ಚಂದನವನ, ಸ್ಯಾಂಡಲ್‌ವುಡ್ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಕನ್ನಡ ಸಿನಿಮಾ ಇಂಡಸ್ಟ್ರೀಯು ಕಳೆದ ಕೆಲವು ವರ್ಷಗಳಿಂದ ಹೊಸ ಆಯಾಮವನ್ನೇ ಹುಟ್ಟುಹಾಕಿದೆ. ಕಳೆದ ಕೆಲವು ವರ್ಷಗಳ ಬೆಳವಣಿಗೆಯನ್ನು ನಾವು ನೋಡಿದಾಗ, ಸ್ಯಾಂಡಲ್‌ವುಡ್‌ನಲ್ಲಿ ಹೊಸದಾದ ಅಲೆಯೊಂದು ಸೃಷ್ಟಿಯಾಗಿದೆ. ಪ್ರಸ್ತುತ ಪ್ರೇಕ್ಷಕರು ಹೊಸ ಕಾನ್ಸೆಪ್ಟ್ ಅನ್ನು ಒಪ್ಪಿಕೊಳ್ಳುತ್ತಾರೆ, ಈ ನಿಟ್ಟಿನಲ್ಲಿ ಹೊಸ ವಿಚಾರಗಳನ್ನು ಇಟ್ಟುಕೊಂಡು ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳಾದ ಕೆಜಿಪಿ ಚಾಪ್ಟರ್ 2, ಕಾಂತಾರಾ, ವಿಕ್ರಾಂತ್ ರೋಣ, 777 ಚಾರ್ಲಿ ವಿಶ್ವದಾದ್ಯಂತ ಸ್ಯಾಂಡಲ್‌ವುಡ್ ಅನ್ನು ಸಿನಿಮಾ ಪ್ರಿಯರು ಹಾಡಿಹೊಗಳುವಂತೆ ಮಾಡಿದೆ. ಈ ನಡುವೆ ಈ ಜನಪ್ರಿಯ ಸಿನಿಮಾಗಳಲ್ಲಿರುವ ನಟರುಗಳು ಅಧಿಕ ಸಂಭಾವಣೆಯನ್ನು ಪಡೆಯುವುದು ಹೊಸ ವಿಚಾರವೇನಲ್ಲ. 2023ರಲ್ಲಿ ಅಧಿಕ ಸಂಭಾವನೆ ಪಡೆದ ಸ್ಯಾಂಡಲ್‌ವುಡ್ ನಟರುಗಳ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ....

ಟಾಪ್ 10: ಧ್ರುವ ಸರ್ಜಾ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚೆಗೆ ಪೊಗರು ಚಿತ್ರದ ಮೂಲಕ ಹಿಟ್ ಆಗಿದ್ದಾರೆ. 34 ವರ್ಷ ವಯಸ್ಸಿನ ಧ್ರುವ ಸರ್ಜಾ ಪ್ರಸ್ತುತ ಮಾರ್ಟಿನ್ ಮತ್ತು ಕೆಡಿ: ದಿ ಡೆವಿಲ್ ಎರಡೂ ಪ್ಯಾನ್-ಇಂಡಿಯನ್ ಚಲನಚಿತ್ರಗಳ ಚಿತ್ರೀಕರಣದಲ್ಲಿದ್ದಾರೆ. 2023 ರಲ್ಲಿ ಬಿಡುಗಡೆಯಾಗಲಿದೆ. ನಟ ಪ್ರತಿ ಚಲನಚಿತ್ರಕ್ಕೆ ಸುಮಾರು 3-5 ಕೋಟಿ ರೂಪಾಯಿ ಸಂಭಾವಣೆಯನ್ನು ಪಡೆಯುತ್ತಾರೆ.
ಟಾಪ್ 9: ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಮುಂಗಾರು ಮಳೆ, ಚೆಲುವಿನ ಚಿತ್ತಾರ, ಗಾಳಿಪಟ ಮೂಲಕ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಗಾಳಿಪಟ 2 ಸಿನಿಮಾದಲ್ಲಿ ಗಣೇಶ್ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಗಣೇಶ್ ದಿ ಸ್ಟೋರಿ ಆಫ್ ರಾಯಗಢ, ಬಾಣದಾರಿಯಲ್ಲಿ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಇದು 2023ರಲ್ಲೇ ತೆರೆಕಾಣಲಿದೆ. ಮಾಹಿತಿ ಪ್ರಕಾರ ಗಣೇಶ್ ಪ್ರತಿ ಸಿನಿಮಾಕ್ಕೆ 3-6 ಕೋಟಿ ರೂಪಾಯಿ ಪಡೆಯುತ್ತಾರೆ.
ಟಾಪ್ 8: ಶ್ರೀ ಮುರಳಿ
ಕೆಜಿಎಫ್‌ನ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಮೊದಲ ಚಿತ್ರ ಉಗ್ರಂ ಅನ್ನು ಶ್ರೀ ಮುರಳಿ ಜೊತೆ ನಿರ್ದೇಶನ ಮಾಡಿ ಹೆಸರುವಾಸಿಯಾಗಿದ್ದಾರೆ. ಈ ಸಿನಿಮಾವು ಹಿಟ್ ಆಗಿದ್ದು, ಶ್ರೀ ಮುರಳಿ ವೃತ್ತಿಜೀವನಕ್ಕೆ ಈ ಸಿನಿಮಾ ದೊಡ್ಡ ತಿರುವು ನೀಡಿದೆ. ನಟ ಈಗ 2023 ರಲ್ಲಿ 2 ದೊಡ್ಡ ಚಲನಚಿತ್ರಗಳಾದ ಬಗೀರಾ ಮತ್ತು ನಂದೆ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಪ್ರತಿ ಚಿತ್ರಕ್ಕೆ ಸುಮಾರು 4-6 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿಯಿದೆ.
ಟಾಪ್ 7: ಶಿವರಾಜ್‌ಕುಮಾರ್
ಕರ್ನಾಟಕ ರಾಜ್ಯದಲ್ಲಿ ಶಿವಣ್ಣ ಎಂದೇ ಕರೆಯಲಾಗುವ ಶಿವರಾಜ್‌ಕುಮಾರ್‌ಗೆ ಪ್ರಬಲವಾದ ಅಭಿಮಾನಿಗಳಿದ್ದಾರೆ. ಪ್ರತಿ ಚಿತ್ರಕ್ಕೆ 6 ಕೋಟಿ ರೂಪಾಯಿಯನ್ನು ಶಿವರಾಜ್‌ಕುಮಾರ್ ಸಂಭಾವನೆಯಾಗಿ ಪಡೆಯುತ್ತಾರೆ. ಮೂರು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನ ಹೊಂದಿರುವ ಶಿವಣ್ಣ 120 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಕಬ್ಜಾ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಬ್ಜಾ 2 ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಟಾಪ್ 6: ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಯಶಸ್ವಿ ನಟ ಮತ್ತು ನಿರ್ಮಾಪಕರಾಗಿದ್ದಾರೆ. ರಕ್ಷಿತ್ ಪ್ರತಿ ಸಿನಿಮಾಕ್ಕೆ ಅಂದಾಜು 5 ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಕಿರಿಕ್ ಪಾರ್ಟಿ ಮತ್ತು ಉಳಿದವರು ಕಂಡಂತೆ ಸಿನಿಮಾದಲ್ಲಿ ತಮ್ಮ ನಟನೆಯಿಂದ ಮೋಡಿ ಮೂಡಿಸಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ, ರಿಚರ್ಡ್ ಆಂಟನಿ ಮತ್ತು ಕಿರಿಕ್ ಪಾರ್ಟಿ 2 ಮುಂದೆ ತೆರೆಕಾಣುವ ನಿರೀಕ್ಷೆಯಿದೆ.
ಟಾಪ್ 5: ರಿಷಬ್ ಶೆಟ್ಟಿ
ಕಳೆದ ವರ್ಷ ಕನ್ನಡದಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದ ಕಾಂತಾರ ಸಿನಿಮಾದಲ್ಲಿ ನಟಿಸಿದ, ಅದರ ನಿರ್ದೇಶನವನ್ನು ಮಾಡಿದ ರಿಷಬ್ ಶೆಟ್ಟಿ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದಾರೆ. ಕಾಂತಾರ ಚಿತ್ರಕ್ಕೆ ರಿಷಬ್ ಶೆಟ್ಟಿ 10 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ. ಇನ್ನು ಕಾಂತಾರದ ಬಳಿಕ ರಿಷಬ್ ಶೆಟ್ಟಿ ತನ್ನ ಸಂಭಾವನೆಯನ್ನು ಅಧಿಕಗೊಳಿಸಿದ್ದು, ಕಾಂತಾರ 2, ಕಿರಿಕ್ ಪಾರ್ಟ್ 2ಗೆ 10-15 ಕೋಟಿ ರೂಪಾಯಿ ಪಡೆಯಲಿದ್ದಾರೆ.
