ಜೀವ ವಿಮಾ ನಿಗಮದ (ಎಲ್‌ಐಸಿ) ಐಪಿಒ ಮೇ 4ರಂದು ಪ್ರಾರಂಭವಾಗಲಿದೆ. ಮತ್ತು 9 ಮೇ 2022 ರವರೆಗೆ ಚಂದಾದಾರಿಕೆಗೆ ಲಭ್ಯವಿರುತ್ತದೆ. ಅಲ್ಲದೆ, ಐಪಿಒ ಮೇ 2ರಂದು ಆಂಕರ್ ಹೂಡಿಕೆದಾರರಿಗೆ ತೆರೆದಿದೆ. ಈ ಹಿಂದಿನ ಗಾತ್ರಕ್ಕಿಂತ ಕಡಿಮೆ ಮಾಡಲಾಗಿದ್ದರೂ ಈಗಲೂ ಕೂಡಾ ಎಲ್‌ಐಸಿ ಐಪಿಒ ದೇಶದ ಅತೀ ದೊಡ್ಡ ಐಪಿಒ ಆಗಿದೆ.
ಎಲ್ಐಸಿ ಐಪಿಒ ಗಾತ್ರ ಸುಮಾರು 21,000 ಕೋಟಿ ರೂಪಾಯಿ ಆಗಿದೆ. ಮೇ 4-9 ರಿಂದ 3.5% ಈಕ್ವಿಟಿಯೊಂದಿಗೆ ಚಂದಾದಾರಿಕೆ ಮತ್ತು ಪಾಲಿಸಿದಾರರಿಗೆ ಮತ್ತು ಚಿಲ್ಲರೆ ಹೂಡಿಕೆದಾರರಿಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ ಎಂದು ಭಾರತೀಯ ಜೀವ ವಿಮಾ ನಿಗಮದ ಮಹತ್ವದ ಸುದ್ದಿಗೋಷ್ಠಿಯಲ್ಲಿ DIPAM ಕಾರ್ಯದರ್ಶಿ ತುಹಿಂ ಕಾಂತಾ ಪಾಂಡೆ ಹೇಳಿದ್ದಾರೆ.
ಈ ಐಪಿಒ ಅಡಿಯಲ್ಲಿ ಒಟ್ಟು 22.10 ಕೋಟಿ ಈಕ್ವಿಟಿ ಷೇರುಗಳನ್ನು ನೀಡಲು ನಿರ್ಧರಿಸಲಾಗಿದೆ. ಎಲ್‌ಐಸಿ ಐಪಿಒ ಬೆಲೆ ಪಟ್ಟಿಯನ್ನು ಪ್ರತಿ ಈಕ್ವಿಟಿ ಷೇರಿಗೆ ರೂ 902 ರಿಂದ ರೂ 949 ಕ್ಕೆ ನಿಗದಿಪಡಿಸಲಾಗಿದೆ. ಸರ್ಕಾರವು ಎಲ್‌ಐಸಿ ಪಾಲಿಸಿದಾರರಿಗೆ ಪಾಲಿಸಿದಾರ ವರ್ಗದ ಅಡಿಯಲ್ಲಿ 10% ಕಾಯ್ದಿರಿಸಿದೆ.
ಆದರೆ ಎಲ್‌ಐಸಿ ಪಾಲಿಸಿದಾರರು ಪ್ಯಾನ್ ಲಿಂಕ್ ಮಾಡಿಕೊಂಡಿರುವುದು ಮುಖ್ಯವಾಗಿದೆ. ಹಾಗೆಯೇ ಡಿಮ್ಯಾಟ್ ಖಾತೆಯನ್ನು ಕೂಡಾ ಹೊಂದಿರಬೇಕು, ಅದಕ್ಕೂ ಪ್ಯಾನ್ ಲಿಂಕ್ ಮಾಡಬೇಕಾಗಿದೆ. ಇನ್ನು ಎಲ್‌ಐಸಿ ಐಪಿಒದಲ್ಲಿ ಹೂಡಿಕೆ ಮಾಡಲು ಬಯಸುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಎಸ್‌ಬಿಐನ ಯೋನೋ ಆಪ್ ಮೂಲಕವೂ ಹೂಡಿಕೆ ಮಾಡಬಹುದಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಎಸ್‌ಬಿಐನ ಯೋನೋ ಅಪ್ಲಿಕೇಶನ್
ಕಳೆದ ತಿಂಗಳು, ಶನಿವಾರ, 30 ಏಪ್ರಿಲ್ 2022 ರಂದು, "ನಿಮ್ಮ ಹೂಡಿಕೆ ಪ್ರಯಾಣವನ್ನು ಇಂದೇ ಪ್ರಾರಂಭಿಸಿ!" ಎಂದು ಎಸ್‌ಬಿಐ ಟ್ವೀಟ್ ಮಾಡಿದೆ. "ಯಾವುದೇ ಖಾತೆ ತೆರೆಯುವ ಶುಲ್ಕಗಳಿಲ್ಲದೆ ಈಗ ಯೋನೋದಲ್ಲಿ ನಿಮ್ಮ ಡಿಮ್ಯಾಟ್ ಹಾಗೂ ಟ್ರೇಡಿಂಗ್ ಖಾತೆಗಳನ್ನು ತೆರೆಯಿರಿ. ಮೊದಲ ವರ್ಷಕ್ಕೆ ಡಿಪಿ ಎಎಂಸಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಈಗಲೇ ಯೋನೋ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ," ಎಂದು ಎಸ್‌ಬಿಐ ಅಧಿಕೃತ ಟ್ವೀಟ್ಟರ್ ಖಾತೆಯ ಮೂಲಕ ಟ್ವೀಟ್ ಮಾಡಲಾಗಿದೆ.
