ಸಾಮಾನ್ಯವಾಗಿ ಹುಟ್ಟುವಾಗಲೇ ಬೆಳ್ಳಿಯ ಚಮಚದಲ್ಲಿ ಆಹಾರವನ್ನು ತಿಂದ ಮಕ್ಕಳು ಬದುಕಿನಲ್ಲಿ ಎತ್ತರಕ್ಕೆ ಬೆಳೆದು ದೊಡ್ಡ ಸಾಧನೆಗಳನ್ನು ಮಾಡುತ್ತಾರೆ ಎನ್ನುವ ಮಾತೊಂದಿದೆ. ಆದರೆ, ಯಶಸ್ವಿ ಉದ್ಯಮವೊಂದನ್ನು ಪ್ರಾರಂಭಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ.
ಹೆಚ್ಚಿನ ಸಂದರ್ಭಗಳಲ್ಲಿ ಮಧ್ಯಮ ವರ್ಗದಲ್ಲಿ ಹುಟ್ಟಿದವರು ಈ ರೀತಿಯ ಕನಸುಗಳನ್ನೇ ಕಾಣುತ್ತಿರುತ್ತಾರೆ. ಒಂದು ಅದು ದೊಡ್ಡ ಮಟ್ಟದ ಉದ್ಯಮವಾಗಿ ಬೆಳೆಯಬೇಕಾದರೆ ಹುಟ್ಟಿನಿಂದಲೇ ದೊಡ್ಡವರು ಅಥವಾ ಶ್ರೀಮಂತರಾಗಿರಬೇಕು. ಆದರೆ, ಯಶಸ್ಸು ಕೇವಲ ಮನೆಯವರ ಆಸ್ತಿ- ಅಂತಸ್ತು ಅಥವಾ ಕುಟುಂಬದ ಹಿನ್ನಲೆಯಿಂದ ಮಾತ್ರ ನಿರ್ಧಾರವಾಗುತ್ತದೆ ಎನ್ನುವುದು ಸುಳ್ಳು.

ಕನಸುಗಳನ್ನು ನನಸು ಮಾಡುವುದಕ್ಕೆ ಛಲ ಹಾಗೂ ಪರಿಶ್ರಮವಿದ್ದರೆ ಎಂಥವರು ಕೂಡ ಸಾಧನೆಯ ಮೆಟ್ಟಿಲುಗಳನ್ನು ಏರಬಹುದು. ಫಾರ್ಮಾ ಕ್ಷೇತ್ರದ ಕಿಂಗ್ ದಿಲೀಪ್ ಶಾಂಘ್ವಿ ಅವರ ಬದುಕಿಗೂ ಇದು ಅನ್ವಯಿಸುತ್ತದೆ. ದಿಲೀಪ್ ಶಾಂಘ್ವಿ ಅವರು ಗುಜರಾತ್‌ನ ಅಮ್ರೇಲಿ ಎಂಬ ಸಣ್ಣ ನಗರದಲ್ಲಿ ಜನಿಸಿದವರು. ಅವರ ತಂದೆ ಶಾಂತಿಲಾಲ್ ಸಾಂಘ್ವಿ ಕೊಲ್ಕೊತ್ತಾದಲ್ಲಿ ಜನರಿಕ್ ಔಷಧಿಗಳ ಪೂರೈಕೆಯಲ್ಲಿ ಕೆಲಸ ಮಾಡುತ್ತಿದ್ದರು.
ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ದಿಲೀಪ್ ಶಾಂವಿ ಅವರು ಕೂಡ ತಮ್ಮ ತಂದೆಯವರ ಉದ್ಯಮವನ್ನು ಸೇರಿಕೊಂಡರು. ಔಷಧಗಳ ಬಗ್ಗೆ ಇದ್ದ ಮಾಹಿತಿಯಿಂದಾಗಿ ಅವರು ಫಾರ್ಮಾ ಕಂಪನಿಗಳಿಗೆ ಔಷಧಗಳನ್ನು ಸರಬರಾಜು ಮಾಡುವ ಕೆಲಸವನ್ನು ಮಾಡುತ್ತಿದ್ದರು.
ಸ್ವಂತಹ ಕಂಪನಿಯ ಆಲೋಚನೆ
ಔಷಧಗಳ ಮಾರಾಟಕ್ಕಾಗಿ ಸಾಕಷ್ಟು ಪ್ರಯಾಣವನ್ನು ಮಾಡುತ್ತಿದ್ದರು. ಒಂದು ದಿನ ಅವರಿಗೆ ಅರಿವಿಗೆ ಬಂದ ವಿಷಯವೆಂದರೆ, ಈ ರೀತಿ ಎಷ್ಟು ದಿನ ಅಂತ ಬೇರೆಯವರ ಔಷಧಗಳನ್ನು ಮಾರಾಟ ಮಾಡುವುದು, ಅದಕ್ಕಿಂತ ಸ್ವಂತ ಔಷಧ ಕಂಪನಿಯೊಂದನ್ನು ಪ್ರಾರಂಭಿಸಿದರೆ ಅದರಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದು ಯೋಚಿಸಿದರು.
