ಬ್ರಿಟಿಷ್ ಪ್ರಧಾನ ಮಂತ್ರಿ ರಿಷಿ ಸುನಕ್ ಮತ್ತು ಪತ್ನಿ ಅಕ್ಷತ ಮೂರ್ತಿ ಈ ವರ್ಷದಲ್ಲಿ ಭಾರತದಲ್ಲಿ ಭಾರೀ ನಷ್ಟವನ್ನು ಕಂಡ ವ್ಯಾಪಾರಸ್ಥರು ಆಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಇನ್ಫೋಸಿಸ್‌ನ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಪುತ್ರಿ, ಬ್ರಿಟಿಷ್ ಪ್ರಧಾನ ಮಂತ್ರಿ ರಿಷಿ ಸುನಕ್‌ರ ಪತ್ನಿ ಅಕ್ಷತ ಮೂರ್ತಿ ಕಳೆದ 12 ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ನಷ್ಟವನ್ನು ಕಂಡಿದ್ದಾರೆ.
ಎನ್.ಆರ್.ನಾರಾಯಣ ಮೂರ್ತಿ (ನಾಗವಾರ ರಾಮರಾವ್ ನಾರಾಯಣಮೂರ್ತಿ) ಭಾರತದ ಉದ್ಯಮಿ ಹಾಗು ಹೆಸರಾಂತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್‌ನ ಸಹ ಸಂಸ್ಥಾಪಕರು ಆಗಿದ್ದಾರೆ. ಅವರ ಪುತ್ರಿ ಅಕ್ಷತ ಮೂರ್ತಿಯಾಗಿದ್ದಾರೆ. ಅಕ್ಷತ ಮೂರ್ತಿ ಕಳೆದ 12 ತಿಂಗಳುಗಳಲ್ಲಿ ಒಟ್ಟಾಗಿ ಬರೋಬ್ಬರಿ 8.61 ಕೋಟಿ ರೂಪಾಯಿ ನಷ್ಟವನ್ನು ಕಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ರಿಷಿ ಸುನಕ್ ಹಾಗೂ ಅಕ್ಷತ ಮೂರ್ತಿ ನಿವ್ವಳ ಆದಾಯ
ರಿಷಿ ಸುನಕ್ ಹಾಗೂ ಅಕ್ಷತ ಮೂರ್ತಿ ನಿವ್ವಳ ಆದಾಯವು 668 ಮಿಲಿಯನ್ ಡಾಲರ್ ಆಗಿದೆ. ಆದರೂ ಕೂಡಾ ಬ್ರಿಟಿಷ್ ರಾಜಕೀಯದಲ್ಲಿ ಪ್ರಾಬಲ್ಯವನ್ನು ಮುಂದುವರೆಸುವ ನಡುವೆ ಜೀವನ ವೆಚ್ಚದ ಸಮಸ್ಯೆಯಿಂದ ಇಬ್ಬರೂ ಈಗ ನಷ್ಟದಲ್ಲಿದ್ದಾರೆ. ಅಕ್ಷತ ಮೂರ್ತಿಯು ಕಳೆದ ಒಂದು ವರ್ಷದಲ್ಲಿ 8.61 ಕೋಟಿ ರೂಪಾಯಿ ನಷ್ಟವನ್ನು ಕಂಡಿದ್ದರೆ, ದಂಪತಿಯು ಕಳೆದ ಒಂದು ವರ್ಷದಲ್ಲಿ ಒಟ್ಟಾಗಿ 2072 ಕೋಟಿ ರೂಪಾಯಿ ನಷ್ಟವನ್ನು ಕಂಡಿದ್ದಾರೆ.
ರಿಷಿ ಸುನಕ್ ಹಾಗೂ ಅಕ್ಷತ ಮೂರ್ತಿ ನಷ್ಟ ಕಾಣಲು ಕಾರಣವೇನು?
