ಬೆಂಗಳೂರು, ಜೂನ್ 14: ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವವರಿಗೆ ಲಾರ್ಜ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಫಂಡ್‌ಗಳ ನಡುವಿನ ವ್ಯತ್ಯಾಸ ಗೊತ್ತಿರಬೇಕು. ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಎಂದರೆ ಮಾರ್ಕೆಟ್ ಬಂಡವಾಳ ತುಂಬಾ ಹೆಚ್ಚಿರುವ ಕಂಪನಿಗಳ ಷೇರುಗಳಲ್ಲಿ ತಮ್ಮ ಅಸೆಟ್‌ನ ಕನಿಷ್ಠ 80% ಹೂಡಿಕೆ ಮಾಡಿರುವ ಈಕ್ವಿಟಿ ಫಂಡ್‌ಗಳಾಗಿರುತ್ತವೆ. ಮಾರ್ಕೆಟ್ ಬಂಡವಾಳದ ಆಧಾರದಲ್ಲಿ ಅಗ್ರ 100 ಕಂಪನಿಗಳ ಷೇರುಗಳಲ್ಲಿ ಈ ಫಂಡ್‌ಗಳು ಹೂಡಿಕೆ ಮಾಡಿರುತ್ತವೆ.
ಈ ಕೆಟಗರಿಯ ಕೆಲವು ಷೇರುಗಳನ್ನು ಬ್ಲ್ಯೂಚಿಪ್ ಷೇರುಗಳು ಎಂದು ಕರೆಯಲಾಗುತ್ತದೆ. ಯಾಕೆಂದರೆ, ಸಾಮಾನ್ಯವಾಗಿ ಇವು ಮಾರ್ಕೆಟ್ ಲೀಡರ್‌ಗಳಾಗಿರುತ್ತವೆ ಅಥವಾ ತಮ್ಮ ಸೆಕ್ಟರ್‌ನಲ್ಲಿ ಪ್ರಮುಖ 3 ಕಂಪನಿಗಳಲ್ಲಿ ಒಂದಾಗಿರುತ್ತವೆ. ಇವುಗಳ ಹಣಕಾಸು ಸಾಮರ್ಥ್ಯ ಉತ್ತಮವಾಗಿರುತ್ತವೆ ಮತ್ತು ಬೆಳವಣಿಗೆ ಮತ್ತು ಲಾಭದ ವಿಷಯದಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಇರುತ್ತವೆ. ಉದಾಹರಣೆಗೆ, ಟಾಟಾ ಗ್ರೂಪ್, ರಿಲಾಯನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಇತರೆ. ಈ ಕಾರಣಗಳಿಗೆ ಇವು ಸ್ಟಾಕ್ ಮಾರ್ಕೆಟ್‌ನಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುತ್ತವೆ. ಮಧ್ಯಮ ಪ್ರಮಾಣದ ರಿಸ್ಕ್ ಇಟ್ಟುಕೊಂಡು ಉತ್ತಮ ರಿಟರ್ನ್ಸ್ ಅನ್ನು ಬಯಸುವ ಹೂಡಿಕೆದಾರರಿಗೆ ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಒಂದು ಉತ್ತಮ ಆಯ್ಕೆ. ಇದರಲ್ಲಿ 5 ವರ್ಷಗಳಿಗಿಂತ ಹೆಚ್ಚು ಹೂಡಿಕೆ ಮಾಡಿಕೊಂಡಿರಬಹುದು.

ಲಾರ್ಜ್ ಮತ್ತು ಮಿಡ್ ಕ್ಯಾಪ್ ಫಂಡ್‌ಗಳು ಈಕ್ವಿಟಿ ಫಂಡ್‌ಗಳಾಗಿದ್ದು, ಇವೆರಡೂ ಲಾರ್ಜ್ ಕ್ಯಾಪ್ ಅಂದರೆ, ದೊಡ್ಡ ಕಂಪನಿಗಳು ಮತ್ತು ಮಿಡ್ ಕ್ಯಾಪ್ ಅಂದರೆ ಮಧ್ಯಮ ಗಾತ್ರದ ಕಂಪನಿಗಳಲ್ಲಿ ಹೂಡಿಕೆ ಮಾಡಿರುತ್ತವೆ. ಈ ಫಂಡ್‌ಗಳು ತಮ್ಮ ಅಸೆಟ್‌ನ ಕನಿಷ್ಠ 35% ರಷ್ಟನ್ನು ಮಿಡ್ ಕ್ಯಾಪ್ ಸ್ಟಾಕ್‌ಗಳಲ್ಲಿ ಹಾಕಿರುತ್ತವೆ. ಮಿಡ್ ಕ್ಯಾಪ್ ಎಂದರೆ ಮಾರ್ಕೆಟ್ ಬಂಡವಾಳದ ಪ್ರಕಾರ 101 ಮತ್ತು 250 ರ ಮಧ್ಯೆ ಇರುವ ಕಂಪನಿಗಳಾಗಿವೆ.
ಈ ಮ್ಯೂಚುವಲ್ ಫಂಡ್‌ಗಳು ಎರಡು ರೀತಿಯ ಪ್ರಯೋಜನ ನೀಡುತ್ತವೆ. ಮೊದಲನೆಯದಾಗಿ, ಲಾರ್ಜ್ ಕ್ಯಾಪ್ ಕಂಪನಿಗಳಿಂದ ಉತ್ತಮ ರಿಟರ್ನ್ಸ್ ಟ್ರ್ಯಾಕ್ ರೆಕಾರ್ಡ್ ಅನ್ನು ಇವು ಒದಗಿಸುತ್ತವೆ. ಎರಡನೆಯದಾಗಿ, ಮಧ್ಯಮ ಗಾತ್ರ ಕಂಪನಿಗಳಲ್ಲಿ ಉತ್ತಮ ಬೆಳವಣಿಗೆಯ ಅವಕಾಶವಿದೆ. ಇದರಿಂದ ಉತ್ತಮ ರಿಟರ್ನ್ಸ್ ಕೂಡಾ ಸಿಗುವ ಸಾಧ್ಯತೆ ಇರುತ್ತದೆ. ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಿಗೆ ಹೋಲಿಸಿದರೆ ಮಿಡ್ ಕ್ಯಾಪ್ ಫಂಡ್‌ಗಳು ಉತ್ತಮ ರಿಟರ್ನ್ಸ್ ಕೊಡುತ್ತವೆ. ಆದರೆ, ಇದರಲ್ಲಿ ಸ್ವಲ್ಪ ಹೆಚ್ಚು ರಿಸ್ಕ್ ಇರುತ್ತದೆ.
ಮ್ಯೂಚುವಲ್ ಹೂಡಿಕೆಯು ಮಾರ್ಕೆಟ್ ಅಪಾಯಗಳಿಗೆ ಒಳಪಟ್ಟಿರುವುದರಿಂದ ಸ್ಕೀಮ್‌ಗೆ ಸಂಬಂಧಿಸಿದ ಕಾಗದಪತ್ರಗಳನ್ನು ಸರಿಯಾಗಿ ಓದಿಕೊಳ್ಳಿ. ಅಗತ್ಯವಿದ್ದರೆ, ಹಣಕಾಸು ಸಲಹೆಗಾರರ ಸಲಹೆ ಪಡೆಯಿರಿ.


Click it and Unblock the Notifications