1982ರಲ್ಲಿ ಅವರು ತಮ್ಮ ತಂದೆಯಿಂದ 2000 ರೂಪಾಯಿಯನ್ನು ಸಾಲ ಪಡೆದುಕೊಂಡು ತನ್ನ ಸ್ನೇಹಿತರ ಜತೆ ಸೇರಿಕೊಂಡು ಗುಜರಾತ್‌ನಲ್ಲಿ ಸನ್ ಫಾರ್ಮಾ ಎಂಬ ಕಂಪನಿಯನ್ನು ಸ್ಥಾಪಿಸಿದರು. ಗುಣಮಟ್ಟಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಆರಂಭದಲ್ಲಿ ಕೆಲವೊಂದು ಮಾನಸಿಕ ಕಾಯಿಲೆಗೆ ಸಂಬಂಧಿಸಿದ ಔಷಧವನ್ನು ತಯಾರಿಸುತ್ತಿದ್ದರು.
ಈ ರೀತಿ ಔಷಧ ಮಾರಾಟ ಶುರು ಮಾಡಿದ್ದು, ಈ ರೀತಿ ಒಂದು ದಶಕಕ್ಕೂ ಅಧಿಕ ಉದ್ಯಮ ಮುನ್ನಡೆಸಿದ ಬಳಿಕ 1997ರಲ್ಲಿ ಅವರು ದಿಲೀಪ್ ಅವರು ಅಮೆರಿಕದ ಫಾರ್ಮಾ ಕಂಪನಿಯನ್ನು ಖರೀದಿಸಿದರು. ಆ ಮೂಲಕ ತಮ್ಮ ಅಸ್ತಿತ್ವವನ್ನು ಅಮೆರಿಕದಲ್ಲಿ ಸ್ಥಾಪಿಸಿಕೊಂಡರು. 2007ರಲ್ಲಿ ಟರೋ ಫಾರ್ಮಾ ಎಂಬ ಇಸ್ರೇಲ್ ಕಂಪನಿಯನ್ನು ಕೂಡ ಸ್ವಾಧೀನಪಡಿಸಿಕೊಂಡರು.
ಇನ್ನು 2014ರಲ್ಲಿ ಸನ್ ಫಾರ್ಮಾ ಹಾಗೂ ರಾನ್‌ಬಾಕ್ಸಿ ನಡುವಿನ ಒಪ್ಪಂದವು ಸಾಕಷ್ಟು ಬದಲಾವಣೆಗೆ ಕಾರಣವಾಯಿತು. ಸನ್ ಫಾರ್ಮಾ ಸುಮಾರು 19,000 ಕೋಟಿ ರೂಪಾಯಿಗೆ ರಾನ್‌ಬಾಕ್ಸಿಯನ್ನು ಸ್ವಾಧೀನಪಡಿಸಿಕೊಂಡಿತ್ತು. 2014ರ ವೇಳೆಗೆ ದಿಲೀಫ್ ಸಾಂಘ್ವಿ ಅವರ ಒಟ್ಟು ಸಂಪತ್ತು 17.8 ಬಿಲಿಯನ್ ಡಾಲರ್ ತಲುಪಿತ್ತು.
2015ರಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಅಗ್ರಪಂಕ್ತಿಯ ಶ್ರೀಮಂತ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ದೇಶದ ಅತಿ ಶ್ರೀಮಂತ ಕೈಗಾರಿಕೋದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಫೋರ್ಬ್ಸ್ ಪ್ರಕಾರ, 2023ರ ವೇಲೆಗೆ ದಿಲೀಪ್ ಶಾಂಘ್ವಿ ಅವರ ಒಟ್ಟು ಸಂಪತ್ತು 17.8 ಬಿಲಿಯನ್‌ಗೆ ತಲುಪಿತ್ತು. ಅಂದರೆ, ಅದು 1,46,090 ಕೋಟಿ ರೂಪಾಯಿ ಆಗಿದೆ. 2023ರ ಜುಲೈ 19ರ ವರದಿಯಂತೆ ಸನ್ ಫಾರ್ಮಾದ ಮಾರುಕಟ್ಟೆ ಬಂಡವಾಳವು 2,60,000 ಕೋಟಿ ರೂಪಾಯಿಗೆ ತಲುಪಿದೆ.


Click it and Unblock the Notifications