ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಿವಿಧ ಡೆಬಿಟ್ ಕಾರ್ಡ್‌ಗಳನ್ನು ನೀಡುತ್ತದೆ. ಎಸ್‌ಬಿಐನ ಈ ಸೌಲಭ್ಯವನ್ನು ಬಳಸಿಕೊಂಡು ನಾವು ಸಲೀಸಾಗಿ ಪಾವತಿಗಳನ್ನು ಮಾಡಬಹುದು. ಎಸ್‌ಬಿಐನ ವಿವಿಧ ಡೆಬಿಕಟ್ ಕಾರ್ಡ್‌ಗಳು ಗ್ರಾಹಕರಿಗೆ ಸಹಾಯಕವಾಗಿದೆ. ದೇಶದಲ್ಲೇ ಅತೀ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐನ ವಿದೇಶಿ ಡೆಬಿಟ್ ಕಾರ್ಡ್ ಅನ್ನು ಸಹ ಬಳಸುತ್ತೀರಾ?. ಎಸ್‌ಬಿಐ ನೀವು ವಿದೇಶಕ್ಕೆ ಪ್ರಯಾಣಿಸುವಾಗ ನಿಯಮಿತ ವಹಿವಾಟುಗಳನ್ನು ಮಾಡಲು ಸಾಧ್ಯವಾಗುವ ಡೆಬಿಟ್ ಕಾರ್ಡ್ ಅನ್ನು ನೀಡುತ್ತದೆ.
ಎಸ್‌ಬಿಐ ಜಾಗತಿಕ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಇಎಂವಿ ಚಿಪ್ ಆಧಾರಿತ ಗ್ಲೋಬಲ್ ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್ ಆಗಿದೆ. ಈ ಡೆಬಿಟ್ ಕಾರ್ಡ್ ಬಳಸಿಕೊಂಡು ನೀವು ಮಾಡಲು ಪ್ರತಿಯೊಂದು ಖರೀದಿಯು ನಿಮಗೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತದೆ. ಹಾಗೆಯೇ ಹಲವಾರು ಪ್ರಯೋಜನಗಳನ್ನು ಕೂಡಾ ನೀಡುತ್ತದೆ. ಈ ಡೆಬಿಟ್ ಕಾರ್ಡ್ ಅನ್ನು ದೇಶೀಯವಾಗಿ ಮತ್ತು ವಿದೇಶಗಳಲ್ಲಿ ಆನ್‌ಲೈನ್ ಖರೀದಿಗಳನ್ನು ಮಾಡಲು ಬಳಸಬಹುದು. ಈ ಕಾರ್ಡ್‌ನ ಫೀಚರ್, ಪ್ರಯೋಜನ, ಶುಲ್ಕ ಇತರೆ ಮಾಹಿತಿ ಇಲ್ಲಿದೆ ಮುಂದೆ ಓದಿ...

ಎಸ್‌ಬಿಐ ಜಾಗತಿಕ ಡೆಬಿಟ್ ಕಾರ್ಡ್ ಫೀಚರ್
ವಿಶ್ವದಾದ್ಯಂತ 30 ಮಿಲಿಯನ್‌ಗೂ ಅಧಿಕ ರಿಟೇಲರ್‌ಗಳು ಮತ್ತು ಭಾರತದಲ್ಲಿ 52 ಲಕ್ಷಕ್ಕೂ ಅಧಿಕ ಸ್ಟೋರ್‌ಗಳು ಎಸ್‌ಬಿಐ ಜಾಗತಿಕ ಡೆಬಿಟ್ ಕಾರ್ಡ್ ಅನ್ನು ಯಾವುದೇ ವಸ್ತು ಖರೀದಿ ಮಾಡುವಾಗ ಪಾವತಿಗಾಗಿ ಬಳಕೆ ಮಾಡುವ ಅವಕಾಶವಿದೆ. ಎಸ್‌ಬಿಐ ಜಾಗತಿಕ ಡೆಬಿಟ್ ಕಾರ್ಡ್ ಅನ್ನು ಬಳಸಿಕೊಂಡು ಆನ್‌ಲೈನ್ ಖರೀದಿಯನ್ನು ನಾವು ಮಾಡಬಹುದಾಗಿದೆ. ಹಾಗೆಯೇ ಆನ್‌ಲೈನ್ ಪಾವತಿಗಳನ್ನು ಮಾಡಲು, ಅಂದರೆ ಸಿನಿಮಾ ಟಿಕೆಟ್, ಬಿಲ್‌ಗಳು, ಪ್ರವಾಸಕ್ಕೆ ಟಿಕೆಟ್‌ಗಳ ಮೊತ್ತವನ್ನು ಪಾವತಿ ಮಾಡಲು ಈ ಡೆಬಿಟ್ ಕಾರ್ಡ್ ಅನ್ನು ಬಳಸಿಕೊಳ್ಳಬಹುದಾಗಿದೆ.
