ಇಂದು ಜಗತ್ತು ಬದಲಾಗಿದೆ ಮತ್ತು ಸಾಕಷ್ಟು ಅಭಿವೃದ್ಧಿಗೊಂಡಿದೆ. ಪ್ರತಿಯೊಂದು ವೃತ್ತಿಯಲ್ಲೂ ಇಂದು ಮಹಿಳೆ ಸಾಧಿಸಿ ತೋರಿಸುತ್ತಿದ್ದಾಳೆ. ಅನೇಕ ನಾಯಕತ್ವದ ಸ್ಥಾನಗಳನ್ನುಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ಮಾಮಾ ಅರ್ಥ್ (MamaEarth) ಸಹ-ಸಂಸ್ಥಾಪಕರಾಗಿರುವ ಗಜಲ್ ಅಲಾಘ್ ಅಂತಹ ಯಶಸ್ವಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.
ಶಾರ್ಕ್ ಟ್ಯಾಂಕ್ ಇಂಡಿಯಾ ಶೋನಲ್ಲಿ ತೀರ್ಪುಗಾರರಾದ ಕಾರಣದಿಂದಾಗಿ ಗಜಲ್ ಪ್ರಸಿದ್ಧರಾದರೂ ಕೂಡಾ, ಇದಕ್ಕೂ ಮುಂಚೆಯೇ ಅವರು ಶ್ರೀಮಂತ ಮಹಿಳಾ ಉದ್ಯಮಿಯಾಗಿ ಹೊರಹೊಮ್ಮಿದ್ದರು. ಗಜಲ್ ಅವರು ಹರಿಯಾಣದ ಗುರುಗ್ರಾಮ್‌ದ ಮಧ್ಯಮ ವರ್ಗದ ಕುಟುಂಬದ ಹಿನ್ನಲೆಯಿಂದ ಬಂದವರು.

ಹೀಗಾಗಿ ಹರಿಯಾಣದಲ್ಲೇ ಬೆಳೆದ ಅವರು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಅಲ್ಲೇ ಪೂರ್ಣಗೊಳಿಸಿದರು. 2010 ರ ಶೈಕ್ಷಣಿಕ ವರ್ಷದಲ್ಲಿ, ಗಜಲ್ ಪಂಜಾಬ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ ಪಡೆದರು. ಇದಾದ ನಂತರ 2013 ರಲ್ಲಿ ನ್ಯೂಯಾರ್ಕ್ ಅಕಾಡೆಮಿ ಆಫ್ ಆರ್ಟ್‌ನ, ಡಿಸೈನ್ ಮತ್ತು ಅಪ್ಲೈಡ್ ಆರ್ಟ್ಸ್‌ನಲ್ಲಿ ತನ್ನ ಸಮ್ಮರ್ ಇಂಟೆನ್ಸಿವ್ ಕೋರ್ಸ್ ಮತ್ತು ಮಾಡರ್ನ್ ಆರ್ಟ್‌ನಲ್ಲಿ ಫಿಗ್ರೇಟಿವ್ ಆರ್ಟ್‌ನಲ್ಲಿ ಅವರು ಇಂಟೆನ್ಸಿವ್ ಕೋರ್ಸ್ ಅನ್ನು ಪೂರ್ಣಗೊಳಿಸಿದರು.
ಗಜಲ್ ಅವರ ವೃತ್ತಿಜೀವನದ ಪ್ರಯಾಣವು ಕಾರ್ಪೊರೇಟ್ ತರಬೇತುದಾರರಾಗಿ ಆರಂಭವಾಯಿತು. 2008 ರಿಂದ 2010 ರವರೆಗೆ, ಅವರು ಎನ್‌ಐಐಟಿ ಲಿಮಿಟೆಡ್‌ನಲ್ಲಿ ಕಾರ್ಪೊರೇಟ್ ತರಬೇತುದಾರರಾಗಿ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಅವರು ವಿವಿಧ ಐಟಿ ಸ್ಪೆಷಲಿಸ್ಟ್ ನವರಿಗೆ ಸಾಫ್ಟ್‌ವೇರ್ ಮತ್ತು ಕೋಡಿಂಗ್ ಭಾಷಾ ತರಬೇತಿಯನ್ನು ನೀಡಿದರು.
ಗಜಲ್ ಅಲಾಘ್ ತನ್ನ ಪತಿಯೊಂದಿಗೆ ಸೇರಿಕೊಂಡು 2016 ರಲ್ಲಿ ಮಾಮಾ ಅರ್ಥ್ ಅನ್ನು ಪ್ರಾರಂಭಿಸಿದರು. ಪರಿಸರದ ಮೇಲಿನ ಕಾಳಜಿಯಿಂದ ಸಾವಯವ ಘಟಕಗಳು ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳ ಮೂಲಕ ಪ್ಯಾಕೇಜಿಂಗ್ ಮಾಡಿ, ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಪರಿಸರಸ್ನೇಹಿ, ನೈರ್ಮಲ್ಯ ವಸ್ತುಗಳ ಬಳಕೆಗೆ ಸಂಬಂಧಿಸಿದ ವಸ್ತುಗಳನ್ನು ತಯಾರಿಸುವ ಕಂಪನಿ ಆರಂಭಿಸಿದರು.
