ಟ್ವಿಟ್ಟರ್ ಅನ್ನು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಖರೀದಿ ಮಾಡಿದ ಬಳಿಕ ಸಂಸ್ಥೆಯಲ್ಲಿ ಹಲವಾರು ಗೊಂದಲಗಳು ಸೃಷ್ಟಿಯಾಗಿದೆ. ಈಗ ಎಲಾನ್ ಮಸ್ಕ್ ಕೊಂಚ ರಿಯಾಯಿತಿ ದರದಲ್ಲಿ ಟ್ವಿಟ್ಟರ್ ಬ್ಲ್ಯೂ ಟಿಕ್ ಅನ್ನು ಪರಿಚಯಿಸಿದೆ. ವಾರ್ಷಿಕವಾಗಿ ಕಡಿಮೆ ದರದಲ್ಲಿ ನಿಮ್ಮ ಟ್ವಿಟ್ಟರ್ ಖಾತೆಯನ್ನು ವೆರಿಫೈ ಮಾಡಿಸಿಕೊಂಡು ಬ್ಲ್ಯೂ ಟಿಕ್ ಚಂದಾದಾರಿಕೆಯನ್ನು ಪಡೆಯಲು ಸಾಧ್ಯವಾಗಲಿದೆ.
ವೆಬ್ ಬಳಕೆದಾರರಿಗೆ 8 ಡಾಲರ್ ಬದಲಾಗಿ, ವಾರ್ಷಿಕವಾಗಿ ರಿಯಾಯಿತಿ ದರದಲ್ಲಿ ಚಂದಾದಾರಿಕೆಯನ್ನು ಮಾಡಿಕೊಳ್ಳಬಹುದು. ವಾರ್ಷಿಕ ಶುಲ್ಕ 84 ಡಾಲರ್ ಆಗಿದೆ. 6,817 ರೂಪಾಯಿ ವಾರ್ಷಿಕ ಚಂದಾದಾರಿಕೆಯಾಗಿದೆ. ಇನ್ನು ಆಪಲ್ ಬಳಕೆದಾರರು ಕೂಡಾ 11 ಡಾಲರ್ ಬದಲಾಗಿ ಇದೇ ಮೊತ್ತದ ಚಂದಾದಾರಿಕೆಯ ಅವಕಾಶ ಇರುತ್ತದೆ.
ಈ ಹಿಂದೆ ಪತ್ರಕರ್ತರು, ಗಣ್ಯರಿಗೆ, ಪ್ರಮುಖ ವ್ಯಕ್ತಿಗಳ ವೆರಿಫೈ ಆದ ಖಾತೆಗೆ ಬ್ಲ್ಯೂ ಟಿಕ್ ಅನ್ನು ನೀಡಲಾಗುತ್ತದೆ. ಆದರೆ ಈಗ ಕೊನೆಯ ವರ್ಷದಲ್ಲಿ ಎಲ್ಲರಿಗೂ ಬ್ಲ್ಯೂ ಟಿಕ್ ಚಂದಾದಾರಿಕೆಯನ್ನು ಆರಂಭ ಮಾಡಿದ್ದಾರೆ. ಹಣವನ್ನು ಪಾವತಿ ಮಾಡಿ ಯಾರೂ ಬೇಕಾದರೂ ಖಾತೆಯನ್ನು ವೆರಿಫೈ ಮಾಡಿಸಿಕೊಂಡು ಚಂದಾದಾರಿಕೆಯನ್ನು ಮಾಡಿಸಿಕೊಳ್ಳಬೇಕು.

ಯುನೈಟೆಡ್ ಸ್ಟೇಟ್ಸ್, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಜಪಾನ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾದಲ್ಲಿ ಮೊದಲಿಗೆ ಬ್ಲ್ಯೂ ಟಿಕ್ ಲಭ್ಯವಾಗಲಿದೆ. ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ಪಡೆದ ಬಳಿಕ, ವೆರಿಫೈಡ್ ಬ್ಲ್ಯೂ ಟಿಕ್ ಮಾರ್ಕ್ ಬಗ್ಗೆ ಹೊಸ ಚಂದಾದಾರಿಕೆ ಪ್ಲ್ಯಾನ್ ಅನ್ನು ಜಾರಿ ಮಾಡಿದ್ದಾರೆ.
ಬ್ಲ್ಯೂ ಟಿಕ್ ಅರ್ಥವೇನು?
ಸೆಲೆಬ್ರೆಟಿಗಳು, ರಾಜಕಾರಣಿಗಳು, ಪ್ರಮುಖ ವ್ಯಕ್ತಿಗಳಿಗೆ ಟ್ವಿಟ್ಟರ್ ನೀಡುವ ಅಥಂಟಿಫಿಕೇಷನ್ ಬ್ಲ್ಯೂ ಟಿಕ್ ಆಗಿದೆ. ಹಾಗೆಯೇ ಈ ಖಾತೆಯನ್ನು ಟ್ವಿಟ್ಟರ್ ವೆರಿಫೈ ಮಾಡಿದೆ ಎಂಬುವುದಕ್ಕೆ ಈ ಬ್ಲ್ಯೂ ಟಿಕ್ ಸಾಕ್ಷಿಯಾಗಿದೆ. ಈ ಖಾತೆ ಸ್ಪಾಮ್ ಅಲ್ಲ, ನಕಲಿ ಅಲ್ಲ ಎಂಬುವುದಕ್ಕೂ ಇದು ಸಾಕ್ಷಿಯಾಗಿದೆ.
ಬೇರೆ ಬೇರೆ ಟಿಕ್‌ಗಳ ಬಗ್ಗೆ ಉಲ್ಲೇಖ
ಈ ಹಿಂದೆ ಲಭ್ಯವಾದ ಮಾಹಿತಿ ಪ್ರಕಾರ ಯಾವ ಸಂಸ್ಥೆಯ ಖಾತೆಯನ್ನು ಅಧಿಕೃತ ಅಥವಾ ಟ್ವಿಟ್ಟರ್ ವೆರಿಫೈಡ್ ಖಾತೆಯನ್ನಾಗಿಸಲಾಗುತ್ತದೆಯೋ ಆ ಖಾತೆಯಲ್ಲಿ ಗೋಲ್ಡ್ ಟಿಕ್ ಇರುತ್ತದೆ. ಇನ್ನು ಯಾರು ತಮ್ಮ ಖಾತೆಯನ್ನು ವೆರಿಫೈ ಆಗಿರಿಸಲು ಬಯಸುತ್ತಾರೋ ಅವರ ಖಾತೆಯಲ್ಲಿ ಬ್ಲ್ಯೂ ಟಿಕ್ ಕಾಣಬಹುದು. ಸೆಲೆಬ್ರಿಟಿಗಳ ಖಾತೆಯು ಬ್ಲ್ಯೂ ಟಿಕ್ ಆಗಿರುತ್ತದೆ. ಇನ್ನುಳಿದಂತೆ ಗ್ರೇ ಟಿಕ್ ಇರಲಿದೆ. ಇದು ಸರ್ಕಾರದ ಖಾತೆಯನ್ನು ಪ್ರತಿನಿಧಿಸುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಟ್ವಿಟ್ಟರ್ ಖಾತೆಗಳಲ್ಲಿ ನಾವು ಇನ್ಮುಂದೆ ಗ್ರೇ ಟಿಕ್ ಕಾಣಬಹುದು. ಆದರೆ ಸಚಿವರುಗಳು ಕೂಡಾ ಸರ್ಕಾರದ ಭಾಗವಾಗಿರುವುದರಿಂದ ಅವರ ಟ್ವಿಟ್ಟರ್ ಖಾತೆಯಲ್ಲೂ ಗ್ರೇ ಟಿಕ್ ಇರುತ್ತದೆಯೇ ಎಂಬ ಬಗ್ಗೆ ಸ್ಪಷ್ಟಣೆ ದೊರೆತಿಲ್ಲ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications