ಪ್ರಸ್ತುತ ವಿಜಯ್ ಮಲ್ಯ ಎಂಬ ಹೆಸರು ಕೇಳಿದಾಗ ಭಾರತದ ಬ್ಯಾಂಕುಗಳಿಗೆ ಪಂಗನಾಮ ಹಾಕಿ ಓಡಿ ಹೋದ ಉದ್ಯಮಿ ಎಂಬುವುದು ನಮ್ಮ ತಲೆಯಲ್ಲಿ ಬರುತ್ತದೆ. ಆದರೆ ಒಂದು ಕಾಲದಲ್ಲಿ ವಿಜಯ್ ಮಲ್ಯ ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು, ಮತ್ತು ದೇಶದ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯ ಸಂಕೇತ ಎನಿಸಿಕೊಂಡಿದ್ದರು. ಆದರೆ ಇಂದು ಭಾರತದ 17 ಬ್ಯಾಂಕುಗಳಿಗೆ 9,000 ಕೋಟಿ ರೂಪಾಯಿಗೂ ಅಧಿಕ ಸಾಲವನ್ನು ವಂಚನೆ ಮಾಡಿದ, ಮನಿಲಾಂಡರಿಂಗ್ ಮಾಡಿದ, ದೇಶದಿಂದ ಪರಾರಿಯಾದ ಆರ್ಥಿಕ ಅಪರಾಧಿಯಾಗಿದ್ದಾರೆ.
ವಿಹಾರ ನೌಕೆಗಳು, ಖಾಸಗಿ ಜೆಟ್‌ಗಳು ಮತ್ತು ಮುಂಬೈನ ಐಷಾರಾಮಿ ಮಹಲು ಸೇರಿದಂತೆ ಐಷಾರಾಮಿ ಜೀವನಕ್ಕೆ ಹೆಸರುವಾಸಿಯಾದ ಉದ್ಯಮಿ, ಸಂಸತ್ತಿನ ಸದಸ್ಯ ಮತ್ತು 'ಕಿಂಗ್ ಆಫ್ ಗುಡ್ ಟೈಮ್ಸ್' ಮಲ್ಯ ತನ್ನ ಉನ್ನತ ಸ್ಥಾನವನ್ನು ಕಳೆದುಕೊಂಡಿದ್ದು ಹೇಗೆ?. ದೇಶದಿಂದ ಪರಾರಿಯಾದ ಆರ್ಥಿಕ ಅಪರಾಧಿ ಎನಿಸಿಕೊಂಡಿದ್ದು ಹೇಗೆ, ವಾಂಟೆಡ್ ವ್ಯಕ್ತಿಯಾಗಿದ್ದು ಹೇಗೆ ಎಂದು ತಿಳಿಯಲು ಮುಂದೆ ಓದಿ....

ವಿಜಯ್ ಮಲ್ಯ ಉದ್ಯಮದ ಆರಂಭ
ವಿಜಯ್ ಮಲ್ಯ ರೆಸ್ಟೋರೆಂಟ್, ಮದ್ಯದ ತಯಾರಿ ಸಂಸ್ಥೆ, ವಿಮಾನಯಾನ ಸಂಸ್ಥೆಗಳನ್ನು ಒಳಗೊಂಡಿರುವ ಯುನೈಟೆಡ್ ಬ್ರೂವರೀಸ್ ಗ್ರೂಪ್‌ನ ಅಧ್ಯಕ್ಷರಾಗಿದ್ದ ವಿಟ್ಟಲ್ ಮಲ್ಯರ ಕುಟುಂಬದಲ್ಲಿ ಜನಿಸಿದವರು. ಭಾರತ ಮತ್ತು ಯುನೈಟೆಡ್ ಸ್ಟೇಟ್‌ನಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಮಲ್ಯ ತನ್ನ ತಂದೆಯ ವ್ಯವಹಾರಕ್ಕೆ ಸೇರಿಕೊಂಡಿದ್ದಾರೆ. ತನ್ನ 28 ನೇ ವಯಸ್ಸಿನಲ್ಲಿ ಗ್ರೂಪ್‌ನ ಅಧ್ಯಕ್ಷರಾದರು. ಹಾಗೆಯೇ ಸಂಸ್ಥೆಯನ್ನು ವಿಸ್ತರಿಸಲು ಆರಂಭ ಮಾಡಿದರು.
ವಿಜಯ್ ಮಲ್ಯ: ವ್ಯಾಪಾರಗಳ ಮಾಲೀಕತ್ವ
ಯುನೈಟೆಡ್ ಬ್ರೂವರೀಸ್ ಗ್ರೂಪ್‌ನ ಅಧ್ಯಕ್ಷರಾಗಿ ವಿಜಯ್ ಮಲ್ಯ 2005 ರಲ್ಲಿ ಕಿಂಗ್‌ಫಿಶರ್ ಏರ್‌ಲೈನ್ಸ್ ಅನ್ನು ಪ್ರಾರಂಭಿಸಿದರು. ಇದು ಶೀಘ್ರವಾಗಿ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿ ಬದಲಾವಣೆ ಹೊಂದಿತು. 2007 ರಲ್ಲಿ ಫೋರ್ಸ್ ಇಂಡಿಯಾ ಫಾರ್ಮುಲಾ ಒನ್ ತಂಡವನ್ನು ಖರೀದಿ ಮಾಡಿದ ಮಲ್ಯ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪಾಲನ್ನು ಕೂಡಾ ಪಡೆದರು.
ಇಷ್ಟು ಮಾತ್ರವಲ್ಲದೆ ಹಲವಾರು ವ್ಯವಹಾರ ಸಂಬಂಧಗಳನ್ನು ಹೊಂದಿದ್ದ ವಿಜಯ್ ಮಲ್ಯ, 2007 ರಲ್ಲಿ ಈಸ್ಟ್ ಇಂಡಿಯಾ ಹೋಟೆಲ್ಸ್ ಹಾಗೂ ಸ್ಕಾಟಿಷ್ ವಿಸ್ಕಿ ಬ್ರಾಂಡ್ ವೈಟ್ ಆಂಡ್ ಮ್ಯಾಕೆ ಅನ್ನು ಕೂಡಾ ತನ್ನ ಸ್ವಾಧೀನಕ್ಕೆ ಪಡೆದುಕೊಂಡರು. ಇಷ್ಟೆಲ್ಲ ಬೆಳವಣಿಗೆ ಕಂಡ ವಿಜಯ್ ಮಲ್ಯ ಅವನತಿ ಕಂಡಿದ್ದೆಲ್ಲಿ ನೋಡಿ...
ವಿಜಯ್ ಮಲ್ಯ ಅವನತಿ ಕಂಡಿದ್ದೆಲ್ಲಿ?
ಇಷ್ಟೆಲ್ಲ ಶ್ರೀಮಂತಿಕೆಯೊಂದಿಗೆ, ಬೆಳವಣಿಗೆಯೊಂದಿಗೆ ಐಷಾರಾಮಿ ಜೀವನವನ್ನು ನಡೆಸುತ್ತಾ ಬಂದಿದ್ದ ವಿಜಯ್ ಮಲ್ಯ ಒಮ್ಮೆಲೇ ತೀವ್ರ ಸಂಕಷ್ಟದಲ್ಲಿ ಸಿಲುಕಿದರು. 2012 ರಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್‌ನಲ್ಲಿ ಆರ್ಥಿಕ ತೊಂದರೆ ಉದ್ಭವಿಸಿತು. ಇದಾದ ಬಳಿಕ ವಿಜಯ್ ಮಲ್ಯ ಅದೃಷ್ಟವು ಬದಲಾಗಲು ಆರಂಭಿಸಿತು. ಈ ಸಂಸ್ಥೆಯನ್ನು ಕಾಪಾಡಿಕೊಳ್ಳಲು ಮಲ್ಯ ಹೆಚ್ಚಿನ ಹಣದ ಫಂಡಿಂಗ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ಅಧಿಕ ಸಾಲ, ನಗದು ಕೊರತೆ ಮತ್ತು ಹಣ ಸಂಗ್ರಹ ಮಾಡಲು ಸಾಧ್ಯವಾಗದ ಅಸಮರ್ಥತೆ ಎಲ್ಲವೂ ಏರ್‌ಲೈನ್‌ನ ಕಾರ್ಯಾಚರಣೆಯು ಕ್ರಮೇಣ ಕುಸಿತಕ್ಕೆ ಕಾರಣವಾಯಿತು. ಅಂತಿಮವಾಗಿ ಅದನ್ನು ಸ್ಥಗಿತಗೊಳಿಸಲಾಯಿತು. 2013 ರಲ್ಲಿ, ಈ ಸಂಸ್ಥೆಯ ವಿಮಾನಯಾನವನ್ನೇ ಅಂತಿಮಗೊಳಿಸಲಾಯಿತು. ಇದರಿಂದಾಗಿ ಮಲ್ಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಪರಿಸ್ಥಿತಿ ಉಂಟಾಯಿತು.
ಕಿಂಗ್‌ಫಿಶರ್ ಏರ್‌ಲೈನ್ಸ್ ವೈಫಲ್ಯ ಹೊಂದಿದ್ದರೂ ಕೂಡಾ ವಿಜಯ್ ಮಲ್ಯ ಮಾತ್ರ ಶ್ರೀಮಂತ ವ್ಯಕ್ತಿಯಾಗಿಯೇ ಉಳಿದಿದ್ದರು. 2016 ರಲ್ಲಿ, ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಮಲ್ಯರನ್ನು ಸಾಲ ಮರುಪಾವತಿ ಮಾಡದ ವ್ಯಕ್ತಿ ಎಂದು ಘೋಷಣೆ ಮಾಡಿತು. ಹಾಗೆಯೇ ಕಿಂಗ್‌ಫಿಷರ್ ಏರ್‌ಲೈನ್ಸ್‌ನಿಂದ ಯುನೈಟೆಡ್ ಕಿಂಗ್‌ಡಂನ ಇತರ ಕಂಪನಿಗಳಿಗೆ ಮಲ್ಯ ಹಣವನ್ನು ವರ್ಗಾಯಿಸಿದ್ದಾರೆ ಎಂದು ಬ್ಯಾಂಕ್ ಒಕ್ಕೂಟವು ಆರೋಪಿಸಿತು.
ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಅಧ್ಯಕ್ಷ ಸ್ಥಾನವನ್ನು ಬಳಸಿಕೊಂಡು ವಿಜಯ್ ಮಲ್ಯ ಭಾರತೀಯ ಬ್ಯಾಂಕ್‌ಗಳಿಂದ ಸಾಲವನ್ನು ಪಡೆದುಕೊಂಡಿದ್ದಾರೆ, ಆದರೆ ಅದನ್ನು ಸಾಗರೋತ್ತರ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಆ ಹಣವನ್ನು ಯುನೈಟೆಡ್ ಕಿಂಗ್‌ಡಂನಲ್ಲಿ ಆಸ್ತಿಗಳನ್ನು ಖರೀದಿಸಲು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗೆ ಹಲವಾರು ಆರ್ಥಿಕ ಅಪರಾಧಗಳಿಗೆ ಮಲ್ಯ ಗುರಿಯಾಗಿದ್ದಾರೆ.
ಯುಕೆಗೆ ಪರಾರಿಯಾದ ವಿಜಯ್ ಮಲ್ಯ
ಮಾರ್ಚ್ 2016 ರಲ್ಲಿ, ವಿಜಯ್ ಮಲ್ಯ ಭಾರತವನ್ನು ತೊರೆದು ಯುನೈಟೆಡ್ ಕಿಂಗ್‌ಡಮ್‌ಗೆ ಹೋಗಿ ನೆಲೆಸಿದ್ದಾರೆ. ಅಂದಿನಿಂದ ಇಂದಿನವರೆಗೂ ವಿಜಯ್ ಮಲ್ಯ ಅಲ್ಲಿಯೇ ನೆಲೆಸಿದ್ದಾರೆ. ಭಾರತದಲ್ಲಿ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಗಳನ್ನು ಎದುರಿಸುತ್ತಿರುವ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡುವ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದೆ. ಆದರೆ ಈ ಪ್ರಕ್ರಿಯೆಯು ದಿನ ಕಳೆದಂತೆ ವಿರಳ ಹಾಗೂ ನಿಧಾನವಾಗುತ್ತಿದೆ. ಮಲ್ಯ ಯುಕೆ ನ್ಯಾಯಾಲಯದ ಮೊರೆಯನ್ನು ಹೋಗಿದ್ದಾರೆ.
ತನಿಖೆಗೆ ಅಧಿಕ ಸಮಯ ಕೋರಿದ ಸಿಬಿಐ
ಇನ್ನೊಂದೆಡೆ ಮದ್ಯದ ದೊರೆ ವಿಜಯ್ ಮಲ್ಯ ಸಾಲ ಹಗರಣದ ಪ್ರಕರಣದ ತನಿಖೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಹೆಚ್ಚಿನ ಸಮಯ ಕೋರಿದೆ. ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಪರ ಹಾಜರಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಡಿಪಿ ಸಿಂಗ್ ಸಿಬಿಐನಲ್ಲಿನ ಆಂತರಿಕ ಬದಲಾವಣೆಗಳಿಂದಾಗಿ ತನಿಖೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಆಂತರಿಕ ಬದಲಾವಣೆಗಳಿಂದಾಗಿ ಪ್ರಕರಣದ ತನಿಖಾಧಿಕಾರಿಯನ್ನು ಬದಲಾಯಿಸಲಾಗಿದೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಸೇರಿದಂತೆ ಕೆಲವು ಇಲಾಖೆಗಳನ್ನು ವಿಲೀನಗೊಳಿಸಲಾಗಿದೆ. ಈ ಕಾರಣದಿಂದ ಸಿಬಿಐ ತನಿಖೆಗೆ ಇನ್ನಷ್ಟು ಕಾಲಾವಕಾಶ ಬೇಕಾಗಿದೆ ಎಂದು ಹೇಳಿದ್ದಾರೆ. ವಿಶೇಷ ಸಿಬಿಐ ನ್ಯಾಯಾಧೀಶ ಎಸ್‌ಪಿ ನಾಯಕ್ ನಿಂಬಾಳ್ಕರ್ ಲಿಖಿತ ಅರ್ಜಿಯನ್ನು ಸಲ್ಲಿಸುವಂತೆ ಸಿಂಗ್‌ಗೆ ತಿಳಿಸಿದ್ದಾರೆ. ಸೆಪ್ಟೆಂಬರ್ 6 ರಂದು ಮುಂದಿನ ವಿಚಾರಣೆ ವೇಳೆ ಡಿಪಿ ಸಿಂಗ್ ಅರ್ಜಿ ಸಲ್ಲಿಸಲಿದ್ದಾರೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications