ಭಾರತದ ಸಿನಿಮಾ ಇಂಡಸ್ಟ್ರೀಯನ್ನು ಜಾಗತಿಕವಾಗಿ ನೋಡುವಾಗ ಬಾಲಿವುಡ್‌ಗೆ ಅಧಿಕ ಮನ್ನಣೆಯನ್ನು ನೀಡಲಾಗುತ್ತದೆ. ಲವ್ ಸ್ಟೋರಿಗಳಿಂದ ಹಿಡಿದು ಆಕ್ಷನ್ ಡ್ರಿಲ್ಲರ್ ಮೂವಿವರೆಗೂ ಬಾಲಿವುಡ್ ಜನಪ್ರಿಯತೆಯನ್ನು ಗಳಿಸಿದೆ. ಆದರೆ ನಮ್ಮ ಕನ್ನಡ ಇಂಡಸ್ಟ್ರೀಯು ಕೂಡಾ ಕಡಿಮೆ ಏನಿಲ್ಲ. ಹಲವಾರು ಪ್ಯಾನ್ ಇಂಡಿಯಾ ಸಿನಿಮಾಗಳು ಚಂದನವನದಲ್ಲಿ ತೆರೆಕಾಣುತ್ತಿದೆ.
ಒಂದು ಸಿನಿಮಾದಲ್ಲಿ ನಟಿಸುವ ಎಲ್ಲ ಕಲಾವಿದರಿಗೆ ಸಂಭಾವನೆಯನ್ನು ನೀಡಲಾಗುತ್ತದೆ. ಆದರೆ ಸಾಮಾನ್ಯವಾಗಿ ಸಿನಿಮಾದ ನಟ ನಟಿಯರ ಸಂಭಾವನೆ ಅಧಿಕವಾಗಿರುತ್ತದೆ. ಇನ್ನು ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೆ ಮತ್ತೊಂದು ಸಿನಿಮಾಕ್ಕೆ ಸಂಭಾವನೆಯನ್ನು ಏರಿಸಿಕೊಳ್ಳುವ ನಟರುಗಳು ಕೂಡಾ ಇದ್ದಾರೆ. ಈ ಲೇಖನದಲ್ಲಿ ನಾವು ಬಾಲಿವುಡ್‌ನಲ್ಲಿ ಅಧಿಕ ಸಂಭಾವನೆಯನ್ನು ಪಡೆಯುವ ಟಾಪ್ 15 ನಟರುಗಳ ಬಗ್ಗೆ ವಿವರವನ್ನು ನೀಡಿದ್ದೇವೆ. ಮುಂದೆ ಓದಿ...

ಅಧಿಕ ಸಂಭಾವನೆ ಪಡೆಯುವ ಟಾಪ್ 15 ನಟರುಗಳಿವರು
1. ಶಾರುಖ್ ಖಾನ್: ಪ್ರತಿ ಸಿನಿಮಾಕ್ಕೆ 100 ರಿಂದ 200 ಕೋಟಿ ರೂಪಾಯಿ
2. ಸಲ್ಮಾನ್ ಖಾನ್: ಪ್ರತಿ ಸಿನಿಮಾಕ್ಕೆ 100 ರಿಂದ 150 ಕೋಟಿ ರೂಪಾಯಿ
3. ಅಮಿರ್ ಖಾನ್: ಪ್ರತಿ ಸಿನಿಮಾಕ್ಕೆ 100 ರಿಂದ 150 ಕೋಟಿ ರೂಪಾಯಿ
4. ಅಕ್ಷಯ್ ಕಪೂರ್: ಪ್ರತಿ ಸಿನಿಮಾಕ್ಕೆ 70 ರಿಂದ 145 ಕೋಟಿ ರೂಪಾಯಿ
5. ಅಜಯ್ ದೇವ್‌ಗನ್: ಪ್ರತಿ ಸಿನಿಮಾ/ ಸಿರೀಸ್‌ಗೆ 60 ರಿಂದ 125 ಕೋಟಿ ರೂಪಾಯಿ
6. ಹೃತಿಕ್ ರೋಷನ್: ಪ್ರತಿ ಸಿನಿಮಾಕ್ಕೆ 80 ರಿಂದ 100 ಕೋಟಿ ರೂಪಾಯಿ
7. ರಣ್‌ಬೀರ್ ಕಪೂರ್: ಪ್ರತಿ ಸಿನಿಮಾಕ್ಕೆ 60 ರಿಂದ 75 ಕೋಟಿ ರೂಪಾಯಿ
8. ರಣ್‌ವೀರ್ ಸಿಂಗ್: ಪ್ರತಿ ಸಿನಿಮಾಕ್ಕೆ 30 ರಿಂದ 50 ಕೋಟಿ ರೂಪಾಯಿ
9. ಶಹೀದ್ ಕಪೂರ್: ಪ್ರತಿ ಸಿನಿಮಾ/ ಸಿರೀಸ್‌ಗೆ 30 ರಿಂದ 40 ಕೋಟಿ ರೂಪಾಯಿ
10. ವರುಣ್ ಧವನ್: ಪ್ರತಿ ಸಿನಿಮಾಕ್ಕೆ 30 ರಿಂದ 35 ಕೋಟಿ ರೂಪಾಯಿ
11. ಕಾರ್ತಿಕ್ ಆರ್ಯನ್: ಪ್ರತಿ ಸಿನಿಮಾಕ್ಕೆ 25 ರಿಂದ 35 ಕೋಟಿ ರೂಪಾಯಿ