ರಿಷಿ ಸುನಕ್ ಹಾಗೂ ಅಕ್ಷತ ಮೂರ್ತಿ ದಂಪತಿಯು ಕಳೆದ ಒಂದು ವರ್ಷದಲ್ಲಿ ನಷ್ಟವನ್ನು ಕಾಣಲು ಪ್ರಮುಖ ಕಾರಣ ಇನ್ಫೋಸಿಸ್ ಸ್ಟಾಕ್ ಮಾರುಕಟ್ಟೆಯಲ್ಲಿ ನಷ್ಟ ಉಂಟಾಗಿರುವುದು ಆಗಿದೆ. ಹೌದು, ಕಳೆದ ಒಂದು ವರ್ಷದಲ್ಲಿ ಸ್ಟಾಕ್ ಮಾರುಕಟ್ಟೆಯಲ್ಲಿ ಇನ್ಪೋಸಿಸ್ ಸ್ಟಾಕ್ ಭಾರೀ ಕುಸಿತ ಕಂಡಿದೆ. ಇದರ ಪರಿಣಾಮವು ಇನ್ಫೋಸಿಸ್ ಮುಖ್ಯಸ್ಥರ ಪುತ್ರಿ ಹಾಗೂ ಅಳಿಯನ ಮೇಲೆ ಬೀರಿದೆ.
ಅಕ್ಷತ ಮೂರ್ತಿಯ ತಂದೆ ಎನ್‌ಆರ್ ನಾರಾಯಣ ಸ್ಥಾಪಿಸಿರುವ ಭಾರತದ ಐಟಿ ದೈತ್ಯ ಇನ್ಫೋಸಿಸ್‌ನಲ್ಲಿನ ತಮ್ಮ ಷೇರುಗಳ ಮೌಲ್ಯದಲ್ಲಿ ಕುಸಿತದಿಂದಾಗಿ ನಷ್ಟವನ್ನು ಕಂಡಿದ್ದು ಶ್ರೀಮಂತರ ಪಟ್ಟಿಯಲ್ಲಿಯೂ ಇಳಿದಿದ್ದಾರೆ. ಕಳೆದ ವರ್ಷ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ಪವರ್ ಜೋಡಿಯು 275 ನೇ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷ ಈ ದಂಪತಿಯು 222 ನೇ ಸ್ಥಾನದಲ್ಲಿದ್ದರು. ಆದಾಗ್ಯೂ, ಕಳೆದ ವರ್ಷದಲ್ಲಿ ಇನ್ಫೋಸಿಸ್ ಷೇರುಗಳಲ್ಲಿ ಶೇಕಡ 20ರಷ್ಟು ಕುಸಿತದ ಪರಿಣಾಮವಾಗಿ ಈ ಶ್ರೀಮಂತ ದಂಪತಿಗಳ ಶ್ರೇಯಾಂಕವು ಈ ವರ್ಷ 227 ಕ್ಕೆ ಕುಸಿದಿದೆ.
ರಿಷಿ ಸುನಕ್ ನಿವ್ವಳ ಮೌಲ್ಯ
ರಿಷಿ ಸುನಕ್ ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನ ಮಂತ್ರಿಯಾಗಿ ವರ್ಷಕ್ಕೆ ಸುಮಾರು 205,367 ಡಾಲರ್ ವೇತನವನ್ನು ಪಡೆಯುತ್ತಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಿಷಿ ಸುನಕ್ ಪ್ರಧಾನ ಮಂತ್ರಿಯಾದಾಗ ರಿಷಿ ಸುನಕ್ ಆದಾಯವು ಏರಿಕೆಯನ್ನು ಕಂಡಿದೆ. ರಿಷಿ ಸುನಕ್ ನಷ್ಟವನ್ನು ಸರಿದೂಗಿಸಲು ಈ ಆದಾಯವು ಯಾವುದೇ ಸಹಾಯವನ್ನು ಮಾಡಿಲ್ಲ. ರಿಷಿ ಸುನಕ್ ಆದಾಯವು 2018 ರಲ್ಲಿ 908 ಮಿಲಿಯನ್ ಡಾಲರ್‌ನಷ್ಟಿದ್ದು, 2023 ರಲ್ಲಿ 658 ಮಿಲಿಯನ್ ಡಾಲರ್‌ಗೆ ಇಳಿಯುವ ನಿರೀಕ್ಷೆಯಿದೆ.


Click it and Unblock the Notifications