ದೀಪಿಕಾ ಪಡುಕೋಣೆ ಅವರು ಬಾಲಿವುಡ್‌ನ ಪ್ರಮುಖ ನಟಿಯರ ಪೈಕಿ ಒಬ್ಬರಾಗಿದ್ದು, ಅವರು ಬೃಹತ್ ವ್ಯಾಪಾರ ಸಾಮ್ರಾಜ್ಯವನ್ನು ಸಹ ಮುನ್ನಡೆಸುತ್ತಿದ್ದಾರೆ. ಅವರು ಸಣ್ಣ ಉದ್ಯಮಗಳಲ್ಲಿ ಹೂಡಿಕೆ ಮಾಡಿ ಅದನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಅದರಂತೆ ಅನ್ಮೋಲ್ ಸಿಂಗ್ ಜಗ್ಗಿ ಮಾಲಿಕತ್ವದ ಕಂಪನಿಯಲ್ಲಿ ಅವರು ಹೂಡಿಕೆ ಮಾಡಿದ್ದಾರೆ.
ಅನ್ಮೋಲ್ ಸಿಂಗ್ ಜಗ್ಗಿ ಅವರು ದೊಡ್ಡ ಉದ್ಯಮಿಯಾಗಿದ್ದು, ಅವರು ಹಲವು ವ್ಯಾಪಾರದ ಮಾಲಿಕತ್ವವನ್ನು ಹೊಂದಿದ್ದಾರೆ. ದೀಪಿಕಾ ಪಡುಕೋಣೆ ಅವರ ಹೂಡಿಕೆಯಿಂದಾಗಿ ಅನ್ಮೋಲ್ ಜಗ್ಗಿ ಅವರ ಹೊಸ ವೆಂಚರ್ ಓಲಾ ಹಾಗೂ ಉಬರ್ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿವೆ.
ಇಲೆಕ್ಟ್ರಿಕಲ್ ವೆಹಿಕಲ್ ಅನ್ನು ಬಳಸಿಕೊಂಡು ರೈಡ್ ಶೇರ್ ಮಾಡುವ ಬ್ಲೂಸ್ಮಾರ್ಟ್ ಎನ್ನುವ ಕಂಪನಿಯನ್ನು ಅನ್ಮೋಲ್ ಸಿಂಗ್ ಜಗ್ಗಿ ಅವರು ಪುನೀತ್ ಜಗ್ಗಿ ಹಾಗೂ ಪುನಿತ್ ಗೋಯಲ್ ಅವರ ಜತೆಸೇರಿ ಪ್ರಾರಂಭಿಸಿದ್ದಾರೆ. ಆ ಮೂಲಕ ಪರಿಸರ ಮಾಲಿನ್ಯ ತಡೆ ಹಾಗೂ ಇಂಧನ ಬಳಕೆ ಕಡಿಮೆಗೊಳಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.
ಈ ಹೊಸ ಉದ್ಯಮವು ಭಾರತದಾದ್ಯಂತ ರೈಡ್ ಶೇರಿಂಗ್ ಅಪ್ಲಿಕೇಶನ್‌ಗಳಾದ ಓಲಾ ಮತ್ತು ಉಬರ್‌ಗಳ ಅಧಿಪತ್ಯವನ್ನು ಮುರಿಯುವ ಗುರಿಯನ್ನು ಹೊಂದಿದೆ. 2019ರಲ್ಲಿ ಸ್ಥಾಪನೆಯಾದ ಬ್ಲೂಸ್ಮಾರ್ಟ್ ಕ್ಯಾಬ್‌ಗಳು ಈಗಾಗಲೇ ವರ್ಷಕ್ಕೆ 30 ಕೋಟಿ ರೂಪಾಯಿಗೂ ಹೆಚ್ಚು ಆದಾಯವನ್ನು ಗಳಿಸುತ್ತಿದೆ. ಜತೆಗೆ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಭಾರಿ ಜನಪ್ರಿಯತೆಯನ್ನು ಪಡೆಯುತ್ತಿದೆ.
