20,000 ರೂಪಾಯಿನಿಂದ 2,225 ಕೋಟಿ ರೂ. ಮೌಲ್ಯದ ಕಂಪನಿ ನಿರ್ಮಿಸಿದ ಮಹಿಳಾ ಉದ್ಯಮಿ

ಇಶಾ ಅಂಬಾನಿ ಅಥವಾ ಫಲ್ಗುಣಿ ನಾಯರ್ ಇರಬಹುದು, ಹೀಗೆ ವಿವಿಧ ತಲೆಮಾರುಗಳ ಉದ್ಯಮಿಗಳು ತಮ್ಮ ಜಾಣ್ಮೆಯಿಂದಲೇ ಉದ್ಯಮ ಹುಟ್ಟುಹಾಕಿ ಅದನ್ನು ಇಂದು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಪ್ರಸಿದ್ಧ ಭಾರತೀಯ ಉದ್ಯಮಿಗಳಲ್ಲಿ ಒಬ್ಬರಾಗಿರುವ ವಂದನಾ ಲೂತ್ರಾ ಅವರ ಯಶಸ್ಸಿನ ಕಡೆಗಿನ ಪ್ರಯಾಣಕ್ಕಾಗಿ ಪಟ್ಟ ಪರಿಶ್ರಮ ಮತ್ತು ದೃಢಸಂಕಲ್ಪ ನಿಜಕ್ಕೂ ಸ್ಮರಣೀಯವಾಗಿದೆ.

ಬ್ಯೂಟಿ ಅಂಡ್ ವೆಲ್ನೆಸ್ ಕ್ಷೇತ್ರದಲ್ಲಿದ್ದ 80ರ ದಶಕಲ್ಲಿದ್ದ ವಿಲಕ್ಷಣ ಪರಿಸ್ಥಿತಿಯ ವಿರುದ್ಧವಾಗಿ ವಂದನಾ ಉದ್ಯಮ ಆರಂಭಿಸಿದ್ದು, ಇದು ಆ ಸಮಯದಲ್ಲಿ ನವೀನ ಕಲ್ಪನೆಯಾಗಿತ್ತು. ಯಾಕೆಂದರೆ 80ರ ದಶಕದ ಉತ್ತರಾರ್ಧದ ಸಮಯ ಇಂದಿನಂತಿರಲಿಲ್ಲ. ಅದರೂ ಅವರು ಯಾರೂ ಯೋಚಿಸದದ್ದನ್ನು ಮಾಡಿ ದೃಢಸಂಕಲ್ಪ, ಮಹತ್ವಾಕಾಂಕ್ಷೆ, ಬದ್ಧತೆಯ ಮೂಲಕ ಮುಂದುವರಿದಿದ್ದರು.

 2,225 ಕೋಟಿ ರೂ. ಮೌಲ್ಯದ ಕಂಪನಿ ನಿರ್ಮಿಸಿದ ಉದ್ಯಮಿ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ವಂದನಾ ಲೂತ್ರಾ, ಪ್ರಖ್ಯಾತ ಬ್ಯೂಟಿ ಅಂಡ್ ವೆಲ್ನೆಸ್ ಬ್ರ್ಯಾಂಡ್ 'VLCC' ಯ ಸ್ಥಾಪಕಿಯಾಗಿದ್ದು, ಅಂದು 20,000 ರೂಪಾಯಿ ಹೂಡಿಕೆ ಮಾಡಿ ಉದ್ಯಮ ಹುಟ್ಟುಹಾಕಿದ್ದರು. ಅಂದಿನಿಂದ, ಇಂದಿನವರೆಗೆ ಅವರು ಕಂಪನಿಯನ್ನು ಲೈವ್ ಮಿಂಟ್ ಪ್ರಕಾರ 2,225 ಕೋಟಿ ರೂ.ಗೆ ಬೆಳೆದು ನಿಲ್ಲಿಸಿದ ಪರಿ ನಿಜಕ್ಕೂ ಬೆರಗುಗೊಳಿಸುವಂತದ್ದು.

