ಪ್ರೇಮಿಗಳ ದಿನವನ್ನು ಫೆಬ್ರವರಿ 14 ರಂದು, ಅಂದರೆ ಬುಧವಾರದಂದು ಆಚರಿಸಲಾಗುತ್ತದೆ. ಈ ದಿನದಂದು, ಜನರು ತಮ್ಮ ಪ್ರೀತಿಪಾತ್ರರಿಗೆ ವಿಶೇಷವಾಗಿ ಉಡುಗೊರೆಯನ್ನು ನೀಡುವುದು ಸಾಮಾನ್ಯವಾಗಿದೆ. ಗುಲಾಬಿಗಳು, ಚಾಕೊಲೇಟ್‌ಗಳು, ಕಾರ್ಡ್‌ಗಳನ್ನು ನೀಡುವುದರ ಜೊತೆಗೆ ಜನರು ತಮ್ಮ ಸಂಗಾತಿ ಜೊತೆ ಊಟವನ್ನು ಮಾಡಲು ಅಧಿಕ ಖರ್ಚು ಮಾಡುತ್ತಾರೆ.
ಆದರೆ ನೀವು ಇದಕ್ಕಿಂತ ನಿಮ್ಮ ಸಂಗಾತಿಗೆ ಎಂದಿಗೂ ಕೂಡಾ ನೆನೆಪಿನಲ್ಲಿ ಇರುವಂತಹ, ಸಹಾಯವಾಗುವಂತಹ ಉಡುಗೊರೆಯನ್ನು ನೀಡಬಹುದು. ಪ್ರೇಮಿಗಳ ದಿನದಂದು ನೀವು ನೀಡಬಹುದಾದ ಕೆಲವು ಹಣಕಾಸಿನ ಉಡುಗೊರೆಗಳ ಬಗ್ಗೆ ನಾವು ನಿಮಗೆ ಇಲ್ಲಿ ವಿವರ ನೀಡಿದ್ದೇವೆ. ಇದರಿಂದಾಗಿ ನಿಮ್ಮ ಸಂಗಾತಿಯ ಹಣಕಾಸು ಭವಿಷ್ಯವು ಹೆಚ್ಚು ಸುರಕ್ಷಿತವಾಗಿರುತ್ತದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

ಮ್ಯೂಚುವಲ್ ಫಂಡ್‌ಗಳು, ಸ್ಟಾಕ್‌ಗಳು ಉಡುಗೊರೆ
ಒಬ್ಬ ವ್ಯಕ್ತಿಯು ಮ್ಯೂಚುಯಲ್ ಫಂಡ್ ಸ್ಕೀಮ್ ಅಥವಾ ಉತ್ತಮ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ ಯಾವುದೇ ಸ್ಟಾಕ್ ಅನ್ನು ಖರೀದಿಸಬಹುದು ಮತ್ತು ಅದನ್ನು ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಬಹುದು. ಆದರೆ ಮ್ಯೂಚುವಲ್ ಫಂಡ್ ಅಥವಾ ಷೇರುಗಳ ಖರೀದಿಗೆ ನಾವು ಶಿಫಾರಸು ಮಾಡುವುದಿಲ್ಲ, ಏಕೆಂದರೆ ಇವೆರಡೂ ಕೂಡಾ ಅಪಾಯವನ್ನು ಹೊಂದಿರುತ್ತದೆ.
ಆರೋಗ್ಯ ವಿಮೆ, ಟರ್ಮ್ ಇನ್ಶುರೆನ್ಸ್
ಒಬ್ಬ ವ್ಯಕ್ತಿಯು ಆರೋಗ್ಯ ವಿಮೆ, ಜೀವ ವಿಮೆ ಅಥವಾ ಪ್ರೀತಿಪಾತ್ರರಿಗೆ ಟರ್ಮ್ ಪ್ಲಾನ್ ಪಾಲಿಸಿಯನ್ನು ಖರೀದಿಸಬಹುದು. ಈ ಯೋಜನೆಗಳು ಅನಿವಾರ್ಯ ಆರೋಗ್ಯ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತವೆ.
