ಮಾರುಕಟ್ಟೆಗಳ ನಿಯಂತ್ರಕ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಟಾಟಾ ಟೆಕ್ನಾಲಜೀಸ್‌ನ ಐಪಿಒ ಅನ್ನು ಅನುಮೋದನೆ ಮಾಡಿದೆ. ಇದು ಸುಮಾರು ಎರಡು ದಶಕಗಳ ಬಳಿಕ ಟಾಟಾ ಸಮೂಹದ ಮೊದಲ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಆಗಿದೆ. ಟಾಟಾ ಗ್ರೂಪ್ ಕಂಪನಿಯು ಮಾರ್ಚ್‌ನಲ್ಲಿ ಸೆಬಿಗೆ ಐಪಿಒ ಅರ್ಜಿಯನ್ನು ಸಲ್ಲಿಕೆ ಮಾಡಿದೆ. ಟಾಟಾದ ಈ ಬಹುನಿರೀಕ್ಷಿತ ಐಪಿಒ ಸುಮಾರು 19 ವರ್ಷಗಳ ಬಳಿಕದ ಐಪಿಒ ಆಗಿದೆ.
ಜುಲೈ 2004 ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್) ಡೈವರ್ಸಿಫೈಡ್ ಕಾಂಗ್ಲೋಮರೇಟ್‌ನಿಂದ ಕೊನೆಯ ಐಪಿಒ ಆಗಿದೆ. ಅಂದಿನಿಂದ, ನಿಫ್ಟಿ ಸ್ಟಾಕ್ ದಲಾಲ್ ಸ್ಟ್ರೀಟ್‌ನಲ್ಲಿ ಅತಿದೊಡ್ಡ ಸ್ಟಾಕ್ ಟಿಸಿಎಸ್ ಆಗಿದೆ. ಈಗ ಸುಮಾರು 11.7 ಲಕ್ಷ ಕೋಟಿ ರೂಪಾಯಿಗಳಷ್ಟು ಮಾರುಕಟ್ಟೆ ಬಂಡವಾಳವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹೊಂದಿದೆ.

ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆ, ಟಾಟಾ ಟೆಕ್ನಾಲಜೀಸ್ ಇಂಜಿನಿಯರಿಂಗ್ ಸೇವೆಗಳ ಸಂಸ್ಥೆಯಾಗಿದೆ. ಉತ್ಪನ್ನ ಅಭಿವೃದ್ಧಿ ಮತ್ತು ಡಿಜಿಟಲ್ ಎಂಜಿನಿಯರಿಂಗ್ ಕಾರ್ಯಗಳನ್ನು ಟಿಸಿಎಸ್ ಮಾಡುತ್ತದೆ. ಮೂಲತಃ 1994 ರಲ್ಲಿ ಕೋರ್ ಸಾಫ್ಟ್‌ವೇರ್ ಸಿಸ್ಟಮ್ಸ್ ಎಂದು ಇದರ ಹೆಸರಾಗಿತ್ತು, ಆದರೆ ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಂಡಿತು. ನಂತರ ಫೆಬ್ರವರಿ 2001 ರಲ್ಲಿ ಟಾಟಾ ಟೆಕ್ನಾಲಜೀಸ್ ಎಂದು ಮರುನಾಮಕರಣ ಮಾಡಲಾಯಿತು.
ಕಂಪನಿಯು ತನ್ನ ಬಹುಪಾಲು ಆದಾಯವನ್ನು ಆಟೋಮೋಟಿವ್ ವರ್ಟಿಕಲ್‌ನಿಂದ ಪಡೆಯುತ್ತದೆ. ಆಂಕರ್ ಕ್ಲೈಂಟ್‌ಗಳು ಟಾಟಾ ಮೋಟಾರ್ಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್, ಒಟ್ಟಾಗಿ ಸೇವೆಗಳ ಆದಾಯದ ಶೇಕಡ 40ರಷ್ಟು ಕೊಡುಗೆ ನೀಡುತ್ತದೆ. ಇ, ಆರ್&ಡಿ ಸೇವೆಗಳ ಜೊತೆಗೆ, ಕಂಪನಿಯು ಉತ್ಪನ್ನಗಳನ್ನು ಮತ್ತು ಶಿಕ್ಷಣ ವ್ಯವಹಾರಗಳನ್ನು ನಿರ್ವಹಣೆ ಮಾಡುತ್ತದೆ. ಉತ್ಪಾದನೆ-ಸಂಬಂಧಿತ ಕೌಶಲ್ಯಗಳಿಗೆ ಫಿಜಿಟಲ್ ಶಿಕ್ಷಣ ಪರಿಹಾರವನ್ನು ನೀಡುತ್ತದೆ.
ಒಟ್ಟು ಎಷ್ಟು ಷೇರುಗಳ ಮಾರಾಟ
ಐಪಿಒ ಅಡಿಯಲ್ಲಿ ಟಾಟಾ ಮೋಟಾರ್ಸ್ ತನ್ನ ಅಂಗಸಂಸ್ಥೆಯ 81,133,706 ಷೇರುಗಳನ್ನು ಮಾರಾಟ ಮಾಡಲು ನಿರ್ಧಾರ ಮಾಡಿದೆ. ಕಂಪನಿಯ ಇತರ ಇಬ್ಬರು ಷೇರುದಾರರಾದ ಆಲ್ಫಾ ಟಿಸಿ ಹೋಲ್ಡಿಂಗ್ಸ್ ಮತ್ತು ಟಾಟಾ ಕ್ಯಾಪಿಟಲ್ ಗ್ರೋತ್ ಫಂಡ್ I ಸಹ ಆಫರ್‌ನಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಡಿಸೆಂಬರ್ 2022 ಕ್ಕೆ ಕೊನೆಗೊಂಡ ಒಂಬತ್ತು ತಿಂಗಳುಗಳಲ್ಲಿ, ಸಂಸ್ಥೆಯ ಆದಾಯವು 3,011.79 ಕೋಟಿ ರೂಪಾಯಿ ಆಗಿದೆ. ಆದರೆ ಡಿಸೆಂಬರ್ 2021 ಕ್ಕೆ ಕೊನೆಗೊಂಡ ಒಂಬತ್ತು ತಿಂಗಳುಗಳಲ್ಲಿ 2607.30 ಕೋಟಿ ರೂಪಾಯಿ ಆದಾಯವಾಗಿದೆ. ವರ್ಷದಿಂದ ವರ್ಷಕ್ಕೆ ಶೇಕಡ 15.5ರಷ್ಟು ಬೆಳವಣಿಗೆಯನ್ನು ಕಂಡಿದೆ.
ಹಣಕಾಸು ವರ್ಷ 2023ರ 9ನೇ ತಿಂಗಳಿನಲ್ಲಿ ನಿವ್ವಳ ಲಾಭವು 407.47 ಕೋಟಿ ರೂಪಾಯಿ ಆಗಿದೆ. ಹಣಕಾಸು ವರ್ಷ 2023ರ 9ನೇ ತಿಂಗಳ ನಿವ್ವಳ ಲಾಭವು 331.36 ಕೋಟಿ ರೂಪಾಯಿ ಆಗಿದೆ. ಸಂಸ್ಥೆಯ ಇಬಿಐಟಿಡಿಎ ಮಾರ್ಜಿನ್ ಹಣಕಾಸು ವರ್ಷ 2020ರಲ್ಲಿ ಶೇಕಡ 16.50ರಷ್ಟಿದ್ದು, ಹಣಕಾಸು ವರ್ಷ 2023ಕ್ಕೆ ಸುಮಾರು ಶೇಕಡ 19.20ಕ್ಕೆ ಏರಿಕೆಯಾಗಿದೆ. ಈ ಐಪಿಒನ ಗಾತ್ರವು ಇನ್ನೂ ಕೂಡಾ ಬಹಿರಂಗಪಡಿಸಲಾಗಿಲ್ಲ. ಆದರೆ ಕನಿಷ್ಠ 4,000 ಕೋಟಿ ರೂಪಾಯಿಗಳಷ್ಟು ಮೌಲ್ಯದ್ದಾಗಿರಬಹುದು ಎಂದು ಅಂದಾಜಿಸಿದ್ದಾರೆ.
ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಆಫರ್‌ನ ಸುಮಾರು ಶೇಕಡ 50ರಷ್ಟು ಪಾಲನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ (QIBs) ಕಾಯ್ದಿರಿಸಲಾಗಿದೆ. ಶೇಕಡ 35ರಷ್ಟು ಚಿಲ್ಲರೆ ಹೂಡಿಕೆದಾರರಿಗೆ ಮತ್ತು ಶೇಕಡ 15ರಷ್ಟು ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ ಕಾಯ್ದಿರಿಸಲಾಗಿದೆ. ಇನ್ನು ಟಾಟಾ ಟೆಕ್ ಎನ್‌ಎಸ್‌ಇ ಮತ್ತು ರಿಲಯನ್ಸ್ ರಿಟೇಲ್ ನಂತರ ಹೆಚ್ಚು ಲಾಭಗಳಿಸಿದ ಷೇರುಗಳಲ್ಲಿ ಒಂದಾಗಿದೆ.


Click it and Unblock the Notifications