"ಇಂಡಿಯನ್ ಪ್ರೀಮಿಯರ್ ಲೀಗ್" (ಐಪಿಎಲ್) ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅತ್ಯಂತ ಜನಪ್ರಿಯ ತಂಡವಾಗಿದೆ. ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 2012 ಮತ್ತು 2014 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿ ತನ್ನಾದಾಗಿಸಿಕೊಂಡಿದೆ. ವಿಶೇಷವೆಂದರೆ ಕೆಕೆಆರ್ ನ ಸಂಪೂರ್ಣ ಉಸ್ತುವಾರಿಯನ್ನು ಶಾರುಖ್ ಖಾನ್ ಅವರ ವಿಶ್ವಾಸಾರ್ಹ ಉದ್ಯೋಗಿಯಾಗಿರುವ ಕನ್ನಡಿಗರೊಬ್ಬರು ನಿರ್ವಹಿಸುತ್ತಿದ್ದಾರೆ.
ಶಾರುಖ್ ಖಾನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮಾಲೀಕರಾಗಿದ್ದಾರೆ. ಇದು ದೇಶದ ಪ್ರಮುಖ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ.
ಈ ಎರಡು ಸಂಸ್ಥೆಗಳ ಸಿಇಒ 'ವೆಂಕಿ ಮೈಸೂರು' ಆಗಿದ್ದಾರೆ. ರೆಡ್ ಚಿಲ್ಲೀಸ್ ಸಿಇಒ, ಕೆಕೆಆರ್ ತಂಡದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ವೆಂಕಿ ಮೈಸೂರು ಕರ್ನಾಟಕದ ಮೈಸೂರಿನಲ್ಲಿ ಜನಿಸಿದರು. ಅವರ ಆರಂಭ ದಿನಗಳಲ್ಲಿ ಅವರು ರಣಜಿ ಟ್ರೋಫಿಗೆ ಪ್ರವೇಶಿಸುವ ಪ್ರಯತ್ನದಲ್ಲಿದ್ದರು. ಆದರೆ ತಂದೆಯ ಒತ್ತಾಯ ಮತ್ತು ಆಸೆಯಂತೆ ಕ್ರಿಕೆಟ್ ಗೆ ಗುಡ್ ಬೈ ಹೇಳಿ ಎಂಬಿಎ ಮುಗಿಸಿದರು. ಆದರೆ ವಿಧಿ ಬರೆದಂತೆ ಕೆಕೆಆರ್ ತಂಡದೊಂದಿಗೆ ಕ್ರಿಕೆಟ್ ನಂಟು ಮತ್ತೆ ಜೊತೆಗೂಡಿತು. 2010 ರಲ್ಲಿ, ವೆಂಕಿ ಮೈಸೂರು ಅವರು ಮೆಟ್‌ಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬಳಿಕ ಇದನ್ನು ತ್ಯಜಿಸಿ ಶಾರುಖ್ ಖಾನ್ ಅವರ ಕೆಕೆಆರ್ ಗೆ ಸೇರಿದರು.
ವೆಂಕಿ ಮೈಸೂರು ನಿವ್ವಳ ಆದಾಯ ಎಷ್ಟಿದೆ?
ಮಾಧ್ಯಮಗಳ ವರದಿ ಪ್ರಕಾರ ವೆಂಕಿ ಅವರ ನಿವ್ವಳ ಮೌಲ್ಯ ಸುಮಾರು 14 ಕೋಟಿ ರೂಪಾಯಿ ಆದರೂ ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ವೆಂಕಿ ಮೈಸೂರು ಅವರ ಪತ್ನಿ ವೀಣಾ. ಈ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ ತಂಡ ಟ್ರಿನ್‌ಬಾಗೊ ನೈಟ್ ರೈಡರ್ಸ್ (ಆಗ ಟ್ರಿನಿಡಾಡ್ ಮತ್ತು ಟೊಬಾಗೊ ರೆಡ್ ಸ್ಟೀಲ್ಸ್) ಅನ್ನು ಖರೀದಿಸುವಲ್ಲಿ ವೆಂಕಿಯವರದ್ದೇ ಪ್ರಮುಖ ಪಾತ್ರವಿದೆ ಎಂದು ನಂಬಲಾಗಿದೆ.
ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಮಾರ್ಕೆಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಎಂಬಿಎ ಮಾಡಿದರು. ಕೆಕೆಆರ್‌ಗೆ ಸೇರುವ ಮೊದಲು ವೆಂಕಿ ಮೈಸೂರು ವಿಮಾ ಉದ್ಯಮದಲ್ಲಿ ಭಾರಿ ಹೆಸರು ಪಡೆದಿದ್ದರು. ವೆಂಕಿ ಮೈಸೂರು 2002 ರಿಂದ 2003 ರವರೆಗೆ ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್‌ನ ಬೆಂಗಳೂರು ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ವಿಮಾ ಉದ್ಯಮದಲ್ಲಿ 25 ವರ್ಷಗಳ ಅನುಭವವನ್ನು ಹೊಂದಿದ್ದಾರೆ, 21 ವರ್ಷಗಳ ಕಾಲ ಮೆಟ್‌ಲೈಫ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ.
ಅವರು ಯುಎಸ್‌ನಲ್ಲೂ ನೆಲೆಸಿದ್ದ ಅವರು ತಮ್ಮ ಕಾಲೇಜು ದಿನಗಳಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಪರವಾಗಿಯೂ ಆಡಿದ್ದರು. ಫೋರ್ಬ್ಸ್ ಪ್ರಕಾರ, ಕೋಲ್ಕತ್ತಾ ನೈಟ್ ರೈಡರ್ಸ್ ನ ನಿವ್ವಳ ಮೌಲ್ಯ $1.1 ಬಿಲಿಯನ್ ಮತ್ತು ಆದಾಯ $41.2 ಮಿಲಿಯನ್ ಆಗಿದ್ದು ಇದರ ಆದಾಯ 14.1 ಮಿಲಿಯನ್ ಡಾಲರ್ ಆಗಿದೆ.
ಶಾರುಖ್ ಖಾನ್ ಅಂಗರಕ್ಷಕ
ಶಾರುಖ್ ಖಾನ್ ದೇಶದ ಅತಿದೊಡ್ಡ ಸೂಪರ್‌ಸ್ಟಾರ್ ಆಗಿದ್ದು, ತಮ್ಮ ಶೂಟಿಂಗ್ ಹಾಗೂ ಸಿನಿಮಾ ಪ್ರಮೋಷನ್ಸ್‌ಗಾಗಿ ಸಾಕಷ್ಟು ಪ್ರಯಾಣ ಮಾಡುತ್ತಿರುತ್ತಾರೆ. ಇದಕ್ಕೆಲ್ಲ ಯಾವುದೇ ತೊಂದರೆಯಾಗದಂತೆ ಅವರ ಬಾಡಿಗಾರ್ಡ್ ರವಿ ಸಿಂಗ್ ಸದಾ ಜತೆಯಲ್ಲಿರುತ್ತಾರೆ. ಸಿನಿ ಇಂಡಸ್ಟ್ರಿಯಲ್ಲಿ ರವಿ ಸಿಂಗ್ ಅತಿಹೆಚ್ಚು ಸಂಭಾವನೆ ಪಡೆಯುವ ಅಂಗರಕ್ಷರಾಗಿದ್ದಾರೆ. ಅವರು ವಾರ್ಷಿಕ 2-3 ಕೋಟಿ ರೂ. ಸಂಪಾದನೆ ಮಾಡುತ್ತಿದ್ದಾರೆ.


Click it and Unblock the Notifications