ಟಾಪ್ 4: ಉಪೇಂದ್ರ
ರಿಯಲ್ ಸ್ಟಾರ್ ಎಂದು ಕರೆಯಲ್ಪಡುವ ಉಪೇಂದ್ರ ಯಶಸ್ವಿ ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನೆ, ನಿರ್ದೇಶಣದ ಮೂಲಕ ಹೆಸರುವಾಸಿಯಾಗಿದ್ದಾರೆ. ಪ್ರತಿ ಸಿನಿಮಾಕ್ಕೆ ಉಪೇಂದ್ರ 10ರಿಂದ 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ವರದಿ ಹೇಳುತ್ತದೆ. ಇತ್ತೀಚೆಗೆ ಕಬ್ಜಾದಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ 3: ಕಿಚ್ಚ ಸುದೀಪ್
ಕನ್ನಡ ಚಿತ್ರರಂಗದ ಬಾದ್‌ಶಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೇ ವಿಕ್ರಾಂತ್ ರೋಣ ಮತ್ತು ಕಬ್ಜಾ ಚಿತ್ರಗಳನ್ನು ಮಾಡಿದ್ದ ಸುದೀಪ್ 2023ಕ್ಕೆ ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಪ್ರತಿ ಸಿನಿಮಾಗೆ ಸುಮಾರು 20-25 ಕೋಟಿ ರೂಪಾಯಿಯನ್ನು ಸುದೀಪ್ ಪಡೆಯುತ್ತಾರೆ.
ಟಾಪ್ 2: ದರ್ಶನ್
ನಟ ದರ್ಶನ್‌ರನ್ನು ಡಿ-ಬಾಸ್ ಎಂದೇ ಕರೆಯಲಾಗುತ್ತದೆ. ಇತ್ತೀಚೆಗೆ ಕ್ರಾಂತಿ ಸಿನಿಮಾದಲ್ಲಿ ಕಾಣಿಸಿಕೊಂಡ ನಟ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಪ್ರತಿ ಚಿತ್ರಕ್ಕೆ 22 ರಿಂದ 26 ಕೋಟಿ ರೂಪಾಯಿಯನ್ನು ಪಡೆಯುತ್ತಾರೆ. ಶ್ರೀಮಂತ ನಟರಲ್ಲಿ ಕೂಡಾ ಒಬ್ಬರಾಗಿದ್ದಾರೆ. ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರಾಂತಿ ಚಿತ್ರದ ಯಶಸ್ಸಿನ ನಂತರ ದರ್ಶನ್ ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ 1: ಯಶ್
ಯಶ್ ಬಗ್ಗೆ ನಾವು ಹೇಳಬೇಕಾಗಿಲ್ಲ. ಕೆಜಿಎಫ್ ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲೇ ಅಧಿಕ ಸಂಭಾವನೆಯನ್ನು ಪಡೆಯುವ ನಟ ಆಗಿದ್ದಾರೆ. ತನ್ನ ಸಿನಿಮಾ ಕನ್ನಡ ಹಾಗೂ ಇತರೆ ಇಂಡಸ್ಟ್ರೀಯಲ್ಲಿ ಹೆಸರುವಾಸಿಯಾದ ಬಳಿಕ ಪ್ರತಿ ಸಿನಿಮಾಕ್ಕೆ ಯಶ್ 50ರಿಂದ 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಯಶ್ ಪ್ರಸ್ತುತ ಯಾವುದೇ ಸಿನಿಮಾಕ್ಕೂ ಸಹಿ ಮಾಡಿಲ್ಲ. ಆದರೆ ತೆಲುಗು ಸಿನಿಮಾದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿದೆ.


Click it and Unblock the Notifications