ಯುಕೆ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಇತ್ತೀಚೆಗೆ ಹೊಸ ಯೋಜನೆಯನ್ನು ಜಾರಿ ಮಾಡಿದ್ದಾರೆ. ಭಾರತ ಹಾಗೂ ಯುಕೆ ನಡುವೆ ಸಂಬಂಧವನ್ನು ಹೊಂದಿರುವ ಯೋಜನೆ ಇದಾಗಿದೆ. ಯುವ ಬ್ರಿಟಿಷರು ಹಾಗೂ ಭಾರತದ ಯುವ ವೃತ್ತಿಪರರ ನಡುವೆ ವಹಿವಾಟಿನ ಯೋಜನೆ ಇದಾಗಿದೆ. ಈ ಹೊಸ ಯೋಜನೆಯ ಮೊದಲ ಹಂತವನ್ನು ಆರಂಭ ಮಾಡಲಾಗುವುದು ಎಂದು ತನ್ನ ದೆಹಲಿ ಭೇಟಿ ವೇಳೆ ಜೇಮ್ಸ್ ಕ್ಲೆವರ್ಲಿ ತಿಳಿಸಿದ್ದಾರೆ.
ಈ ಹೊಸ ಯೋಜನೆಯು ಯುಕೆ ಹಾಗೂ ಭಾರತ ಎರಡು ದೇಶದ ಯುವಜನರಿಗೆ ಹೊಸ ಅವಕಾಶವನ್ನು ಕಲ್ಪಿಸುತ್ತದೆ. ಈ ಯೋಜನೆ ಅಡಿಯಲ್ಲಿ ಭಾರತ ಹಾಗೂ ಬ್ರಿಟಿಷ್ ರಾಷ್ಟ್ರೀಯತೆ ಹೊಂದಿರುವವರು 18ರಿಂದ 30 ವರ್ಷದವರು ಈ ಯೋಜನೆಗೆ ಅರ್ಹರು. ಭಾರತದವರು ಯುಕೆಯಲ್ಲಿ 2 ವರ್ಷಗಳ ಕಾಲ ಜೀವಿಸಲು ಮತ್ತು ಉದ್ಯೋಗ ಮಾಡಲು ಮತ್ತು ಬ್ರಿಟಿಷರು ಭಾರತದಲ್ಲಿ 2 ವರ್ಷಗಳ ಕಾಲ ಜೀವಿಸಲು ಮತ್ತು ಉದ್ಯೋಗ ಮಾಡಲು ಈ ಯೋಜನೆಯು ಅವಕಾಶ ನೀಡುತ್ತದೆ.

ಇದು ಭಾರತೀಯ ಹೈಕಮಿಷನ್‌ನ ನಡುವಿನ ಪರಸ್ಪರ ಒಪ್ಪಂದವಾಗಿದೆ. ಹಾಗೆಯೇ ಆಯೋಗವು ಈ ಯೋಜನೆ ಅಡಿಯಲ್ಲಿ ಯುಕೆ ನಾಗರಿಕರು ವೀಸಾಕ್ಕಾಗಿ ಅರ್ಜಿ ಸಲ್ಲಿಸಲು ಈಗಾಗಲೇ ಅವಕಾಶವನ್ನು ನೀಡಿದೆ. ಅಂದರೆ ಈಗಾಗಲೇ ಭಾರತದಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಇನ್ನು ತಾನು ಈ ಯೋಜನೆಯನ್ನು ಘೋಷಣೆ ಮಾಡುವ ಸಂದರ್ಭದಲ್ಲಿ ಯುಕೆ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಭಾರತದ ಸಹಭಾಗಿತ್ವ ಎಷ್ಟು ಮುಖ್ಯ ಎಂಬುವುದನ್ನು ಒತ್ತಿ ಹೇಳಿದ್ದಾರೆ.
ವೀಸಾ ಹಂಚಿಕೆ ಪ್ರಕ್ರಿಯೆ ಆರಂಭ
ಭಾರತದ ಸಹಭಾಗಿತ್ವದ ಪ್ರಾಮುಖ್ಯತೆ ಬಗ್ಗೆ ವಿವರಿಸಿದ ಯುಕೆ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅದೇ ಸಂದರ್ಭದಲ್ಲಿ ಈ ಯೋಜನೆಯಿಂದ ಹೇಗೆ ಉಭಯ ದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಯಾಗುತ್ತದೆ ಎಂಬುವುದನ್ನು ತಿಳಿಸಿದ್ದಾರೆ. ಭಾರತೀಯ ಹೈಕಮಿಷನ್ ಈಗಾಗಲೇ ಯುಕೆ ನಾಗರಿಕರಿಗೆ ವೀಸಾ ಅರ್ಜಿ ಪ್ರಕ್ರಿಯೆಯನ್ನು ಆರಂಭ ಮಾಡಿದೆ. ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ಕೂಡಾ ಮೊದಲ ಹಂತ ವೀಸಾ ಹಂಚಿಕೆ ಪ್ರಕ್ರಿಯೆ ಆರಂಭಿಸಿದೆ. ಮೊದಲ ಹಂತದಲ್ಲಿ ಅರ್ಹ ಭಾರತೀಯರಿಗೆ 2,400 ವೀಸಾ ಲಭ್ಯವಿದೆ.
