Shark Tank India 3: ಹೊಸ ಶಾರ್ಕ್‌ಗಳಾದ ರಿತೇಶ್, ದೀಪಿಂದರ್ ನಿವ್ವಳ ಮೌಲ್ಯವೆಷ್ಟು ಗೊತ್ತಾ?

ಕಳೆದೆರಡು ಸೀಸನ್‌ನಲ್ಲಿ ಜನಪ್ರಿಯವಾಗಿರುವ ಶಾರ್ಕ್ ಟ್ಯಾಂಕ್ ಇಂಡಿಯಾ ಶೋ, ಶೀಘ್ರದಲ್ಲೇ ಮೂರನೇ ಸೀಸನ್‌ನೊಂದಿಗೆ ಬರಲು ಅಣಿಯಾಗುತ್ತಿದೆ. ಮೊದಲ ಎರಡು ಸೀಸನ್‌ಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ರಿಯಾಲಿಟಿ ಶೋ ಮುಂಬರುವ ಸೀಸನ್‌ಗೆ ಮತ್ತಷ್ಟು ಉತ್ತಮ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದೆ.

ಶಾರ್ಕ್ ಟ್ಯಾಂಕ್ ಇಂಡಿಯಾ ವೇದಿಕೆಗೆ ಮೂಲಕ ಅನೇಕ ಉದಯೋನ್ಮುಖ ಉದ್ಯಮಿಗಳಿಗೆಗೆ ತಮ್ಮ ವ್ಯವಹಾರಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಶಾರ್ಕ್‌ಗಳು ಮಾಡಿದ ಹೂಡಿಕೆಗಳ ಮೂಲಕ ಸಹಕಾರಿಯಾಗುತ್ತದೆ.

 ಹೊಸ ಶಾರ್ಕ್‌ಗಳಾದ ರಿತೇಶ್, ದೀಪಿಂದರ್ ನಿವ್ವಳ ಮೌಲ್ಯವೆಷ್ಟು ಗೊತ್ತಾ?

ಈ ಹೊಸ ಸೀಸನ್‌ನೊಂದಿಗೆ, ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಮತ್ತು ಜೊಮ್ಯಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಇಬ್ಬರು ಹೊಸ ಶಾರ್ಕ್‌ಗಳಾಗಿ ಜಡ್ಜಸ್ ಪ್ಯಾನೆಲ್ ಗೆ ಸೇರ್ಪಡೆಗೊಂಡಿದ್ದಾರೆ. ಹೊಸ ಶಾರ್ಕ್‌ ಗಳ ನಿವ್ವಳ ಮೌಲ್ಯವನ್ನು ಪರಿಶೀಲಿಸೋಣ.

ರಿತೇಶ್ ಅಗರ್ವಾಲ್ ಯಾರು, ನಿವ್ವಳ ಮೌಲ್ಯವೆಷ್ಟು?

ರಿತೇಶ್ ಅಗರ್ವಾಲ್, 1993ರಲ್ಲಿ ಕಟಕ್‌ನ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ್ದು, ಅವರ ಕುಟುಂಬವು ದಕ್ಷಿಣ ಒಡಿಶಾದ ರಾಯಗಡ ಎಂಬ ನಗರದಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಸೇಂಟ್ ಜಾನ್ಸ್ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಮುಗಿಸಿದರು.

ಅವರು 13 ನೇ ವಯಸ್ಸಿನಲ್ಲಿ ಶಾಲೆಯ ಅವಧಿ ನಂತರ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುತ್ತಿದ್ದರು. ಅವರಲ್ಲಿ ಉದ್ಯಮಶೀಲತಾ ಮನೋಭಾವವು ಶಾಲಾ ದಿನಗಳಿಂದಲೂ ಇತ್ತು ಎಂದರೆ ತಪ್ಪಾಗಲಾರದು. ಇದಾದ ಬಳಿಕ 2011ರಲ್ಲಿ ದೆಹಲಿಗೆ ತೆರಳಿ ವಿದ್ಯಾಭ್ಯಾಸ ಮುಂದುವರಿಸಿದರು.

