ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಹೊಂದಿರುವ ಭಾರತದಲ್ಲಿ ವರ್ಷವಿಡೀ ಹಲವಾರು ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಈ ಆಚರಣೆಗಳ ಸಂದರ್ಭದಲ್ಲಿ ಜನರು ತಮ್ಮ ಪ್ರೀತಿಪಾತ್ರರ ಜೊತೆಗೆ ಸಮಯವನ್ನು ಕಳೆಯುವ ನಿಟ್ಟಿನಲ್ಲಿ ತಮ್ಮ ರಜಾದಿನವನ್ನು ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಪ್ರವಾಸವನ್ನು ಕೂಡಾ ಮಾಡಬೇಕಾಗುತ್ತದೆ.
ಆದರೆ ಈ ಹಬ್ಬದ ಸೀಸನ್‌ನಲ್ಲೇ, ಜನರು ಸಾಮಾನ್ಯವಾಗಿ ಸಮಸ್ಯೆಯನ್ನು ಎದುರಿಸುತ್ತಾರೆ. ಅದುವೇ ಹಬ್ಬದ ಸೀಸನ್‌ನಲ್ಲೇ ಪ್ರಯಾಣ ದರವು ಭಾರೀ ಪ್ರಮಾಣದಲ್ಲಿ ಅಧಿಕವಾಗುವುದು ಆಗಿದೆ. ಆದರೆ ಪ್ರಯಾಣ ವೆಚ್ಚದಲ್ಲಿ ಈ ಹಠಾತ್ ಹೆಚ್ಚಳಕ್ಕೆ ಕಾರಣವೇನು?. ಇಲ್ಲಿದೆ ಈ ಬಗ್ಗೆ ವಿವರ ಮುಂದೆ ಓದಿ.....

ಪೂರೈಕೆ ಮತ್ತು ಬೇಡಿಕೆಯ ಅರ್ಥಶಾಸ್ತ್ರ
ರಜೆಯ ಅಥವಾ ಹಬ್ಬದ ಸೀಸನ್‌ನಲ್ಲಿ ಪ್ರಯಾಣದ ವೆಚ್ಚದಲ್ಲಿ ಏರಿಕೆಯನ್ನು ಹೆಚ್ಚಿಸುವ ಮೂಲಭೂತ ಅಂಶವೆಂದರೆ 'ಪೂರೈಕೆ ಮತ್ತು ಬೇಡಿಕೆ'ಯ ಸಾರ್ವತ್ರಿಕ ಅರ್ಥಶಾಸ್ತ್ರದ ತತ್ವ. ಉತ್ಪನ್ನ ಅಥವಾ ಸೇವೆಗೆ ಬೇಡಿಕೆ ಹೆಚ್ಚಿದಾಗ ಮತ್ತು ಪೂರೈಕೆ ಸ್ಥಿರವಾಗಿದ್ದಾಗ, ಬೆಲೆಗಳು ಸ್ವಾಭಾವಿಕವಾಗಿ ಹೆಚ್ಚಾಗುತ್ತವೆ.
ಅದರಂತೆಯೇ ಹಬ್ಬಗಳ ಸಮಯದಲ್ಲಿ, ಪ್ರಯಾಣ ಸೇವೆಗಳ ಬೇಡಿಕೆಯು ಗಗನಕ್ಕೇರುತ್ತದೆ. ಈ ಹಬ್ಬದ ಸೀಸನ್‌ನಲ್ಲಿ ರಜೆ ಇರುವ ಕಾರಣದಿಂದಾಗಿ ಜನರು ತಮ್ಮ ಕುಟುಂಬಸ್ಥರ, ಪ್ರೀತಿಪಾತ್ರರ ಮನೆಗೆ ಅಥವಾ ಪ್ರವಾಸಕ್ಕೆ ಹೋಗುವುದು ಸಾಮಾನ್ಯ. ಇದರಿಂದಾಗಿ ವಿಮಾನ, ರೈಲು, ಬಸ್ ಬೇಡಿಕೆ ಹೆಚ್ಚಳವಾಗುತ್ತದೆ, ಸಂಸ್ಥೆಗಳು, ರೈಲ್ವೆಗಳು ಮತ್ತು ಬಸ್ ಸೇವೆಗಳು ತಮ್ಮ ದರಗಳನ್ನು ಹೆಚ್ಚಿಸುತ್ತವೆ.
ಕಾರ್ಯಾಚರಣೆಯ, ನಿರ್ವಹಣೆ ವೆಚ್ಚಗಳು
ಪ್ರಯಾಣ ದರ ಹೆಚ್ಚಳವಾಗಲು ಮತ್ತೊಂದು ಪ್ರಮುಖ ಕಾರಣ ಕಾರ್ಯಾಚರಣೆಯ ವೆಚ್ಚ ಮತ್ತು ನಿರ್ವಹಣೆ ವೆಚ್ಚ ಅಧಿಕವಾಗುವುದು ಆಗಿದೆ. ಹಬ್ಬದ ಸೀಸನ್‌ನಲ್ಲಿ ಪ್ರಯಾಣ ದರವು ಹೆಚ್ಚಳವಾಗುತ್ತದೆ. ರಜಾದಿನಗಳಲ್ಲಿ, ಕಂಪನಿಗಳು ತಮ್ಮ ಸಿಬ್ಬಂದಿಗೆ ಹಬ್ಬದ ಸಮಯದಲ್ಲಿ ಕೆಲಸ ಮಾಡಲು ಹೆಚ್ಚುವರಿ ವೇತನವನ್ನು ನೀಡಬೇಕಾಗುತ್ತದೆ.
ಇಂಧನ ಬೆಲೆಗಳು ಮತ್ತು ಇತರ ಕಾರ್ಯಾಚರಣೆಯ ವೆಚ್ಚಗಳು ಸಾಮಾನ್ಯವಾಗಿಯೇ ಹಬ್ಬದ ಸೀಸನ್‌ನಲ್ಲಿ ಏರಿಕೆಯಾಗಬಹುದು. ಇದು ಪ್ರಯಾಣ ವೆಚ್ಚಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಅಂಶಗಳು ಹಬ್ಬದ ಸಮಯದಲ್ಲಿ ಪ್ರಯಾಣ ದರದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತವೆ.
ಲಾಭ ಹೆಚ್ಚಿಸಲು ಉದ್ದೇಶ
ಕೊನೆಯದಾಗಿ, ಪ್ರವಾಸ ಕಂಪನಿಗಳು ಲಾಭವನ್ನು ಬಯಸುವ ವ್ಯವಹಾರಗಳಾಗಿವೆ ಎಂದು ನಾವು ಒಪ್ಪಿಕೊಳ್ಳುವುದು ಮುಖ್ಯವಾಗಿದೆ. ರಜಾದಿನಗಳಲ್ಲಿ ಜನರು ಪ್ರಯಾಣ ಮಾಡುವ ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ರಜಾದಿನಗಳಲ್ಲಿ ಲಾಭವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರವಾಸ ಕಂಪನಿಗಳು ಪ್ರಯಾಣ ದರವನ್ನು ಹೆಚ್ಚಿಸುತ್ತದೆ. ಗ್ರಾಹಕರ ದೃಷ್ಟಿಕೋನದಲ್ಲಿ ನಾವು ನೋಡುವಾಗ ಇದು ಅನ್ಯಾಯ ಎಂದುಕೊಂಡರೂ, ಹೆಚ್ಚಿನ ಬೇಡಿಕೆಯ ಸಮಯದಲ್ಲಿ ಹೆಚ್ಚಿನ ಕೈಗಾರಿಕೆಗಳು ನಡೆಸುವ ಸಾಮಾನ್ಯ ವ್ಯಾಪಾರ ಅಭ್ಯಾಸವಾಗಿದೆ.
ಹಬ್ಬದ ಸೀಸನ್‌ಗಳಲ್ಲಿ ದುಬಾರಿ ಪ್ರಯಾಣ ವೆಚ್ಚಗಳನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗುವುದಿಲ್ಲ. ಬದಲಾಗಿ ಬೇಡಿಕೆ-ಪೂರೈಕೆ, ಕಾರ್ಯಾಚರಣೆಯ ವೆಚ್ಚಗಳು ಮತ್ತು ವ್ಯಾಪಾರ ಲಾಭದ ಉದ್ದೇಶಗಳ ಪರಿಣಾಮವಾಗಿ ಈ ಸಂದರ್ಭದಲ್ಲಿ ಏರಿಕೆ ಮಾಡಲಾಗುತ್ತದೆ.
ಗ್ರಾಹಕರಂತೆ, ನಮ್ಮ ಪ್ರಯಾಣವನ್ನು ಉತ್ತಮವಾಗಿ ಯೋಜಿಸಲು ಸಹಾಯವಾಗುವ ಈ ಅಂಶಗಳ ಬಗ್ಗೆ ನಾವು ತಿಳಿದಿರುವುದು ಮುಖ್ಯವಾಗಿದೆ. ನಾವು ಹಬ್ಬದ ಸೀಸನ್‌ಗೂ ಮೊದಲೇ ಪ್ಲ್ಯಾನ್ ಮಾಡಿಕೊಳ್ಳುವುದು, ದಿನಾಂಕ ನಿಗದಿ ಮಾಡಿ ಟಿಕೆಟ್ ಬುಕ್ ಮಾಡುವುದು ಹೆಚ್ಚಿದ ದರಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡುತ್ತದೆ.


Click it and Unblock the Notifications