ಆಟಿಕೆಗಳು ಜನರ ಬಾಲ್ಯದ ಪ್ರಮುಖ ಭಾಗವಾಗಿದೆ. ಹೆಚ್ಚಿನ ಜನರು ತಮ್ಮ ಬಾಲ್ಯ ಜೀವನದಲ್ಲಿ ಬೇರೆ ಬೇರೆ ರೀತಿಯ ಆಟಿಕೆಗಳೊಂದಿಗೆ ಆಟವಾಡಿದ್ದಾರೆ. ಆಟಿಕೆಗಳು ಸಹ ವರ್ಷ ಕಳೆದಂತೆ ಬದಲಾವಣೆಯಾಗುತ್ತಾ ಸಾಗುತ್ತಿದೆ. ಹಿಂದೆ ಮೃದುವಾದ ಆಟಿಕೆಗಳಿದ್ದವು, ಆದರೆ ಈಗ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಅನೇಕ ರೋಬೋಟಿಕ್ ಆಟಿಕೆಗಳು ಮಾರುಕಟ್ಟೆಗೆ ಬಂದಿವೆ.
ಆಟಿಕೆ ಮಾರುಕಟ್ಟೆಯು ನಿರಂತರ ಬದಲಾವಣೆ ಕಾಣುತ್ತಿದೆ. ಮಕ್ಕಳ ಆಸಕ್ತಿಗೆ ತಕ್ಕಂತೆ ಬದಲಾವಣೆಯೂ ಕೂಡಾ ಆಗುತ್ತಾ ಬರುತ್ತಿದೆ. ಅನೇಕ ಕಂಪನಿಗಳು ಆಟಿಕೆಗಳನ್ನು ಅಭಿವೃದ್ಧಿಪಡಿಸಿವೆ. ಅದು ಮಕ್ಕಳ ಮನರಂಜನೆಯ ಪ್ರಮುಖ ಮೂಲವಾಗಿದೆ. ಏನಿದು ವಿಶೇಷ ಮಾರ್ಕ್, ಇಲ್ಲಿದೆ ವಿವರ ಮುಂದೆ ಓದಿ...

ಏನಿದು ಆಟಿಕೆಯಲ್ಲಿ ವಿಶೇಷ ಮಾರ್ಕ್?
ಇತ್ತೀಚಿನ ವರ್ಷಗಳಲ್ಲಿ, ಭಾರತ ಸರ್ಕಾರವು 7 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಆಟಿಕೆಗಳಿಗಾಗಿ ಗುಣಮಟ್ಟ ನಿಯಂತ್ರಣ ಆದೇಶವನ್ನು (ಕ್ಯೂಸಿಒ) ಜಾರಿಗೊಳಿಸಿದೆ. ಈ ಆದೇಶದ ಪ್ರಕಾರ, ಆಟಿಕೆಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಆಟಿಕೆಗಳ ಮೇಲೆ ವಿಶೇಷ ಗುರುತು ಹಾಕುವುದು ಅವಶ್ಯಕ. ಪಾಲಕರು ತಮ್ಮ ಮಕ್ಕಳಿಗೆ ಆಟಿಕೆಗಳನ್ನು ಖರೀದಿಸುವ ಮೊದಲು ಈ ವಿಶೇಷ ಚಿಹ್ನೆಯನ್ನು ನೋಡಿಕೊಳ್ಳಲು ಸೂಚಿಸಲಾಗಿದೆ.
