ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮಗಳು ಸನಾ ಗಂಗೂಲಿ ಅವರು ತಮ್ಮ ಡ್ಯಾನ್ಸ್ ಫರ್ಪಾಮೆನ್ಸ್ ಸೇರಿ ಹಲವು ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ. ಯಾಕೆಂದರೆ ಶಾಸ್ತ್ರೀಯ ನೃತ್ಯಗಾರ್ತಿಯಾಗಿರುವ ಆಕೆಯ ತಾಯಿ ಡೋನಾ ಗಂಗೂಲಿಯಂತೆ ಸನಾ ಕೂಡ ಒಡಿಸ್ಸಿ ನೃತ್ಯಗಾರ್ತಿಯಾಗಿದ್ದಾರೆ. ಇಂಟರ್‌ನೆಟ್‌ನಲ್ಲಿ ಸನಾ ಗಂಗೂಲಿಯ ಬಹಳಷ್ಟು ಬಾಲ್ಯದ ಪೋಟೋ ಕಾಣಸಿಗುತ್ತದೆ. ಸನಾ ತನ್ನ ಬಾಲ್ಯಾವಸ್ಥೆ ಕಳೆದು ಯೌವನವಸ್ಥೆಗೆ ಕಾಲಿಸಿರಿಸಿದ್ದು ಅವರು ಈ ವರ್ಷ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪದವಿ ಮುಗಿಯುವ ಮೊದಲೇ ಸನಾ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.
ಸನಾ ಕೋಲ್ಕತ್ತಾದ ಲೊರೆಟೊ ಹೌಸ್ ಸ್ಕೂಲ್ ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದು, 'ಯುನಿವರ್ಸಿಟಿ ಕಾಲೇಜ್ ಲಂಡನ್' (UCL)ಯಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆಯಲು ಲಂಡನ್‌ಗೆ ತೆರಳಿದರು. ಸನಾ ತಮ್ಮ ಅಧ್ಯಯನ ಜೊತೆಗೆ ಎನಾಕ್ಟಸ್ (Enactus) ಯುಸಿಎಲ್ ನಲ್ಲಿ ಪೂರ್ಣ ಅವಧಿಯಲ್ಲಿ ಕೆಲಸ ಮಾಡಿದರು. Enactus UCL ಇದು ಯುವ ಉದ್ಯಮಿಗಳು ಮತ್ತು ಬೃಹತ್ ಕಾರ್ಪೋರೇಟ್ ಸಂಸ್ಥೆಗಳು ತಮ್ಮದೇ ಆಗಿರುವ ಸಾಮಾಜಿಕ ವಲಯದ ಉದ್ಯಮಗಳನ್ನು ಹುಟ್ಟುಹಾಕಲು ಸಹಾಯ ಮಾಡುತ್ತದೆ. ಹೀಗಾಗಿ ಸನಾ ಈ ಅವಧಿಯಲ್ಲಿ HSBC, KPMG, ಗೋಲ್ಡನ್ ಸ್ಯಾಚ್ಸ್, ಬಾರ್ಕ್ಲೇಸ್ ಸೇರಿದಂತೆ ಹಲವು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡರು.

ಇನ್ನು ಸನಾ ಅವರ ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಪ್ರಸ್ತುತ 2022ರ ಜೂನ್ ನಿಂದ ಪಿಡಬ್ಲ್ಯೂಸಿ (PwC) ಇಂಟರ್ನಿ ಆಗಿ ಕೆಲಸ ಮಾಡುತ್ತಿದ್ದಾರೆ. PwC ಕಂಪನಿಯೂ ವಿಶ್ವದಲ್ಲೇ ಅತಿದೊಡ್ಡ ಫೈನಾನ್ಸಿಯಲ್ ಎಡ್ವಯ್ಸ್ ಸಂಸ್ಥೆಯಲ್ಲಿ ಒಂದಾಗಿದೆ. ಈ ಕಂಪನಿಯ ಬ್ಯುಸಿನೆಸ್ ವಿಶ್ವದಾದ್ಯಂತ ಸುಮಾರು 152 ದೇಶಗಳಲ್ಲಿ ಹರಡಿದೆ. 3.28 ಲಕ್ಷಕ್ಕೂ ಹೆಚ್ಚು ಜನ ಈ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ಯಾಲರಿ ಪ್ಯಾಕೇಜ್ ಹೇಗಿದೆ?