ಅರ್ಜಿ ಸಲ್ಲಿಸುವ ಮುನ್ನ ಅರ್ಹತೆ ತಿಳಿಯಿರಿ
ಈ ಯೋಜನೆಹಗೆ ಅರ್ಜಿ ಸಲ್ಲಿಸಬೇಕಾದರೆ ಭಾರತೀಯ ನಾಗರಿಕರು 18ರಿಂದ 30 ವರ್ಷದ ಒಳಗಿನವರು ಆಗಿರಬೇಕಾಗುತ್ತದೆ. ಹಾಗೆಯೇ ಸ್ನಾತಕೋತ್ತರ ಪದವಿ ಅದಕ್ಕಿಂತ ಅಧಿಕ ವಿದ್ಯಾರ್ಹತೆ ಹೊಂದಿರುವವರು ಈ ಯೋಜನೆಗೆ ಅರ್ಹರು. ಹಾಗೆಯೇ ಕನಿಷ್ಠ 30 ದಿನಗಳವರೆಗೆ 2,50,000 ಗೆ ಸಮಾನವಾದ ಹಣವನ್ನು ಹೊಂದಿರಬೇಕಾಗುತ್ತದೆ.
ಗಡುವಿಗೂ ಕೂಡಾ ಯಶಸ್ವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ. ಯಶಸ್ವಿ ಅಭ್ಯರ್ಥಿಗಳು ತಮ್ಮ ವೀಸಾಗೆ ನೀಡಿದ ಗಡುವಿನ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಗಡುವು ಸಾಮಾನ್ಯವಾಗಿ 30 ದಿನಗಳು ಆಗಿರುತ್ತದೆ. ಹಾಗೆಯೇ ಅರ್ಜಿ ಸಲ್ಲಿಸಿದ ಆರು ತಿಂಗಳ ಒಳಗಾಗಿ ಯುಕೆಗೆ ಪ್ರಯಾಣ ಮಾಡಬೇಕಾಗುತ್ತದೆ. ಈ ಅರ್ಜಿ ಸಲ್ಲಿಕೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ವಲಸೆ ತಜ್ಞರು ಇದು ನೇರ ಅರ್ಜಿ ಎಂದು ಪರಿಗಣಿಸಿದ್ದಾರೆ. ಆದರೆ ಈ ಯೋಜನೆ ಅಡಿಯಲ್ಲಿ ಪ್ರಕ್ರಿಯೆ ಶೀಘ್ರವಾಗಿದೆ ಎಂದು ತಿಳಿಸಿದ್ದಾರೆ.
ಯುಕೆ- ಭಾರತ ಯುವ ವೃತ್ತಿಪರ ಯೋಜನೆ ಜಾರಿ ಮಾಡಿರುವುದನ್ನು ಎರಡು ದೇಶಗಳಲ್ಲಿ ದ್ವಿಪಕ್ಷೀಯ ಸಂಬಂಧಕ್ಕೆ "ಮಹತ್ವದ ಕ್ಷಣ" ಎಂದು ಪರಿಗಣಿಸಲಾಗಿದೆ. ಹಾಗೆಯೇ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾತುಕತೆಗಳನ್ನು ಮುಂದೂಡಿಕೆ ಮಾಡುವ ನಿರೀಕ್ಷೆಯಿದೆ. ಈ ಯೋಜನೆಯು ಯುವ ವೃತ್ತಿಪರರಿಗೆ ಭಾರತ ಮತ್ತು ಯುಕೆ ನಡುವೆ ನಿಕಟ ಆರ್ಥಿಕ ಸಂಬಂಧಗಳನ್ನು ಬೆಳೆಸುವ ಜೊತೆಗೆ ಜನರಿಗೆ ಬೇರೆ ದೇಶದಲ್ಲಿ ಉದ್ಯೋಗ ಮಾಡುವ ವಾಸಿಸುವ ಅವಕಾಶವನ್ನು ನೀಡುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications