Vijay Shekhar Sharma: 10,000 ವೇತನ ಪಡೆಯುತ್ತಿದ್ದ ವಿಜಯ್‌ ಶರ್ಮಾ ಪೇಟಿಎಂ ಕಂಪನಿ‌ ಕಟ್ಟಿದ ಕಥೆ!

ದೇಶದಲ್ಲಿ ನೋಟು ಅಮಾನ್ಯೀಕರಣದಿಂದಾಗಿ ಜನರು ಬ್ಯಾಂಕ್‌ಗಳು ಹಾಗೂ ಎಟಿಎಂಗಳ ಮುಂದೆ ಹಣ ತೆಗೆಯುವುದಕ್ಕೆ ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದ್ದ ಸಂದರ್ಭದಲ್ಲಿ ಆನ್‌ಲೈನ್‌ ವಹಿವಾಟುಗಳು ಅದಕ್ಕೆ ಒಂದು ಪರಿಹಾರವಾಗತೊಡಗಿತ್ತು. ಡಿಜಿಟಲ್‌ ವ್ಯವಹಾರವನ್ನು ಉತ್ತೇಜಿಸಲು ಈ ಸಂದರ್ಭವನ್ನು ಸರ್ಕಾರವು ಬಳಸಿಕೊಂಡಿತ್ತು.

ಇದರ ಪರಿಣಾಮವಾಗಿ ಆಗ ಪೇಟಿಎಂ ಎಲ್ಲರಿಗೂ ಒಂದು ಆಯ್ಕೆಯಾಗಿ ಬದಲಾಯಿತು. ಈ ಪೇಟಿಎಂನ ಹಿಂದಿನ ವ್ಯಕ್ತಿಯಾದ ವಿಜಯ್‌ ಶೇಖರ್‌ ಅವರು ಬಡತನದಿಂದ ಶ್ರೀಮಂತಿಕೆಯತ್ತ ಬೆಳೆದ ಕಥೆ ಇಲ್ಲಿದೆ. ವಿಜಯ್‌ ಶೇಖರ್‌ ಶರ್ಮಾ ಯಾರು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 10,000 ವೇತನ ಪಡೆಯುತ್ತಿದ್ದಾತ ಪೇಟಿಎಂ ಕಂಪನಿ‌ ಕಟ್ಟಿದ ಕಥೆ!

ವಿಜಯ್‌ ಶೇಖರ್‌ ಶರ್ಮಾ ಯಾರು?: ವಿಜಯ್‌ ಶೇಖರ್‌ ಶರ್ಮಾ ಅವರು ಸುಲೋಮ್‌ ಪ್ರಕಾಶ್‌ ಹಾಗೂ ಆಶಾ ಶರ್ಮಾ ಅವರ ನಾಲ್ಕು ಮಕ್ಕಳ ಪೈಕಿ 3ನೇ ಮಗನಾಗಿ 1978ರಲ್ಲಿ ಜನಿಸಿದರು. ತಮ್ಮ ಮಗ ಒಬ್ಬ ಪ್ರತಿಭಾವಂತ ಎಂಬುದನ್ನು ಅವರ ಪೋಷಕರು ಬಹಳ ಬೇಗನೇ ಅರ್ಥಮಾಡಿಕೊಂಡಿದ್ದರು. ವಿಜಯ್‌ ಶೇಖರ್‌ ಶರ್ಮಾ ಅವರು ಕೇವಲ 15 ವರ್ಷ ವಯಸ್ಸಿರುವಾಗಲೇ ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು.

ವಿಜಯ್‌ ಶೇಖರ್‌ ಅವರು 1997ರಲ್ಲಿ ಬಿಟೆಕ್‌ ಕಲಿಯುತ್ತಿರುವಾಗಲೇ ಡಾಟ್‌ಕಾಮ್‌ ಕಂಪೆನಿ ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಇಂಡಿಯಾಸೈಟ್‌.ನೆಟ್‌ ಎಂಬ ವೆಬ್‌ಸೈಟ್‌ ಅನ್ನು ರೂಪಿಸಿದ್ದರು. ಅದಕ್ಕಾಗಿ ಅವರು 5 ಲಕ್ಷ ರೂಪಾಯಿ ಹಣವನ್ನು ಗಳಿಸಿದ್ದರು.

ಇಂಟರ್‌ನೆಟ್‌ನಲ್ಲಿ ವಿಪುಲ ಅವಕಾಶವಿದೆ ಎಂಬುದನ್ನು ಅರಿತುಕೊಂಡ ವಿಜಯ್‌ ಶೇಖರ್‌ ಅವರು ಒನ್‌97 ಕಮ್ಯೂನಿಕೇಷನ್ಸ್‌ ಎಂಬ ವೆಬ್‌ಸೈಟ್‌ ಅನ್ನು ಪ್ರಾರಂಭಿಸಿ, ಆ ಮೂಲಕ ಮಾಹಿತಿ, ಕ್ರಿಕೆಟ್‌ ರೇಟಿಂಗ್ಸ್‌, ರಿಂಗ್‌ಟೋನ್ಸ್‌, ಜೋಕ್ಸ್‌ ಹಾಗೂ ಟೆಸ್ಟ್‌ ಸ್ಕೋರ್‌ಗಳನ್ನು ನೀಡಲು ಪ್ರಾರಂಭಿಸಿದರು. ಈ ನಡುವೆ 2003ರಲ್ಲಿ ಸ್ನೇಹಿತರ ನೆರವಿನೊಂದಿಗೆ ಒನ್‌97 ಕಮ್ಯೂನಿಕೇಷನ್ಸ್‌ ಅನ್ನು ಪ್ರಾರಂಭಿಸಿದ್ದಾಗ ಹಣಕಾಸಿನ ಕೊರತೆಯನ್ನು ಎದುರಿಸಿದ್ದರು.

ಈ ನಡುವೆ ಕಂಪೆನಿಯ ಹಾಗೂ ತಮ್ಮ ಖರ್ಚು-ವೆಚ್ಚಗಳಿಗಾಗಿ ಕೆಲಸಕ್ಕೆ ಸೇರಿಕೊಂಡರು. ಆಗ ಪ್ರತಿ ತಿಂಗಳಿಗೆ 10,000 ರೂಪಾಯಿ ಸಂಪಾದನೆ ಮಾಡುತ್ತಿದ್ದರು. 2004ರಲ್ಲಿ ತಮ್ಮ ಒಬ್ಬರು ಸ್ನೇಹಿತರು ಒನ್‌97 ಕಮ್ಯೂನಿಕೇಷನ್‌ ಅನ್ನು 8 ಲಕ್ಷ ರೂಪಾಯಿಗೆ ಖರೀದಿಸಲು ನಿರ್ಧರಿಸಿದ್ದರು. 2007ರ ವೇಳೆಗೆ ಹೆಚ್ಚಿನ ಹಣ ಖರ್ಚು ಮಾಡಲು ಉತ್ತೇಜಿಸಲ್ಪಟ್ಟ ಪರಿಣಾಮವಾಗಿ 2008ರ ವೇಳೆಗೆ ಕಂಪೆನಿಯ ಆದಾಯವು ಕೋಟಿಗೆ ತಲುಪಿತು.

ಪೇಟಿಎಂನ ಆರಂಭ

2010ರಲ್ಲಿ ದೇಶದಲ್ಲಿ ಆಗಷ್ಟೇ ಪ್ರಾರಂಭವಾಗಿದ್ದ 3G ನೆಟ್‌ವರ್ಕ್‌ನಿಂದಾಗಿ ಐಟಿ ಕ್ಷೇತ್ರದ ವ್ಯಾಪಾರ-ವಹಿವಾಟು ವೃದ್ಧಿಸಬಹುದು ಎಂಬುದನ್ನು ಮನಗಂಡರು. ಈ ಹಿನ್ನೆಲೆಯಲ್ಲಿ ಪೇಟಿಎಂ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಕ್ಕೆ ಅವಕಾಶವಿದೆ ಎನ್ನುವುದು ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಅದು ಪ್ರಾರಂಭವಾದ ಕೇವಲ 10 ತಿಂಗಳಲ್ಲಿ ಆಪ್‌ ಮೂಲಕ 15 ಮಿಲಿಯನ್‌ ಪೇಟಿಎಂ ವಾಲೆಟ್‌ ಅನ್ನು ಹೊಂದುವಲ್ಲಿ ಯಶಸ್ವಿಯಾದರು.

ಇದು ದೇಶದ ಜನಪ್ರಿಯ ಡಿಜಿಟಲ್‌ ಪ್ಲಾಟ್‌ಫಾರ್ಮ್‌ ಆಗಿ ಬದಲಾಯಿತು. ನೋಟು ಅಮಾನ್ಯೀಕರಣದ ಪರಿಣಾಮವಾಗಿ ಪೇಟಿಎಂ ವಹಿವಾಟುಗಳಲ್ಲಿ ಶೇಕಡ 700 ಏರಿಕೆ ಕಂಡಿತು. ಅಷ್ಟೇಅಲ್ಲ ಅದು ಆನ್‌ಲೈನ್‌ ಪಾವತಿ ವ್ಯವಸ್ಥೆಗೂ ದೊಡ್ಡ ಗೆಲುವನ್ನು ತಂದು ಕೊಟ್ಟಿತ್ತು. ಇದೆಲ್ಲವುಗಳ ಪರಿಣಾಮವಾಗಿ ಪೇಟಿಯಂ ಮೌಲ್ಯವು ಬಹಳ ವೇಗವಾಗಿ $10 ಬಿಲಿಯನ್‌ಗೆ ಏರಿಕೆಯಾಗುವುದಕ್ಕೆ ಕಾರಣವಾಯಿತು.

ವಿಜಯ್‌ ಶೇಖರ್‌ ಅವರ ವೇತನ ಮತ್ತು ಆಸ್ತಿ: 2022ರ ಫೋರ್ಬ್ಸ್‌ ಪ್ರಕಾರ, ವಿಜಯ್‌ ಶೇಖರ್‌ ಅವರ ನಿವ್ವಳ ಆಸ್ತಿ ಮೌಲ್ಯವು $1.2 ಬಿಲಿಯನ್‌ (98,12,95,20,000) ಆಗಿದೆ. ವಿಜಯ್‌ ಶೇಖರ್‌ ಶರ್ಮಾ ಅವರು ವರ್ಷಕ್ಕೆ 4 ಕೋಟಿ ರೂ. ವೇತನ ಪಡೆಯುತ್ತಾರೆ. ಕಳೆದ ಮೂರು ವರ್ಷಗಳಿಂದ ಅವರ ವೇತನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+