ಪ್ರೇಮಿಗಳ ದಿನದಂದು ಪ್ರೇಮಿಗಳಿಗೆ ಹಲವಾರು ವಿಶೇಷ ಆಫರ್‌ಗಳನ್ನು ನೀಡಲಾಗುತ್ತದೆ. ಹಾಗೆಯೇ ಈವೆಂಟ್‌ಗಳನ್ನು ಕೂಡಾ ಆಯೋಜನೆ ಮಾಡಲಾಗುತ್ತದೆ. ಆದರೆ ಈ ಬಾರಿ ಸಿಂಗಲ್‌ಗಳಿಗಾಗಿಯೂ ಪ್ರೇಮಿಗಳ ದಿನದ ಈವೆಂಟ್ ಆಯೋಜನೆ ಮಾಡಲಾಗಿದೆ.
ಈ ಪ್ರೇಮಿಗಳ ದಿನದಂದು ಬೆಂಗಳೂರಿನಲ್ಲಿ ಸಿಂಗಲ್ಸ್‌ಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮೂರು ಕೋರ್ಸ್ ಊಟದಿಂದ ಚಿತ್ರಕಲೆ, ವಿಶೇಷ ಕಾರ್ಯಕ್ರಮ, ಡ್ಯಾನ್ಸ್‌ಗಳವರೆಗೂ ನಗರದಾದ್ಯಂತ ಹಲವಾರು ಈವೆಂಟ್‌ಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಸೋಲೋ ಡೇಟ್ ಬಗ್ಗೆ ಗೊತ್ತೆ?
'ಲವ್ ಆನ್ ದಿ ರೂಫ್‌ಟಾಪ್' ಮೂರು-ಕೋರ್ಸ್ ಊಟ, ಸ್ಟ್ಯಾಂಡ್-ಅಪ್ ಕಾಮೆಡಿ ಮತ್ತು ಡಿಜೆ ಸೆಟ್ ಅನ್ನು ಆಯೋಜಿಸುತ್ತಿದೆ. ಇದನ್ನು ದಿ ಸಿಂಗಲ್ಸ್ ಕ್ಲಬ್, ಇಂಡಿಯಾ (ಟಿಎಸ್‌ಸಿಐ) ಫೆಬ್ರವರಿ 14 ರಂದು ಕೋರಮಂಗಲದ ಲವ್ ಊರುನಲ್ಲಿ ಆಯೋಜಿಸಿದೆ. ಪ್ರತಿ ವ್ಯಕ್ತಿಗೆ ನೋಂದಣಿ ಶುಲ್ಕ 4,200 ರೂಪಾಯಿ ಆಗಿದೆ.
"ಈವೆಂಟ್ ಸಂಜೆ 7.30 ಕ್ಕೆ ಪ್ರಾರಂಭವಾಗಿ ರಾತ್ರಿ 11.30 ರವರೆಗೆ ನಡೆಯಲಿದೆ. ಹಾಸ್ಯನಟ ಹರ್ಮನ್ ಅವರ 'ಕಾಮಿಡಿ ಅವರ್' ನೊಂದಿಗೆ ಸಂಜೆ ಪ್ರಾರಂಭವಾಗುತ್ತದೆ. ಇದಾದ ನಂತರ ಚೆಫ್ ಮಾಕೊ ರವೀಂದ್ರನ್ ಸಿದ್ಧಪಡಿಸಿದ ಕ್ಯಾಂಡೆಲ್ ಲೈಟ್ ಭೋಜನ ನಡೆಯಲಿದೆ. ನಾವು ಸ್ವಲ್ಪ ನೃತ್ಯ ಮತ್ತು ಸಂಗೀತದೊಂದಿಗೆ ರಾತ್ರಿಯನ್ನು ಮುಗಿಸುತ್ತೇವೆ," ಎಂದು ಟಿಎಸ್‌ಸಿಐ ಸ್ಥಾಪಕ ಅಶ್ವಿನಿ ಜೈಸಿಮ್ ವಿವರಿಸುತ್ತಾರೆ. ಫೆಬ್ರವರಿ 14 ರಂದು ಸಂಜೆ 7.30 ರಿಂದ 11.30 ರವರೆಗೆ ಕೋರಮಂಗಲದ ಲವ್ ಊರುನಲ್ಲಿ ಈ ಈವೆಂಟ್ ಇದೆ. ವಿವರಗಳಿಗಾಗಿ, ಇನ್‌ಸ್ಟಾಗ್ರಾಂನಲ್ಲಿ @love.ooru ಗೆ ಭೇಟಿ ನೀಡಿ.
