ಜಾಗತಿಕವಾಗಿ ಡಿಜಿಟಲೀಕರಣದ ಹಾದಿಯಲ್ಲಿ ಭಾರತವು ಪ್ರಮುಖ ಸ್ಥಾನವನ್ನು ಪಡೆಯಲು ಮುಂದಾಗಿದೆ. ಈಗ ಜಾಗತಿಕ ಡಿಜಿಟಲೀಕರಣಕ್ಕೆ ಭಾರತದ ಮಹತ್ತರ ಕೊಡುಗೆಯೊಂದನ್ನು ಅಳವಡಿಸಲು ಹಲವಾರು ದೇಶಗಳು ಸಜ್ಜಾಗಿದೆ. ಡಿಜಿಟಲೀಕರಣಕ್ಕೆ ಭಾರತದ ಯುಪಿಐ ಕೊಡುಗೆ ಮಹತ್ತರವಾಗಿದೆ. ಈ ನಡುವೆ ಫ್ರಾನ್ಸ್‌ನಲ್ಲಿ ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಅನ್ನು ಆರಂಭ ಮಾಡುವ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ.
ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಭಾರತವು ಮಹತ್ವದ ಮೈಲಿಗಲ್ಲನ್ನು ಏರಿದೆ. ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಭೇಟಿಯ ಸಂದರ್ಭದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇನ್ನು ಈ ಹಿಂದೆ ಬೇರೆ ಬೇರೆ ದೇಶಗಳಲ್ಲಿ ಯುಪಿಐ ಅನ್ನು ಆರಂಭ ಮಾಡುವ ಬಗ್ಗೆ ಮಾತನಾಡಿದ ಟೆಲಿಕಾಂ, ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, "ಈಗಾಗಲೇ 13 ದೇಶಗಳು ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್) ಅನ್ನು ಪಾವತಿ ವಿಧಾನವನ್ನು ಅಳವಡಿಸಿಕೊಳ್ಳಲು ಒಪ್ಪಿದೆ. ಶೀಘ್ರದಲ್ಲೇ ಸಿಂಗಾಪುರದಲ್ಲಿ ಯುಪಿಐ ವಹಿವಾಟು ಆರಂಭವಾಗಲಿದೆ," ಎಂದು ಮಾಹಿತಿ ನೀಡಿದ್ದಾರೆ.

"ಭಾರತದ ಯುಪಿಐ ಆಗಿರಲಿ ಅಥವಾ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾಗಿರಲಿ, ದೇಶದಲ್ಲಿ ಅದು ದೊಡ್ಡ ಸಾಮಾಜಿಕ ಪರಿವರ್ತನೆಯನ್ನು ತಂದಿದೆ. ಈಗ ಭಾರತ ಮತ್ತು ಫ್ರಾನ್ಸ್ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಮುಂದಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಫ್ರಾನ್ಸ್‌ನಲ್ಲಿ ಯುಪಿಐ ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ. ಒಪ್ಪಂದದ ನಂತರ ನಾನು ಹೊರಡುತ್ತೇನೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ಯಾರಿಸ್‌ನಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ ತಿಳಿಸಿದ್ದಾರೆ.
"ಆದರೆ ಮುಂದುವರಿಯುವುದು ನಿಮ್ಮ ಕೆಲಸವಾಗಿದೆ. ಸ್ನೇಹಿತರೇ, ಮುಂಬರುವ ದಿನಗಳಲ್ಲಿ ಯುಪಿಐ ಆರಂಭವನ್ನು ಐಫೆಲ್ ಟವರ್‌ನಿಂದ ಮಾಡಲಾಗುವುದು. ಅಂದರೆ ಭಾರತೀಯ ಪ್ರವಾಸಿಗರು ಈಗ ಐಫೆಲ್ ಟವರ್‌ನಲ್ಲಿ ಇದ್ದರೂ ಯುಪಿಐ ಮೂಲಕ ಹಣವನ್ನು ರವಾನೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ," ಎಂದು ಕೂಡಾ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಫ್ರಾನ್ಸ್‌ನಲ್ಲಿ ಯುಪಿಐ
ಫ್ರಾನ್ಸ್‌ನಲ್ಲಿ ಯುಪಿಐ ಪಾವತಿ ತಂತ್ರಜ್ಞಾನವನ್ನು ಆರಂಭ ಮಾಡಿದ ಬಳಿಕ ಭಾರತೀಯ ಪ್ರವಾಸಿಗರು ತಮ್ಮ ರೂಪಾಯಿಗಳನ್ನು ಬಳಸಿಕೊಂಡು ಅಲ್ಲಿನ ವಸ್ತುಗಳನ್ನು ಖರೀದಿ ಮಾಡಲು ಆನ್‌ಲೈನ್ (ಯುಪಿಐ) ಪಾವತಿ ಮಾಡಬಹುದಾಗಿದೆ. ಐಫೆಲ್ ಟವರ್‌ನಿಂದ ಈ ಯುಪಿಐ ವಹಿವಾಟು ಆರಂಭವಾಗಲಿದೆ.