ಜಾಗತಿಕವಾಗಿ ಎಸ್‌ಬಿಐ ಅಥವಾ ಬೇರೆ ಯಾವುದೇ ಹಣಕಾಸು ಸಂಸ್ಥೆಯ ಎಟಿಎಂಗಳಲ್ಲಿ ಈ ಡೆಬಿಟ್ ಕಾರ್ಡ್ ಬಳಸಿಕೊಂಡು ಹಣ ವಿತ್‌ಡ್ರಾ ಮಾಡಿಕೊಳ್ಳಬಹುದು. ಹಾಗೆಯೇ ಇದು ಆನ್‌ಲೈನ್ ಖರೀದಿಗಳಿಗೆ ಅತೀ ಸುರಕ್ಷಿತವಾಗಿದೆ. 5,000 ರೂಪಾಯಿಯ ಖರೀದಿ ಮಾಡಲು ಎನ್‌ಎಫ್‌ಸಿ (ಸಮೀಪ ಕ್ಷೇತ್ರ ಸಂವಹನ) ಟರ್ಮಿನಲ್ ಅನ್ನು ಬಳಸುವಾಗ, ಪಿನ್ ಅಗತ್ಯವಿಲ್ಲ. ದೈನಂದಿನವಾಗಿ ಐದು ಬಾರಿ ಪಿನ್ ಇಲ್ಲದೆಯೇ ವಹಿವಾಟು ನಡೆಸಬಹುದಾಗಿದೆ.
ರಿವಾರ್ಡ್ಸ್: ಗ್ರಾಹಕರು ತಮ್ಮ ಸ್ಟೇಟ್ ಬ್ಯಾಂಕ್ ಗ್ಲೋಬಲ್ ಡೆಬಿಟ್ ಕಾರ್ಡ್ ಅನ್ನು ಅಂಗಡಿಗಳು, ಬೇಕರಿಗಳು, ಗ್ಯಾಸ್ ಸ್ಟೇಷನ್‌ಗಳು, ಪ್ರಯಾಣದಲ್ಲಿ ಅಥವಾ ಆನ್‌ಲೈನ್‌ನಲ್ಲಿ ಖರ್ಚು ಮಾಡುವ ಪ್ರತಿ 200 ರೂಪಾಯಿಗಳಿಗೆ ಎರಡು ಎಸ್‌ಬಿಐ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು. ಒಂದು ತಿಂಗಳಿನಲ್ಲಿ ನಿಮ್ಮ ಸ್ಟೇಟ್ ಬ್ಯಾಂಕ್ ಗ್ಲೋಬಲ್ ಡೆಬಿಟ್ ಕಾರ್ಡ್‌ನ ಆರಂಭಿಕ ಮೂರು ಖರೀದಿಗಳಲ್ಲಿ ಸಕ್ರಿಯಗೊಳಿಸುವ ಬೋನಸ್ ಆಗಿ 200 ಬೋನಸ್ ಪಾಯಿಂಟ್‌ಗಳನ್ನು ಪಡೆಯಬಹುದು. ನಿಮ್ಮ ಜನ್ಮ ದಿನಾಂಕ ಇರುವ ತಿಂಗಳಲ್ಲಿ ಗಳಿಸಿದ ಬೋನಸ್ ಅಂಕಗಳನ್ನು ದ್ವಿಗುಣಗೊಳಿಸಲಾಗುತ್ತದೆ. ನೀವು ಗಳಿಸಿದ ಎಸ್‌ಬಿಐ ರಿವಾರ್ಡ್ ಪಾಯಿಂಟ್‌ಗಳನ್ನು ನೀವು ಸಂಗ್ರಹಿಸಬಹುದು ಮತ್ತು ರಿಡೀಮ್ ಮಾಡಬಹುದು.
ಶುಲ್ಕ, ದಂಡಗಳು, ದೈನಂದಿಗೆ ವಿತ್‌ಡ್ರಾ ಮಿತಿ: ಯಾವುದೇ ವಿಮಾ ಶುಲ್ಕಗಳು ಇರುವುದಿಲ್ಲ. ವಾರ್ಷಿಕ ನಿರ್ವಹಣಾ ಶುಲ್ಕ 125 ರೂಪಾಯಿ ಪ್ಲಸ್ ಇತರೆ ತೆರಿಗೆಗಳು ಆಗಿದೆ. ಕಾರ್ಡ್ ರಿಪ್ಲೇಸ್‌ಮೆಂಟ್ ಶುಲ್ಕ 300 ರೂಪಾಯಿ ಮತ್ತು ಇತರೆ ತೆರಿಗೆಗಳು ಇದೆ. ಸ್ಥಳೀಯವಾಗಿ ದೈನಂದಿನ ಕನಿಷ್ಠ ವಿತ್‌ಡ್ರಾ ಮಿತಿ 100 ರೂಪಾಯಿ ಆಗಿದೆ. ಇನ್ನು ದೈನಂದಿನ ಗರಿಷ್ಠ ವಿತ್‌ಡ್ರಾ ಮಿತಿ 40,000 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಿತಿ ಬೇರೆ ಬೇರೆ ದೇಶಗಳಿಗೆ ಬದಲಾವಣೆಯಾಗುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications