Highest-paid Indian CEOs: ಪಿಚೈನಿಂದ ಶಂತನುವರೆಗೆ, 5 ಅಧಿಕ ವೇತನ ಪಡೆಯುವ ಭಾರತೀಯ ಸಿಇಒಗಳಿವರು!

ವಿಶ್ವದ ಅತೀ ದೊಡ್ಡ ಸಂಸ್ಥೆಗಳ ಸಿಇಒ ಯಾರಾಗಿದ್ದಾರೆ ಎಂದು ನಾವು ನೋಡಿದಾಗ ಸಾಮಾನ್ಯವಾಗಿಯೇ ನಮಗೆ ತಿಳಿಯುವುದು ಭಾರತೀಯರು ಮುಂದಿದ್ದಾರೆ ಎಂಬುವುದು. ಹೌದು, ಭಾರತೀಯರು ವಿಶ್ವದ ಅತೀ ದೊಡ್ಡ ಸಂಸ್ಥೆಗಳಲ್ಲಿ ಸಿಇಒಗಳಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಹಾಗೆಯೇ ಅತೀ ಅಧಿಕ ವೇತನವನ್ನು ಕೂಡಾ ಈ ಭಾರತೀಯ ಸಿಇಒಗಳು ಪಡೆಯುತ್ತಾರೆ. 160 ಬಿಲಿಯನೇರ್‌ಗಳು ಜಾಗತಿಕವಾಗಿದ್ದು, ಈ ಪೈಕಿ ಮೂರನೇ ಸ್ಥಾನದಲ್ಲಿ ಭಾರತವಿದೆ. ಅತೀ ಅಧಿಕ ವೇತನ, ಸಂಭಾವನೆಯನ್ನು ಪಡೆಯುವ 5 ಭಾರತೀಯ ಸಿಇಒಗಳ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ ಮುಂದೆ ಓದಿ....

 ಪಿಚೈನಿಂದ ಶಂತನುವರೆಗೆ, 5 ಅಧಿಕ ವೇತನ ಪಡೆಯುವ ಭಾರತೀಯ ಸಿಇಒಗಳಿವರು!

ಸುಂದರ್ ಪಿಚೈ ಆದಾಯ

ಮದ್ರಾಸ್ ಮೂಲದ ಸುಂದರ್ ಪಿಚೈ ಆಲ್ಫಾಬೆಟ್ ಮತ್ತು ಗೂಗಲ್ ಎರಡರ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ವಾರ್ಷಿಕ ವೇತನವು 16,64,37,680 ರೂಪಾಯಿ ಆಗಿದೆ. ಭಾರತದ ಐಐಟಿ ಖರಗ್‌ಪುರದಲ್ಲಿ ತಮ್ಮ ಎಂಜಿನಿಯರಿಂಗ್ ಅನ್ನು ಪಿಚೈ ಮಾಡಿದ್ದಾರೆ. ನಂತರ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ವಾರ್ಟನ್ ಬ್ಯುಸಿನೆಸ್ ಸ್ಕೂಲ್‌ನಿಂದ ಎಂಬಿಎ ಪಡೆದರು. 2019 ರಲ್ಲಿ ಆಲ್ಫಾಬೆಟ್‌ನ ಸಿಇಒ ಆಗಿ ನೇಮಕಗೊಂಡಾಗ ಪಿಚೈ ಹೆಸರುವಾಸಿಯಾಗಿದ್ದಾರೆ. ಹೆಚ್ಚುವರಿಯಾಗಿ, 2022 ರಲ್ಲಿ, ಭಾರತ ಸರ್ಕಾರವು ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಸತ್ಯ ನಾಡೆಲ್ಲಾ ವೇತನ

ಹೈದರಾಬಾದ್‌ನಲ್ಲಿ ಜನಿಸಿದ ಸತ್ಯ ನಾಡೆಲ್ಲಾ, ಪ್ರಮುಖ ಜಾಗತಿಕ ಟೆಕ್ ಕಂಪನಿಯಾದ ಮೈಕ್ರೋಸಾಫ್ಟ್‌ ಅನ್ನು ಮುನ್ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ ಅವರ ವೇತನ 4,15,64,20,500 ರೂಪಾಯಿ ಆಗಿದೆ. ಕರ್ನಾಟಕದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಮಿಲ್ವಾಕೀಯ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್‌ ಅನ್ನು ಸತ್ಯ ನಾಡೆಲ್ಲಾ ಪಡೆದಿದ್ದಾರೆ. 1992ರಲ್ಲಿ ಮೈಕ್ರೊಸಾಫ್ಟ್‌ಗೆ ಸೇರಿದ ಸತ್ಯ ನಾಡೆಲ್ಲಾ ಸಿಇಒ ಹುದ್ದೆಗೆ ಏರಿದ್ದಾರೆ.

ಜೈ ಚೌಧರಿ ಆದಾಯವೆಷ್ಟಿದೆ?

