Indian CEO's: 2023ರಲ್ಲಿ ಅಧಿಕ ಪಾವತಿ ಪಡೆಯುವ ಟಾಪ್ 5 ಭಾರತೀಯ ಸಿಇಒಗಳಿವರು, ವೇತನ ಎಷ್ಟಿದೆ ತಿಳಿಯಿರಿ

ಕಠಿಣ ಪರಿಶ್ರಮ, ದೃಢತೆ ಮತ್ತು ದೂರದೃಷ್ಟಿಯು ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ಅತೀ ಮುಖ್ಯವಾಗುತ್ತದೆ. ಯಾವುದೇ ವ್ಯಕ್ತಿ ತಮ್ಮ ಜೀವನದಲ್ಲಿ ಸಫಲತೆ ಹೊಂದಬೇಕಾದರೆ ಅವರು, ಖಂಡಿತವಾಗಿಯೂ ಕಠಿಣವಾದ ಪರಿಶ್ರಮವನ್ನು ಪಡುವುದು ಮುಖ್ಯವಾಗುತ್ತದೆ. ಹೀಗೆಯೇ ಪರಿಶ್ರಮದ ಮೂಲಕ ಹಣಕಾಸು ವರ್ಷ 2023ರಲ್ಲಿನ ಈ ಐವರು ಅತೀ ಹೆಚ್ಚು ಸಂಭಾವನೆಯನ್ನು ಪಡೆಯುವ ಟಾಪ್ 5 ಸಿಇಒಗಳಾಗಿದ್ದಾರೆ.

ಫೋರ್ಬ್ಸ್ ಪ್ರಕಾರ, ಭಾರತವು 160 ರಷ್ಟಿರುವ ಬಿಲಿಯನೇರ್ ಜನಸಂಖ್ಯೆಯೊಂದಿಗೆ ವಿಶ್ವದ ಮೂರನೇ ಸ್ಥಾನದಲ್ಲಿದೆ. ಸ್ಟಾರ್ಟ್‌ಅಪ್‌ಗಳು ಮತ್ತು ಬಹುರಾಷ್ಟ್ರೀಯ ವ್ಯವಹಾರಗಳಿಗೆ ಮುಖ್ಯ ಸ್ಥಳವಾಗಿರುವ ಭಾರತ ದೇಶದಲ್ಲಿ ಕೆಲವು ದೊಡ್ಡ ಕಂಪನಿಗಳನ್ನು ಭಾರತೀಯರು ಹೊಂದಿದ್ದಾರೆ. ಹಾಗೆಯೇ ಅಧಿಕ ಆದಾಯವನ್ನು ಕೂಡಾ ಹೊಂದಿದ್ದಾರೆ. ಸಿಇಒಗಳಾಗಿ ಉತ್ತಮ ಆದಾಯವನ್ನು ಹೊಂದಿದ್ದಾರೆ.

 2023ರಲ್ಲಿ ಅಧಿಕ ಪಾವತಿ ಪಡೆಯುವ ಟಾಪ್ 5 ಭಾರತೀಯ ಸಿಇಒಗಳಿವರು

ಇನ್ಫೋಸಿಸ್ ಸಿಇಒ, ಎಂಡಿ ಸಲಿಲ್ ಪರೇಖ್

ಇನ್ಫೋಸಿಸ್ ಸಿಇಒ, ಎಂಡಿ ಸಲಿಲ್ ಪರೇಖ್ 2017 ರಲ್ಲಿ ಸಂಸ್ಥೆಯ ಸಿಇಒ ಆಗಿ ನೇಮಕಗೊಂಡಿದ್ದಾರೆ. ಹಣಕಾಸು ವರ್ಷ 2023 ರಲ್ಲಿ ಸಲಿಲ್ ವಾರ್ಷಿಕ ಸಂಭಾವನೆಯು ಶೇಕಡ 21ರಷ್ಟು ಇಳಿಕೆಯಾಗಿದೆ ಎಂದು ಕಂಪನಿಯ ವಾರ್ಷಿಕ ವರದಿ ತಿಳಿಸಿದೆ. ಪರೇಖ್ ಹಣಕಾಸು ವರ್ಷ 2023ರಲ್ಲಿ 56.44 ಕೋಟಿ ರೂಪಾಯಿ ಆದಾಯವನ್ನು ಪಡೆದಿದ್ದಾರೆ. ಹಣಕಾಸು ವರ್ಷ 2022ರಲ್ಲಿ 71.02 ಕೋಟಿ ರೂಪಾಯಿ ಪಡೆದಿದ್ದಾರೆ, ಅಂದರೆ ಶೇಕಡ 43ರಷ್ಟು ಗಣನೀಯವಾಗಿ ಹೆಚ್ಚಳವಾಗಿದೆ.

2023ರ ಹಣಕಾಸು ವರ್ಷದಲ್ಲಿ 6.67 ಕೋಟಿ ರೂಪಾಯಿಗಳ ಮೂಲ ವೇತನವನ್ನು ಪಡೆದಿದ್ದಾರೆ, ಜೊತೆಯಲ್ಲಿ 18.73 ಕೋಟಿ ರೂಪಾಯಿಗಳ ಬೋನಸ್ ಅನ್ನು ಪಡೆದಿದ್ದಾರೆ. ಹೆಚ್ಚುವರಿಯಾಗಿ, 45 ಲಕ್ಷ ರೂಪಾಯಿ ಹೆಚ್ಚುವರಿ ಪ್ರಯೋಜನ ಪಡೆದಿದ್ದಾರೆ, 9.71 ಕೋಟಿ ರೂಪಾಯಿ ಸ್ಟಾಕ್ ಪ್ರಶಸ್ತಿಗಳನ್ನು ಪಡೆದರು. ಹಣಕಾಸು ವರ್ಷ 2023 ರಲ್ಲಿ, ಇನ್ಫೋಸಿಸ್ ಉದ್ಯೋಗಿಗಳ ಸರಾಸರಿ ವೇತನವು ಹಣಕಾಸು ವರ್ಷ 2022ರಲ್ಲಿದ್ದ 8,14,332 ಕೋಟಿ ರೂಪಾಯಿಯಿಂದ 9,00,012 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಎಚ್‌ಸಿಎಲ್ ಟೆಕ್ನಾಲಜೀಸ್ ಸಿಇಒ ಮತ್ತು ಎಂಡಿ ಸಿ ವಿಜಯಕುಮಾರ್

ಸಿ ವಿಜಯಕುಮಾರ್, 1994 ರಲ್ಲಿ ಎಚ್‌ಸಿಎಲ್‌ಗೆ ಸೇರ್ಪಡೆಗೊಂಡರು ಮತ್ತು ಕಂಪನಿಯ ಪ್ರಮುಖ ವ್ಯಕ್ತಿ ಎನಿಸಿಕೊಳ್ಳುವವರೆಗೆ ಕೆಲಸ ಮಾಡಿದ್ದಾರೆ. ಎಚ್‌ಸಿಎಲ್‌ ವರದಿಗಳ ಪ್ರಕಾರ ವಿಜಯಕುಮಾರ್‌ರ ವಾರ್ಷಿಕ ವೇತನವು 130 ಕೋಟಿ ರೂಪಾಯಿ ಆಗಿದೆ. ಹಾಗೆಯೇ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ. ಪ್ರಸ್ತುತ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ.

ಟಿಸಿಎಸ್ ಮಾಜಿ ಸಿಇಒ ಮತ್ತು ಎಂಡಿ ರಾಜೇಶ್ ಗೋಪಿನಾಥನ್

2017 ರಲ್ಲಿ, ರಾಜೇಶ್ ಗೋಪಿನಾಥನ್‌ರನ್ನು ಟಿಸಿಎಸ್‌ನ ಸಿಇಒ ಮತ್ತು ಎಂಡಿ ಆಗಿ ನೇಮಕ ಮಾಡಲಾಗಿದೆ. ಕಂಪನಿಯ ವಾರ್ಷಿಕ ವರದಿಯ ಪ್ರಕಾರ, ಹಣಕಾಸು ವರ್ಷ 2023ರಲ್ಲಿ ರಾಜೇಶ್ 29.16 ಕೋಟಿ ರೂಪಾಯಿ ವೇತನವನ್ನು ಪಡೆದಿದ್ದಾರೆ. ಇದು ಹಣಕಾಸು ವರ್ಷ 2022ರ ಆದಾಯಕ್ಕಿಂತ ಶೇಕಡ 13.17ರಷ್ಟು ಹೆಚ್ಚಳವಾಗಿದೆ. ಇತರೆ ಪ್ರಯೋಜನ, ಭತ್ಯೆ ರೂಪದಲ್ಲಿ 2.43 ಕೋಟಿ ರೂಪಾಯಿ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ 1.73 ಕೋಟಿ ರೂಪಾಯಿ ಆಗಿತ್ತು. ಕಮಿಷನ್ ರೂಪದಲ್ಲಿ 25 ಕೋಟಿ ರೂಪಾಯಿ ಪಡೆದರು. ಎಕನಾಮಿಕ್ ಟೈಮ್ಸ್ ಪ್ರಕಾರ, ಗೋಪಿನಾಥನ್ ಕಳೆದ ವರ್ಷ 25.75 ಕೋಟಿ ರೂಪಾಯಿ ವೇತನವನ್ನು ಗಳಿಸಿದರು.

