಲಿ ಈ ಶುಲ್ಕವು ಬದಲಾವಣೆಯಾಗುತ್ತದೆ.
ನಗದು ಮುಂಗಡ ಶುಲ್ಕಗಳು
ಎಸ್‌ಬಿಐ ಕಾರ್ಡ್‌ದಾರರು ಯಾವುದೇ ತುರ್ತು ಸಂದರ್ಭದಲ್ಲಿ ಹಣ ಬೇಕಾದಾಗ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಎಟಿಎಂಗಳಲ್ಲಿ ನಗದನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಇಂತಹ ಯಾವುದೇ ವಿತ್‌ಡ್ರಾಗೆ ವಹಿವಾಟು ಶುಲ್ಕವನ್ನು ವಿಧಿಸಲಾಗುತ್ತದೆ. ಅದು ಕಾರ್ಡ್‌ದಾರರ ಮುಂದಿನ ಸ್ಟೇಟ್‌ಮೆಂಟ್‌ನಲ್ಲಿ ಇರುತ್ತದೆ. ದೇಶೀಯ ಎಟಿಎಂಗಳಲ್ಲಿ ಶೇಕಡ 2.5 ಅಥವಾ 500 ರೂಪಾಯಿ ವಹಿವಾಟು ಶುಲ್ಕ ಇರುತ್ತದೆ. ಅಂತಾರಾಷ್ಟ್ರೀಯ ಎಟಿಎಂಗಳಲ್ಲಿ ಶೇಕಡ 2.5 ಅಥವಾ 500 ರೂಪಾಯಿ ಈ ಪೈಕಿ ಯಾವುದು ಹೆಚ್ಚು ಆ ಶುಲ್ಕ ಇರುತ್ತದೆ.
ನಗದು ಪಾವತಿ ಶುಲ್ಕ
ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು ಕಾರ್ಡ್ ಬಳಕೆ ಮಾಡಿದ ಬಳಿಕ ನೀಡಬೇಕಾದ ಸಾಲದ ಮೊತ್ತವನ್ನು ಎಸ್‌ಬಿಐನ ಬ್ರಾಂಚ್‌ಗೆ ಭೇಟಿ ನೀಡಿಯು ಪಾವತಿಸಬಹುದಾಗಿದೆ. ಪೇ ಸ್ಲಿಪ್‌ನಲ್ಲಿ ಅಗತ್ಯ ಮಾಹಿತಿ ಮತ್ತು ಮೊತ್ತವನ್ನು ಬರೆದು, ಬ್ರಾಂಚ್‌ನ ಕೌಂಟರ್‌ನಲ್ಲಿ ನಗದು ನೀಡುವ ಮೂಲಕ ಕ್ರೆಡಿಟ್ ಕಾರ್ಡ್ ಸಾಲವನ್ನು ಮರುಪಾವತಿ ಮಾಡಬಹುದಾಗಿದೆ. ಆ ಪಾವತಿಗೆ ಕಾರ್ಡ್‌ದಾರರಿಗೆ ರಶೀದಿ ಲಭ್ಯವಾಗಲಿದೆ. ಆದರೆ ಇದಕ್ಕೆ ಶುಲ್ಕ ಇರುತ್ತದೆ. 250 ರೂಪಾಯಿ + ಇತರೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಬಡ್ಡಿ ರಹಿತ ಗ್ರೇಸ್ ಅವಧಿ: ವ್ಯಾಪಾರಿಯು ಕ್ಲೈಮ್ ಮಾಡುವವರೆಗೆ, ಬಡ್ಡಿ-ಮುಕ್ತ ಕ್ರೆಡಿಟ್ ಅವಧಿಯು 20 ಮತ್ತು 50 ದಿನಗಳ ನಡುವೆ ಇರಬಹುದು.
ಹಣಕಾಸು ಶುಲ್ಕಗಳು
ವಹಿವಾಟಿನ ದಿನಾಂಕದಿಂದ ಬಾಕಿ ಉಳಿದಿರುವ ಇಎಂಐ ಪಾವತಿಗಳ ಸೇರಿ ಎಲ್ಲ ವಹಿವಾಟುಗಳ ಮೇಲಿನ ಮಾಸಿಕ ಬಡ್ಡಿದರದ ಮೇಲೆ ಹಣಕಾಸು ಶುಲ್ಕವನ್ನು ವಿಧಿಸಲಾಗುತ್ತದೆ. ಯಾವುದೇ ನಗದು ಮುಂಗಡಗಳ ಮೇಲೆ ಕಾರ್ಡ್‌ದಾರರು ತಮ್ಮ ಖಾತೆಯಲ್ಲಿ ಪೂರ್ಣ ಮೊತ್ತವನ್ನು ಪಾವತಿಸದಿರಲು ನಿರ್ಧರಿಸಿದರೆ ಮರುಪಾವತಿಯಾಗುವವರೆಗೆ ಶುಲ್ಕ ಅನ್ವಯವಾಗುತ್ತದೆ.


Click it and Unblock the Notifications