ಆದರೆ, ಅನ್ಮೋಲ್ ಜಗ್ಗಿ ಬಹುಕೋಟಿ ಕಂಪನಿಯಾದ ಬ್ಲೂಸ್ಮಾರ್ಟ್ ಅನ್ನು ಮಾತ್ರ ಮುನ್ನಡೆಸುತ್ತಿಲ್ಲ. ಜತೆಗೆ ಸರಣಿ ಉದ್ಯಮವನ್ನು ಹೊಂದಿರುವ ಅನ್ಮೋಲ್ ಜಗ್ಗಿ ಅವರು 1400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮತ್ತೊಂದು ಯಶಸ್ವಿ ಸ್ಟಾರ್ಟಪ್ ಗೆನ್‌ಸೋಲ್ ಎಂಜಿನಿಯರಿಂಗ್‌ನ ಸಿಇಒ ಕೂಡ ಆಗಿದ್ದಾರೆ. ಇದು ಪ್ರತಿ ವರ್ಷವೂ ಹೆಚ್ಚಿನ ಲಾಭವನ್ನು ಗಳಿಸುತ್ತಿದೆ.
ಅನ್ಮೋಲ್ ಜಗ್ಗಿ ಅವರ ಬಹಳ ವಿಭಿನ್ನವಾದ ಬ್ಲೂಸ್ಮಾರ್ಟ್ ಕ್ಯಾಬ್ಸ್, ದೀಪಿಕಾ ಪಡುಕೋಣೆ ಅವರ ಗಮನವನ್ನು ಸೆಳೆದಿದ್ದು, ಆ ಮೂಲಕ ಇ-ಮೊಬಿಲಿಟಿ ಸ್ಟಾರ್ಟಪ್‌ನಲ್ಲಿ ಹೂಡಿಕೆಯನ್ನು ಮಾಡಿದ್ದಾರೆ. ದೀಪಿಕಾ ಪಡುಕೋಣೆ ಅವರು ಇತರೆ ಬಿಸಿನೆಸ್‌ಗಳ ಜತೆಗೆ ಮೊದಲ ಹಂತದ ಫಂಡ್ ರೈಸಿಂಗ್‌ನಲ್ಲಿ 24.79 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.
ಈಗ ಅನ್ಮೋಲ್ ಜಗ್ಗಿ ಅವರ ಈ ವಿಭಿನ್ನ ಸ್ಟಾರ್ಟಪ್ ಕಂಪನಿಯಾದ ಬ್ಲೂಸ್ಮಾರ್ಟ್ ಕ್ಯಾಬ್ಸ್ A2 ರೌಂಡ್ ಫಂಡ್ ರೈಸಿಂಗ್‌ನಲ್ಲಿ 42 ಮಿಲಿಯನ್ ಡಾಲರ್ ಅನ್ನು ಪಡೆದುಕೊಂಡಿದ್ದು, ಕಂಪನಿಯ ಒಟ್ಟು ಮೌಲ್ಯವು 250 ಮಿಲಯನ್ ಅಮೆರಿಕನ್ ಡಾಲರ್ (2066 ಕೋಟಿ ರೂಪಾಯಿ) ಆಗಿರುವುದಾಗಿ ಟ್ರಾಕ್ಸನ್ ಹೇಳಿದೆ.
ಅನ್ಮೋಲ್ ಜಗ್ಗಿ ಅವರ ಸಂಸ್ಥೆಯಾದ ಬ್ಲೂಸ್ಮಾರ್ಟ್ ಈಗ ಓಲಾ ಮತ್ತು ಉಬರ್‌ಗೆ ಮಾತ್ರವಲ್ಲದೆ ಟಾಟಾದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೂ ಪ್ರಮುಖ ಸ್ಪರ್ಧೆಯನ್ನು ಒಡ್ಡಿದೆ. ಇದು ರೈಡ್ ಶೇರಿಂಗ್ ಉದ್ಯಮದಲ್ಲಿ ಹೆಚ್ಚಿನ ಪ್ರಭಾವ ಬೀರುವ ನಿರೀಕ್ಷೆಯಿದೆ.


Click it and Unblock the Notifications
