ರಣವೀರ್ ಸಿಂಗ್ ಬಾಲಿವುಡ್‌ನ ಅತ್ಯಂತ ಯಶಸ್ವಿ ಹಾಗೂ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದು, ಅವರು ಬಹಳಷ್ಟು ಹೂಡಿಕೆಗಳು ಹಾಗೂ ವ್ಯವಹಾರಗಳ ಮೂಲಕ ಹೆಚ್ಚಿನ ನಿವ್ವಳ ಸಂಪತ್ತನ್ನು ಗಳಿಸಿದ್ದಾರೆ. ಉದ್ಯಮಿ ವಿನೀತಾ ಸಿಂಗ್ ಸ್ಥಾಪಿಸಿದ ಶುಗರ್ ಕಾಸ್ಮೆಟಿಕ್ಸ್‌ನಲ್ಲಿ ಅವರ ಹೂಡಿಕೆಯು ಅತ್ಯಂತ ಪ್ರಸಿದ್ಧ ಮತ್ತು ಹೆಚ್ಚಿನ ಲಾಭವನ್ನು ಗಳಿಸುತ್ತಿದೆ.
ರಣವೀರ್ ಸಿಂಗ್ ಅವರ ವ್ಯಾಪಾರ ಪಾಲುದಾರರು ಮತ್ತು ಶುಗರ್ ಕಾಸ್ಮೆಟಿಕ್ಸ್‌ನ ಸಂಸ್ಥಾಪಕಿ ವಿನೀತಾ ಸಿಂಗ್ ಅವರು ದೇಶದ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಪ್ರತಿ ವರ್ಷವೂ ಹೊಸ ಸೌಂದರ್ಯ ವರ್ಧಕ ಉತ್ಪನ್ನವನ್ನು ಪರಿಚಯಿಸುವ ಮೂಲಕ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದಾರೆ.

ವಿನೀತಾ ಸಿಂಗ್ ಅವರು ಐಐಟಿ ಮದ್ರಾಸ್‌ನಲ್ಲಿ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದ ನಂತರ ತಮ್ಮದೇ ಆದ ಒಳ ಉಡುಪು ಕಂಪನಿಯನ್ನು ಪ್ರಾರಂಭಿಸಲು ಯೋಚಿಸಿದ್ದರು. ಈ ನಡುವೆ ಮೂರು ತಿಂಗಳ ಕಾಲ ಡಾಯ್ಚ ಬ್ಯಾಂಕ್‌ನಲ್ಲಿ ಇಂಟರ್ನ್‌ಶಿಪ್ ಅನ್ನು ಮಾಡಿದ್ದರು. ಆ ಮೂಲಕ ದೊಡ್ಡ ಕಂಪನಿಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿದ್ದರು.
ಇನ್ನು ಇಂಟರ್ನ್‌ಶಿಪ್ ವೇಳೆ ವಿನೀತಾ ಅವರು ತೋರಿಸಿದ ಯಶಸ್ವಿ ಕಾರ್ಯ ನಿರ್ವಹಣೆಗಾಗಿ ಅವರಿಗೆ ಡಾಯ್ಚ ಬ್ಯಾಂಕ್ ಒಂದು ಕೋಟಿ ರೂಪಾಯಿ ಸಂಬಳದ ಪ್ಯಾಕೇಜ್‌ನೊಂದಿಗೆ ಉದ್ಯೋಗದ ಆಫರ್ ಅನ್ನು ನೀಡಿತ್ತು. ಆದರೆ ವಿನೀತಾ ಅವರು ಇದನ್ನು ತಿರಸ್ಕರಿಸುವ ಮೂಲಕ ತಮ್ಮದೇ ಆದ ಸ್ವಂತ ಕಂಪನಿಯನ್ನು ಪ್ರಾರಂಭಿಸಲು ನಿರ್ಧರಿಸಿದ್ದರು.
ವಿನೀತಾ ಅವರು ತಮ್ಮ ಶುಗರ್ ಕಾಸ್ಮೆಟಿಕ್ಸ್ ಉದ್ಯಮವನ್ನು ಪ್ರಾರಂಭಿಸುವ ವೇಳೆ ತಾನು ಬೆಂಕಿ ಪೊಟ್ಟಣದ ಗಾತ್ರದ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಮನೆಯು ಮುಂಬೈನಲ್ಲಿ ಪ್ರತಿ ಬಾರಿಯೂ ಮಳೆ ಬಂದಾಗ ಮಾಮೂಲಿನಂತೆ ಪ್ರವಾಹಕ್ಕೆ ಸಿಲುಕುತ್ತಿತ್ತು. ಆರಂಭದಲ್ಲಿ ವಿನೀತಾ ಅವರ ಶುಗರ್ ಕಾಸ್ಮೆಟಿಕ್ಸ್ ಕಂಪನಿಯು ತನ್ನ ಉತ್ಪನ್ನಗಳನ್ನು ವೆಬ್‌ಸೈಟ್ ಮೂಲಕ ಮಾರಾಟ ಮಾಡುತ್ತಿತ್ತು.
ಶೀಘ್ರದಲ್ಲೇ ವಿನೀತಾ ಅವರ ವ್ಯವಹಾರವು ಲಕ್ಷಾಂತರ ಡಾಲರ್ನ್ನು ಗಳಿಸುವ ಮೂಲಕ ಶುಗರ್ ಕಾಸ್ಮೆಟಿಕ್ಸ್ ಕಂಪನಿಯು ವಿಸ್ತಾರವಾಗಿ ಬೆಳೆಯಲಾರಂಭಿಸಿತ್ತು. ಕಂಪನಿಯು ಬಹಳ ಯಶಸ್ವಿಯಾಗಿ ಮುನ್ನಡೆಯುತ್ತಿದ್ದ ಹಿನ್ನೆಲೆಯಲ್ಲಿ ರಣವೀರ್ ಸಿಂಗ್ ಅವರು 2022ರಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದರು. ಆ ಮೂಲಕ ವಿನೀತಾ ಅವರ ಕಂಪನಿಯನ್ನು ರಣವೀರ್ ಸಿಂಗ್ ಮತ್ತಷ್ಟು ಎತ್ತರಕ್ಕೆ ಬೆಳೆಸುವುದಕ್ಕೆ ನೆರವಾದರು.
ಇದೀಗ ವಿನೀತಾ ಸಿಂಗ್ ಅವರ ಶುಗರ್ ಕಾಸ್ಮೆಟಿಕ್ಸ್ ಕಂಪನಿಯು 300 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದ್ದು, ಉದ್ಯಮಿಗಳ ಸ್ವಂತ ನಿವ್ವಳ ಆಸ್ತಿ ಮೌಲ್ಯ 310 ಕೋಟಿ ರೂಪಾಯಿ ಆಗಿದೆ. ರಣವೀರ್ ಸಿಂಗ್ ಅವರು ಇತ್ತೀಚಿನ ವರ್ಷಗಳಲ್ಲಿ ಹಲವು ಸ್ಟಾರ್ಟಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಅವರ ನಿವ್ವಳ ಆಸ್ತಿ ಮೌಲ್ಯದಲ್ಲಿ ಏರಿಕೆಯನ್ನು ಕಂಡಿದ್ದು, ಪ್ರಸ್ತುತ ಅದು 365 ಕೋಟಿ ರೂಪಾಯಿ ಆಗಿದೆ.


Click it and Unblock the Notifications