ಚಿನ್ನ/ಎಸ್‌ಜಿಬಿ 2024 ಉಡುಗೊರೆ
ಚಿನ್ನವು ಭಾರತೀಯರ ಸಾರ್ವಕಾಲಿಕ ನೆಚ್ಚಿನ ವಸ್ತುವಾಗಿದೆ. ಜನರು ಇದನ್ನು ಸುರಕ್ಷಿತ ಹಣಕಾಸು ಹೂಡಿಕೆ ಅಥವಾ ಖರ್ಚು ಎಂದು ಪರಿಗಣಿಸುತ್ತಾರೆ ಮತ್ತು ವಿವಿಧ ರೀತಿಯ ಚಿನ್ನದ ಆಭರಣಗಳನ್ನು ಧರಿಸುವುದು ಭಾರತೀಯರಿಗೆ ಹೆಮ್ಮೆಯ ಪ್ರತೀಕವಾಗಿದೆ. ಸರ್ಕಾರವು ಪ್ರಾರಂಭಿಸಿರುವ 2023-24 ರ ಸವರನ್ ಗೋಲ್ಡ್ ಬಾಂಡ್ (ಎಸ್‌ಜಿಬಿ) ಸಿರೀಸ್ 'ಎಸ್‌ಜಿಬಿ IV' ಸಹ ಸುರಕ್ಷಿತ ಪಂತವಾಗಿದೆ, ಇದನ್ನು ಪ್ರೇಮಿಗಳ ದಿನದ ಉಡುಗೊರೆಯಾಗಿ ನೀಡಬಹುದು. ಎಸ್‌ಜಿಬಿ 2024 ಯೋಜನೆಯು ಫೆಬ್ರವರಿ 16, 2024 ರಂದು ಕೊನೆಗೊಳ್ಳುತ್ತದೆ.
ಆಸ್ತಿ ಉಡುಗೊರೆ ನೀಡಿ
ಭೂ ಆಸ್ತಿಯನ್ನು ಹೊಂದಿರುವುದು ಯಾವಾಗಲೂ ದೀರ್ಘಾವಧಿಯಲ್ಲಿ ಲಾಭದಾಯಕವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಯಾರಾದರೂ ಗಮನಾರ್ಹ ಪ್ರಮಾಣದ ಹಣವನ್ನು ಹೊಂದಿದ್ದರೆ ಮತ್ತು ಅವರ ಪಾಲುದಾರರ ಜೀವನವನ್ನು ಆರ್ಥಿಕವಾಗಿ ಸುರಕ್ಷಿತವಾಗಿಸಲು ಬಯಸಿದರೆ, ಆಸ್ತಿಯಲ್ಲಿ ಹೂಡಿಕೆಯು ಉತ್ತಮ ಆಯ್ಕೆಯಾಗಿದೆ.
ಎಲ್‌ಐಸಿ, ಎಫ್‌ಡಿ ಹೂಡಿಕೆ
ಷೇರು ಮಾರುಕಟ್ಟೆಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಲು ಬಯಸದ ಜನರು ಈ ಪ್ರೇಮಿಗಳ ದಿನದಂದು ತಮ್ಮ ಸಂಗಾತಿಯ ಹೆಸರಿನಲ್ಲಿ ಎಲ್‌ಐಸಿ ಅಥವಾ ಫಿಕ್ಸಿಡ್ ಡೆಪಾಸಿಟ್ ಯೋಜನೆಯನ್ನು ಖರೀದಿಸುವ ಆಯ್ಕೆಯನ್ನು ಮಾಡಬಹುದು. ಎಲ್‌ಐಸಿ ಪಾಲಿಸಿಗಳು ಮತ್ತು ಎಫ್‌ಡಿಗಳು ಸ್ಥಿರವಾದ ಆದಾಯವನ್ನು ನೀಡುತ್ತವೆ ಮತ್ತು ಸಾಮಾನ್ಯವಾಗಿ ಮಾರುಕಟ್ಟೆಯ ಏರಿಳಿತಗಳು ಇದರ ಮೇಲೆ ಪ್ರಭಾವ ಬೀರುವುದಿಲ್ಲ.
ಇಲ್ಲಿ ಗಮನಿಸಿ: ಈ ಲೇಖನವು ಕೇವಲ ಮಾಹಿತಿಯನ್ನು ಒದಗಿಸಲು ಉದ್ದೇಶವನ್ನು ಮಾತ್ರ ಹೊಂದಿದೆ. ಆರೋಗ್ಯ/ಜೀವ ವಿಮಾ ಯೋಜನೆಗಳು, ಆಸ್ತಿ, ಎಸ್‌ಜಿಬಿ, ಷೇರುಗಳು ಅಥವಾ ಯಾವುದೇ ಐಪಿಒ ಮತ್ತು ಮ್ಯೂಚುವಲ್ ಫಂಡ್‌ಗಳ ಚಂದಾದಾರಿಕೆಗಳನ್ನು ಖರೀದಿಸಲು, ಮಾರಾಟ ಮಾಡಲು ಗುಡ್‌ರಿಟರ್ನ್ಸ್ ಶಿಫಾರಸು ಮಾಡುವುದಿಲ್ಲ.)


Click it and Unblock the Notifications