1956ರ ಜುಲೈ 12ರಂದು ದೆಹಲಿಯಲ್ಲಿ ಜನಿಸಿದ ವಂದನಾ, ಪ್ರಭಾವಿ ಕುಟುಂಬದಿಂದ ಬಂದವರು. ಆರೋಗ್ಯಕರವಾದ ಮತ್ತು ವೈಯಕ್ತಿಕ ಬೆಳವಣಿಗೆಗೆ ಪೋತ್ಸಾಹವನ್ನು ವಂದನ ಅವರ ಆಯುರ್ವೇದ ವೈದ್ಯೆಯಾಗಿದ್ದ ತಾಯಿ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ತಂದೆ ನೀಡುತ್ತಿದ್ದರು. ವಂದನಾ ನವದೆಹಲಿಯಲ್ಲಿನ ವುಮೆನ್ಸ್ ಪಾಲಿಟೆಕ್ನಿಕ್ ನಲ್ಲಿ ತಮ್ಮ ಶಿಕ್ಷಣ ಪಡೆದುಕೊಂಡರು.

ಜನರ ಜೀವನದ ಮೇಲೆ ಪ್ರಭಾವ ಬೀರುವ ಬಯಕೆ

ಇವರು ತನ್ನ ಬಾಲ್ಯದಿಂದಲೂ ಜನರ ಜೀವನದ ಮೇಲೆ ಪ್ರಭಾವ ಬೀರುವ ಬಯಕೆಯನ್ನು ಹೊಂದಿದ್ದರು. ತಾಯಿಯ ಮೌಲ್ಯಗಳಿಂದ ಪ್ರೇರಿತರಾದ ಇವರು ಸಮಾಜದ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರುವ ಯತ್ನ ಮಾಡಿದರು. ಫ್ರಾನ್ಸ್, ಜರ್ಮನಿ ಮತ್ತು ಯುಕೆ ಭೇಟಿ ನೀಡುವ ಮೂಲಕ ತಮ್ಮ ಅಧ್ಯಯನವನ್ನು ಮುಗಿಸಿದ ನಂತರ ವಂದನಾ ಯುರೋಪ್ ನಲ್ಲೂ ಅನ್ವೇಷಣೆಯನ್ನು ಮುಂದುವರಿಸಿದರು.

ಜರ್ಮನಿಯಲ್ಲಿ ಕಾಸ್ಮೆಟಾಲಜಿ ಮತ್ತು ಪೌಷ್ಟಿಕಾಂಶದ ಅಧ್ಯಯನ

ಇದಾದ ನಂತ ಜರ್ಮನಿಯಲ್ಲಿ ಕಾಸ್ಮೆಟಾಲಜಿ ಮತ್ತು ಪೌಷ್ಟಿಕಾಂಶದ ಅಧ್ಯಯನವನ್ನು ಪೂರ್ಣಗೊಳಿಸಿದರು. ಈ ವೇಳೆ ಜೀವನಶೈಲಿ ಆರೈಕೆ, ಪೋಷಣೆ ಮತ್ತು ಫಿಟ್ನೆಸ್ ಮತ್ತು ಸೌಂದರ್ಯ ಉದ್ಯಮಗಳ ಕ್ಷೇತ್ರಗಳ ಕುರಿತು ಆಳವಾದ ಜ್ಞಾನ ಪಡೆದುಕೊಂಡರು. ಸ್ವಾಸ್ಥ್ಯ ಮತ್ತು ಸೌಂದರ್ಯ ಉದ್ಯಮಕ್ಕೆ ಮುಂದೆ ಬಹಳಷ್ಟು ಬೇಡಿಕೆ ಬರಬಹುದು ಎಂದು ಅರಿತುಕೊಂಡು, ಬ್ಯೂಟಿ ಅಂಡ್ ವೆಲ್ನೆಸ್ ಬೆಸೆಯುವ ಮೂಲಕ ಕಂಪನಿಯನ್ನು ಪ್ರಾರಂಭಿಸಲು ಅವರು ಯೋಚಿಸಿದರು.