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಪನೋಹ್ ಎಂಬ ಸಣ್ಣ ಹಳ್ಳಿಯವರಾಗಿದ್ದಾರೆ ಜೈ ಚೌಧರಿ. Zscalerನ ಪ್ರಸ್ತುತ ಸಿಇಒ ಆಗಿದ್ದು, ವಾರ್ಷಿಕ ವೇತನ 3,46,56,83,520 ರೂಪಾಯಿ ಆಗಿದೆ. ರೈತನ ಮಗನಾದ ಚೌಧರಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಐಐಟಿ ಕ್ಯಾಂಪಸ್‌ನಲ್ಲಿ ಶಿಕ್ಷಣ ಪಡೆದರು.

ಯುಎಸ್‌ನಲ್ಲಿ ಸಿನ್ಸಿನಾಟಿ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಮತ್ತು ಎಂಬಿಎ ಪದವಿಗಳನ್ನು ಪಡೆದಿದ್ದಾರೆ. ಚೌಧರಿಯವರ ಉದ್ಯಮಶೀಲ ಮನೋಭಾವದಿಂದಾಗಿ ಅವರು ಹಲವಾರು ಕಂಪನಿಗಳನ್ನು ಸ್ಥಾಪಿಸಿದ್ದಾರೆ. ಅಂತಿಮವಾಗಿ ಅವರು ಕ್ಲೌಡ್ ಸೆಕ್ಯುರಿಟಿ ಕಂಪನಿ Zscaler ಅನ್ನು ಸ್ಥಾಪಿಸಿದ್ದು, ಅದರ ಸಿಇಒ ಆಗಿದ್ದಾರೆ.

ಅನಿರುದ್ಧ ದೇವಗನ್ ವೇತನ ತಿಳಿಯಿರಿ

ಮೂಲತಃ ದೆಹಲಿಯವರಾದ ಅನಿರುದ್ಧ್ ದೇವಗನ್ ಪ್ರಸ್ತುತ ಕ್ಯಾಡೆನ್ಸ್ ಡಿಸೈನ್ ಸಿಸ್ಟಂನ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ವಾರ್ಷಿಕ ಆದಾಯ 2,68,27,39,780 ರೂಪಾಯಿ ಆಗಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸುವ ಮೊದಲು ಐಐಟಿ ದೆಹಲಿಯಲ್ಲಿ ತಮ್ಮ ಬಿಕಾಂ ಅನ್ನು ಮಾಡಿದ್ದಾರೆ.

ಐಬಿಎಂನಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ದೇವಗನ್ ನಂತರ ಕಾರ್ಪೊರೇಟ್ ಉಪಾಧ್ಯಕ್ಷ ಸ್ಥಾನವನ್ನು ಹೊಂದಿದ್ದ ಮ್ಯಾಗ್ಮಾ ಡಿಸೈನ್ ಆಟೋಮೇಷನ್‌ನಲ್ಲಿ ಕೆಲಸ ಮಾಡಿದರು. 2012 ರಲ್ಲಿ, ಕ್ಯಾಡೆನ್ಸ್ ಡಿಸೈನ್ ಸಿಸ್ಟಮ್‌ಗೆ ಸೇರಿದರು. ಅಂತಿಮವಾಗಿ 2021 ರಲ್ಲಿ ಸಿಇಒ ಪಾತ್ರವನ್ನು ವಹಿಸಿಕೊಂಡರು.

ಶಂತನು ನಾರಾಯಣ ಆದಾಯ

ಹೈದರಾಬಾದ್ ಮೂಲದ ಶಂತನು ನಾರಾಯಣ್ ಪ್ರಸ್ತುತ ಅಡೋಬ್‌ನಲ್ಲಿ ಸಿಇಒ ಸ್ಥಾನವನ್ನು ಹೊಂದಿದ್ದಾರೆ. ಇವರ ವಾರ್ಷಿಕವಾಗಿ 3,00,65,90,394 ರೂಪಾಯಿ ವೇತನ ಪಡೆಯುತ್ತಾರೆ. ಭಾರತದ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಎಂಜಿನಿಯರಿಂಗ್ ಕೋರ್ಸ್ ಮುಗಿಸಿದ ನಂತರ, ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉನ್ನತ ಅಧ್ಯಯನವನ್ನು ಮಾಡಿದರು. ಅದಾದ ಬಳಿಕ ವೃತ್ತಿಜೀವನದಲ್ಲಿ ಮಹತ್ವದ ತಿರುವು ಪಡೆದುಕೊಂಡಿದ್ದಾರೆ. 1986 ರಲ್ಲಿ ಸ್ಟಾರ್ಟ್‌ಅಪ್ ಪ್ರಾರಂಭಿಸಿದ ಶಂತನು ನಾರಾಯಣ 1998 ರಲ್ಲಿ ಅಡೋಬ್‌ಗೆ ಸೇರಿದ್ದಾರೆ. ಅದಕ್ಕೂ ಮುನ್ನ ಆಪಲ್‌ನಲ್ಲಿಯೂ ಶಂತನು ಕಾರ್ಯನಿರ್ವಹಣೆ ಮಾಡಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+