ಕುತೂಹಲಕಾರಿ ಸಂಗತಿ ಎಂದರೆ ಈ ಸಂಸ್ಥೆಯೂ ತಮ್ಮಲ್ಲಿ ಇಂಟರ್ನ್ ಶಿಪ್ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ವೇತನ ನೀಡುತ್ತದೆ. UK.indeed.com ವೆಬ್ ಸೈಟ್ ಪ್ರಕಾರ PwC ಯಲ್ಲಿ ಇಂಟರ್ನ್ ಶಿಪ್ ಮಾಡೋ ಸಮಯದಲ್ಲಿ ವಾರ್ಷಿಕವಾಗಿ 30 ಲಕ್ಷ ರೂಪಾಯಿಗಳ ಸರಾಸರಿ ವೇತನ ನೀಡಲಾಗುತ್ತದೆ. ಹೀಗಾಗಿ ಸನಾ ಕೂಡಾ 30 ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚು ವೇತನ ಪಡೆಯುತ್ತಿದ್ದಾರೆ ಎಂದು ಊಹಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಯ ಉತ್ತುಂಗದಲ್ಲಿದ್ದಾಗ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ದೆಹಲಿ ಪೊಲೀಸರ ವಿರುದ್ಧದ ಪೋಸ್ಟ್ ಒಂದನ್ನು ಸನಾ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದ ಕಾರಣ ಹೆಚ್ಚು ಸುದ್ದಿಗೆ ಗ್ರಾಸವಾಗಿ ಎಲ್ಲರ ಗಮನಸೆಳೆದಿದ್ದರು. ಈ ವೇಳೆ ಸೌರವ್ ಗಂಗೂಲಿ ಮಗಳನ್ನು ರಾಜಕೀಯವನ್ನು ಅರ್ಥಮಾಡಿಕೊಳ್ಳಲು ತುಂಬಾ ಚಿಕ್ಕವರು ಪುತ್ರಿಯನ್ನು ಸಮರ್ಥಿಸಿಕೊಂಡಿದ್ದರು ನಂತರ, ಸನಾ ವಿವಾದಾತ್ಮಕ ಪೋಸ್ಟ್ ಅನ್ನು ಅಳಿಸಿಹಾಕಿದ್ದರು.
ಸೌರವ್ ಗಂಗೂಲಿ ವೈವಾಹಿಕ ಜೀವನ
ಸೌರವ್ ಗಂಗೂಲಿ 1997ರಲ್ಲಿ ಭಾರತೀಯ ಕ್ಲಾಸಿಕಲ್ ಡ್ಯಾನ್ಸರ್ ಡೋನಾ ಗಂಗೂಲಿಯನ್ನು ವಿವಾಹವಾಗಿದ್ದಾರೆ. ದಂಪತಿಗೆ ಏಕ ಪುತ್ರಿಯಿದ್ದು, ಆಕೆಯೇ ಸನಾ ಗಂಗೂಲಿ. ಸೌರವ್ ಗಂಗೂಲಿ 1972ರ ಜುಲೈ 8ರಂದು ಕೋಲ್ಕತ್ತಾದಲ್ಲಿ ಜನಿಸಿದ್ದಾರೆ. ಇನ್ನು ಸನಾ ಗಂಗೂಲಿ ನವೆಂಬರ್ 3, 2001ರಲ್ಲಿ ಜನಿಸಿದ್ದಾರೆ.


Click it and Unblock the Notifications