ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್ ತನ್ನ ನಟನೆಗೆ ವಿಶ್ವದಾದ್ಯಂತ ಅತೀ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ನಟನು ತನ್ನ ಅಥ್ಲೆಟಿಕ್ ಮೈಕಟ್ಟು, ನೃತ್ಯ ಮತ್ತು ಆಕರ್ಷಕ ವ್ಯಕ್ತಿತ್ವಕ್ಕೆ ಹೆಚ್ಚಾಗಿ ಹೆಸರುವಾಸಿಯಾಗಿದ್ದಾರೆ.
ಈ ಕಬೀರ್ ಸಿಂಗ್ ಸ್ಟಾರ್‌ನ ಬಳಿ ಹಲವಾರು ಕಾರುಗಳು ಮತ್ತು ಬೈಕ್‌ಗಳ ಹೊಂದಿದ್ದಾರೆ ಮತ್ತು ಅದರ ಮೇಲೆ ಅತೀ ಹೆಚ್ಚಿನ ಪ್ರೀತಿಯನ್ನು ಕೂಡಾ ಹೊಂದಿರುವ ನಟ ಇವರಾಗಿದ್ದಾರೆ. ಶಾಹಿದ್ ಕಪೂರ್ ಅತಿ ದುಬಾರಿ ವಾಹನಗಳ ಸಂಗ್ರಹವನ್ನು ಹೊಂದಿರುವ ನಟರುಗಳಲ್ಲಿ ಒಬ್ಬರಾಗಿದ್ದಾರೆ.

ಈಗ ನಟ ತನ್ನ ದುಬಾರಿ ಕಾರುಗಳ ಸಂಗ್ರಹಕ್ಕೆ ಒಂದನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜಪೂತ್ ಹೊಸ ಮರ್ಸೆಡಿಸ್-ಮೇ ಬ್ಯಾಕ್ ಜಿಎಲ್‌ಎಸ್ 600 ಎಸ್‌ಯುವಿಯನ್ನು ಸುಮಾರು ಖರೀದಿಸಿದ್ದಾರೆ.
ಡ್ಯಾನ್ಸಿಂಗ್ ಕಾರಿನ ಬೆಲೆ ಎಷ್ಟು?
ಮುಂಬೈನಲ್ಲಿರುವ ಮರ್ಸಿಡಿಸ್-ಬೆನ್ಝ್ ಡೀಲರ್‌ಶಿಪ್ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಸೊಗಸಾದ ಎಸ್‌ಯುವಿಯನ್ನು ಖರೀದಿ ಮಾಡಿದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಇದರ ಬೆಲೆ ಸುಮಾರು 3.5 ಕೋಟಿ ರೂಪಾಯಿ ಆಗಿದ್ದು, ಇದನ್ನು ಡ್ಯಾನ್ಸಿಂಗ್ ಕಾರು ಎಂದು ಕೂಡಾ ಕರೆಯಲಾಗುತ್ತದೆ.
ಇದರಲ್ಲಿ ಚಾಲಕರಿಗೆ ಸಸ್ಪೆಂಷನ್ ಹೈಟ್ ಬೇಕಾದಂತೆ ಹೊಂದಿಸಿಕೊಳ್ಳುವ ಸೌಲಭ್ಯ ಇರುವ ಕಾರಣ ಈ ಕಾರನ್ನು ಡ್ಯಾನ್ಸಿಂಗ್ ಕಾರು ಎಂದು ಕರೆಯಲಾಗುತ್ತದೆ. ಬಾಲಿವುಡ್ ಸೆಲೆಬ್ರೆಟಿಗಳು ಹೊಂದಿರುವ ಐಷಾರಾಮಿ ಎಸ್‌ಯುವಿಗಳಲ್ಲಿ ಇದು ಕೂಡಾ ಒಂದಾಗಿದೆ.
ಯಾರ ಬಳಿಯಿದೆ ಈ ಕಾರು
ದೀಪಿಕಾ ಪಡುಕೋಣೆ, ಕೀರ್ತಿ ಸನೋನ್, ಈ ಕಾರನ್ನು ಹೊಂದಿರುವ ಕೆಲವೇ ಬಾಲಿವುಡ್ ನಟರುಗಳಲ್ಲಿ ಇಬ್ಬರಾಗಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಅವರ ಜವಾನ್ ಸಹನಟಿ ನಯನತಾರಾ ಅವರು ತಮ್ಮ ಪತಿ ವಿಘ್ನೇಶ್ ಶಿವನ್‌ರಿಂದ ಹೊಸದಾಗಿ ಈ ಐಷಾರಾಮಿ ಎಸ್‌ಯುವಿಯನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ.
ಮರ್ಸಿಡೆಸ್ ಮೇಬ್ಯಾಕ್ ಜಿಎಲ್‌ಎಸ್ 600 4.0-ಲೀಟರ್ ವಿ8 ಎಂಜಿನ್ ಮತ್ತು 48ವಿ ಹೈಬ್ರಿಡ್ ಸಿಸ್ಟಮ್ ಹೊಂದಿದೆ. ಎಂಜಿನ್ ಗರಿಷ್ಠ 557 ಪಿಎಸ್ ಪವರ್ ಮತ್ತು 730 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೈಬ್ರಿಡ್ ಸಿಸ್ಟಮ್ ಅಗತ್ಯವಿದ್ದಾಗ 22 ಪಿಎಸ್ ಮತ್ತು 250 ಎನ್‌ಎಂ ಹೆಚ್ಚುವರಿ ಬೂಸ್ಟ್ ಅನ್ನು ನೀಡಿದೆ.
ಶಾಹಿದ್ ಕಪೂರ್ ಬಳಿ ಇರುವ ಕಾರುಗಳು
ಶಾಹಿದ್ ಕಪೂರ್ ಈ ಒಂದು ಕಾರುಗಳನ್ನು ಮಾತ್ರ ಹೊಂದಿಲ್ಲ. ಇನ್ನು ಹಲವಾರು ಕಾರುಗಳನ್ನು ಹೊಂದಿದ್ದಾರೆ. ಜಾಗ್ವಾರ್ ಎಕ್ಸ್‌ಕೆಆರ್-ಎಸ್, ಪೋರ್ಚ್, ರೇಜ್ ರೋವರ್ ಕಾರುಗಳನ್ನು ಶಾಹಿದ್ ಕಪೂರ್ ಹೊಂದಿದ್ದಾರೆ.


Click it and Unblock the Notifications