ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತೆ ತನ್ನ ವಿಶೇಷ ಎಫ್‌ಡಿ ಯೋಜನೆಯ ಅವಧಿಯನ್ನು ವಿಸ್ತರಣೆ ಮಾಡಿದೆ. ಎಸ್‌ಬಿಐ ವಿಕೇರ್ ಎಫ್‌ಡಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಈ ಎಫ್‌ಡಿಯಲ್ಲಿ 5 ವರ್ಷದಿಂದ 10 ವರ್ಷದವರೆಗಿನ ಅವಧಿಯ ಹೂಡಿಕೆಗೆ ಅಧಿಕ ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಹಿರಿಯ ನಾಗರಿಕರಿಗೆ ಇರುವ ವಿಶೇಷ ಎಫ್‌ಡಿ ಯೋಜನೆಯಾಗಿದೆ.
ಈ ಹಿಂದೆ ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ ವಿಶೇಷ ಎಫ್‌ಡಿ ಯೋಜನೆಯನ್ನು ವಿಸ್ತರಣೆ ಮಾಡಿದೆ. ಬ್ಯಾಂಕ್‌ನ ವೆಬ್‌ಸೈಟ್‌ನ ಪ್ರಕಾರ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕವನ್ನು ಜುಲೈ 7, 2023 ರವರೆಗೆ ವಿಸ್ತರಿಸಲಾಗಿದೆ. ಈಗ ಎಸ್‌ಬಿಐ ಎಫ್‌ಡಿ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. ಯೋಜನೆಯ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಎಸ್‌ಬಿಐ ವಿಕೇರ್ ಎಫ್‌ಡಿ ಯೋಜನೆ
ಈ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. "ಎಸ್‌ಬಿಐ ಹಿರಿಯ ನಾಗರಿಕರೊಂದಿಗಿನ ತನ್ನ ಆಫರ್ ಬಗ್ಗೆ ಹೆಮ್ಮೆಯನ್ನು ಹೊಂದಿದೆ. ಟರ್ಮ್ ಡೆಪಾಸಿಟ್‌ಗಳ ಮೇಲೆ ಹೆಚ್ಚುವರಿ ಬಡ್ಡಿಯನ್ನು ನೀಡುವ ಮೂಲಕ ಆದಾಯವನ್ನು ರಕ್ಷಣೆ ಮಾಡಲು ಹೊಸದಾದ ಡೆಪಾಸಿಟ್ ಯೋಜನೆ "ಎಸ್‌ಬಿಐ ವಿಕೇರ್" ಅನ್ನು ಪರಿಚಯಿಸುತ್ತದೆ," ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಎಸ್‌ಬಿಐ ವಿಕೇರ್ ಬಡ್ಡಿದರವು ಶೇಕಡ 7.50 ಆಗಿದೆ.
ಎಸ್‌ಬಿಐ ಅಮೃತ ಕಲಶ ಬಡ್ಡಿದರ
ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕೂಡಾ ವಿಶೇಷ ಎಫ್‌ಡಿ ಯೋಜನೆಯನ್ನು ಹೊಂದಿದೆ. ಅಮೃತ ಕಲಶ ಎಫ್‌ಡಿ ರಿಟೇಲ್ ಟರ್ಮ್ ಡೆಪಾಸಿಟ್ ಯೋಜನೆ ಎಂಬುವುದು ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆಗಳಲ್ಲಿ ಒಂದಾಗಿದೆ. ಈ ತಿಂಗಳ ಅಂತ್ಯದಲ್ಲಿಯೇ ಅಂದರೆ ಜೂನ್ ತಿಂಗಳ ಕೊನೆಯಲ್ಲೇ ಇದರ ಅವಧಿ ಅಂತ್ಯವಾಗಲಿದೆ.
ಈ ಹಿಂದೆ ಅಂತ್ಯವಾಗಿದ್ದ ಎಫ್‌ಡಿ ಯೋಜನೆ ಇದಾಗಿದ್ದು ಎಸ್‌ಬಿಐ ಮತ್ತೆ ಆರಂಭ ಮಾಡಿದೆ. ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಈ 400-ದಿನಗಳ ಅಮೃತ ಕಲಶ ಎಫ್‌ಡಿ ಗ್ರಾಹಕರಿಗೆ ಶೇಕಡ 7.1 ಆಗಿದೆ. ಹಿರಿಯ ನಾಗರಿಕರಿಗೆ ಶೇಕಡ 7.6ರಷ್ಟು ಬಡ್ಡಿದರ ಇದೆ. ಎಸ್‌ಬಿಐ ವೆಬ್‌ಸೈಟ್ ಪ್ರಕಾರ, "400 ದಿನಗಳ ಎಫ್‌ಡಿ (ಅಮೃತ ಕಲಶ) ಬಡ್ಡಿದರ ಶೇಕಡ 7.10 ಆಗಿದೆ. ಹಿರಿಯ ನಾಗರಿಕರಿಗೆ ಶೇಕಡ 7.60 ಆಗಿದೆ," ಎಂದು ಉಲ್ಲೇಖ ಮಾಡಲಾಗಿದೆ.
ಎರಡೂ ಎಫ್‌ಡಿ ಯೋಜನೆಗಳ ಕೊನೆಯ ದಿನಾಂಕ
ಎಸ್‌ಬಿಐ ವಿಕೇರ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2023 ರವರೆಗೆ ವಿಸ್ತರಿಸಲಾಗಿದೆ. ಪ್ರಸ್ತುತ ಈ ಯೋಜನೆಗೆ ಹೊಸದಾಗಿ ಹೂಡಿಕೆ ಮಾಡಬಹುದಾಗಿದೆ ಅಥವಾ ಮೆಚ್ಯೂರಿಟಿ ಆದ ಡೆಪಾಸಿಟ್‌ಗಳ ಅಪ್‌ಡೇಟ್‌ಗೆ ಅವಕಾಶವಿದೆ. ಎಸ್‌ಬಿಐ ವಿಕೇರ್ ಬಡ್ಡಿದರ ಶೇಕಡ 7.50 ಆಗಿದೆ. ಇನ್ನು ಎಸ್‌ಬಿಐ ಅಮೃತ ಕಲಶ ವಿಶೇಷ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಯೋಜನೆಯನ್ನು ಕೂಡಾ ವಿಸ್ತರಣೆ ಮಾಡಲಾಗಿದೆ.
ಈ ಹಿಂದೆ ಎಸ್‌ಬಿಐ ಅಮೃತ ಕಲಶ ವಿಶೇಷ ಯೋಜನೆಯ ಅವಧಿ ಕೊನೆಯಾದ ಬಳಿಕ ಮತ್ತೆ ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಆದರೆ ಈಗ ಆಗಸ್ಟ್ 15, 2023ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಬ್ಯಾಂಕ್ ಫೆಬ್ರವರಿಯಲ್ಲಿ ಹೊಸದಾಗಿ ಈ ಯೋಜನೆಯನ್ನು ಆರಂಭ ಮಾಡಿದೆ. ಆರಂಭದಲ್ಲಿ ಫೆಬ್ರವರಿ 15ರಿಂದ ಮಾರ್ಚ್ 31ರವರೆಗೆ ಇತ್ತು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications