ಕೈಗಾರಿಕೋದ್ಯಮಿ, ರಿಲಯನ್ಸ್ ಅಧ್ಯಕ್ಷರಾಗಿರುವ ಮುಕೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ ಇಬ್ಬರೂ ಸುಖಿ ದಾಂಪತ್ಯ ಮೂಲಕ ಸಮೃದ್ಧ ಮತ್ತು ಯಶಸ್ವಿ ಅಂಬಾನಿ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ. ಇವರ ಕುಟುಂಬ ಏಷ್ಯಾದ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ.
ರಿಲಯನ್ಸ್ ಚೇರ್ಮನ್ ಮುಕೇಶ್ ಅಂಬಾನಿ ತಮ್ಮ ಮಕ್ಕಳಿಗೆ ಕುಟುಂಬದ ವ್ಯವಹಾರವನ್ನು ಹೇಗೆ ನಿರ್ವಹಿಸಬೇಕೆಂದು ಕಲಿಸಿದ್ದಾರೆ. ಯಾಕೆಂದರೆ ಪ್ರತಿಯೊಬ್ಬರು ಕೂಡಾ ಒಂದೊಂದು ವ್ಯವಹಾರದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ರಿಲಯನ್ಸ್ ಗ್ರೂಪ್ ನ ಭವಿಷ್ಯದ ನಾಯಕತ್ವದ ಬಗ್ಗೆ ಚಿಂತಿಸಿದ್ದು, ಕಂಪನಿ ಮುಖ್ಯಸ್ಥ ಮುಕೇಶ್ ಅಂಬಾನಿ ತಮ್ಮ ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ಸಂಸ್ಥೆಯ ಆಡಳಿತ ಮಂಡಳಿಗೆ ಕರೆತರಲು ನಿರ್ಧರಿಸಿದ್ದಾರೆ. ಇದೇ ಹಿನ್ನಲೆಯಲ್ಲಿ ಮೂವರು ಮಕ್ಕಳನ್ನೂ ಆರ್‌ಐಎಲ್‌ನ ಕಾರ್ಯ ನಿರ್ವಾಹಕೇತರ ನಿರ್ದೇಶಕರನ್ನಾಗಿ ನೇಮಿಸಲು ಸೋಮವಾರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿ ಶಿಫಾರಸು ಮಾಡಿದೆ.
ಮುಕೇಶ್ ಅಂಬಾನಿಯವರ ಮಕ್ಕಳಾದ, ಅನಂತ್, ಆಕಾಶ್ ಮತ್ತು ಇಶಾ ಈ ಮೂವರು ಕೂಡಾ ಅತ್ಯುತ್ತಮ ಶೈಕ್ಷಣಿಕ ಅರ್ಹತೆ ಹೊಂದಿದ್ದು , ಉದ್ಯಮಗಳನ್ನು ಯಶಸ್ವಿಯಾಗಿ ಮುನ್ನಡೆಸುವ ಅನುಭವ ಹೊಂದಿದ್ದಾರೆ. ಮಾತ್ರವಲ್ಲದೇ ಈಗಾಗಲೇ ದೇಶದಲ್ಲಿರುವ ರಿಲಯನ್ಸ್ ಗ್ರೂಪ್ ಅತ್ಯಮೂಲ್ಯ ಕಂಪನಿಗಳಲ್ಲಿ ಮಕ್ಕಳಿಗೆ ಪ್ರಮುಖ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ನೀಡಲಾಗಿದೆ.
ರಿಲಯನ್ಸ್ ಗ್ರೂಪ್‌ನಲ್ಲಿ ಇಶಾ, ಅನಂತ್ ಮತ್ತು ಆಕಾಶ್ ಅಂಬಾನಿ ಅವರು ಯಾವ ಇತರ ಕಾರ್ಯಗಳು ಮತ್ತು ಕರ್ತವ್ಯಗಳನ್ನು ಹೊಂದಿದ್ದಾರೆ ಎಂಬುದನ್ನು ನೋಡೋಣ.. ಮುಂದೆ ಓದಿ....
ಆಕಾಶ್ ಅಂಬಾನಿ ನಿರ್ವಹಣೆ ಮಾಡುವ ಸಂಸ್ಥೆಗಳು
ಅಂಬಾನಿ ಕುಟುಂಬದ ಹಿರಿಯ ಪುತ್ರನಾಗಿರುವ ಆಕಾಶ್ ಅಂಬಾನಿ ತಮ್ಮ ತಂದೆಯ ವ್ಯಾಪಾರ ಸಾಮ್ರಾಜ್ಯದ ಪ್ರಮುಖ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಆಕಾಶ್ ರಿಲಯನ್ಸ್ ಜಿಯೋದ ಅಧ್ಯಕ್ಷರಾಗಿದ್ದು, ಭಾರತದ ಅತಿದೊಡ್ಡ ಟೆಲಿಕಾಂ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ. ಆಕಾಶ್ ಪ್ರಾರಂಭದಲ್ಲಿ ಜಿಯೋ ಇನ್ಫೋಕಾಮ್‌ನಲ್ಲಿ ಸ್ಟ್ರಾಟಜಿ ಚೀಫ್ ಆಗಿದ್ದು ಜಿಯೋದ ಏರುಗತಿಯಲ್ಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಾತ್ರವಲ್ಲದೇ ಮುಂಬೈನ ಐಪಿಎಲ್ ತಂಡದ ಸಹ-ಮಾಲೀಕರಾಗಿದ್ದಾರೆ.
ಇಶಾ ಅಂಬಾನಿ ಮುನ್ನಡೆಸುವ ಸಂಸ್ಥೆಗಳು
ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್) ಗೆ ಹೊಸ ದೃಷ್ಟಿಕೋನ ಮತ್ತು ಉದ್ಯಮಶೀಲ ಶಕ್ತಿಯನ್ನು ತುಂಬಲು ರಿಲಯನ್ಸ್ ರಿಟೇಲ್ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳ ನಿರ್ದೇಶಕರಾಗಿ ಅವರು ತಮ್ಮ ಅನುಭವವನ್ನು ಬಳಸಿಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ಗೆ ಸೇರುವ ಮೊದಲು ಅವರು ಅಮೇರಿಕಾದ ಮೆಕಿನ್ಸೆ & ಕಂಪನಿಯ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ಅಲ್ಲಿ ಅವರು ಅಗಾಧ ಅನುಭವವನ್ನು ತಮ್ಮದಾಗಿಸಿಕೊಂಡರು.
ಅನಂತ್ ಅಂಬಾನಿ ನಿರ್ವಹಣೆಯಡಿ ಇರುವ ಸಂಸ್ಥೆಗಳು
ಇಶಾ ಅಂಬಾನಿಯ ಅವಳಿ ಸಹೋದರರಾಗಿರುವ ಅನಂತ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಎನರ್ಜಿ ಬ್ಯುಸಿನೆಸ್ ಅನ್ನು ಮುನ್ನಡೆಸುತ್ತಿದ್ದಾರೆ. ಅವರು ಜಿಯೋ ಪ್ಲಾಟ್‌ಫಾರ್ಮ್‌ಗಳು ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್‌ನ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


Click it and Unblock the Notifications