Alert: ಎಸ್‌ಬಿಐ ಗ್ರಾಹಕರು ಈ 2 ಅಪ್‌ಡೇಟ್‌ ಮಾಡುವುದನ್ನ ಮಿಸ್‌ ಮಾಡಬೇಡಿ !

ದೇಶದ ಬಹುದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಟ್ವಿಟ್ಟರ್ ಮೂಲಕ ತನ್ನ ಗ್ರಾಹಕರಿಗೆ ಎರಡು ಪ್ರಮುಖ ಪ್ರಕಟಣೆಗಳನ್ನು ತಿಳಿಸಿದೆ. ಈ ಮೂಲಕ ಪ್ರತಿಯೊಬ್ಬ ಎಸ್‌ಬಿಐ ಗ್ರಾಹಕರು ಜೂನ್ 30ರೊಳಗೆ ಈ ಅವಶ್ಯಕತೆಗಳನ್ನು ಪೂರೈಸಬೇಕಿದೆ.

ತನ್ನ ಟ್ವಿಟ್ಟರ್ ಪೋಸ್ಟ್ ಮೂಲಕ ಎಸ್‌ಬಿಐ 2021 ರ ಜೂನ್ 30 ರೊಳಗೆ ಗ್ರಾಹಕರು ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಮನವಿ ಮಾಡಿದೆ. ಅದು ವಿಫಲವಾದರೆ ನಿಮ್ಮ ಪ್ಯಾನ್ ನಿಷ್ಕ್ರಿಯವಾಗಿರುತ್ತದೆ.

ಇದರರ್ಥ ವಿವಿಧ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ಉಲ್ಲೇಖಿಸಲು ನಿಮ್ಮ ಪ್ಯಾನ್ ಲಭ್ಯವಿರುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ, ಪ್ಯಾನ್ ಮತ್ತು ಆಧಾರ್‌ನ ಲಿಂಕ್ ಅನ್ನು ಸಕ್ರಿಯಗೊಳಿಸಬಹುದಾದ ಲಿಂಕ್ ಅನ್ನು ಸಹ ಬ್ಯಾಂಕ್ ತಿಳಿಸಿದೆ. ಆದರೆ ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ಸೈಟ್ incometaxindiaefiling.gov.in. ಪ್ರಸ್ತುತ ಮಾರ್ಪಾಡಿಗೆ ಒಳಗಾಗಿದೆ ಆದ್ದರಿಂದ ಜೂನ್ 6, 2021 ರವರೆಗೆ ಲಭ್ಯವಿರುವುದಿಲ್ಲ.

ಡೆಬಿಟ್‌ ಕಾರ್ಡ್‌ ಅಥವಾ  ಗ್ರೀನ್ ಪಿನ್ ಜನರೇಟ್‌ ಮಾಡುವುದು ಹೇಗೆ?

ಡೆಬಿಟ್‌ ಕಾರ್ಡ್‌ ಅಥವಾ ಗ್ರೀನ್ ಪಿನ್ ಜನರೇಟ್‌ ಮಾಡುವುದು ಹೇಗೆ?

ಜೂನ್ 1, 2021 ರಂದು ತನ್ನ ಟ್ವೀಟ್ ಪೋಸ್ಟ್‌ನಲ್ಲಿ, ಟೋಲ್ ಫ್ರೀ ಐವಿಆರ್ ವ್ಯವಸ್ಥೆಯನ್ನು ಬಳಸಿಕೊಂಡು ತನ್ನ ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್ ಪಿನ್ ಅಥವಾ ಗ್ರೀನ್ ಪಿನ್ ಅನ್ನು ಸುಲಭವಾಗಿ ಜನರೇಟ್‌ ಮಾಡಬಹದು ಎಂದು ಬ್ಯಾಂಕ್ ತಿಳಿಸಿದೆ. "1800 112 211 ಅಥವಾ 1800 425 3800 ಗೆ ಕರೆ ಮಾಡಲು ಹಿಂಜರಿಯಬೇಡಿ" ಎಂದು ಬ್ಯಾಂಕ್ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ಪಿನ್ ಜನರೇಟ್‌ ಮಾಡುವುದನ್ನ ತಿಳಿಯಿರಿ