ಮುಖೇಶ್ ಲೂಥ್ರಾ ಅವರ ಜೊತೆ 1989ರಲ್ಲಿ ವಿವಾಹ

ವಂದನಾ 1989 ರಲ್ಲಿ ಮುಖೇಶ್ ಲೂಥ್ರಾ ಅವರನ್ನು ವಿವಾಹವಾದಾಗ ಅವರ ಮಹತ್ವಾಕಾಂಕ್ಷೆ ಯೋಜನೆಗಳು ಕಾರ್ಯರೂಪಕ್ಕೆ ಬರಲು ಆರಂಭಿಸಿತು. 20,000 ರೂಪಾಯೊಂದಿಗೆ ವಂದನಾ ಮತ್ತು ಅವರ ಪತಿ ದೆಹಲಿಯ ಸಫ್ದರ್‌ಜಂಗ್ ಎನ್‌ಕ್ಲೇವ್‌ನಲ್ಲಿ ಮೊದಲ VLCC ಹೆಲ್ತ್ ಸೆಂಟರ್ ಹುಟ್ಟು ಹಾಕಿದರು.

1989 ರಲ್ಲಿ ಸ್ಥಾಪಿತವಾದ VLCC ಪ್ರಮುಖವಾಗಿ ಆಹಾರ ಪದ್ಧತಿ ಮತ್ತು ತೂಕ ನಿರ್ವಹಣೆ ಫಿಟ್‌ನೆಸ್ ನಿಯಮಗಳ ಮೇಲೆ ಕೇಂದ್ರೀಕರಿಸಿತ್ತು. ಡಯಟರೀಸ್ ಚೇಂಜಸ್ (ಸಮಗ್ರ ಆಹಾರ ಬದಲಾವಣೆ), ಫಿಸಿಕಲ್ ಆಕ್ಟಿವಿಟಿ ಕಾರ್ಯಕ್ರಮ, ಚರ್ಮ ಮತ್ತು ಕೂದಲಿನ ಸಂರಕ್ಷಣೆ ಕುರಿತ ಕಂಪನಿ ಪ್ರಮುಖವಾಗಿ ದೃಷ್ಟಿಹರಿಸಿರುವುದು ಗ್ರಾಹಕರನ್ನು ಆಕರ್ಷಿಸಿತು.

ಆಧುನಿಕ ಭಾರತೀಯ ಮನೆಗಳಲ್ಲಿVLCC ಹೆಸರು

ಇಂದು ಕೂಡಾ ಅಂದರೆ ತ್ವಚೆ ಮತ್ತು ಸೌಂದರ್ಯ ವಿಚಾರ ಬಂದ್ರೆ ಆಧುನಿಕ ಭಾರತೀಯ ಮನೆಗಳಲ್ಲಿVLCC ಹೆಸರು ನೆನಪಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೇ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಪೂರ್ವ ಆಫ್ರಿಕಾದಲ್ಲಿ 139 ನಗರಗಳು ಮತ್ತು 12 ದೇಶಗಳಲ್ಲಿ VLCC ಬ್ರ್ಯಾಂಡ್‌ ಸೇವೆ ಸಲ್ಲಿಸುತ್ತವೆ. ವಂದನಾ ಸೆಂಟರ್'ಸ್ ಬ್ಯೂಟಿ & ವೆಲ್ನೆಸ್ ಸೆಕ್ಟರ್ ನ ಅಧ್ಯಕ್ಷರೂ ಆಗಿದ್ದಾರೆ.

ಮಹಿಳೆಯರ ಸಬಲೀಕರಣದಲ್ಲೂ ಪ್ರಮುಖ ಪಾತ್ರ

ವಂದನಾ ಅವರು ಉದ್ಯಮಿಯಾಗಿ ಮಾತ್ರವಲ್ಲದೇ ಮಹಿಳೆಯರ ಸಬಲೀಕರಣದಲ್ಲೂ ಪಾತ್ರವಹಿಸಿದ್ದಾರೆ . ಅವರ ಬ್ರಾಂಡ್‌ನಲ್ಲಿರುವ 3,000 ಉದ್ಯೋಗಿಗಳಲ್ಲಿ ಸುಮಾರು ಎಪ್ಪತ್ತು ಪ್ರತಿಶತಕ್ಕೂ ಹೆಚ್ಚು ಮಹಿಳೆಯರಾಗಿದ್ದಾರೆ. ಅವರು ಉದ್ಯಮ ಕಟ್ಟಿ ಬೆಳೆಸಿದ ರೀತಿಗೆ ಅಪಾರ ಮೆಚ್ಚುಗೆ ಪಡೆದಿದ್ದು, ತಮ್ಮಅಸಾಧಾರಣ ಸೇವೆಗಳಿಗಾಗಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪುರಸ್ಕೃತರಾಗಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+