ಖಾಸಗಿ ಬ್ಯಾಂಕ್ ಆಗಲಿ ಅಥವಾ ಸಾರ್ವಜನಿಕ ಬ್ಯಾಂಕ್ ಆಗಲಿ ಪ್ರತಿ ತಿಂಗಳು ಎಟಿಎಂಗಳಲ್ಲಿ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಉಚಿತ ವಹಿವಾಟು ಮಿತಿ ಇರುತ್ತದೆ. ಕೆಲವು ಬ್ಯಾಂಕ್‌ನ ಎಟಿಎಂನಲ್ಲಿ ಮಾಸಿಕ ಐದು ಬಾರಿ ಮಾತ್ರ ಎಟಿಎಂ ವಿತ್‌ಡ್ರಾ ಮಾಡುವ ಅವಕಾಶವಿದೆ. ಆ ಬಳಿಕದ ವಹಿವಾಟಿಗೆ ದಂಡ ವಿಧಿಸಲಾಗುತ್ತದೆ.
ಮಾಸಿಕ ಮಿತಿಗಿಂತ ಅಧಿಕ ಮಾಡಿದ ಹಣಕಾಸು ಆಗಿರಲಿ ಅಥವಾ ಹಣಕಾಸೇತರ ವಹಿವಾಟಿಗೆ ಬ್ಯಾಂಕ್‌ಗಳು ಶುಲ್ಕವನ್ನು ವಿಧಿಸುತ್ತದೆ. ಅದಕ್ಕೆ ತೆರಿಗೆ ಕೂಡಾ ವಿಧಿಸಲಾಗುತ್ತದೆ. ನಾವು ಯಾವ ಖಾತೆಯನ್ನು ಹೊಂದಿದ್ದೇವೆ ಮತ್ತು ನಮ್ಮಲ್ಲಿ ಯಾವ ಡೆಬಿಟ್ ಕಾರ್ಡಟ್ ಇದೆ ಎಂಬ ಆಧಾರದಲ್ಲಿ ಎಟಿಎಂಗಳಲ್ಲಿ ಮಾಸಿಕ ವಹಿವಾಟು ಮಿತಿಯನ್ನು ವಿಧಿಸಲಾಗುತ್ತದೆ.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಆರ್‌ಬಿಐ ಹೊರಡಿಸಿದ ಸುತ್ತೋಲೆಯ ಪ್ರಕಾರ ಎಟಿಎಂನಲ್ಲಿ ಮಾಸಿಕ ವಹಿವಾಟು ಮಿತಿಗಿಂತ ಅಧಿಕವಾಗಿ ಮಾಡಲಾದ ಪ್ರತಿ ವಹಿವಾಟಿಗೆ ಬ್ಯಾಂಕ್‌ಗಳು 21 ರೂಪಾಯಿ ಶುಲ್ಕವನ್ನು ವಿಧಿಸಬಹುದು. ಇದು 2022ರ ಜನವರಿಯಿಂದ ಜಾರಿಗೆ ಬಂದಿದೆ. ಇದಕ್ಕೂ ಮುನ್ನ ಬ್ಯಾಂಕ್‌ಗಳು 20 ರೂಪಾಯಿ ಶುಲ್ಕ ವಿಧಿಸುವ ಅವಕಾಶವಿತ್ತು. ದೇಶದ ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ ಹಾಗೂ ಪಿಎನ್‌ಬಿಯಲ್ಲಿ ಉಚಿತ ಎಟಿಎಂ ವಿತ್‌ಡ್ರಾ ಮಿತಿ ಎಷ್ಟಿದೆ?, ವಾರ್ಷಿಕವಾಗಿ ಡೆಬಿಟ್ ಕಾರ್ಡ್ ನಿರ್ವಹಣೆ ಶುಲ್ಕ ಎಷ್ಟು ವಿಧಿಸುತ್ತಾರೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಕಾರ್ಡ್ ಆಧಾರದಲ್ಲಿ ಶುಲ್ಕ ನಿರ್ಧಾರ
2022ರ ಆಗಸ್ಟ್ 1ರಿಂದ ಬ್ಯಾಂಕ್‌ನಲ್ಲಿ ಹಣಕಾಸು ವಿನಿಮಯಕ್ಕೆ ಸುಮಾರು 17 ರೂಪಾಯಿ ಹಾಗೂ ಹಣಕಾಸೇತರ ವಹಿವಾಟಿಗೆ 6 ರೂಪಾಯಿ ವಿಧಿಸುವ ಅವಕಾಶವನ್ನು ಆರ್‌ಬಿಐ ನೀಡಿದೆ. ಇನ್ನು ಎಟಿಎಂ ನಿರ್ವಹಣೆಗೆ ತಗುಲುವ ವೆಚ್ಚವನ್ನು ಸರಿದೂಗಿಸಲು ಬ್ಯಾಂಕ್‌ಗಳು ಎಟಿಎಂ ಶುಲ್ಕ ಎಂದು ಕೂಡಾ ವಿಧಿಸುತ್ತದೆ. ಎಲ್ಲ ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ, ಪಿಎನ್‌ಬಿ ಡೆಬಿಟ್ ಕಾರ್ಡ್ ಅಥವಾ ಎಟಿಎಂ ಕಾರ್ಡ್ ಮೇಲೆ ವಾರ್ಷಿಕವಾಗಿ ಶುಲ್ಕವನ್ನು ವಿಧಿಸುತ್ತದೆ. ಗ್ರಾಹಕರು ಯಾವ ಕಾರ್ಡ್ ಅನ್ನು ಹೊಂದಿದ್ದಾರೆ ಎಂಬ ಆಧಾರದಲ್ಲಿ ಈ ಶುಲ್ಕವನ್ನು ವಿಧಿಸಲಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾರ್ಷಿಕ ಶುಲ್ಕ
1. ಡೆಬಿಟ್ ಕಾರ್ಡ್‌ನಲ್ಲಿ ವಾರ್ಷಿಕವಾಗಿ ನಿರ್ವಹಣಾ ಶುಲ್ಕ ಅಥವಾ maintenance charge ರೂಪಾಯಿ 125+ಜಿಎಸ್‌ಟಿ ಆಗಿದೆ.
