Shark Tank India: ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 2ರ ಟಾಪ್ 5 ದುಬಾರಿ ಡೀಲ್‌ಗಳ ಬಗ್ಗೆ ತಿಳಿಯಿರಿ

ಶಾರ್ಕ್ ಟ್ಯಾಂಕ್ ಇಂಡಿಯಾದ 3ನೇ ಸೀಸನ್ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಶಾರ್ಕ್ ಟ್ಯಾಂಕ್ ಇಂಡಿಯಾದ ಸೀಸನ್ ಎರಡರಲ್ಲಿ ಜಡ್ಜ್‌ಗಳು ಒಟ್ಟಾಗಿ ಸುಮಾರು 80 ಕೋಟಿ ರೂಪಾಯಿ ಹೂಡಿಕೆಯನ್ನು ಮಾಡಿದ್ದಾರೆ. ಆದರೆ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಸೀಸನ್ 3 ಅತೀ ದೊಡ್ಡ ಹೂಡಿಕೆಯ ಸೀಸನ್ ಆಗಿರಲಿದೆ.

ಸೀಸನ್‌ 2ರಲ್ಲಿ ಸುಮಾರು 50 ಎಪಿಸೋಡ್‌ಗಳು ನಡೆದಿದೆ. ಈ ಶೋನಲ್ಲಿ ಒಟ್ಟಾಗಿ 5 ಜಡ್ಜ್‌ಗಳು ಇದ್ದಾರೆ. ಲೆನ್ಸ್‌ಕಾರ್ಟ್ ಸಿಇಒ ಪಿಯೂಷ್ ಬನ್ಸಾಲ್, ಶುಗರ್ ಕಾಸ್ಮೆಟಿಕ್‌ ಸಿಇಒ ವಿನೀತ್ ಸಿಂಗ್, ಎಂಕ್ಯೂರ್ ಫಾರ್ಮಾದ ಮುಖ್ಯಸ್ಥೆ ನಮಿತಾ ಥಾಪರ್, ಅನುಪಮ್ ಮಿತ್ತಲ್, ಅಮಿತ್‌ ಜೈನ್, ಅಮಾನ್ ಗುಪ್ತಾ ಇದ್ದಾರೆ.

 ಶಾರ್ಕ್ ಟ್ಯಾಂಕ್ ಇಂಡಿಯಾದ ಟಾಪ್ 5 ದುಬಾರಿ ಡೀಲ್‌ಗಳಿವು

ಶಾರ್ಕ್ ಟ್ಯಾಂಕ್ ಇಂಡಿಯಾದ ಸೀಸನ್‌ 2ರಲ್ಲಿ ಎಂಕ್ಯೂರ್ ಫಾರ್ಮಾದ ಮುಖ್ಯಸ್ಥೆ ನಮಿತಾ ಥಾಪರ್ ಸುಮಾರು 19.04 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಅದಾದ ಬಳಿಕ ಬೋಟ್ ಸಂಸ್ಥಾಪಕ ಅಮಾನ್ ಗುಪ್ತಾ 17.84 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಲೆನ್ಸ್‌ಕಾರ್ಟ್ ಸಿಇಒ ಪಿಯೂಷ್ ಬನ್ಸಾಲ್ 16.16 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.

ಉದ್ಯಮಿ ಅನುಪಮ್ ಮಿತ್ತಲ್ 9.77 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಶುಗರ್ ಕಾಸ್ಮೆಟಿಕ್‌ ಸಿಇಒ ವಿನೀತ್ ಸಿಂಗ್ ಸುಮಾರು 9.69 ಕೋಟಿ ರೂಪಾಯಿ ಮೊತ್ತವನ್ನು ಹೂಡಿಕೆ ಮಾಡಿದರೆ, ಖರ್‌ದೇಕೋ ಸಹ ಸಂಸ್ಥಾಪಕ ಅಮಿತ್‌ ಜೈನ್ ಸುಮಾರು 8.66 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.

ಶಾರ್ಕ್ ಟ್ಯಾಂಕ್ ಇಂಡಿಯಾದ ಟಾಪ್ 5 ದುಬಾರಿ ಡೀಲ್‌ಗಳು

1: ಸ್ಟೇಜ್- ವರ್ನಾಕ್ಯುಲರ್ ಒಟಿಟಿ ಪ್ಲಾಟ್‌ಫಾರ್ಮ್
ಕೇಳಿದ್ದು: ಶೇಕಡ 1ರಷ್ಟು ಈಕ್ವಿಟಿಗೆ 3 ಕೋಟಿ ರೂಪಾಯಿ
ಡೀಲ್: ಶೇಕಡ 0.6ರಷ್ಟು ಈಕ್ವಿಟಿಗೆ 1.5 ಕೋಟಿ ರೂಪಾಯಿ, ಶೇಕಡ 12ರಷ್ಟು ಈಕ್ವಿಟಿಗೆ 1.5 ಕೋಟಿ ರೂಪಾಯಿ
250 ಕೋಟಿ ರೂಪಾಯಿ ಮೌಲ್ಯ
ಹೂಡಿಕೆ ಮಾಡಿದವರು: ನಮಿತಾ ಥಾಪರ್, ಅಮನ್ ಗುಪ್ತಾ, ಪಿಯೂಷ್ ಬನ್ಸಾಲ್

