ಸೀಮಿತ ಅವಧಿಯಲ್ಲಿಯೇ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡ ಶಾರ್ಕ್ ಟ್ಯಾಂಕ್ ಇಂಡಿಯಾದ ಸೀಸನ್ ಎರಡು ಈಗಾಗಲೇ ಆರಂಭವಾಗಿದೆ. ಜನವರಿ 2ರಂದು ಈ ಕಾರ್ಯಕ್ರಮ ಆರಂಭವಾಗಿದೆ. ಈ ಹಿಂದಿನ ಸೀಸನ್‌ಲ್ಲಿ ಒಟ್ಟು 35 ಎಪಿಸೋಡ್‌ಗಳು ಇತ್ತು. ಇದೊಂದು ವ್ಯಾಪಾರ, ಉದ್ಯಮ ಸಂಬಂಧಿತ ಶೋ ಆದ ಕಾರಣ ಕೊಂಚ ಹೆಚ್ಚೇ ಕುತೂಹಲವನ್ನು ಜನರಲ್ಲಿ ಮೊದಲ ಸೀಸನ್‌ನಲ್ಲೇ ಮೂಡಿಸಿದೆ.
ಈ ರಿಯಾಲಿಟಿ ಶೋ ಮೂಲಕ ಯಾರು ಉತ್ತಮ ಉದ್ಯಮ ಯೋಜನೆಯನ್ನು ಹೊಂದಿದ್ದರೆ, ಯಾರು ವ್ಯಾಪಾರವನ್ನು ಮುನ್ನಡೆಸಲು ಬಯಸುತ್ತಾರೆ, ಅವರಿಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಯುಎಸ್‌ನಲ್ಲಿ ಶೋಗಳ ಆಧಾರದಲ್ಲಿ ಭಾರತದಲ್ಲಿ ಈ ಶಾರ್ಕ್ ಟ್ಯಾಂಕ್ ಇಂಡಿಯಾ ಎಂಬ ರಿಯಾಲಿಟಿ ಶೋ ಅನ್ನು ಆರಂಭ ಮಾಡಲಾಗಿದೆ. ಸೀಸನ್ 2ನಲ್ಲಿ 50 ಎಪಿಸೋಡ್‌ಗಳು ಇರಲಿದೆ. ಈ ಕಾರ್ಯಕ್ರಮಕ್ಕೆ ಹಲವಾರು ಸಂಸ್ಥೆಗಳ ಫಂಡಿಂಗ್ ಲಭ್ಯವಾಗುತ್ತದೆ.
ಪ್ರಸ್ತುತ ಈ ಶೋನಲ್ಲಿ ಒಟ್ಟು 5 ಮಂದಿ ಜಡ್ಜ್‌ಗಳು ಇದ್ದಾರೆ. ಲೆನ್ಸ್‌ಕಾರ್ಟ್ ಸಿಇಒ ಪಿಯೂಷ್ ಬನ್ಸಾಲ್, ಶುಗರ್ ಕಾಸ್ಮೆಟಿಕ್ ಸಿಇಒ ವಿನೀತ್ ಸಿಂಗ್, ಎಂಕ್ಯೂರ್ ಫಾರ್ಮಾದ ಮುಖ್ಯಸ್ಥೆ ನಮಿತಾ ಥಾಪರ್ ಹಾಗೂ ಖರ್‌ದೇಕೋ ಸಹ ಸಂಸ್ಥಾಪಕ ಅಮಿತ್ ಜೈನ್ ಇದ್ದಾರೆ. ಈ ಲೇಖನದಲ್ಲಿ ನಾವು ನಮಿತಾ ಥಾಪರ್‌ನ ನಿವ್ವಳ ಆದಾಯ, ಐಷಾರಾಮಿ ಜೀವನದ ಬಗ್ಗೆ ವಿವರಿಸಿದ್ದೇವೆ. ಮುಂದೆ ಓದಿ....
ನಮಿತಾ ಥಾಪರ್ ನಿವ್ವಳ ಆದಾಯವೆಷ್ಟು?
ಎಂಕ್ಯೂರ್ ಫಾರ್ಮಾದ ಮುಖ್ಯಸ್ಥೆ ನಮಿತಾ ಥಾಪರ್ ನಿವ್ವಳ ಆದಾಯ 600 ಕೋಟಿ ರೂಪಾಯಿ ಅಥವಾ 81 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ನಮಿತಾ ಥಾಪರ್ ನಿವ್ವಳ ಆದಾಯವು ಎಂಕ್ಯೂರ್ ಫಾರ್ಮಾದ ಮುಖ್ಯಸ್ಥೆ ಆದ ಬಳಿಕ ಭಾರೀ ಏರಿಕೆಯಾಗಿದೆ. ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ 1981ರಲ್ಲಿ ಭಾರತದಲ್ಲೊ ಆರಂಭವಾಗಿದ್ದು ಇದು ಪುಣೆ ಮೂಲದ ಫಾರ್ಮಾ ಸಂಸ್ಥೆಯಾಗಿದೆ. ಪ್ರಸ್ತುತ 70 ದೇಶಗಳಲ್ಲಿ ತನ್ನ ಕೇಂದ್ರವನ್ನು ಹೊಂದಿದ್ದು, 11 ಸಾವಿರ ಉದ್ಯೋಗಿಗಳು ಈ ಸಂಸ್ಥೆಯಲ್ಲಿದ್ದಾರೆ. 2021ರಲ್ಲಿ ಸಂಸ್ಥೆಗೆ 6091 ಕೋಟಿ ರೂಪಾಯಿ (823 ಮಿಲಿಯನ್ ಡಾಲರ್) ಆಧಾಯದಲ್ಲಿ ಸುಮಾರು 418 ಕೋಟಿ ಲಾಭ ಲಭ್ಯವಾಗಿದೆ. ನಮಿತಾ ಥಾಪರ್ ಇಕ್ರೆಡಿಬಲ್ ವೆಂಚರ್ಸ್ ಲಿಮಿಟೆಡ್ ಅನ್ನು ಕೂಡಾ ಸ್ಥಾಪಿಸಿದ್ದಾರೆ. ಇದು 11ರಿಂದ 18 ವರ್ಷದ ಮಕ್ಕಳಿಗೆ ಉದ್ಯಮದ ಬಗ್ಗೆ ಶಿಕ್ಷಣ ನೀಡುವ ಸಂಸ್ಥೆಯಾಗಿದೆ. ಸರ್ಕಾರದ ಯೋಜನೆಯಲ್ಲೂ ಇದು ಸಹಭಾಗಿತ್ವವನ್ನು ಹೊಂದಿದೆ.
ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ನಮಿತಾ ಸಂಭಾವನೆ
ಎಂಕ್ಯೂರ್ ಫಾರ್ಮಾ ಮತ್ತು ಇಕ್ರೆಡಿಬಲ್ ವೆಂಚರ್ಸ್ ಲಿಮಿಟೆಡ್ ಮಾತ್ರವಲ್ಲದೆ ನಮಿತಾ ಥಾಪರ್ ಶಾರ್ಕ್ ಟ್ಯಾಂಕ್ ಇಂಡಿಯಾದ ಜಡ್ಜ್ ಆಗುವ ಮೂಲಕವು ಸಂಪಾದನೆಯನ್ನು ಮಾಡುತ್ತಾರೆ. ಸೀಸನ್ ಒಂದರಲ್ಲಿ ನಮಿತಾ ಥಾಪರ್ ಪ್ರತಿ ಎಪಿಸೋಡ್‌ಗೆ 85 ಲಕ್ಷ ರೂಪಾಯಿ ಸಂಭಾವಣೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಹಾಗೆಯೇ ಶೋನಲ್ಲಿ 25 ಕಂಪನಿಗಳ ಮೇಲೆ 10 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಮೊದಲ ಎಪಿಸೋಡ್‌ನಲ್ಲಿಯೇ ಥಾಪರ್ ಹಾಗೂ ವಿನೀತಾ ಸಿಂಗ್ ಸೇರಿ ಉಪ್ಪಿನಕಾಯಿ ವ್ಯಾಪಾರದ ಮೇಲೆ 85 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು.
ನಮಿತಾ ಥಾಪರ್ ಮನೆ ಹೇಗಿದೆ?
ಎಂಕ್ಯೂರ್ ಫಾರ್ಮಾದ ಮುಖ್ಯಸ್ಥೆ ನಮಿತಾ ಥಾಪರ್ ನಿವ್ವಳ ಆದಾಯ 600 ಕೋಟಿ ರೂಪಾಯಿ ಅಥವಾ 81 ಮಿಲಿಯನ್ ಡಾಲರ್ ಆಗಿರುವಾಗ ಐಷಾರಾಮಿ ಮನೆಯಲ್ಲಿ ಜೀವಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂಕ್ಯೂರ್‌ನಲ್ಲಿ ಸುಮಾರು 15 ವರ್ಷಗಳಿಂದ ಹಿರಿಯ ಹುದ್ದೆಯಲ್ಲಿರುವ ವಿಕಾಸ್ ಥಾಪರ್‌ರನ್ನು ನಮಿತಾ ಥಾಪರ್ ವಿವಾಹವಾಗಿದ್ದಾರೆ.
ಥಾಪರ್ ಬಳಿ ಇರುವ ಕಾರುಗಳು
ಶಾರ್ಕ್ ಟ್ಯಾಂಕ್ ಇಂಡಿಯಾದ ಸೀಸನ್ ಎರಡರ ಜಡ್ಜ್ ಆದ ನಮಿತಾ ಥಾಪರ್‌ಗೆ ಐಷಾರಾಮಿ ಕಾರುಗಳೆಂದಾರೆ ಬಹಳ ಇಷ್ಟ. ಸುಮಾರು 280,000 ಡಾಲರ್‌ನ BMW X7 ಕಾರನ್ನು ನಮಿತಾ ಥಾಪರ್ ಬಳಸುತ್ತಿದ್ದಾರೆ. ಇನ್ನು ನಮಿತಾ ಥಾಪರ್ ಬಳಿ ಸುಮಾರು 550,000 ಡಾಲರ್‌ನ ಲಂಬೋರ್ಘಿನಿ ಕಾರು ಇದೆ. ಅಮನ್ ಗುಪ್ತಾ ಬಳಿಕ BMW X1 ಇದ್ದರೆ, ವಿನೀತ್ ಸಿಂಗ್ ಬಳಿ ಮರ್ಸೆಡಿಯಸ್ ಬೆನ್ಜ್ ಜಿಎಲ್-ಕ್ಲಾಸ್ ಇದೆ.


Click it and Unblock the Notifications