ಗಜಲ್ ಮತ್ತು ವರುಣ್ ಅಲಘ್ ದಂಪತಿಗಳು ಹೆತ್ತವರಾದ ಸಂದರ್ಭದಲ್ಲಿ ತಮ್ಮ ಮಗುವನ್ನು ಸುರಕ್ಷಿತವಾಗಿಡಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಬಯಸಿದ್ದರು. ಕಾಳಜಿ ಪೋಷಕರಂತೆ, ಇಬ್ಬರು ಕೂಡ ಮಗುವಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತು ಸಲಹೆಗಾಗಿ ಅಂತರ್ಜಾಲದಲ್ಲಿ ಹುಡುಕಿದರು.
ಯಾಕೆಂದರೆ ಸಿಕ್ಕ ಸಿಕ್ಕ ಉತ್ಪನ್ನಗಳನ್ನು ಮಗುವಿನ ಮೇಲೆ ಪ್ರಯೋಗಿಸುವ ಬದಲು ಸುರಕ್ಷಿತ ಪ್ರೋಡಕ್ಟ್ ಅವರಿಗೆ ಬೇಕಾಗಿತ್ತು. ಯುವರ್‌ಸ್ಟೋರಿಗೆ ನೀಡಿದ ಸಂದರ್ಶನದಲ್ಲಿ, ಗಜಲ್ ಅವರು ಮಾರುಕಟ್ಟೆಯಲ್ಲಿ ಇರುವ ಹೆಚ್ಚಿನ ಬೇಬಿ ಪ್ರಾಡಕ್ಟ್ ಉತ್ಪನ್ನಗಳು ವಿಷಕಾರಿ ಅಂಶಗಳಿಂದ ಕೂಡಿದೆ ಹೇಳಿದ್ದಾರೆ.
ಹೀಗಾಗಿ ದಂಪತಿಗಳು US ನಿಂದ ಮಗುವಿನ ಉತ್ಪನ್ನಗಳನ್ನು ಆರ್ಡರ್ ಮಾಡಲು ಪ್ರಾರಂಭಿಸಿದರು, ಆದರೆ ಇದು ಪ್ರಾಯೋಗಿಕವಾದರೂ ದೀರ್ಘಾವಧಿಯ ಪರಿಹಾರವಲ್ಲ ಎಂದು ಅವರು ಶೀಘ್ರದಲ್ಲೇ ಅರಿತುಕೊಂಡರು. ಇದಕ್ಕಾಗಿ ಆರ್ಥಿಕ ಮತ್ತು ಪರಿಸರ ಸ್ನೇಹಿಯಾದ ಕೆಮಿಕಲ್ ಮುಕ್ತವಾಗಿರುವ ರಾಶ್ ಕ್ರೀಮ್, ಲೋಷನ್‌ಗಳು, ಶಾಂಪೂ, ಮಸಾಜ್ ಆಯಿಲ್, ಬಾಡಿ ವಾಶ್‌ಗಳು ಮತ್ತು ಡೈಪರ್‌ಗಳು ಒಳಗೊಂಡಂತೆ ಮೊದಲು ಆರು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದರು.
ಶೇಕಡ ನೂರರಷ್ಟು ಟಾಕ್ಸಿನ್ ಫ್ರೀ ಮತ್ತು ನ್ಯಾಚುರಲ್ ಬೇಬಿ ಮಾಮಾಕೇರ್ ವಸ್ತುಗಳನ್ನು ಗ್ರಾಹಕರಿಗೆ ಒದಗಿಸುವ ಇವರ ಪ್ರಮುಖ ಯೋಜನೆಯಾಗಿತ್ತು. ಪ್ರಸ್ತುತ, ಬ್ರ್ಯಾಂಡ್ ಸೌಂದರ್ಯದಿಂದ ಹಿಡಿದು ಮಗುವಿನ ಆರೈಕೆಯವರೆಗೆ 500 ಕ್ಕೂ ಹೆಚ್ಚು ಪ್ರೋಡಕ್ಟ್ ಮಾರಾಟ ಮಾಡುತ್ತದೆ. ಇದೀಗ, ಮಾಮಾ ಅರ್ಥ್ ಏಷ್ಯಾ ನಿರ್ಮಿತ ಏಕೈಕ ಸುರಕ್ಷಿತ ಪ್ರಮಾಣೀಕೃತ ಬ್ರ್ಯಾಂಡ್ ಆಗಿದೆ.
ವರುಣ್ ಮತ್ತು ಗಜಲ್ ಸಂಸ್ಥೆಯು 25 ಲಕ್ಷ ರೂಪಾಯಿ ಹೂಡಿಕೆಯಿಂದ ಈಗ 9800 ಕೋಟಿ ರೂಪಾಯಿಗೆ ಬೆಳೆದಿದೆ. ಮಾಮಾ ಅರ್ಥ್ ಮೊದಲು ಪ್ರಾಥಮಿಕವಾಗಿ ಆನ್‌ಲೈನ್ ಮೂಲಕ ತನ್ನ ಮಾರುಕಟ್ಟೆಯನ್ನು ಬೆಳೆಸಿದ್ದು ಸದ್ಯ ಆಫ್‌ಲೈನ್ ಮೂಲಕವೂ ಜನರನ್ನು ಕೇಂದ್ರೀಕರಿಸುತ್ತಿದೆ. ಕಂಪನಿಯು ತನ್ನ ಸ್ವಂತ ಸಂಶೋಧನಾ ಕೇಂದ್ರದಲ್ಲಿ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಇದನ್ನು ಅಮೇರಿಕದ ಏಜೆನ್ಸಿ ಇದರ ಮೇಲ್ವಿಚಾರಣೆ ಮಾಡುತ್ತಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications