GROHE-HURUN India: ಭಾರತದ ಟಾಪ್ 3 ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಪತ್ತೆಷ್ಟು?

ಗ್ರೋಹೆ-ಹುರುನ್ ಇಂಡಿಯಾ ರಿಯಲ್ ಎಸ್ಟೇಟ್ ಶ್ರೀಮಂತ ಪಟ್ಟಿಯಲ್ಲಿ, ಭಾರತದ ಅತ್ಯಂತ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿ, ವಾಣಿಜ್ಯೋದ್ಯಮಿ ಮತ್ತು ಡಿಎಲ್ಎಫ್‌ ಅಧ್ಯಕ್ಷರಾಗಿರುವ, ರಾಜೀವ್ ಸಿಂಗ್ ಅವರು 59,030 ಕೋಟಿ ರೂಪಾಯಿ ಸಂಪತ್ತಿನ ಒಡೆಯರಾಗಿದ್ದು ಟಾಪ್ ವನ್ ಸ್ಥಾನದಲ್ಲಿದ್ದಾರೆ.

ಇನ್ನು ಮುಂಬೈ ಮೂಲದ ಲೋಧಾ ಗ್ರೂಪ್ ಮ್ಯಾಕ್ರೋಟೆಕ್ ಡೆವಲಪರ್ಸ್‌ನ ಮಂಗಲ್ ಪ್ರಭಾತ್ ಲೋಧಾ ಫ್ಯಾಮಿಲಿ 42,270 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಆರ್‌ಎಂಝಡ್ ಕಾರ್ಪ್‌ನ ಅರ್ಜುನ್ ಮೆಂಡಾ ಮತ್ತು ಕುಟುಂಬವು 37,000 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದೆ.

 ಹುರುನ್ ಇಂಡಿಯಾ: ಟಾಪ್ 3 ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಪತ್ತೆಷ್ಟು?

"ಗ್ರೋಹೆ-ಹುರುನ್ ಇಂಡಿಯಾ ರಿಯಲ್ ಎಸ್ಟೇಟ್ ಶ್ರೀಮಂತ ಪಟ್ಟಿಯ ಟಾಪ್ 10 ರ ಎಂಟ್ರಿ ಪಾಯಿಂಟ್ ಬದಲಾಗಿದ್ದು, 2017ರಲ್ಲಿ 3,350 ಕೋಟಿ ರೂಪಾಯಿ ಇದ್ದು, ಇಂದು ಅದು 15,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ, ಟಾಪ್ 50 ರಲ್ಲಿ ಸ್ಥಾನ ಪಡೆಯುವ ಮಿತಿಯು 2017 ರಲ್ಲಿ 660 ಕೋಟಿ ರೂಪಾಯಿನಿಂದ ಪ್ರಸ್ತುತ 1,300 ಕೋಟಿ ರೂಪಾಯಿಗೆ ಏರಿಕೆಯಾಗಿದೆ," ಎಂದು ಹುರುನ್ ಇಂಡಿಯಾ ಎಂಡಿ ಅನಸ್ ರೆಹಮಾನ್ ಜುನೈದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಟಾಪ್ ವನ್ ಸ್ಥಾನದಲ್ಲಿರುವ ರಾಜೀವ್ ಸಿಂಗ್ ಯಾರು?

"ರಿಯಲ್ ಎಸ್ಟೇಟ್ ಕಿಂಗ್" ಎಂದೇ ಖ್ಯಾತರಾದ ಕುಶಾಲ್ ಪಾಲ್ ಸಿಂಗ್ ಅವರ ಪುತ್ರ ಮತ್ತು ಅವರ ಏಕೈಕ ಉತ್ತರಾಧಿಕಾರಿಯಾಗಿದ್ದಾರೆ. ತಮ್ಮ 90ನೇ ವಯಸ್ಸಿನಲ್ಲಿ ಕುಶಾಲ್ ಪಾಲ್, ಅಂದರೆ 2020 ರಲ್ಲಿ ರಾಜೀವ್ ಸಿಂಗ್ ಅವರಿಗೆ ಡಿಎಲ್ಎಫ್‌ ನ ಉಸ್ತುವಾರಿ ನೀಡಿ ನಿವೃತ್ತರಾದರು.

ರಾಜೀವ್ ಸಿಂಗ್ ಅವರು ಡಿಎಲ್ಎಫ್ ಗೆ ಸೇರಿದ ನಂತರ ಕಂಪನಿಯ ಬಿಸಿನೆಸ್ ,ರಿಟೇಲ್, ಹಾಸ್ಪಿಟಾಲಿಟಿ ಹಾಗೂ ಇನ್ಶೂರೆನ್ಸ್ ಕ್ಷೇತ್ರಗಳಿಗೂ ಕಾರ್ಯಾಚರಣೆಯನ್ನು ವಿಸ್ತರಿಸಿದರು. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡಿಎಲ್ಎಫ್ ಒಮ್ಮೆ ಪ್ರಾಯೋಜಕವನ್ನು ವಹಿಸಿತ್ತು.

2007 ರಲ್ಲಿ 1.55 ಕೋಟಿ ರೂಪಾಯಿಗಳಿಂದ ಡಿಎಲ್‌ಎಫ್‌ನ ವಾರ್ಷಿಕ ವ್ಯವಹಾರವನ್ನು 2019 ರಲ್ಲಿ 2,900 ಕೋಟಿ ರೂಪಾಯಿ ಹೆಚ್ಚಿಸಿದ ಕೀರ್ತಿ ರಾಜೀವ್ ಸಿಂಗ್ ಅವರಿಗೆ ಸಲ್ಲುತ್ತದೆ. 2021-22ರಲ್ಲಿ ಡಿಎಲ್ಎಫ್ 6,138 ಕೋಟಿ ಆದಾಯವನ್ನು ದಾಖಲಿಸಿದ್ದು, ರಿಯಾಲ್ಟಿ ವಲಯದ ಒಟ್ಟು ಆದಾಯವು 1,513 ಕೋಟಿ ರೂಪಾಯಿ ಆಗಿದೆ. ರಾಜೀವ್ ಸಿಂಗ್ ಅವರ ಒಟ್ಟು ಕಂಪೆನ್ಸಷನ್ 2021-22ರಲ್ಲಿ 15.49 ಕೋಟಿ ರೂಪಾಯಿ ಆಗಿದ್ದರೆ, 2020-21ರಲ್ಲಿ ಅದು 3.2 ಕೋಟಿ ರೂಪಾಯಿ ಆಗಿತ್ತು.

ಟಾಪ್ 2: ಮಂಗಲ್ ಪ್ರಭಾತ್ ಲೋಧಾ ಮತ್ತು ಕುಟುಂಬ

42,270 ಕೋಟಿ ರೂಪಾಯಿ ಸಂಪತ್ತಿನೊಂದಿಗೆ, 67 ವರ್ಷದ ಮಂಗಲ್ ಪ್ರಭಾತ್ ಲೋಧಾ ಮತ್ತು ಅವರ ಕುಟುಂಬ ಮ್ಯಾಕ್ರೋಟೆಕ್ ಡೆವಲಪರ್‌ಗಳು ಗ್ರೋಹೆ-ಹುರುನ್ ಇಂಡಿಯಾ ರಿಯಲ್ ಎಸ್ಟೇಟ್ ಶ್ರೀಮಂತರ ಪಟ್ಟಿ 2023 ರಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಮಂಗಲ್ ಪ್ರಭಾತ್ ಲೋಧಾ ಮ್ಯಾಕ್ರೋಟೆಕ್ ಡೆವಲಪರ್‌ಗಳ ಸ್ಥಾಪಕರಾಗಿದ್ದಾರೆ. 2023 ರ ಆರ್ಥಿಕ ವರ್ಷದಲ್ಲಿ ಮ್ಯಾಕ್ರೋಟೆಕ್ ಡೆವಲಪರ್‌ ತನ್ನ ನಿವ್ವಳ ಸಾಲದ ಪ್ರಮಾಣವನ್ನು 40 ರಷ್ಟು ಕಡಿಮೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ನಿವ್ವಳ ಲಾಭದಲ್ಲಿ ನಷ್ಟದ ಪ್ರಮಾಣವನ್ನು ಶೇಕಡ 60 ಕಡಿಮೆಗೊಳಿಸಲು ಅವಕಾಶ ಕಲ್ಪಿಸಿದೆ.

ಟಾಪ್ 3: ಅರ್ಜುನ್ ಮೆಂಡಾ ಮತ್ತು ಫ್ಯಾಮಿಲಿ

RMZ ಕಾರ್ಪ್ ನ ಅರ್ಜುನ್ ಮೆಂಡಾ ಮತ್ತು ಫ್ಯಾಮಿಲಿ 37,000 ಕೋಟಿ ರೂಪಾಯಿ ಸಂಪತ್ತನ್ನು ಹೊಂದಿದ್ದು ಈ ಮೂಲಕ ಹುರುನ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಅರ್ಜುನ್ ಮೆಂಡಾ ಅವರು 1980 ರಲ್ಲಿಐಐಟಿ ಖರಗ್‌ಪುರದಿಂದ ತಮ್ಮ ಮಾಸ್ಟರ್ ಆಫ್ ಟೆಕ್ನಾಲಜಿ ಪದವಿ ಪಡೆದ ನಂತರ ತಮ್ಮ ರಿಯಲ್ ಎಸ್ಟೇಟ್ ಪ್ರಯಾಣವನ್ನು ಪ್ರಾರಂಭಿಸಿದರು.

ಕೆಲಸ ಬಗೆಗಿನ ಸಮರ್ಪಣೆಯಿಂದ ಇಂದು RMZ ಕಾರ್ಪ್ ಎಂಬ ರಿಯಲ್ ಎಸ್ಟೇಟ್ ಸಾಮ್ರಾಜ್ಯದ ಸ್ಥಾಪನೆಗೆ ಕಾರಣವಾಗಿದೆ. RMZ ಕಾರ್ಪ್ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ಕೆ ರಹೇಜಾ ಗ್ರೂಪ್ ನ ಚಂದ್ರು ರಹೇಜಾ ಆಂಡ್ ಫ್ಯಾಮಿಲಿ ಮತ್ತು ಹಿರಾನಂದನಿ ಕಂಮ್ಯುನಿಟಿಸ್ ನ ನಿರಂಜನ್ ಹಿರಾನಂದನಿ ಕ್ರಮವಾಗಿ ನಂತರ ಸ್ಥಾನವನ್ನು ಪಡೆದುಕೊಂಡಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+