ಹಿಂದೂಸ್ತಾನ್ ಯೂನಿಲಿವರ್ ಸಿಇಒ ಮತ್ತು ಎಂಡಿ ಸಂಜೀವ್ ಮೆಹ್ತಾ

ಪ್ರಮುಖ ಗ್ರಾಹಕ ಸರಕುಗಳ ಕಂಪನಿ, ಹಿಂದೂಸ್ತಾನ್ ಯೂನಿಲಿವರ್ ಅಕ್ಟೋಬರ್ 2013 ರಲ್ಲಿ ಸಂಜೀವ್ ಮೆಹ್ತಾರನ್ನು ಸಿಇಒ ಆಗಿ ನೇಮಿಸಿದೆ. ಎಚ್‌ಯುಎಲ್ ಭಾರತದ ಅತಿದೊಡ್ಡ 'ವೇಗವಾಗಿ ಚಲಿಸುವ ಗ್ರಾಹಕ ಸರಕು' ಕಂಪನಿಯಾಗಿ ಹೊರಹೊಮ್ಮಿದೆ. ಅದರ ಸಿಇಒ ಆದ ಮೆಹ್ತಾ ಹಣಕಾಸು ವರ್ಷ 2023ರಲ್ಲಿ 22.36 ಕೋಟಿ ರೂಪಾಯಿ ವಾರ್ಷಿಕ ವೇತನವನ್ನು ಪಡೆದರು. ಹಿಂದಿನ ವರ್ಷ 22.07 ಕೋಟಿ ರೂಪಾಯಿ ಆಗಿತ್ತು. ಸಂಜೀವ್ ಮೆಹ್ತಾ ಸುಮಾರು ಹತ್ತು ವರ್ಷಗಳಿಂದ ಕಂಪನಿಯಲ್ಲಿ ಇದ್ದಾರೆ.

ವಿಪ್ರೊ ಸಿಇಒ ಥಿಯೆರಿ ಡೆಲಾಪೋರ್ಟೆ

ದೇಶದ ನಾಲ್ಕನೇ ಅತಿದೊಡ್ಡ ಐಟಿ ಸೇವೆಗಳ ಸಂಸ್ಥೆಯಾದ ವಿಪ್ರೋ ಸಿಇಒ ವೇತನವು ಹಣಕಾಸು ವಷ್ 2023ರಲ್ಲಿ ಸುಮಾರು 82 ಕೋಟಿ ರೂಪಾಯಿ ಆಗಿದೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಕೊಂಚ ಕಡಿಮೆಯಾಗಿದೆ. ಥಿಯೆರಿ ಡೆಲಾಪೋರ್ಟೆ 1.6 ಮಿಲಿಯನ್ ಡಾಲರ್ (13 ಕೋಟಿ ರೂಪಾಯಿ) ವೇತನ, 4.17 ಮಿಲಿಯನ್ ಡಾಲರ್ (34 ಕೋಟಿ ರೂಪಾಯಿ) ಮತ್ತು 1.3 ಮಿಲಿಯನ್ ಡಾಲರ್ (12 ಕೋಟಿ ರೂಪಾಯಿ) ವೇರಿಯಬಲ್ ವೇತನವಾಗಿ ಪಡೆದಿದ್ದಾರೆ. ಉಳಿದಂತೆ 2.9 ಮಿಲಿಯನ್ ಡಾಲರ್ (23 ಕೋಟಿ ರೂಪಾಯಿ) ವಿವಿಧ ಪ್ರೋತ್ಸಾಹ ನಿಧಿಗಳ ಮೂಲಕ ಪಡೆದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+