ಈ ಹಿಂದೆ, ಭಾರತ ಸರ್ಕಾರವು 7 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಆಟಿಕೆಗಳಿಗಾಗಿ ಬಿಐಎಸ್ ಕಾಯಿದೆ, 2016 ರ ಸೆಕ್ಷನ್ 16 ರ ಅಡಿಯಲ್ಲಿ 2020 ಕ್ಕೆ ಆಟಿಕೆಗಳ ಗುಣಮಟ್ಟ ನಿಯಂತ್ರಣ ಆದೇಶವನ್ನು (ಕ್ಯೂಸಿಒ) ಹೊರಡಿಸಿದೆ. ಆಟಿಕೆಗಳ ಗುಣಮಟ್ಟ ಕಾಯ್ದುಕೊಳ್ಳಲು ಆಟಿಕೆ ತಯಾರಿಕಾ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಐಎಸ್‌ಐ ಗುರುತು ಹಾಕಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಐಎಸ್‌ಐ ಗುರುತು ಇಲ್ಲದಿದ್ದಲ್ಲಿ ಹೀಗೆ ದೂರು ನೀಡಿ
ಗ್ರಾಹಕರು ಯಾವಾಗಲೂ ಆಟಿಕೆಗಳ ಮೇಲೆ ಐಎಸ್‌ಐ ಮಾರ್ಕ್ ಅನ್ನು ನೋಡಬೇಕು, ಬಳಿಕ ಖರೀದಿ ಮಾಡಬೇಕು ಎಂದು ಸರ್ಕಾರವು ಆದೇಶದಲ್ಲಿ ತಿಳಿಸಿದೆ. ಆಟಿಕೆಗಳ ಮೇಲೆ ಐಎಸ್‌ಐ ಗುರುತು ಇಲ್ಲದಿದ್ದಲ್ಲಿ ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ-1915ಕ್ಕೆ ಕರೆ ಮಾಡಿ ದೂರು ನೀಡುವಂತೆ ಸೂಚಿಸಲಾಗಿದೆ.
ಐಎಸ್‌ಐ ಗುರುತು ಯಾಕೆ ಮುಖ್ಯ?
ವರದಿಗಳ ಪ್ರಕಾರ, ಐಎಸ್‌ಐ ಗುರುತು ಇಲ್ಲದ ಆಟಿಕೆಗಳನ್ನು ಮಾರಾಟ ಮಾಡಲು, ವ್ಯಾಪಾರ ಮಾಡಲು, ಆಮದು ಮಾಡಿಕೊಳ್ಳಲು ಅಥವಾ ದಾಸ್ತಾನು ಮಾಡಲು ಅನುಮತಿಸಬಾರದು. ಕಳೆದ ಕೆಲವು ವರ್ಷಗಳಿಂದ, ಆಟಿಕೆಗಳು ಮಕ್ಕಳಿಗೆ ಗಾಯಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ವಿವಿಧ ಪ್ರಕರಣಗಳಾಗಿದೆ. ಆದ್ದರಿಂದ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ.
ಆಟಿಕೆಗಳ ಮೇಲಿನ ಚೂಪಾದ ಅಂಚುಗಳು ಅಥವಾ ಬಿಂದುಗಳಿಂದ ಮಕ್ಕಳಿಗೆ ಗಾಯವಾದ ಅದೆಷ್ಟೋ ಪ್ರಕರಣಗಳಿದೆ. ಹಾಗೆಯೇ ಈ ಆಟಿಕೆಗಳಲ್ಲಿ ಇರುವ ವಿಷಕಾರಿ ಅಂಶಗಳು ಮಕ್ಕಳ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರಬಹುದು. ಆಟಿಕೆಗಳ ಗುಣಮಟ್ಟವನ್ನು ನಿರ್ವಹಿಸಲು ಹಲವಾರು ಪರಿಶೀಲನಾ ಪಟ್ಟಿಗಳನ್ನು ಕೂಡಾ ಸರ್ಕಾರ ಆದೇಶದಲ್ಲಿ ಒದಗಿಸಿದೆ.
ಸರ್ಕಾರವು ಹಲವಾರು ಪ್ರಯತ್ನಗಳನ್ನು ಮಾಡಿದರೂ, ಇನ್ನೂ ಅನೇಕ ಜನರು ಆಟಿಕೆಗಳ ಮೇಲೆ ಐಎಸ್‌ಐ ಗುರುತು ಇಲ್ಲದೆ ಮಾರಾಟ ಮಾಡುತ್ತಿದ್ದಾರೆ. ಈ ಆಟಿಕೆಗಳು ಹೆಚ್ಚಾಗಿ ಸ್ಥಳೀಯ ಪ್ರದೇಶಗಳಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ನಾವು ಈ ಆಟಿಕೆಗಳನ್ನು ಖರೀದಿಸುವುದಾದರೂ ಇದರಿಂದ ಮಕ್ಕಳಿಗೆ ಏನಾದರೂ ಗಾಯಗಳಾಗುವ ಸಾಧ್ಯತೆಯಿದೆಯೇ ಎಂದು ಪರಿಶೀಲನೆ ಮಾಡಬೇಕಾಗುತ್ತದೆ.


Click it and Unblock the Notifications