ಪಿನ್ ಜನರೇಟ್‌ ಮಾಡುವುದನ್ನ ತಿಳಿಯಿರಿ

1. ಎಸ್‌ಬಿಐ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮೀಸಲಾದ 1800-11-22-11 / 1800-425-3800 ಗೆ ಕರೆ ಮಾಡಬೇಕಾಗುತ್ತದೆ.
2. ಎಟಿಎಂ ಅಥವಾ ಡೆಬಿಟ್ ಕಾರ್ಡ್ ಸಂಬಂಧಿತ ಸೇವೆಗಳಿಗಾಗಿ 2 ಒತ್ತಿರಿ
3. ಪಿನ್ ಜನರೇಟ್‌ ಮಾಡಲು 1 ಒತ್ತಿರಿ
4. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ನೀವು ಕರೆ ಮಾಡುತ್ತಿದ್ದರೆ 1 ಒತ್ತಿರಿ ಅಥವಾ ಕಸ್ಟಮರ್ ಕೇರ್‌ನೊಂದಿಗೆ ಮಾತನಾಡಲು 2 ಒತ್ತಿರಿ
5. ನೀವು ಗ್ರೀನ್ ಪಿನ್ ಜನರೇಟ್‌ ಮಾಡಲು ನಿಮ್ಮ ಎಟಿಎಂ ಕಾರ್ಡ್‌ನ ಕೊನೆಯ 5 ಅಂಕಿಗಳನ್ನು ನಮೂದಿಸಿ.
6. ಕೊನೆಯ 5 ಅಂಕಿಗಳನ್ನು ಖಚಿತಪಡಿಸಲು 1 ಒತ್ತಿರಿ
7. ಎಟಿಎಂ ಕಾರ್ಡ್‌ನ ಕೊನೆಯ 5 ಅಂಕಿಗಳನ್ನು ಮರು ನಮೂದಿಸಲು 2 ಒತ್ತಿರಿ
8. ಎಸ್‌ಬಿಐ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ 5 ಅಂಕಿಗಳನ್ನು ನಮೂದಿಸಿ. ಖಚಿತಪಡಿಸಲು 1 ಒತ್ತಿ, ಇಲ್ಲದಿದ್ದರೆ ಖಾತೆಯ ಕೊನೆಯ 5 ಅಂಕಿಗಳನ್ನು ಮರು ನಮೂದಿಸಲು 2 ಒತ್ತಿರಿ.
9. ನಿಮ್ಮ ಜನ್ಮ ವರ್ಷವನ್ನು ನಮೂದಿಸಿ
10. ನಿಮ್ಮ ಗ್ರೀನ್ ಪಿನ್ ಅನ್ನು ರಚಿಸಲಾಗಿದೆ ಮತ್ತು ತ್ವರಿತ ಪ್ರವೇಶಕ್ಕಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
11. ನಂತರ 24 ಗಂಟೆಗಳ ಒಳಗೆ, ನೀವು ಯಾವುದೇ ಎಸ್‌ಬಿಐ ಎಟಿಎಂಗೆ ಭೇಟಿ ನೀಡುವ ಮೂಲಕ ಪಿನ್ ಬದಲಾಯಿಸಬಹುದು.

ಎಸ್‌ಬಿಐ ಎಟಿಎಂ ವಿತ್‌ಡ್ರಾ ಶುಲ್ಕಗಳು ಬದಲಾಗಿದೆ

ಎಸ್‌ಬಿಐ ಎಟಿಎಂ ವಿತ್‌ಡ್ರಾ ಶುಲ್ಕಗಳು ಬದಲಾಗಿದೆ

ಎಸ್‌ಬಿಐ ಇತ್ತೀಚೆಗಷ್ಟೇ ತನ್ನ ಮೂಲ ಉಳಿತಾಯ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆದಾರರಿಗೆ ಸೇವಾ ಶುಲ್ಕ ಪರಿಷ್ಕರಣೆ ಘೋಷಿಸಿದೆ. ಈ ಹೆಚ್ಚುವರಿ ಮೌಲ್ಯವರ್ಧಿತ ಸೇವೆಗಳು ಜುಲೈ 1, 2021 ರಿಂದ ಜಾರಿಗೆ ಬರಲಿವೆ ಎಂದು ಎಸ್‌ಬಿಐ ತಿಳಿಸಿದೆ.

ಎಸ್‌ಬಿಐ ಶುಲ್ಕಗಳು ಶಾಖೆಗಳಲ್ಲಿ ಮತ್ತು ಎಟಿಎಂಗಳಲ್ಲಿ ಹಣ ವಿತ್‌ಡ್ರಾ, ಚೆಕ್ ಬುಕ್, ಖಾತೆ ವರ್ಗಾವಣೆ ಮತ್ತು ಇತರ ಹಣಕಾಸೇತರ ವಹಿವಾಟುಗಳಿಗೆ ಸಂಬಂಧಿಸಿದ ಶುಲ್ಕಗಳಾಗಿವೆ.

ಶಾಖೆ ಸೇರಿದಂತೆ ಎಟಿಎಂಗಳಲ್ಲಿ ಹಣ ವಿತ್‌ಡ್ರಾಗಳಿಗಾಗಿ 4 ಉಚಿತ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ವಹಿವಾಟುಗಳನ್ನು ಮೀರಿದಂತೆ ಶುಲ್ಕ ವಿಧಿಸಲಾಗುತ್ತದೆ. ಶಾಖೆ ಅಥವಾ ಎಟಿಎಂನಲ್ಲಿ ನಿಗದಿತಕ್ಕಿತ ಹೆಚ್ಚುವರಿ ಹಣ ವಿತ್‌ಡ್ರಾ ವಹಿವಾಟಿಗೆ 15 ರೂಪಾಯಿ ಜೊತೆಗೆ ಜಿಎಸ್‌ಟಿ ಇರುತ್ತದೆ.

ಚೆಕ್‌ಬುಕ್‌ ಮೇಲಿನ ಶುಲ್ಕಗಳು

ಚೆಕ್‌ಬುಕ್‌ ಮೇಲಿನ ಶುಲ್ಕಗಳು

ಎಸ್‌ಬಿಐ ಬಿಎಸ್‌ಬಿಡಿ ಖಾತೆದಾರರಿಗೆ ಹಣಕಾಸು ವರ್ಷದಲ್ಲಿ 10 ಚೆಕ್ ಇರುವ ಪುಸ್ತಕವನ್ನು ಉಚಿತವಾಗಿ ನೀಡುತ್ತದೆ. ನಂತರದಲ್ಲಿ ಬೇಕಾದಲ್ಲಿ 10 ಚೆಕ್‌ ಇರುವ ಬುಕ್‌ಗೆ 40 ರೂಪಾಯಿ ಮತ್ತು ಜಿಎಸ್‌ಟಿ, 25 ಚೆಕ್‌ ಇರುವ ಬುಕ್‌ಗೆ 75 ರೂಪಾಯಿ ಪ್ಲಸ್ ಜಿಎಸ್‌ಟಿ, ತುರ್ತಾಗಿ ಚೆಕ್‌ ಬುಕ್‌ಗೆ 50 ರೂಪಾಯಿ ಪ್ಲಸ್‌ ಜಿಎಸ್‌ಟಿ ವಿಧಿಸಿದೆ.

ಹಿರಿಯ ನಾಗರಿಕರಿಗೆ ಈ ಪರಿಷ್ಕೃತ ಸೇವಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+