ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ಕ್ರೀಡಾಪಟುಗಳ ಪಟ್ಟಿಯಲ್ಲಿ ಕೇವಲ ಇಬ್ಬರು ಏಷ್ಯಾದವರು ಮಾತ್ರ ಕಂಡು ಬಂದಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ಕ್ರೀಡಾಪಟು ವಿರಾಟ್ ಕೊಹ್ಲಿ 2022 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ರ ಪೈಕಿ ದೇಶದಿಂದ ಒಬ್ಬರೇ ಆಗಿದ್ದಾರೆ. ಅಷ್ಟು ಮಾತ್ರವಲ್ಲದೇ ಏಷ್ಯಾದ ಎರಡನೇ ಅತೀ ಅಧಿಕ ಪಾವತಿ ಪಡೆಯುವ ಕ್ರೀಡಾಪಟು ಆಗಿದ್ದಾರೆ.
1,000 ಕೋಟಿ ರೂಪಾಯಿಗೂ ಅಧಿಕ ನಿವ್ವಳ ಆದಾಯವನ್ನು ಹೊಂದಿರುವ ದೇಶದ ಜನಪ್ರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ, 2022 ರಲ್ಲಿ ಸ್ಪೋರ್ಟಿಕೊದ ಟಾಪ್ 100 ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ 61 ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿರುವ ಭಾರತದ ಏಕೈಕ ವ್ಯಕ್ತಿಯಾಗಿದ್ದಾರೆ. ಈ ಪಟ್ಟಿಯಲ್ಲಿರುವ ಏಷ್ಯಾದ ಮೊದಲ ಅತೀ ಅಧಿಕ ಸಂಭಾವನೆಯನ್ನು ಪಡೆಯುವ ಕ್ರೀಡಾಪಟು ಯಾರು ಎಂದು ತಿಳಿಯೋಣ ಮುಂದೆ ಓದಿ...

ವಿರಾಟ್ ಕೊಹ್ಲಿ ಆದಾಯದ ಬಗ್ಗೆ ತಿಳಿಯಿರಿ
ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಕ್ರಿಕೆಟಿಗ ಕೊಹ್ಲಿ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಆಡಿದ ಆಟ ಹೊರತುಪಡಿಸಿ, ಉಳಿದ ಆಟಗಳಿಂದ ಮತ್ತು ಗೆಲುವಿನಿಂದ 2.9 ಮಿಲಿಯನ್ ಡಾಲರ್ ವೇತನವನ್ನು ಪಡೆಯುತ್ತಾರೆ. ಇನ್ನು ಜಾಹೀರಾತುಗಳ ಮೂಲಕ ಸುಮಾರು 31 ಮಿಲಿಯನ್ ಡಾಲರ್ ಪಡೆಯುತ್ತಾರೆ. ಕೊಹ್ಲಿ ಒಟ್ಟು ನಿವ್ವಳ ಆದಾಯವು 33.9 ಮಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ.
ವಿರಾಟ್ ಕೊಹ್ಲಿ 2021 ರಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ಕ್ರೀಡಾಪಟುಗಳ ಪಟ್ಟಿಯಲ್ಲಿ 59 ನೇ ಸ್ಥಾನದಲ್ಲಿದ್ದರು. ಆದರೆ ಈ ವರ್ಷ ಎರಡು ಸ್ಥಾನ ಕೆಳಕ್ಕೆ ಇಳಿದು 61 ನೇ ಸ್ಥಾನಕ್ಕೆ ತಲುಪಿದ್ದಾರೆ. ಈ ಹಿಂದೆಯೂ ಕೂಡಾ ಏಷ್ಯಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.
ಏಷ್ಯಾದ ಮೊದಲ ಅತೀ ಅಧಿಕ ಸಂಭಾವನೆ ಪಡೆಯುವ ಕ್ರೀಡಾಪಟು
ಈ ಮೇಲೆ ತಿಳಿಸಿದ್ದಂತೆ ಈ 100 ಕ್ರೀಡಾಪಟುಗಳ ಪಟ್ಟಿಯಲ್ಲಿ ಇಬ್ಬರು ಮಾತ್ರ ಏಷ್ಯನ್ನರು ಇದ್ದಾರೆ. ಅದರಲ್ಲು ಒಬ್ಬರು ವಿರಾಟ್ ಕೊಹ್ಲಿಯಾದರೆ ಇನ್ನೋರ್ವರು ಜಪಾನಿನ ಟೆನಿಸ್ ತಾರೆ ನವೋಮಿ ಒಸಾಕಾ. 25 ವರ್ಷ ವಯಸ್ಸಿನ ಒಸಾಕಾ ತಮ್ಮ ವೃತ್ತಿಜೀವನದಲ್ಲಿ 4 ಅತೀ ಉತ್ತಮ ಆಟಗಳನ್ನು, ಎರಡು ಯುಎಸ್ ಓಪನ್ ಮತ್ತು ಎರಡು ಆಸ್ಟ್ರೇಲಿಯನ್ ಓಪನ್ ಚಾಂಪಿಯನ್‌ಗಳನ್ನು ಗೆದ್ದಿದ್ದಾರೆ.
ಯುಎಸ್ ಮತ್ತು ಯುರೋಪಿಯನ್ ಅಥ್ಲೀಟ್‌ಗಳು ಪ್ರಾಬಲ್ಯ ಹೊಂದಿರುವ ಪಟ್ಟಿಯಲ್ಲಿ ಒಸಾಕಾ 20 ನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಏಷ್ಯಾದ ಮೊದಲ ಅತೀ ಅಧಿಕ ಸಂಭಾವನೆ ಪಡೆಯುವ ಕ್ರೀಡಾಪಟುವಾಗಿದ್ದಾರೆ. ನವೋಮಿ ಒಸಾಕಾ ಒಟ್ಟು ಗಳಿಕೆಯನ್ನು 53.2 ಮಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ.
ಈ ಪೈಕಿ 1.2 ಮಿಲಿಯನ್ ಡಾಲರ್ ಗೆಲುವಿನಿಂದ ಪಡೆದ ಮೊತ್ತವಾಗಿದೆ. 52 ಮಿಲಿಯನ್ ಡಾಲರ್ ಜಾಹೀರಾತುಗಳಿಂದ ಪಡೆದ ಮೊತ್ತವಾಗಿದೆ. ಒಸಾಕಾ ಅವರು ಪಟ್ಟಿಯಲ್ಲಿ ಎರಡನೇ ಅತಿ ಹೆಚ್ಚು ಟೆನಿಸ್ ಆಟಗಾರರಾಗಿದ್ದಾರೆ. 2021 ರ 15 ಸ್ಥಾನದಿಂದ 5 ಸ್ಥಾನ ಕೆಳಕ್ಕೆ ಇಳಿದು ಈಗ 20 ನೇ ಸ್ಥಾನದಲ್ಲಿದ್ದಾರೆ.


Click it and Unblock the Notifications