ಗ್ಯಾಲೆಂಟೈನ್ಸ್ ಡೇ
ಸಾಮಾನ್ಯವಾಗಿ ಫೆಬ್ರವರಿ 1 ಮತ್ತು 14 ರ ನಡುವೆ ಆಚರಿಸಲಾಗುವ ಗ್ಯಾಲೆಂಟೈನ್ಸ್ ಡೇ ಸ್ತ್ರೀ ಸ್ನೇಹಕ್ಕೆ ಆದ್ಯತೆ ನೀಡುತ್ತದೆ. ಕ್ಯಾಕ್ಟಸ್ ಕೋ ಫೆಬ್ರವರಿ 10 ರಂದು ಜೆಪಿ ನಗರದ ಆರ್ಟ್‌ಖೋಜ್‌ನಲ್ಲಿ ಗ್ಯಾಲೆಂಟೈನ್ಸ್ ಆಚರಣೆಯನ್ನು ಆಯೋಜಿಸುತ್ತಿದೆ. ಮಹಿಳೆಯರಿಗೆ-ಮಾತ್ರ ಈವೆಂಟ್ ಆಗಿದ್ದು, ಐಸ್ ಬ್ರೇಕರ್ಸ್, ಟ್ರಿವಿಯಾ ಕ್ವಿಜ್ ಮತ್ತು ಕ್ಯಾನ್ವಾಸ್ ಪೇಂಟಿಂಗ್ ಸೆಶನ್ ಅನ್ನು ಒಳಗೊಂಡಿರುತ್ತದೆ. ನೋಂದಣಿ ಶುಲ್ಕ 500 ರೂಪಾಯಿ ಆಗಿದೆ.
"ನಾವು ರಸಪ್ರಶ್ನೆಗಾಗಿ ವಿವಿಧ ಬಹುಮಾನಗಳನ್ನು ಹೊಂದಿದ್ದೇವೆ. ಜೊತೆಗೆ ಉಪಹಾರಗಳನ್ನು ನೀಡಲಾಗುವುದು," ಎಂದು ಸಂಸ್ಥೆಯ ಸಹ ಸಂಸ್ಥಾಪಕಿ ಅನುಷಾ ಜೆ ಎಸ್ ಹೇಳುತ್ತಾರೆ. ಇದು 18 ರಿಂದ 35 ರ ವಯೋಮಾನದ ಮಹಿಳೆಯರಿಗೆ ಮುಕ್ತವಾಗಿದೆ. ಈವೆಂಟ್‌ನ ಡ್ರೆಸ್ ಕೋಡ್ ಗುಲಾಬಿ ಅಥವಾ ಬಿಳಿ. ಫೆಬ್ರವರಿ 10 ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 2 ರವರೆಗೆ ಆರ್ಟ್‌ಖೋಜ್, ಜೆಪಿ ನಗರದಲ್ಲಿ ಈವೆಂಟ್ ಇರಲಿದೆ. ವಿವರಗಳಿಗಾಗಿ, ಇನ್‌ಸ್ಟಾಗ್ರಾಂನಲ್ಲಿ @shopthecactusco ಅನ್ನು ಪರಿಶೀಲಿಸಿ.
ಡ್ಯಾನ್ಸ್ ಇಟ್ ಔಟ್
ಬೆಂಗಳೂರು ಮೂಲದ ಏಕ್ತಾಸ್ ಗ್ಯಾದರಿಂಗ್ಸ್ ಫೆಬ್ರವರಿ 11 ರಂದು ಇಂದಿರಾನಗರದಲ್ಲಿ ಸಿಂಗಲ್ಸ್‌ಗಾಗಿ ಬಚಾಟಾ ಕಾರ್ಯಾಗಾರವನ್ನು ಆಯೋಜಿಸುತ್ತಿದೆ. ಭಾಗವಹಿಸುವವರಿಗೆ ಸಮಾನ ಮನಸ್ಕ ಜನರನ್ನು ಭೇಟಿ ಮಾಡಲು ಸಹಾಯ ಮಾಡಲು ನೃತ್ಯ ರೂಪವನ್ನು ಆಯ್ಕೆ ಮಾಡಲಾಗಿದೆ. ಲೌರ್ದ್ ವಿಜಯ್ ಡ್ಯಾನ್ಸ್ ಸ್ಟುಡಿಯೋ (ಎಲ್‌ವಿಡಿಎಸ್) ಸಂಸ್ಥಾಪಕ ಲೂರ್ದ್ ವಿಜಯ್ ಅವರು ನೃತ್ಯ ಕಾರ್ಯಾಗಾರವನ್ನು ನಡೆಸಲಿದ್ದಾರೆ.
ಇದು ಆರಂಭಿಕರಿಗಾಗಿ ಸೂಕ್ತವಾಗಿದೆ. "1600 ರೂಪಾಯಿ ಶುಲ್ಕವು ಕಾರ್ಯಾಗಾರ ಮತ್ತು ಒಂದು ಲೋಟ ವೈನ್ ಅನ್ನು ಒಳಗೊಂಡಿರುತ್ತದೆ," ಎಂದು ಏಕ್ತಾ ಗ್ಯಾದರಿಂಗ್ಸ್ ನಡೆಸುತ್ತಿರುವ ಏಕ್ತಾ ಸಿಂಗ್ ತಿಳಿಸುತ್ತಾರೆ. ಫೆಬ್ರವರಿ 11 ರಂದು ಸಂಜೆ 7 ರಿಂದ 9 ರವರೆಗೆ ಇಂದಿರಾನಗರದ ಎಲ್.ವಿ.ಡಿ.ಎಸ್.ಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನೋಂದಾವಣಿಗೆ 80951 90255 ಅನ್ನು ಸಂಪರ್ಕಿಸಿ.
ಲೆಟ್ಸ್ ಕನೆಕ್ಟ್
ಪ್ರೇಮ್-ಎ-ಕಲ್ಚರ್, ಸ್ವಯಂ ಪ್ರೀತಿಯನ್ನು ಉತ್ತೇಜಿಸಲು ಮೀಸಲಾಗಿರುವ ಸಮುದಾಯವು ಸಿಂಗಲ್ಸ್‌ಗಾಗಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಫೆಬ್ರವರಿ 10 ರಂದು, ತಂಡವು ಕುಕ್ ಟೌನ್‌ನಲ್ಲಿರುವ ಆರೆಂಜ್ ಆರ್ಕ್ ಕಮ್ಯುನಿಟಿ ಸ್ಟುಡಿಯೋದಲ್ಲಿ 'ಎ ಡೇಟ್ ವಿತ್ ಸೆಲ್ಫ್' ಅನ್ನು ಆಯೋಜಿಸುತ್ತದೆ.
