ಭಾರತದ ಆರ್ಥಿಕ ಕೇಂದ್ರವಾಗಿರುವ ಮುಂಬೈ ಜಾಗತಿಕವಾಗಿಯೂ ಶ್ರೀಮಂತ ನಗರವಾಗಿದೆ. ಈ ನಗರದಲ್ಲಿ ಸಾಮಾನ್ಯ ದಿನಗೂಲಿ ನೌಕರನಿಂದ ಹಿಡಿದು, ಅಗರ್ಭ ಶ್ರೀಮಂತರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.
ಮುಕೇಶ್ ಅಂಬಾನಿಯ ಮನೆ ಆಂಟಿಲಿಯಾ ಮತ್ತು ಶಾರುಖ್ ಖಾನ್ ಅವರ ಮನ್ನತ್ ನಂತಹ ಅನೇಕ ಶ್ರೀಮಂತ ಮನೆಗಳು ಈ ಮಾಯಾ ನಗರದಲ್ಲಿದೆ. ಈ ಪೈಕಿ ಮುಂಬೈನ ಚೆಂಬೂರ್‌ನಲ್ಲಿರುವ ಪ್ರಸಿದ್ಧ ರಾಜ್ ಕಪೂರ್ ಬಂಗ್ಲೆಯೂ ಒಂದು . ಆದರೆ ರಾಜ್ ಕಪೂರ್ ಬಂಗಲೆಯೂ ಇದೀಗ ಗೋದ್ರೇಜ್ ಪ್ರಾಪರ್ಟೀಸ್ ಖರೀದಿಸಿದ್ದು, ಮನೆಯು ಶೀಘ್ರದಲ್ಲೇ ಶ್ರೀಮಂತ ವಸತಿ ಸಂಕೀರ್ಣವಾಗಿ ರೂಪಾಂತರಗೊಳ್ಳಲಿದೆ.

ಗೋದ್ರೇಜ್ ಗ್ರೂಪ್‌ನ ರಿಯಲ್ ಎಸ್ಟೇಟ್ ವಿಭಾಗವು ರಾಜ್ ಕಪೂರ್ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಂದ ಫೆಬ್ರವರಿ 2023 ರಲ್ಲಿ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. 1 ಎಕರೆ ಜಮೀನಿನಲ್ಲಿ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಸುಮಾರು ಎರಡು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ವಸತಿ ಸಂಕೀರ್ಣ ಯೋಜನೆಯನ್ನು ಪ್ರಾರಂಭಿಸಲಿದೆ.
ರಾಜ್ ಕಪೂರ್ ಬಂಗ್ಲೆಯ ಸ್ಥಳದಲ್ಲಿ 500 ಕೋಟಿ ರೂಪಾಯಿ ವಸತಿ ಯೋಜನೆಯನ್ನು ಆರಂಭವಾಗುವ ಸಾಧ್ಯತೆ ಬಗ್ಗೆ ಇತ್ತೀಚೆಗೆ ಮನಿಕಂಟ್ರೋಲ್ ವರದಿ ಮಾಡಿದೆ. ಗೋದ್ರೇಜ್ ಪ್ರಾಪರ್ಟೀಸ್, 2023ರ ಫೆಬ್ರವರಿ 17 ರಂದು ಮುಂಬೈನ ಚೆಂಬೂರ್ ಪ್ರದೇಶದಲ್ಲಿ ರಾಜ್ ಕಪೂರ್ ಅವರ ಬಂಗಲೆಯನ್ನು ಉನ್ನತ ಮಟ್ಟದ ವಸತಿ ಯೋಜನೆಯನ್ನು ನಿರ್ಮಿಸಲು ಸ್ವಾಧೀನಪಡಿಸಿಕೊಂಡಿದೆ ಎಂದು ಘೋಷಿಸಿತು.
