ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಅವರು ಹಲವಾರು ವರ್ಷಗಳಿಂದ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗಮನಸೆಳೆಯುತ್ತಿದ್ದಾರೆ. ಅವರು ಸುಮಾರು 91 ಶತಕೋಟಿ (7.6 ಲಕ್ಷ ಕೋಟಿ ರೂಪಾಯಿ) ಯುಎಸ್ ಡಾಲರ್ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಆದರೆ, ಒಂದು ಕಾಲದಲ್ಲಿ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ಅವರು ರಿಲಯನ್ಸ್ ಗ್ರೂಪ್‌ನ ಅರ್ಧದಷ್ಟು ಸಂಪತ್ತಿನೊಂದಿಗೆ ಮುಕೇಶ್ ಅಂಬಾನಿಗಿಂತ ಶ್ರೀಮಂತರಾಗಿದ್ದರು.
ಆದರೆ, ಮುಕೇಶ್ ಅಂಬಾನಿ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ಅವರ ರಿಲಯನ್ಸ್ ಸಮೂಹವು ಭಾರೀ ಸಾಲದ ಸುಳಿಯಲ್ಲಿ ಸಿಲುಕಿಕೊಂಡ ಪರಿಣಾಮ ದಿವಾಳಿಯಾಗಿದೆ. ಆದರೆ, ಒಂದು ಸಮಯದಲ್ಲಿ ಅನಿಲ್ ಅಂಬಾನಿ ಶ್ರೀಮಂತಿಕೆಯಲ್ಲಿ ಉನ್ನತ ಸ್ಥಾನದಲ್ಲಿ ಇದ್ದು, ಐಷಾರಾಮಿ ಜೀವನವನ್ನು ಕೂಡ ನಡೆಸುತ್ತಿದ್ದರು ಎನ್ನುವುದು ಹಲವರಿಗೆ ಗೊತ್ತಿಲ್ಲ.

ರಿಲಯನ್ಸ್ ಸಮೂಹದ ಅಧಿಪತಿಯಾಗಿದ್ದ ಧೀರೂಭಾಯಿ ಅಂಬಾನಿ ಅವರ ಅನಿರೀಕ್ಷಿತ ಸಾವು ಸಹೋದರರಾದ ಮುಕೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ಅವರ ನಡುವೆ ದೊಡ್ಡ ಮಟ್ಟದ ಬಿರುಕು ಮೂಡಿಸಿತ್ತು. ಇದು 15 ಬಿಲಿಯನ್ ಅಮೆರಿಕನ್ ಡಾಲರ್ ರಿಲಯನ್ಸ್ ಸಾಮ್ರಾಜ್ಯವನ್ನು ವಿಭಜಿಸುವಂತೆ ಮಾಡಿತ್ತು. ಇದು ಕಿರಿಯ ಸಹೋದರ ಅನಿಲ್ ಅಂಬಾನಿಯ ಕ್ಷಿಪ್ರ ಬೆಳವಣಿಗೆಗೆ ಕಾರಣವಾಯಿತು.
2008ರಲ್ಲಿ ಅಂದರೆ ಅವರ ತಂದೆಯ ಸಾವಿನ ಆರು ವರ್ಷಗಳ ನಂತರ ಅನಿಲ್ ಅಂಬಾನಿ 42 ಬಿಲಿಯನ್ ಅಮೆರಿಕನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ 6ನೇ ಶ್ರೀಮಂತ ವ್ಯಕ್ತಿಯಾದರು. ಇದು ಅವರ ಸಹೋದರ ಮುಕೇಶ್ ಅಂಬಾನಿಗಿಂತ ಹೆಚ್ಚಿನ ಸಂಪತ್ತು ಆಗಿದ್ದರು.
