ಸೋವರನ್ ಗೋಲ್ಡ್ ಬಾಂಡ್ (SGB) 2020–21 ಸರಣಿ VIII ರ ಹೂಡಿಕೆದಾರರು ತಮ್ಮ ಬಾಂಡ್‌ಗಳನ್ನು ಅವಧಿಗೂ ಮುನ್ನವೇ ಇಂದೇ (ನವೆಂಬರ್ 18, 2026) ರಿಡೀಮ್ ಮಾಡಿಕೊಳ್ಳಬಹುದು. ಈ ರಿಡೀಮ್ ಪ್ರಕ್ರಿಯೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ಗ್ರಾಂಗೆ ₹13,499 ದರವನ್ನು ನಿಗದಿಪಡಿಸಿದೆ. ಈ ಅವಕಾಶ ಈ ನಿರ್ದಿಷ್ಟ ಸರಣಿಗೆ ಮಾತ್ರ ಅನ್ವಯಿಸಲಿದ್ದು, ವಿನಂತಿ ಸಲ್ಲಿಸುವ ಗಡುವು ನವೆಂಬರ್ 9 ರಂದೇ ಕೊನೆಗೊಂಡಿದೆ. ಅರ್ಹ ಹೂಡಿಕೆದಾರರ ನೋಂದಾಯಿತ ಬ್ಯಾಂಕ್ ಖಾತೆಗೆ ಹಣ ಇಂದು ಜಮಾ ಆಗಲಿದೆ.
ರಿಡೀಮ್ ಬೆಲೆಯನ್ನು ನಿಗದಿಪಡಿಸಲು ಆರ್‌ಬಿಐ, IBJA ಪ್ರಕಟಿಸುವ 999 ಶುದ್ಧತೆಯ ಚಿನ್ನದ ಕೊನೆಯ ಮೂರು ಕೆಲಸದ ದಿನಗಳ ಸರಾಸರಿ ಬೆಲೆಯನ್ನು ಪರಿಗಣಿಸುತ್ತದೆ. ಇಂದಿನ ದರಕ್ಕಾಗಿ ನವೆಂಬರ್ 13, 16 ಮತ್ತು 17 ರ ಸರಾಸರಿ ಬೆಲೆಯನ್ನು ಆರ್‌ಬಿಐ ಬಳಸಿದೆ. ಆರ್‌ಬಿಐ ಅಥವಾ ಡಿಪಾಸಿಟರಿಗಳು ನಿಗದಿತ ದಿನಾಂಕದಂದು ಖಾತೆಗೆ ಹಣ ಬಿಡುಗಡೆ ಮಾಡುತ್ತವೆ. ಹೂಡಿಕೆ ಮಾಡುವಾಗ ನೀಡಿದ್ದ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ.

SGB ಅವಧಿಗೂ ಮುನ್ನ ರಿಡೀಮ್ ಮಾಡಲು ಹಂತಗಳು
ಡಿಮ್ಯಾಟ್ ಖಾತೆದಾರರು ತಮ್ಮ ಡಿಪಾಸಿಟರಿ ಪಾರ್ಟಿಸಿಪೆಂಟ್ (DP) ಬಳಿ ರೀಪರ್ಚೇಸ್ ಅಥವಾ ರಿಡೆಂಪ್ಷನ್ ಫಾರ್ಮ್ ಸಲ್ಲಿಸಬೇಕಾಗುತ್ತದೆ. ಆರ್‌ಬಿಐ ಸೂಚಿಸಿದ ಸರಣಿಯ ಗಡುವಿನ ಒಳಗಾಗಿಯೇ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಿಮ್ಮ ಬ್ಯಾಂಕ್ ವಿವರಗಳು ಸರಿಯಾಗಿವೆಯೇ ಎಂದು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ; ಮಾಹಿತಿ ತಪ್ಪಿದ್ದರೆ ಹಣ ಜಮಾ ಆಗದೆ ಬಾನ್ಸ್ ಆಗುವ ಸಾಧ್ಯತೆ ಇರುತ್ತದೆ. ಜಾಯಿಂಟ್ ಅಕೌಂಟ್ ಹೊಂದಿದ್ದರೆ ಎಲ್ಲರೂ ಸಹಿ ಮಾಡಬೇಕು ಮತ್ತು ಯಾವುದೇ ಲಿಯನ್ ಇದ್ದರೆ ಅದನ್ನು ತೆರವುಗೊಳಿಸುವುದು ಕಡ್ಡಾಯ. ಇನ್ನು ರಿಟೇಲ್ ಡೈರೆಕ್ಟ್‌ನಲ್ಲಿ ಖಾತೆ ಇದ್ದರೆ, "ಲಾಗಿನ್ ಮಾಡಿ", ಹೋಲ್ಡಿಂಗ್ಸ್ ವಿಭಾಗಕ್ಕೆ ಹೋಗಿ, ಬಾಂಡ್ ಆಯ್ಕೆ ಮಾಡಿ, ಅವಧಿಗೂ ಮುನ್ನ ರಿಡೀಮ್ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡಿ "ವಿನಂತಿ ಸಲ್ಲಿಸಿ".