2: ನಿಯೋಮೋಷನ್ - ಮೋಟಾರೀಕೃತ ಗಾಲಿಕುರ್ಚಿ (Wheelchair)
ಕೇಳಿದ್ದು: ಶೇಕಡ 1ರಷ್ಟು ಈಕ್ವಿಟಿಗೆ 1 ಕೋಟಿ ರೂಪಾಯಿ
ಡೀಲ್: ಶೇಕಡ 1ರಷ್ಟು ಈಕ್ವಿಟಿಗೆ 1 ಕೋಟಿ ರೂಪಾಯಿ
100 ಕೋಟಿ ರೂಪಾಯಿ ಮೌಲ್ಯ
ಹೂಡಿಕೆ: ಪಿಯೂಷ್ ಬನ್ಸಾಲ್

3: ಸ್ನಿಚ್- ಮೆನ್ಸ್ ಫ್ಯಾಷನ್
ಕೇಳಿದ್ದು: ಶೇಕಡ 0.5ರಷ್ಟು ಈಕ್ವಿಟಿಗೆ 1.5 ಕೋಟಿ ರೂಪಾಯಿ
ಡೀಲ್: ಶೇಕಡ 1.5ರಷ್ಟು ಈಕ್ವಿಟಿಗೆ 1.5 ಕೋಟಿ ರೂಪಾಯಿ
100 ಕೋಟಿ ರೂಪಾಯಿ ಮೌಲ್ಯ
ಹೂಡಿಕೆ: ಎಲ್ಲ ಹೂಡಿಕೆದಾರರು

4: ಮೆಡ್ಯೂಲ್ಯಾನ್ಸ್- ಆಂಬುಲೆನ್ಸ್ ಸರ್ವಿಸಸ್
ಕೇಳಿದ್ದು: ಶೇಕಡ 1ರಷ್ಟು ಈಕ್ವಿಟಿಗೆ 2 ಕೋಟಿ ರೂಪಾಯಿ
ಡೀಲ್: ಶೇಕಡ 2ರಷ್ಟು ಈಕ್ವಿಟಿಗೆ 2 ಕೋಟಿ ರೂಪಾಯಿ
100 ಕೋಟಿ ರೂಪಾಯಿ ಮೌಲ್ಯ
ಹೂಡಿಕೆ: ನಮಿತಾ ಥಾಪರ್, ಅಮಾನ್ ಗುಪ್ತಾ, ಪಿಯೂಷ್ ಬನ್ಸಾಲ್

5: ಜಾಫ್ - ಸ್ಪೈಸ್ ಬ್ರ್ಯಾಂಡ್
ಕೇಳಿದ್ದು: ಶೇಕಡ 0.5ರಷ್ಟು ಈಕ್ವಿಟಿಗೆ 1 ಕೋಟಿ ರೂಪಾಯಿ
ಡೀಲ್: ಶೇಕಡ 1.25ರಷ್ಟು ಈಕ್ವಿಟಿಗೆ 1 ಕೋಟಿ ರೂಪಾಯಿ
80 ಕೋಟಿ ರೂಪಾಯಿ ಮೌಲ್ಯ
ಹೂಡಿಕೆ: ಪಿಯೂಷ್ ಬನ್ಸಾಲ್

ಸೀಮಿತ ಅವಧಿಯಲ್ಲಿಯೇ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡ ಶಾರ್ಕ್ ಟ್ಯಾಂಕ್ ಇಂಡಿಯಾದ ಸೀಸನ್ ಎರಡು ಜನವರಿ 2ರಂದು ಈ ಕಾರ್ಯಕ್ರಮ ಆರಂಭವಾಗಿದ್ದು ಈಗಾಗಲೇ ಅಂತ್ಯವಾಗಿದೆ, ಕೆಲವೇ ದಿನಗಳಲ್ಲಿ ಮೂರನೇ ಸೀಸನ್ ಆರಂಭವಾಗಲಿದೆ. ಈ ಹಿಂದಿನ 1ನೇ ಸೀಸನ್‌ನ್ಲಲಿ ಒಟ್ಟು 35 ಎಪಿಸೋಡ್‌ಗಳು ಇತ್ತು. ಇದೊಂದು ವ್ಯಾಪಾರ, ಉದ್ಯಮ ಸಂಬಂಧಿತ ಶೋ ಆದ ಕಾರಣ ಕೊಂಚ ಹೆಚ್ಚೇ ಕುತೂಹಲವನ್ನು ಜನರಲ್ಲಿ ಮೊದಲ ಸೀಸನ್‌ನಲ್ಲೇ ಮೂಡಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+