"ಭಾಗವಹಿಸುವವರು ತಮ್ಮೊಂದಿಗೆ ಆಳವಾದ ಸಂಪರ್ಕವನ್ನು ಹೊಂದಲು ಸಹಾಯ ಮಾಡುವುದು ಕಾರ್ಯಾಗಾರದ ಉದ್ದೇಶವಾಗಿದೆ. ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಹಲವಾರು ಚಟುವಟಿಕೆಗಳಿವೆ. ಈವೆಂಟ್‌ಗೆ ಸೇರಲು ನೀವು ಒಂಟಿಯಾಗಿರಬೇಕಾಗಿಲ್ಲ," ಎಂದು ಸಂಸ್ಥಾಪಕಿ ಗೀತಿಕಾ ಅರೋರಾ ಹೇಳುತ್ತಾರೆ.
ನೋಂದಣಿ ಶುಲ್ಕ 1,499 ರೂಪಾಯಿ ಆಗಿದೆ. ತಿಂಡಿಗಳು ಕೂಡಾ ಇದರಲ್ಲಿ ಸೇರಿದೆ. ಎರಡನೇ ಕಾರ್ಯಕ್ರಮ ಫೆಬ್ರವರಿ 18 ರಂದು ಅಶೋಕ್ ನಗರದ ರೆಕಾರ್ಡ್ ರೂಮ್‌ನಲ್ಲಿ ನಡೆಯಲಿದೆ. ಸೋಲ್‌ಫುಲ್ ಸ್ಪಿನ್ಸ್' ಎಂದು ಕರೆಯಲ್ಪಡುವ ಸಿಂಗಲ್ಸ್ ಮಿಕ್ಸರ್ ಸಂಗೀತ, ನೃತ್ಯ ಮತ್ತು ಸಂಭಾಷಣೆಯ ಸಹಾಯದಿಂದ ಸ್ವಯಂ ಪ್ರೀತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
"ನಾವು ಪ್ರೀತಿ ಮತ್ತು ಆತ್ಮವಿಶ್ವಾಸವನ್ನು ಪ್ರೇರೇಪಿಸುವ ಸಂಗೀತವನ್ನು ನುಡಿಸುತ್ತೇವೆ, ಜೊತೆಗೆ ಕೆಲವು ಮೋಜಿನ ಚಟುವಟಿಕೆಗಳು ಮತ್ತು ಐಸ್ ಬ್ರೇಕರ್‌ಗಳು ಇರುತ್ತವೆ. ಈವೆಂಟ್ ಸರಿಸುಮಾರು 2 ಗಂಟೆಗಳಿರುತ್ತದೆ ಮತ್ತು ತಿಂಡಿಗಳನ್ನು ಒದಗಿಸಲಾಗುವುದು," ಎಂದು ಅವರು ಮೆಟ್ರೋಲೈಫ್‌ಗೆ ಹೇಳುತ್ತಾರೆ.
ಪ್ರತಿ ವ್ಯಕ್ತಿಗೆ 1,500 ರೂಪಾಯಿ ಶುಲ್ಕವಾಗಿದೆ. ಎ ಡೇಟ್ ವಿತ್ ಸೆಲ್ಫ್ ಫೆಬ್ರವರಿ 10 ರಂದು, ಕುಕ್ ಟೌನ್‌ನ ಆರೆಂಜ್ ಆರ್ಕ್ ಕಮ್ಯುನಿಟಿ ಸ್ಟುಡಿಯೋದಲ್ಲಿ ಸಂಜೆ 5 ರಿಂದ 7 ರವರೆಗೆ ಇರಲಿದೆ. ಸೋಲ್ ಫುಲ್ ಸ್ಪಿನ್ಸ್ ಫೆಬ್ರವರಿ 18, ಸಂಜೆ 5.30 ರಿಂದ 7.30, ರೆಕಾರ್ಡ್ ರೂಮ್, ಅಶೋಕ್ ನಗರದಲ್ಲಿ ಇರಲಿದೆ. ವಿವರಗಳಿಗಾಗಿ, ಇನ್‌ಸ್ಟಾಗ್ರಾಂನಲ್ಲಿ @prem_a_culture ಮತ್ತು @recordroomindia ಅನ್ನು ಪರಿಶೀಲಿಸಿ.


Click it and Unblock the Notifications