SGB ಕಾಲಮಿತಿ, ಹಣ ಸಲ್ಲಿಕೆ ಮತ್ತು ತೆರಿಗೆ ನಿಯಮಗಳು
ಬ್ಯಾಂಕ್ ವಿವರಗಳು ಸರಿಯಾಗಿದ್ದು, ಸಕಾಲದಲ್ಲಿ ಅರ್ಜಿ ಸಲ್ಲಿಸಿದವರ ಖಾತೆಗೆ ಇಂದೇ ಹಣ ಬರಲಿದೆ. ಒಂದು ವೇಳೆ ಹಣ ಜಮೆಯಾಗದಿದ್ದರೆ, ಬ್ಯಾಂಕ್ ಮಾಹಿತಿ ಅಪ್‌ಡೇಟ್ ಮಾಡಿ ನಿಮ್ಮ ಡಿಪಿ ಅಥವಾ ಎನ್‌ಎಸ್‌ಡಿಎಲ್ (NSDL) ಮೂಲಕ ದೂರು ನೀಡಿ. ಸೋವರನ್ ಗೋಲ್ಡ್ ಬಾಂಡ್‌ಗಳಿಗೆ ಮೂಲದಲ್ಲೇ ತೆರಿಗೆ ಕಡಿತ (TDS) ಅನ್ವಯಿಸುವುದಿಲ್ಲ, ಆದರೆ ಇದರಿಂದ ಬರುವ ಬಡ್ಡಿಯು ತೆರಿಗೆಗೆ ಒಳಪಡುತ್ತದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ, ಅವಧಿಗೂ ಮುನ್ನ ರಿಡೀಮ್ ಮಾಡುವಾಗ ಸಿಗುವ ಲಾಭಕ್ಕೂ ತೆರಿಗೆ ಅನ್ವಯಿಸುತ್ತದೆ. ಬಾಂಡ್ ಸಂಪೂರ್ಣ ಅವಧಿ (ಮೆಚ್ಯೂರಿಟಿ) ಪೂರ್ಣಗೊಳ್ಳುವವರೆಗೆ ಇಟ್ಟುಕೊಂಡರೆ ಮಾತ್ರ ತೆರಿಗೆ ವಿನಾಯಿತಿ ಸಿಗಲಿದೆ.
ಮುಂದಿನ SGB ರಿಡೀಮ್ ದಿನಾಂಕಗಳು
ಈ ಮುಂಚೆಯೇ ಅರ್ಜಿ ಸಲ್ಲಿಸಿದವರಿಗೆ ನವೆಂಬರ್‌ನಲ್ಲಿ ಇನ್ನು ಎರಡು ಸರಣಿಗಳಿಂದ ಹೊರಬರಲು (Early-exit) ಅವಕಾಶವಿದೆ. ನಿಮ್ಮ ಬಾಂಡ್ ಸರಣಿ ಅರ್ಹವಾಗಿದೆಯೇ ಎಂದು ತಿಳಿಯಲು ಆರ್‌ಬಿಐ ನೀಡಿರುವ ಕ್ಯಾಲೆಂಡರ್ ನೋಡಿ. ಬಾಂಡ್ ಬಿಡುಗಡೆಯಾದ ದಿನಾಂಕದೊಂದಿಗೆ ಈ ವೇಳಾಪಟ್ಟಿಯನ್ನು ತಾಳೆ ಮಾಡಿ. ಆಯಾ ಬ್ಯಾಂಕ್‌ಗಳು ಮತ್ತು ಡಿಪಾಸಿಟರಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಗಳನ್ನು ಪ್ರತ್ಯೇಕವಾಗಿ ತಿಳಿಸುತ್ತವೆ.
| ದಿನಾಂಕ | ಸರಣಿ | ಆರ್‌ಬಿಐ ವಿನಂತಿ ಅವಧಿ |
|---|---|---|
| ನವೆಂಬರ್ 19, 2026 | 2020–21 Series II | ಅಕ್ಟೋಬರ್ 19–ನವೆಂಬರ್ 9, 2026 |
| ನವೆಂಬರ್ 25, 2026 | 2021–22 Series I | ಅಕ್ಟೋಬರ್ 23–ನವೆಂಬರ್ 16, 2026 |
ನೀವು ಸರಣಿ VIII ರ ರಿಡೀಮ್‌ಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದರೆ, ಹಣ ಜಮೆಯಾದ ಬಗ್ಗೆ ಬ್ಯಾಂಕ್‌ನಿಂದ ಬರುವ ಎಸ್‌ಎಂಎಸ್ ಅಥವಾ ಇಮೇಲ್ ಮೆಸೇಜ್ ಗಮನಿಸಿ. ಹಣ ಕ್ರೆಡಿಟ್ ಆಗದಿದ್ದರೆ ತಕ್ಷಣ ನಿಮ್ಮ ಡಿಪಿ ಅಥವಾ ರಿಟೇಲ್ ಡೈರೆಕ್ಟ್ ಬೆಂಬಲ ತಂಡವನ್ನು ಸಂಪರ್ಕಿಸಿ. ಪ್ಯಾನ್, ಕ್ಲೈಂಟ್ ಐಡಿ ಮತ್ತು ಬ್ಯಾಂಕ್ ಖಾತೆಯ ದಾಖಲೆ ಸೇರಿದಂತೆ ಅಗತ್ಯ "ದಾಖಲೆಗಳನ್ನು ಸಿದ್ದಪಡಿಸಿ" ಇಟ್ಟುಕೊಳ್ಳಿ. ಇದರಿಂದ ತೊಂದರೆಯನ್ನು ಬೇಗ ಬಗೆಹರಿಸಿಕೊಳ್ಳಬಹುದು ಹಾಗೂ ಅರ್ಜಿ ತಿರಸ್ಕೃತವಾಗುವುದನ್ನು ತಪ್ಪಿಸಬಹುದು.


Click it and Unblock the Notifications