2. ಡೆಬಿಟ್ ಕಾರ್ಡ್ ಬದಲಾಯಿಸಬೇಕಾದರೆ ಎಸ್‌ಬಿಐನಲ್ಲಿ 300 ರೂಪಾಯಿ + ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ
3. ಪಿನ್ ರಿಜನರೇಷನ್ ಶುಲ್ಕ 50 ರೂಪಾಯಿ + ಜಿಎಸ್‌ಟಿ ಇದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್
1. ಕಾರ್ಡ್‌ನ ವಿಮಾ ಶುಲ್ಕ 150 ರೂಪಾಯಿ
2. ವಾರ್ಷಿಕ ನಿರ್ವಹಣಾ ಶುಲ್ಕ 150-500 ರೂಪಾಯಿ
3. ಕಾರ್ಡ್ ಬದಲಾಯಿಸಬೇಕಾದರೆ 150 ರೂಪಾಯಿ ಪಾವತಿ ಮಾಡಬೇಕಾಗುತ್ತದೆ
4. ಪಿನ್ ರಿಜನರೇಷನ್ ಶುಲ್ಕ 50 ರೂಪಾಯಿ ಆಗಿದೆ.
ಎಷ್ಟು ಉಚಿತ ವಹಿವಾಟು ಮಿತಿ?
ಪ್ರತಿ ತಿಂಗಳು ಗ್ರಾಹಕರಿಗೆ 5 ಉಚಿತ ಎಟಿಎಂ ವಹಿವಾಟು ನಡೆಸುವ ಅವಕಾಶವಿದೆ. ಇನ್ನು ಬೇರೆ ಬ್ಯಾಂಕ್‌ನ ಎಟಿಎಂನಿಂದ ವಿತ್‌ಡ್ರಾ ಮಾಡುವುದಾದರೆ ಮಾಸಿಕವಾಗಿ ಮೂರು ಉಚಿತ ವಹಿವಾಟಿಗೆ ಅವಕಾಶವಿದೆ. ಇನ್ನು ಮೆಟ್ರೋಯೇತರ ನಗರಗಳಲ್ಲಿ ಗ್ರಾಹಕರು ಬೇರೆ ಬ್ಯಾಂಕ್‌ಗಳ ಎಟಿಎಂನಲ್ಲಿ ಐದು ಉಚಿತ ವಹಿವಾಟನ್ನು ನಡೆಸುವ ಅವಕಾಶವಿದೆ. "ಗ್ರಾಹಕರು ತಮ್ಮದೇ ಆದ ಬ್ಯಾಂಕ್ ಎಟಿಎಂನಿಂ ಐದು ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಬೇರೆ ಬ್ಯಾಂಕುಗಳ ಎಟಿಎಂನಲ್ಲಿ ವಹಿವಾಟು ಮಾಡುವ ಗ್ರಾಹಕರು, ಮೆಟ್ರೋ ನಗರದಲ್ಲಿ ಮೂರು ಬಾರಿ, ಮೆಟ್ರೋಯೇತರ ನಗರದಲ್ಲಿ ಐದು ಬಾರಿ ವಹಿವಾಟು ನಡೆಸಬಹುದು. ಈ ಉಚಿತ ಸೇವಾ ಮಿತಿಯನ್ನು ಮೀರಿದರೆ, ಆಗಸ್ಟ್ 14, 2014 ಸುತ್ತೋಲೆಯ ಪ್ರಕಾರ ಗ್ರಾಹಕರು ಹೆಚ್ಚಿಗೆ 20 ರೂಪಾಯಿಯನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಈಗ ಬ್ಯಾಂಕುಗಳಿಗೆ ಹೆಚ್ಚಿನ ವಿನಿಮಯ ಶುಲ್ಕವನ್ನು ಸರಿದೂಗಿಸುವ ನಿಟ್ಟಿನಲ್ಲಿ ಮಾಸಿಕ ಮಿತಿಗಿಂತ ಅಧಿಕ ವಹಿವಾಟು ನಡೆಸಿದರೆ, ಶುಲ್ಕವನ್ನು ಅಧಿಕ ಮಾಡಲಾಗಿದೆ. ಇನ್ನು ಮುಂದೆ 21 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕ ಹೆಚ್ಚಳವು ಜನವರಿ 1, 2022 ರಿಂದ ಅನ್ವಯ ಆಗಲಿದೆ," ಎಂದು ಈ ಹಿಂದೆಯೇ ಆರ್‌ಬಿಐ ಹೇಳಿದೆ.


Click it and Unblock the Notifications