ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಸುದ್ದಿಗಳಾಗುತ್ತಿದೆ. ದಶಕಗಳಿಂದ ಈ ಪಟ್ಟವನ್ನು ಆಳಿದ ಮತ್ತು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಎರಡರಲ್ಲೂ ವಾಂಟೆಡ್ ಲಿಸ್ಟ್‌ನಲ್ಲಿರುವ ಈ ಕುಖ್ಯಾತ ಪಾತಕಿ ಈ ಬಾರಿ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಅಧಿಕೃತವಾಗಿಲ್ಲದಿದ್ದರೂ ಪ್ರಪಂಚದಾದ್ಯಂತ ಕಾಡ್ಗಿಚ್ಚಿನಂತೆ ಶೀಘ್ರವೇ ಹರಡಿದೆ.
ಇತ್ತೀಚಿನ ವರದಿಯ ಪ್ರಕಾರ, ಕುಖ್ಯಾತ ದಾವೂದ್ ವಿಷ ಸೇವಿಸಿಲ್ಲ ಅಥವಾ ಸತ್ತಿಲ್ಲ ಎಂದು ಭಾರತೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. 67 ವರ್ಷದ ದಾವೂದ್ ಗ್ಯಾಂಗ್ ಸ್ಟಾರ್, ಕ್ರೈಮ್ ಲಾರ್ಡ್ ಮತ್ತು ಡ್ರಗ್ ಲಾರ್ಡ್ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾರೆ. ಆದರೆ ಈ ಕ್ರೈಂ ಲಾರ್ಡ್ ಈಗ ವಿಶ್ವದ ಅಗ್ರ ಐದು ಶ್ರೀಮಂತ ಅಪರಾಧಿಗಳಲ್ಲಿ ಒಬ್ಬರಾಗಿದ್ದಾರೆ.

ದಾವೂದ್ ಇಬ್ರಾಹಿಂ ನಿವ್ವಳ ಆದಾಯ
ಫೋರ್ಬ್ಸ್ ವರದಿಯ ಪ್ರಕಾರ, ಇಬ್ರಾಹಿಂ ಮೇ 2015 ರ ಹೊತ್ತಿಗೆ ಸರಿಸುಮಾರು 6.7 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಮೇ 2015 ರ ನಂತರ ದಾವೂದ್ ಆದಾಯ ವಿವರ ಇಲ್ಲವಾದರೂ ಪ್ರಸ್ತುತ 6.7 ಬಿಲಿಯನ್ ಡಾಲರ್ ಅಂದರೆ 55,741.65 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.
ಕೊಲೆ, ಸುಲಿಗೆ, ಹತ್ಯೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆ ಸೇರಿದಂತೆ ಆರೋಪಗಳಲ್ಲಿ ದಾವೂದ್ ಇಬ್ರಾಹಿಂ ವಾಟೆಂಡ್ ಆಗಿರುವುದು ಮಾತ್ರವಲ್ಲದೆ ಐದು ಖಂಡಗಳಲ್ಲಿ 16 ದೇಶಗಳಲ್ಲಿ ಹರಡಿರುವ ಆಸ್ತಿ ಹೊಂದಿದ್ದಾರೆ. ಅಂದರೆ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ.
ಈ ಹಿಂದೆ 2017 ರ ಸೆಪ್ಟೆಂಬರ್‌ನಲ್ಲಿ ಯುಕೆ ಮಿರರ್ ಮಾಡಿರುವ ವರದಿಯ ಪ್ರಕಾರ ದಾವೂದ್ ಇಬ್ರಾಹಿಂ ವಾರ್ವಿಕ್‌ಷೈರ್‌ನಲ್ಲಿ ಹೋಟೆಲ್ ಮತ್ತು ಮಿಡ್‌ಲ್ಯಾಂಡ್ಸ್‌ನ ಇತರ ವಸತಿ ಆಸ್ತಿಗಳನ್ನು ಹೊಂದಿದ್ದಾರೆ. ದಾವೂದ್ ಹಾಗೆಯೇ ಸೆಂಟ್ ಜಾನ್ಸ್ ವುಡ್ ರೋಡ್ ಲಂಡನ್‌ನಲ್ಲಿ ದೊಡ್ಡ ಗ್ಯಾರೇಜ್ ಅನ್ನು ಹೊಂದಿದ್ದಾರೆ ಎಂದು ಕೂಡಾ ವರದಿಯಾಗಿದೆ.
ಫೆಬ್ರವರಿ 2018 ರಲ್ಲಿ ಪಿಟಿಐ ಮಾಡಿದ ವರದಿಯ ಪ್ರಕಾರ ದಾವೂದ್‌ನ ಅಪಾರ ಆಸ್ತಿ ಬಂಡವಾಳವು ಮಿಡ್‌ಲ್ಯಾಂಡ್ಸ್ ಮತ್ತು ಆಗ್ನೇಯ ಯುಕೆ ಮತ್ತು ಭಾರತ, ಯುನಿಟ್ ಯುನೈಟೆಡ್ ಅರಬ್ ಎಮಿರೇಟ್ಸ್, ಸ್ಪೇನ್, ಆಸ್ಟ್ರೇಲಿಯಾ, ಮೊರಾಕೊ, ಟರ್ಕಿಯಲ್ಲಿದೆ. ಇಬ್ರಾಹಿಂ ಪರವಾಗಿ ಅವರ ಬಲಗೈ ಬಂಟ ಮುಹಮ್ಮದ್ ಇಕ್ಬಾಲ್ "ಮಿರ್ಚಿ" ಮೆಮೊನ್ ಯುಕೆಯಲ್ಲಿ ಅಪಾರ ಆಸ್ತಿ ಹೊಂದಿದ್ದಾರೆ.
ಗಮನಾರ್ಹವಾಗಿ 2020 ರಲ್ಲಿ ಭಾರತ ಸರ್ಕಾರವು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ದಾವೂದ್‌ಗೆ ಸೇರಿದ ಸುಮಾರು ಆರು ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ. ಭಾರತ ಸರ್ಕಾರವು ಸ್ಮಗ್ಲರ್ಸ್ ಆಂಡ್ ಫಾರಿನ್ ಎಕ್ಸ್ಚೇಂಜ್ ಮ್ಯಾನಿಪ್ಯುಲೇಟರ್ಸ್ (ಆಸ್ತಿ ಮುಟ್ಟುಗೋಲು) ಕಾಯಿದೆ (ಎಸ್‌ಎಎಫ್‌ಇಎಂಎ), 1976 ರ ಅಡಿಯಲ್ಲಿ ಅವರ ಆಸ್ತಿಗಳ ಇ-ಹರಾಜನ್ನು ಮಾಡಿದೆ.


Click it and Unblock the Notifications