ಆದರೆ ಎರಡು ವರ್ಷಗಳ ಬಳಿಕ ಕಾಲೇಜು ಶಿಕ್ಷಣವನ್ನು ಉದ್ಯಮ ಸ್ಥಾಪಿಸಲು ಅರ್ಧಕ್ಕೆ ನಿಲ್ಲಿಸಿದ್ದರು. 2013 ರಲ್ಲಿ ಬಜೆಟ್ ಸೌಕರ್ಯಗಳನ್ನು ಒದಗಿಸುವ ಕಲ್ಪನೆಯೊಂದಿಗೆ OYO ಅನ್ನು ಸ್ಥಾಪಿಸಿದರು. ಈ ಕಂಪನಿಯು ಪ್ರಪಂಚದಾದ್ಯಂತ ಹೋಟೆಲ್‌ಗಳು ಮತ್ತು ಹೋಮ್ ಸ್ಟೇಗಳನ್ನು ಗುತ್ತಿಗೆ ಮತ್ತು ಫ್ರಾಂಚೈಸ್ ಮಾಡುತ್ತದೆ. ಪ್ರಸ್ತುತ 80 ದೇಶಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿಕೊಂಡಿದೆ.

2016 ರಲ್ಲಿ, ರಿತೇಶ್ ಅಗರ್ವಾಲ್ ಏಷ್ಯಾದಲ್ಲಿ ಫೋರ್ಬ್ಸ್ ನ "30 ಅಂಡರ್ 30 ಲಿಸ್ಟ್" ನಲ್ಲಿ ಕಾಣಿಸಿಕೊಂಡರು. ಕಂಪನಿಯು ವ್ಯವಹಾರ ಯುನೈಟೆಡ್ ಸ್ಟೇಟ್ಸ್, ಯುರೋಪ್, ಜಪಾನ್, ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳಿಗೂ ವಿಸ್ತರಿಸಿದೆ. ಡಿಎನ್‌ಎ ವರದಿ ಪ್ರಕಾರ, ಅವರ ನಿವ್ವಳ ಮೌಲ್ಯ 2 ಬಿಲಿಯನ್ ಡಾಲರ್ (ಸುಮಾರು 166.55 ಕೋಟಿ ರೂಪಾಯಿ) ಆಗಿದೆ.

ದೀಪಿಂದರ್ ಗೋಯಲ್ ಯಾರು, ನಿವ್ವಳ ಮೌಲ್ಯವೆಷ್ಟು?

ಫುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಇಂದು ಓರ್ವ ಯಶಸ್ವಿ ಉದ್ಯಮಿಯಾಗಿದ್ದಾರೆ. ದೀಪಿಂದರ್ ಅವರು 2008 ರಲ್ಲಿ ಜೊಮ್ಯಾಟೊ ಅನ್ನು ಪ್ರಾರಂಭಿಸಿದ್ದು ಪ್ರಸ್ತುತ ಶೇಕಡ 5.55 ಪಾಲನ್ನು ಹೊಂದಿದ್ದಾರೆ. ಪಂಜಾಬ್ ನ ಮುಕ್ತಸರ್ ಜಿಲ್ಲೆಯಲ್ಲಿ ಜನಿಸಿದ ದೀಪಿಂದರ್ ಅವರ ಪೋಷಕರು ಶಿಕ್ಷಕರಾಗಿದ್ದರು.

ಶಾಲಾ ಶಿಕ್ಷಣದ ಬಳಿಕ ಐಐಟಿ ದೆಹಲಿಯಲ್ಲಿ ಮ್ಯಾಥ್ಸ್ ಮತ್ತು ಕಂಪ್ಯೂಟಿಂಗ್‌ನಲ್ಲಿ ಪದವಿ ಪಡೆದರು. ಜೊಮ್ಯಾಟೊ ಜುಲೈ 2021ರಲ್ಲಿ ತನ್ನ ಐಪಿಒ ಅನ್ನು ಪ್ರಾರಂಭಿಸಿತು. ಈ ವೇಳೆ ದೀಪಿಂದರ್ ಅವರ ನಿವ್ವಳ ಮೌಲ್ಯವು ಆ ಸಮಯದಲ್ಲಿ 650 ಮಿಲಿಯನ್‌ ಡಾಲರ್‌ಗೆ ಏರಿಕೆ ಕಂಡಿತು.