12. ಟೈಗರ್ ಶ್ರಾಫ್: ಪ್ರತಿ ಸಿನಿಮಾಕ್ಕೆ 25 ರಿಂದ 35 ಕೋಟಿ ರೂಪಾಯಿ
13. ಸೈಫ್ ಅಲಿ ಖಾನ್: ಪ್ರತಿ ಸಿನಿಮಾ/ ಸಿರೀಸ್‌ಗೆ 11 ರಿಂದ 30 ಕೋಟಿ ರೂಪಾಯಿ
14. ಆಯುಷ್ಮಾನ್ ಖುರಾನಾ: ಪ್ರತಿ ಸಿನಿಮಾಕ್ಕೆ 15 ರಿಂದ 25 ಕೋಟಿ ರೂಪಾಯಿ
15. ಅಮಿತಾಬ್ ಬಚ್ಚನ್: ಪ್ರತಿ ಸಿನಿಮಾಕ್ಕೆ 10 ರಿಂದ 30 ಕೋಟಿ ರೂಪಾಯಿ
ಟಾಪ್ 3 ನಟರುಗಳ ಬಗ್ಗೆ ತಿಳಿಯಿರಿ
ಶಾರುಖ್ ಖಾನ್: ಬಾಲಿವುಡ್‌ನ ಕಿಂಗ್ ಎಂದು ಕೂಡಾ ಹೆಸರುವಾಸಿಯಾಗಿರುವ ಶಾರುಖ್ ಖಾನ್ ಮೂರು ದಶಕಗಳಿಂದ ಹಲವಾರು ಐಕಾನಿಕ್ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದಾರೆ. ಆರಂಭದಲ್ಲಿ ಪ್ರತಿ ಸಿನಿಮಾಕ್ಕೆ 1-2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಶಾರುಖ್ ಪ್ರಸ್ತುತ ಸಿನಿಮಾದ ಒಟ್ಟು ಲಾಭದ ಶೇಕಡ 60ರಷ್ಟನ್ನು ಪಡೆಯುತ್ತಾರೆ. ಇತ್ತೀಚಿನ ಪಠಾನ್ ಸಿನಿಮಾಕ್ಕೆ 120 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ.
ಅಮಿರ್ ಖಾನ್: 2000ರಿಂದ ಅಮಿರ್ ಖಾನ್ ತನ್ನ ಸಿನಿಮಾದಲ್ಲಿ ಹಿಟ್ ಕಾಣುತ್ತಿದ್ದು, ಪ್ರಸ್ತುತ ಅಧಿಕ ಸಂಭಾವನೆ ಪಡೆಯುವ ನಟರಾಗಿದ್ದಾರೆ. ಆರಂಭದಲ್ಲಿ ಪ್ರತಿ ಸಿನಿಮಾಕ್ಕೆ 10-12 ಕೋಟಿ ರೂಪಾಯಿ ಪಡೆಯುತ್ತಿದ್ದ ಅಮಿರ್ ಖಾನ್, ಪ್ರಸ್ತುತ 100 ರಿಂದ 150 ಕೋಟಿ ರೂಪಾಯಿ ಪಡೆಯುತ್ತಾರೆ, ಹಾಗೆಯೇ ಸಿನಿಮಾದ ಒಟ್ಟು ಲಾಭದ ಶೇಕಡ 70ರಷ್ಟು ಮೊತ್ತವನ್ನು ಪಡೆಯುತ್ತಾರೆ.
ಸಲ್ಮಾನ್ ಖಾನ್: 2010ರಿಂದ ತನ್ನ ಸಿನಿಮಾ ಮೂಲಕ ಮಿಂಚುತ್ತಾ ಬಂದಿರುವ ಸಲ್ಮಾನ್ ಖಾನ್ ಪ್ರಸ್ತುತ ಅತೀ ಅಧಿಕ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಆರಂಭದಲ್ಲಿ ಪ್ರತಿ ಸಿನಿಮಾಕ್ಕೆ 50ರಿಂದ 60 ಕೋಟಿ ರೂಪಾಯಿ ಪಡೆಯುತ್ತಿದ್ದ ಸಲ್ಮಾನ್ ಪ್ರಸ್ತುತ 100 ಕೋಟಿ ರೂಪಾಯಿಗೂ ಅಧಿಕ ಪಡೆಯುತ್ತಾರೆ, ಹಾಗೆಯೇ ಸಿನಿಮಾದ ಲಾಭದ ಶೇಕಡ 60ರಿಂದ 70ರಷ್ಟು ಪಡೆಯುತ್ತಾರೆ.


Click it and Unblock the Notifications