ಕ್ರೆಡಿಟ್ ಕಾರ್ಡ್ ಇಲ್ಲದೆಯೇ ಕ್ರೆಡಿಟ್ ಸ್ಕೋರ್ ಹೀಗೆ ಹೆಚ್ಚಿಸಿ!

ನಾವು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ಕ್ರೆಡಿಟ್ ಕಾರ್ಡ್ ಒಂದು ಅತೀ ಉತ್ತಮ ಸಾಧನ. ಪ್ರಸ್ತುತ ಕ್ರೆಡಿಟ್ ಕಾರ್ಡ್ ಅತೀ ಮುಖ್ಯವಾಗಿದೆ. ಹಲವಾರು ಮಂದಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿ ಬಳಿಕ ಇಎಂಐ ಮೂಲಕ ಹಣ ಪಾವತಿ ಮಾಡುತ್ತಾರೆ. ನಮ್ಮ ಕೈಯಲ್ಲಿ ಹಣ ಇಲ್ಲದ ಸಂದರ್ಭದಲ್ಲಿ ತೀರಾ ಅಗತ್ಯವಾದ ವಸ್ತುಗಳನ್ನು ಖರೀದಿ ಮಾಡಲು ಕ್ರೆಡಿಟ್ ಕಾರ್ಡ್ ಸಹಾಯಕವಾಗಿದೆ.

ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಹಲವಾರು ಮಂದಿ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡುತ್ತಾರೆ. ಅಗತ್ಯ ವಸ್ತುಗಳನ್ನು ಖರೀದಿ ಮಾಡಿ ಇಎಂಐ ಮೂಲಕ ಮರುಪಾವತಿ ಮಾಡುತ್ತಾರೆ. ಈ ನಡುವೆ ಕ್ರೆಡಿಟ್ ಕಾರ್ಡ್ ಅನ್ನು ಕ್ರೆಡಿಟ್ ಸ್ಕೋರ್‌ ಹೆಚ್ಚಿಸುವ ಸಾಧನ ಎಂದು ಹಲವಾರು ಮಂದಿ ನಂಬಿದ್ದಾರೆ. ಆದರೆ ನಮ್ಮಲ್ಲಿ ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೆ?

ಪ್ರತಿಯೊಬ್ಬರೂ ಕ್ರೆಡಿಟ್ ಕಾರ್ಡ್ ಅನ್ನು ಸುಲಭವಾಗಿ ಪಡೆಯಲು ಸಾಧ್ಯವಿಲ್ಲ. ಕ್ರೆಡಿಟ್ ಕಾರ್ಡ್ ಕೂಡಾ ಅತೀ ಸುಲಭವಾಗಿ ಲಭ್ಯವಾಗದು. ನಮಗೆ ಕ್ರೆಡಿಟ್ ಕಾರ್ಡ್ ಲಭ್ಯವಾಗಬೇಕಾದರೆ, ಉತ್ತಮ ಕ್ರೆಡಿಟ್ ಸ್ಕೋರ್ ಅಗತ್ಯವಿದೆ. ಹಾಗಾದರೆ ಕ್ರೆಡಿಟ್ ಕಾರ್ಡ್ ಇಲ್ಲದೆಯೇ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಹೆಚ್ಚಳ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್

ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್

ನೀವು ಎಷ್ಟು ಹಣವನ್ನು ಸಾಲವಾಗಿ ಪಡೆಯಲು ಅರ್ಹರು ಎಂಬುವುದನ್ನು ಪ್ರತಿನಿಧಿಸುವ ಸಿಬಿಲ್ ಸ್ಕೋರ್ ಮೂರು ಅಂಕಿಗಳ, ಸಂಖ್ಯೆಯಲ್ಲಿರುವ ವರದಿಯಾಗಿದೆ. ಇದು ನಿಮ್ಮ ಕ್ರೆಡಿಟ್ ಇತಿಹಾಸ ಮತ್ತು ಪಾವತಿ ಇತಿಹಾಸವನ್ನು ಆಧರಿಸಿದೆ. ಈ ಹಿಂದೆ ನೀವು ಹಣದ ವಹಿವಾಟು ಯಾವ ರೀತಿ ನಡೆಸಿದ್ದೀರಿ ಎಂಬುವುದನ್ನು ನೋಡಿಕೊಂಡು ನಿಮ್ಮ ಭವಿಷ್ಯದ ಹಣಕಾಸು ವ್ಯವಹಾರ ಹೇಗೆ ಇರಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತದೆ. ಕ್ರೆಡಿಟ್ ವರದಿಯು ಒಬ್ಬ ವ್ಯಕ್ತಿಯ ಹಣಕಾಸು ಸಂಬಂಧಿತ ಎಲ್ಲ ಸಂಕ್ಷಿಪ್ತ ವರದಿಯಾಗಿದೆ. ಕ್ರೆಡಿಟ್ ಬ್ಯೂರೋಗಳು ತಮ್ಮ ಕ್ಲೈಂಟ್‌ನ ಎಲ್ಲಾ ಕ್ರಿಯೆಗಳ ಮೇಲೆ ನಿಗಾ ಇಡುತ್ತವೆ. ಕ್ರೆಡಿಟ್ ಸ್ಕೋರ್ 300 ಮತ್ತು 900 ರ ನಡುವಿನ ಸಂಖ್ಯೆಯಾಗಿದೆ. ಒಬ್ಬ ವ್ಯಕ್ತಿಗೆ ಸಾಲ ನೀಡುವುದು ಉತ್ತಮವೇ ಅಥವಾ ಅಪಾಯಕಾರಿಯೇ ಎಂಬುವುದನ್ನು ಇದು ನಿರ್ಧಾರ ಮಾಡುತ್ತದೆ.

 ಕ್ರೆಡಿಟ್ ಸ್ಕೋರ್ ಏಕೆ ಮುಖ್ಯ?

ಕ್ರೆಡಿಟ್ ಸ್ಕೋರ್ ಏಕೆ ಮುಖ್ಯ?

ಈ ಮೇಲೆ ಹೇಳಿದಂತೆ ನಿಮ್ಮ ಕ್ರೆಡಿಟ್ ಸ್ಕೋರ್ ನೀವು ಸಾಲ ಪಡೆಯಲು ಎಷ್ಟು ಅರ್ಹರು ಎಂಬುವುದನ್ನು ತೋರಿಸುತ್ತದೆ. ಇದನ್ನು ಭಾರತೀಯ ಕ್ರೆಡಿಟ್ ಬ್ಯೂರೋ (CIBIL) ನಿಯಂತ್ರಿಸುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾದರೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು ಸುಲಭವಾಗಬಹುದು. ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ವಾಡಿಕೆಯಂತೆ ಸಂಗ್ರಹಿಸಲಾದ ಕ್ರೆಡಿಟ್ ಡೇಟಾದ ಆಧಾರದ ಮೇಲೆ CIBIL ಕ್ರೆಡಿಟ್ ವರದಿಗಳನ್ನು ರಚಿಸುತ್ತದೆ. ನೀವು ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಿದರೆ ಮಾತ್ರವೇ ಕ್ರೆಡಿಟ್ ವರದಿ ಮುಖ್ಯವಾಗುತ್ತದೆ. ಈ ಕೆಳಗೆ ಕ್ರೆಡಿಟ್ ಸ್ಕೋರ್ ಅನ್ನು ಕ್ರೆಡಿಟ್ ಕಾರ್ಡ್ ಇಲ್ಲದೆಯೇ ಹೇಗೆ ಹೆಚ್ಚಿಸುವುದು ಎಂಬುವುದನ್ನು ವಿವರಿಸಲಾಗಿದೆ.

 ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ

ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ

ನಿಮ್ಮ ಬಿಲ್‌ಗಳನ್ನು ಸಮಯಕ್ಕೆ ಪಾವತಿಸುವುದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಉತ್ತಮವಾಗಿರಬೇಕಾದರೆ ನೀವು ಪಾವತಿ ಮಾಡುವುದನ್ನು ತಪ್ಪಿಸಬಾರದು ಮತ್ತು ತಡವಾಗಿ ಪಾವತಿ ಮಾಡಬಾರದು. ಸರಿಯಾದ ಸಮಯಕ್ಕೆ ಪಾವತಿ ಮಾಡಬೇಕು.

 ಬಾಡಿಗೆ ಪಾವತಿಗಳನ್ನು ವರದಿ ಮಾಡುವುದು

ಬಾಡಿಗೆ ಪಾವತಿಗಳನ್ನು ವರದಿ ಮಾಡುವುದು

ಇತರ ಪಾವತಿಗಳಂತೆಯೇ, ಬಾಡಿಗೆಯು ನಿಮ್ಮ ಕ್ರೆಡಿಟ್ ದಾಖಲೆಯ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಬಾಡಿಗೆ ಪಾವತಿಗಳ ಬಗ್ಗೆ ಮಾಹಿತಿಯನ್ನು ಕ್ರೆಡಿಟ್ ರೇಟಿಂಗ್ ಕಂಪನಿಗಳಿಗೆ ಬಹಿರಂಗಪಡಿಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೀವು ಹೆಚ್ಚಿಸಲು ಸಾಧ್ಯವಾಗಲಿದೆ. ಬಾಡಿಗೆ ಪಾವತಿಗಳನ್ನು ಕ್ರೆಡಿಟ್ ಬ್ಯೂರೋಗೆ ಸಲ್ಲಿಸದಿದ್ದರೆ ನಿಮ್ಮ ಕ್ರೆಡಿಟ್ ವರದಿಯಲ್ಲಿ ಬಾಡಿಗೆ ಬಗ್ಗೆ ಮಾಹಿತಿ ಉಲ್ಲೇಖ ಆಗುವುದಿಲ್ಲ.

 ಸಾಲ ತೆಗೆದುಕೊಳ್ಳಿ

ಸಾಲ ತೆಗೆದುಕೊಳ್ಳಿ

ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮಪಡಿಸಲು ಇನ್ನೊಂದು ವಿಧಾನವೆಂದರೆ ಸಾಲ ಪಡೆಯುವುದು. ಸಾಲ ಪಡೆದರೆ ಸಾಕಾಗದು ಆ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕಾಗುತ್ತದೆ. ಇಲ್ಲವಾದರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ನೀವು ಸರಿಯಾದ ಸಮಯಕ್ಕೆ ಪಾವತಿ ಮಾಡಿದರೆ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ.

 ಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ

ಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ

ಫಿಕ್ಸಿಡ್ ಡೆಪಾಸಿಟ್‌ಗಳಿಂದ ಸುರಕ್ಷಿತವಾಗಿರುವ ಕ್ರೆಡಿಟ್ ಕಾರ್ಡ್‌ಗಳನ್ನು ಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳು ಎಂದು ಕರೆಯಲಾಗುತ್ತದೆ. ಇದರಲ್ಲಿ ಹೆಚ್ಚು ಮಿತಿ ಇರುತ್ತದೆ. ಇದು ನೀವು ಮುಂಗಡವಾಗಿ ಪಾವತಿ ಮಾಡಿ ಬಳಿಕ ಪಡೆಯುವ ಮೊತ್ತವಾಗಿದೆ. ಹೀಗಾಗಿ ಸುರಕ್ಷಿತವಾಗಿದೆ. ನೀವು ರೂ. 50,000 ಡೆಪಾಸಿಟ್ ಮಾಡಿದರೆ ರೂ. 50,000 ಕ್ರೆಡಿಟ್‌ ಕಾರ್ಡ್‌ನಲ್ಲಿ ಲಭ್ಯವಾಗಲಿದೆ. ಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ಮಿಸಲು ಉತ್ತಮ ಮಾರ್ಗವಾಗಿದೆ. ಇದು ನೀವು ಸರಿಯಾದ ಸಮಯಕ್ಕೆ ಬಿಲ್ ಪಾವತಿ ಮಾಡುತ್ತೀರಿ ಎಂಬುವುದನ್ನು ಪ್ರತಿನಿಧಿಸುತ್ತದೆ.

 ನಿಮ್ಮ ಕೆಲಸವನ್ನು ಉಳಿಸಿಕೊಳ್ಳಿ

ನಿಮ್ಮ ಕೆಲಸವನ್ನು ಉಳಿಸಿಕೊಳ್ಳಿ

ಈ ಎಲ್ಲಾ ವಿಧಾನಗಳ ಜೊತೆಗೆ ನಿಮ್ಮ ಬಳಿ ಕೆಲಸ ಅಥವಾ ಉದ್ಯೋಗ ಇರುವುದು ಅತೀ ಮುಖ್ಯವಾಗಿದೆ. ನಿಮಗೆ ಉದ್ಯೋಗವೇ ಇಲ್ಲವಾದರೆ ಹೇಗೆ ಸಾಲ ಮರುಪಾವತಿ ಮಾಡಲು ಸಾಧ್ಯವಲ್ಲವೇ?. ನಿಮ್ಮ ಉದ್ಯೋಗವು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ಸಹ ಉದ್ಯೋಗವು ನಿಮ್ಮ ಕ್ರೆಡಿಟ್ ದಾಖಲೆಯಲ್ಲಿ ಕಾಣಿಸಿಕೊಳ್ಳುತ್ತದೆ. ಸಾಲಕ್ಕಾಗಿ ಅರ್ಜಿ ನೀಡುವಾಗ ನೀವು ಎಲ್ಲಿ ಉದ್ಯೋಗ ಮಾಡುತ್ತಿದ್ದೀರಿ, ಎಷ್ಟು ವೇತನ ಪಡೆಯುತ್ತಿದ್ದೀರಿ ಎಂಬುವುದು ಕೂಡಾ ಮುಖ್ಯವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+