ಮನಿಕಂಟ್ರೋಲ್ ವರದಿ ಪ್ರಕಾರ, ಹೆಸರಾಂತ ನಟ, ನಿರ್ಮಾಪಕ ಮತ್ತು ನಿರ್ದೇಶಕ ರಾಜ್ ಕಪೂರ್ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಾದ ಕಪೂರ್ ಕುಟುಂಬವು ಈ ಭೂಮಿಯನ್ನು ಮಾರಾಟ ಮಾಡಿದ್ದು ಇವರ ನಡುವೆ ವ್ಯವಹಾರ ನಡೆದಿದೆ ಎಂದು ಹೇಳಿಕೊಂಡಿದೆ.
ಈ ಆಸ್ತಿಯು ಮುಂಬೈನ ಚೆಂಬೂರ್‌ನ ಡಿಯೋನಾರ್ ಫಾರ್ಮ್ ರಸ್ತೆಯಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) ಪಕ್ಕದಲ್ಲಿದೆ. ಈ ಪ್ರದೇಶವು ಮುಂಬೈನ ಪ್ರತಿಷ್ಟಿತ ವಸತಿ ಪ್ರದೇಶಗಳಲ್ಲಿ ಒಂದಾಗಿದೆ.
ಇದರಂತೆಯೇ, ಮೇ 2019 ರಲ್ಲಿ, ಜಿಪಿಎಲ್ ಮುಂಬೈನ ಚೆಂಬೂರ್‌ನಲ್ಲಿರುವ ಆರ್ ಕೆ ಸ್ಟುಡಿಯೋಸ್ ಅನ್ನು ಕಪೂರ್ ಕುಟುಂಬದಿಂದ ಸ್ವಾಧೀನಪಡಿಸಿಕೊಂಡಿದ್ದು, ಅಲ್ಲಿ ಗೋದ್ರೇಜ್ RKS ಪ್ರೀಮಿಯಂ ಮಲ್ಟಿ-ಯೂಸ್ ಬಿಲ್ಡಿಂಗ್ ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದೆ.
Q2FY24 ರಲ್ಲಿ ಕಂಪನಿಯ ಲಾಭಗಳ ಕುರಿತ ಕಾನ್ಫರೆನ್ಸ್ ನಲ್ಲಿ ಮುಂದಿನ ಯೋಜನೆಗಳ ಬಗ್ಗೆ ಪ್ರಶ್ನಿಸಿದಾಗ ಗುರುಗ್ರಾಮ್ ಮತ್ತು ರಾಜ್ ಕಪೂರ್ ಬಂಗಲೆ ಸ್ವಾಧೀನದಂತಹ ದೊಡ್ಡ ಯೋಜನೆಗಳ ಬಗ್ಗೆ ಮಾಹಿತಿ ನೀಡಿತ್ತು.
ಮನಿಕಂಟ್ರೋಲ್ ಪ್ರಕಾರ, ಕಾನ್ಫರೆನ್ಸ್ ಕಾಲ್ ವೇಳೆ ಜಿಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಗೌರವ್ ಪಾಂಡೆ ಅವರು ಮುಂದೆ ಹೆಚ್ಚುವರಿಯಾಗಿ, ಅಂದರೆ ನವೆಂಬರ್ 2, 2023 ರಂದು ಜಿಪಿಎಲ್‌ನ ಕಾರ್ಯನಿರ್ವಾಹಕ ಅಧ್ಯಕ್ಷೆ ಪಿರೋಜ್ ಶಾ ಗೋದ್ರೇಜ್ ಅವರು ಹೇಳಿದಂತೆ, ಸಂಸ್ಥೆಯೂ ಹೈದರಾಬಾದ್ ರಿಯಲ್ ಎಸ್ಟೇಟ್ ಮಾರುಕಟ್ಟೆಗೂ ಕಾಲಿರಿಸಲು ಮುಂದಾಗಿದೆ ಎಂದು ವರದಿ ಮಾಡಿದೆ.


Click it and Unblock the Notifications