2022 ರ ಸೆಪ್ಟೆಂಬರ್ 30ರ ವೇಳೆ ಅವರ ನಿವ್ವಳ ಮೌಲ್ಯ 2,030 ಕೋಟಿ ರೂ. ಆಗಿದ್ದು, 2020 ರಲ್ಲಿ ಅವರು ವಾರ್ಷಿಕವಾಗಿ 3 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸುತ್ತಿದ್ದರು, ಆದರೆ ಆರ್ಥಿಕ ವರ್ಷ 21 ರಲ್ಲಿ ಅವರ ನಿವ್ವಳ ಮೌಲ್ಯ 1.96 ಕೋಟಿ ರೂಪಾಯಿಗೆ ಇಳಿಯಿತು.

ಸದ್ಯಕ್ಕೆ ಕಂಪನಿಯಿಂದ ಇವರು ಯಾವುದೇ ವೇತನ ಸ್ವೀಕರಿಸುತ್ತಿಲ್ಲ. ಆದರೆ, ಅವರು 358 ಕೋಟಿ ರೂಪಾಯಿಗಳನ್ನು ಇಎಸ್‌ಒಪಿ (employee stock ownership plan) ಹೊಂದಿದ್ದಾರೆ. ಜೊಮ್ಯಾಟೊ ಫೌಂಡೇಶನ್‌ಗೆ 700 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ದಾನ ಮಾಡಿದ್ದಾರೆ. ದೀಪಿಂದರ್ ಗೋಯಲ್ ಸರಣಿ ಹೂಡಿಕೆದಾರರಾಗಿದ್ದು, ಸ್ಕ್ವಾಡ್‌ಸ್ಟ್ಯಾಕ್, ಬಿರಾ91, ಹೈಪರ್‌ಟ್ರಾಕ್ ಮತ್ತು ಟೆರಾಡೋ ಮುಂತಾದ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.

ರಿತೇಶ್ ಅಗರ್ವಾಲ್ ಮತ್ತು ದೀಪಿಂದರ್ ಗೋಯಲ್ ಶಾರ್ಕ್ ಟ್ಯಾಂಕ್ ಇಂಡಿಯಾ 3 ರ ಶಾರ್ಕ್ಸ್ ಪ್ಯಾನೆಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿದ್ದುಅವರೊಂದಿಗೆ ಅಮನ್ ಗುಪ್ತಾ (ಬೋಟ್‌ನ ಸಹ ಸ್ಥಾಪಕರು ಮತ್ತು ಸಿಎಮ್‌ಒ), ನಮಿತಾ ಥಾಪರ್ (Emcure Pharmaceuticals ನ ಕಾರ್ಯನಿರ್ವಾಹಕ ನಿರ್ದೇಶಕಿ ), ಅಮಿತ್ ಜೈನ್ (ಸಿಇಒ ಮತ್ತು ಸಹ-ಸಂಸ್ಥಾಪಕರು - CarDekho Group, InsuranceDekho.com), ಅನುಪಮ್ ಮಿತ್ತಲ್ (ಶಾದಿ.ಕಾಮ್ - ಪೀಪಲ್ ಗ್ರೂಪ್‌ನ ಸ್ಥಾಪಕ ಮತ್ತು ಸಿಇಒ), ವಿನೀತಾ ಸಿಂಗ್ (ಶುಗರ್ ಕಾಸ್ಮೆಟಿಕ್ಸ್‌ನ ಸಹ-ಸ್ಥಾಪಕರು ಮತ್ತು ಸಿಇಒ) ಮತ್ತು ಪೆಯೂಶ್ ಬನ್ಸಾಲ್ (Lenskart.com ನ ಸ್ಥಾಪಕರು ಮತ್ತು CEO) ಶಾರ್ಕ್‌ಗಳಾಗಿರುತ್ತಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+