ಭಾರತದಿಂದ ಯುರೋಪ್‌ಗೆ ಪ್ರಯಾಣಿಸುವವರು ಸ್ಥಳೀಯ QR ಕೋಡ್‌ಗಳು ಅಥವಾ ಯುಪಿಐ ಐಡಿಗಳನ್ನು ಬಳಕೆ ಮಾಡಿಕೊಂಡು ಫ್ರಾನ್ಸ್‌ನಲ್ಲಿ ರೂಪಾಯಿಗಳಲ್ಲಿ ಪಾವತಿಗಳನ್ನು ಮಾಡಬಹುದಾಗಿದೆ. ಸಿಂಗಪುರ್ ಪೇನೌ ಮತ್ತು ಭಾರತದ ಯುಪಿಐ ನಡುವಿನ ಗಡಿಯಾಚೆಗಿನ ಸಂಪರ್ಕ ವ್ಯವಸ್ಥೆಯಿಂದಾಗಿ ಫೆಬ್ರವರಿಯಲ್ಲಿ ಸಿಂಗಾಪುರದಲ್ಲಿ ಯುಪಿಐ ಪಾವತಿಯನ್ನು ಮಾಡಲು ಸಾಧ್ಯವಾಗಲಿದೆ.
ಫ್ರಾನ್ಸ್‌ನಲ್ಲಿ ಯುಪಿಐ ಹೇಗೆ ಕಾರ್ಯನಿರ್ವಹಿಸುತ್ತದೆ, ಶುಲ್ಕಗಳೆಷ್ಟು?
ಯುರೋಪ್‌ಗೆ ಹೋಗುವ ಭಾರತೀಯ ಪ್ರವಾಸಿಗರು ತಮ್ಮ ಎಲ್ಲಾ ಖರೀದಿಗಳನ್ನು ಇನ್ನು ಮುಂದೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡಬೇಕಾಗಿಲ್ಲ. ಯುಪಿಐ ಪಾವತಿ ವ್ಯವಸ್ಥೆ ಆರಂಭವಾದ ಬಳಿಕ ತಮ್ಮ ಯುಪಿಐ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಫ್ರಾನ್ಸ್‌ನಲ್ಲಿ ಸ್ಥಳೀಯ QR ಕೋಡ್‌ಗಳು ಅಥವಾ ಯುಪಿಐ ಐಡಿಗಳನ್ನು ಬಳಸಿಕೊಂಡು ರೂಪಾಯಿಗಳಲ್ಲಿ ಪಾವತಿಸಬಹುದು.
ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳೊಂದಿಗೆ ಮಾಡಿದ ಪಾವತಿಗಳಿಗೆ ಶುಲ್ಕಗಳು ಸಾಮಾನ್ಯವಾಗಿ ಪಾವತಿ ಮೊತ್ತದ ಶೇಕಡ 0.99ರಿಂದ ಶೇಕಡ 3.5 ರವರೆಗೆ ಇರುತ್ತದೆ. ಯುಪಿಐ ಬಳಸಿಕೊಂಡು ಭಾರತದಲ್ಲಿ ಮಾಡಿದ ವಹಿವಾಟುಗಳು ಪ್ರಸ್ತುತ ಉಚಿತವಾಗಿದೆ. ಆರ್‌ಬಿಐ ಮತ್ತು ಭಾರತೀಯ ಬ್ಯಾಂಕ್‌ಗಳ ಸಂಘವು ದೇಶೀಯವಾಗಿ ಎನ್‌ಪಿಸಿಐ ಅನ್ನು ರಚಿಸಿದೆ. ಭಾರತದಲ್ಲಿ ರುಪೇ ಗೇಟ್‌ವೇ ಮೂಲಕ ರಿಟೇಲ್ ಪಾವತಿಗಳನ್ನು ಸಕ್ರಿಯಗೊಳಿಸಲು ಇದು ಕಾರ್ಯನಿರ್ವಹಿಸುತ್ತದೆ.


Click it and Unblock the Notifications