ಎಸ್‌ಬಿಐ ಈ ಹಿಂದೆ ಎಸ್‌ಬಿಐ ಸೆಕ್ಯುರಿಟೀಸ್ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆ ಮೂಲಕ ಎಲ್‌ಐಸಿ ಐಪಿಒ ಹೂಡಿಕೆಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿತ್ತು. ಆದಾಗ್ಯೂ, ತಮ್ಮ ಹೂಡಿಕೆಯನ್ನು ಪ್ರಾರಂಭಿಸಲು, ಗ್ರಾಹಕರು ಕೆಲವು ಹಂತಗಳನ್ನು ಅನುಸರಿಸಬೇಕು.
ಯೋನೋ ಮೂಲಕ ಎಲ್‌ಐಸಿ ಐಪಿಒ ಹೂಡಿಕೆ ಹೇಗೆ?
* ಯೋನೋ ಆಪ್‌ಗೆ ಲಾಗಿನ್ ಆಗಿ
* 'Investments' ಮೇಲೆ ಕ್ಲಿಕ್ ಮಾಡಿ
* ನಿಮ್ಮ ಡಿಮ್ಯಾಟ್ ಹಾಗೂ ಟ್ರೇಡಿಂಗ್ ಖಾತೆ ತೆರೆಯಿರಿ
* ಇದಾದ ಬಳಿಕ ನೀವು ಎಲ್‌ಐಸಿ ಐಪಿಒಗೆ ಸುಲಭವಾಗಿ ಹೂಡಿಕೆ ಮಾಡಬಹುದು
ನೀವು ಎಲ್‌ಐಸಿ ಐಪಿಒಗೆ ಯೋನೋ ಮೂಲಕ ಹೂಡಿಕೆ ಮಾಡುವುದಾದರೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ಯೋನೋದಲ್ಲಿ ನೋಂದಯಿಸಿಕೊಳ್ಳುವುದು ಮುಖ್ಯವಾಗಿದೆ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ಎಸ್‌ಬಿಐ ಯೋನೋದಲ್ಲಿ ಹೇಗೆ ನೋಂದಾಯಿಸಿಕೊಳ್ಳಬಹುದು ಎಂಬುದು ಇಲ್ಲಿದೆ.
ಯೋನೋದಲ್ಲಿ ಡಿಮ್ಯಾಟ್ ನೋಂದಾವಣೆ
ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ SBI YONO ಆಪ್ ತೆರೆಯಿರಿ
ಹಂತ 2: YONO SBI ಅಪ್ಲಿಕೇಶನ್‌ನಲ್ಲಿ ಲಾಗಿನ್ ಆಗಿ
ಹಂತ 3: ಮುಖ್ಯ ಮೆನು ಅಡಿಯಲ್ಲಿ, ಹೂಡಿಕೆ ವಿಭಾಗಕ್ಕೆ ( Investment) ಹೋಗಿ
ಹಂತ 4: ಓಪನ್ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯ ಮೇಲೆ ಕ್ಲಿಕ್ ಮಾಡಿ
ಹಂತ 5: ಅಗತ್ಯವಿರುವ ಎಲ್ಲ ಮಾಹಿತಿಯನ್ನು ನಮೂದಿಸಿ
ಹಂತ 6: 'Confirm' ಮೇಲೆ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ


Click it and Unblock the Notifications