ಅನಿಲ್ ಅವರ ಆಸ್ತಿ ಏರಿಕೆಗೆ ಅವರ ರಿಲಯನ್ಸ್ ಪವರ್ ಕಂಪನಿ ಕಾರಣವಾಗಿತ್ತು. ಏಕೆಂದರೆ, ಆ ಸಮಯದಲ್ಲಿ ಭಾರತದ ಆರ್ಥಿಕತೆಗೆ ಅತಿದೊಡ್ಡ ಕೊಡುಗೆಯಾಗಿ ಷೇರು ಮಾರುಕಟ್ಟೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿತ್ತು. ನಡುವೆ ಅನಿಲ್ ಅಂಬಾನಿ ಅವರ ಷೇರು ಮಾರುಕಟ್ಟೆಯಲ್ಲಿನ ಈ ಏರಿಕೆಯು ದೊಡ್ಡ ವಿವಾದ ಹಾಗೂ ಋನಾತ್ಮಕವಾದ ಹೂಡಿಕೆಗಳಲ್ಲಿ ಸಿಲುಕಿಕೊಂಡಿತ್ತು.
ಇದು ಅಂತಿಮವಾಗಿ ಅವರ ಸಂಪತ್ತು ಕರಗುವುದರೊಂದಿಗೆ ಅವನತಿಗೆ ಕಾರಣವಾಯಿತು. ಬಿಲಿಯನೇರ್ ದಕ್ಷಿಣ ಆಫ್ರಿಕಾದ ಕಂಪನಿಯಾದ ಎಂಟಿಎನ್ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ 2 ಶತಕೋಟಿ ಯುಎಸ್‌ಎ ಡಾಲರ್ ಹೂಡಿಕೆಯನ್ನು ಮಾಡಿದ್ದರು. ಇದು, ಆ ನಂತರದಲ್ಲಿ ರಿಲಯನ್ಸ್ ಕಮ್ಯೂನಿಕೇಷನ್ ಮೂಲಕ ಅನಿಲ್ ಅಂಬಾನಿಯನ್ನು ಮತ್ತಷ್ಟು ಸಾಲದ ಸುಳಿಗೆ ಸಿಲುಕಿಸಿತ್ತು.
ಇನ್ನೊಂದೆಡೆ, ಅನಿಲ್ ಅಂಬಾನಿ ವಿರುದ್ಧ ಹಣಕಾಸು ಅಕ್ರಮಗಳನ್ನು ಮಾಡಿದ ಆರೋಪಗಳು ಕೂಡ ಕೇಳಿ ಬಂತು. ಚೀನಾ ಕಂಪನಿಗಳಿಂದ ಸಾಲಗಳನ್ನು ಪಡೆದು ಟೀಕೆಗಳಿಗೂ ಗುರಿಯಾದರು. ಮುಂದೆ, ಮುಕೇಶ್ ಅಂಬಾನಿ ಅವರು ಜಿಯೋ ಕಂಪನಿಯ ಪ್ರವೇಶವು ಅನಿಲ್ ಅಂಬಾನಿ ಅವರ ಟೆಲಿಕಾಂ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು. ಕೇವಲ ಒಂದು ದಶಕದಲ್ಲಿ ಅವರ ನಿವ್ವಳ ಮೌಲ್ಯವು 42 ಶತಕೋಟಿ ಯುಎಸ್ ಡಾಲರ್‌ನಿಂದ 1.7 ಶತಕೋಟಿ ಯುಎಸ್ ಡಾಲರ್‌ಗೆ ಕುಸಿತ ಕಂಡಿತ್ತು.
ಅಷ್ಟೇಅಲ್ಲ, ಅವರ ಕಂಪನಿಗಳು 40 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಿನ ಸಾಲದ ಹೊರೆಗೂ ಸಿಲುಕಿತ್ತು. 2020ರಲ್ಲಿ ಅನಿಲ್ ಅಂಬಾನಿ ಅವರ ಕಂಪನಿಗಳು ದಿವಾಳಿಯಾಗಿರುವುದಾಗಿ ಘೋಷಿಸಲಾಯಿತು. ಎಲ್ಲಿಯವರೆಗೆ ಅಂದರೆ ಕಾನೂನು ಹೋರಾಟಕ್ಕೆ ಬೇಕಾದ ಶುಲ್ಕವನ್ನು ಹೊಂದಿಸುವುದಕ್ಕೂ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿ ತಮ್ಮ ಕುಟುಂಬದ ಆಭರಣವನ್ನು ಮಾರಾಟ ಮಾಡಬೇಕಾಗಿ ಬಂತು ಅವರು ಹೇಳಿಕೊಂಡಿದ್ದಾರೆ.


Click it and Unblock the Notifications