ನೀವು ಸಾಲವನ್ನು ಪಡೆಯುವ ಮುನ್ನ ನಿಮ್ಮ ಸಿಬಿಲ್ ಕ್ರೆಡಿಟ್ ಸ್ಕೋರ್ ಹೇಗಿದೆ ಎಂದು ಪರೀಕ್ಷಿಸಿ ಬ್ಯಾಂಕುಗಳು ಸಾಲ ನೀಡುತ್ತವೆ. ಸಿಬಿಲ್ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ನಿಮಗೆ ಸುಲಭವಾಗಿ ಸಾಲ ಸಿಗುತ್ತದೆ. ಹಾಗಿದ್ದರೆ ಈ ಸಿಬಿಲ್ ಸ್ಕೋರ್ ಎಂದರೇನು? ಈ ಸಿಬಿಲ್ ಸ್ಕೋರ್ ಹೆಚ್ಚಿಸೋದು ಹೇಗೆ? ಸಿಬಿಲ್ ಸ್ಕೋರ್ ಎಷ್ಟಿದೆ ಎಂದು ಪರೀಕ್ಷಿಸುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ
ಸಿಬಿಲ್ ಸ್ಕೋರ್ ಎಂದರೇನು?
ಕ್ರೆಡಿಟ್ ಇನ್ಫರ್ಮೇಶನ್ ಬ್ಯೂರೋ(ಇಂಡಿಯಾ)ಲಿಮಿಟೆಡ್ ಅಂದರೆ ಸಿಬಿಲ್, ಸಾಲದ ಬಗ್ಗೆ ಮಾಹಿತಿ ನೀಡುವ ದೇಶದ ಮೊದಲ ಕಂಪನಿಯಾಗಿದೆ. ವ್ಯಕ್ತಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಸಾಲದ ದಾಖಲೆಗಳ ಸಂಗ್ರಹಣೆ ಮತ್ತು ನಿರ್ವಹಣೆಯೇ ಈ ಕಂಪನಿಯ ಮೂಲ ಉದ್ದೇಶವಾಗಿದೆ.
ಸಿಬಿಲ್ ಕಂಪನಿಯು 3 ಸಂಖ್ಯೆಯ ನಂಬರ್ ಬಿಡುಗಡೆ ಮಾಡುತ್ತದೆ. 300 ರಿಂದ 900ರವರೆಗೆ ಕ್ರೆಡಿಟ್ ಸ್ಕೋರ್ ನೀಡುತ್ತದೆ. 700ಕ್ಕಿಂತ ಹೆಚ್ಚಿನ ಸ್ಕೋರ್ ಇದ್ದರೆ ಉತ್ತಮ ಸ್ಕೋರ್ ಆಗಿದ್ದು, ಸಾಲ ಮರುಪಾವತಿಸಲು ಸಾಮರ್ಥ್ಯರು ಎಂದು ಪರಿಗಣಿಸಲಾಗುತ್ತದೆ.
ಸಿಬಿಲ್ ಸ್ಕೋರ್ ಮಹತ್ವವೇನು?
ಎಲ್ಲಾ ಬ್ಯಾಂಕುಗಳು ಮತ್ತು ಸಾಲ ಸಂಸ್ಥೆಗಳು ಸಿಬಿಲ್‌ಗೆ ಸಾಲದ ವರದಿಯನ್ನು ಕಳುಹಿಸುತ್ತವೆ. ಈ ಮಾಹಿತಿಯನ್ನು ಕ್ರೆಡಿಟ್ ವರದಿಯವರು ಕ್ರೆಡಿಟ್ ಸಂಸ್ಥೆಗಳಿಗೆ ಕಳುಹಿಸುತ್ತಾರೆ. ನಂತರ ಸಿಬಿಲ್ ಸ್ಕೋರ್ ಮೌಲ್ಯ ಮಾಪನ ಮಾಡಿ ಗ್ರಾಹಕರಿಗೆ ಸಾಲ ಕೊಡಲು ಬ್ಯಾಂಕುಗಳು ತೀರ್ಮಾನಿಸುತ್ತವೆ. ಗ್ರಾಹಕಲು ಸಾಲ ಪಡೆಯಲು ಈ ಕ್ರೆಡಿಟ್ ಸ್ಕೋರ್ ತುಂಬಾ ಮುಖ್ಯ. ಇದರ ಮೂಲಕವೇ ನೀವು ಸಾಲವನ್ನ ಪಡೆದರೆ ಹಿಂತಿರುಗಿಸಿ ಕೊಡಲು ಸಾಮರ್ಥ್ಯರೇ ಅಥವಾ ಇಲ್ಲವೇ ಎಂದು ಬ್ಯಾಂಕುಗಳು ನಿರ್ಧರಿಸುತ್ತವೆ.
ಉತ್ತಮವಾದ ಸಿಬಿಲ್ ಸ್ಕೋರ್ ನಿರ್ವಹಿಸುವುದು ಹೇಗೆ?
ಉತ್ತಮವಾದಂತಹ ಸಿಬಿಲ್ ಸ್ಕೋರ್ ನಿರ್ವಹಿಸಲು ಮೊದಲು ಮಾಡಬೇಕಾದದ್ದು ಸರಿಯಾದ ಸಮಯದಲ್ಲಿ ಬಾಕಿಯನ್ನು ಪಾವತಿ ಮಾಡುತ್ತಿರುಬೇಕು. ನಿಗದಿತ ಸಮಯಕ್ಕೆ ಸರಿಯಾಗಿ EMI ಮತ್ತು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀಳಲಿದ್ದು ಹೆಚ್ಚುವರಿ ಕ್ರೆಡಿಟ್ ಕಾರ್ಡ್ ಅಥವಾ ಸಾಲದ ಸೌಲಭ್ಯಕ್ಕೆ ಆಕರ್ಷಣೆಯಾಗುತ್ತದೆ.
ಸಿಬಿಲ್ ಸ್ಕೋರ್ ಪಡೆಯುವುದು ಹೇಗೆ?
ಸುಲಭ ವಿಧಾನದ ಮೂಲಕ ಸಿಬಿಲ್ ಸ್ಕೋರ್ ಮಾಹಿತಿಯನ್ನು ಪಡೆಯಬಹುದು.
ಮೊದಲ ಹಂತ: CIBIL.Com ವೆಬ್‌ಸೈಟ್‌ಗೆ ಭೇಟಿ ನೀಡಿ.
ಎರಡನೇ ಹಂತ: ಅಕೌಂಟ್ ಕ್ರಿಯೆಟ್ ಮಾಡಿ( ನಿಮ್ಮದೇ ಆದ ಯೂಸರ್ ನೇಮ್, ಪಾಸ್‌ವರ್ಡ್, ಮತ್ತು ನಿಮ್ಮ ಹೆಸರು, ಇ-ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಹಾಕಿ)
ಮೂರನೇ ಹಂತ: ನಿಮ್ಮ ಖಾಸಗಿ ಮಾಹಿತಿ ಹಾಕಿ(ಜನ್ಮ ದಿನಾಂಕ, ವಿಳಾಸ, ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ)
ನಾಲ್ಕನೇ ಹಂತ: ನಿಮ್ಮ ಗುರುತನ್ನು ಪರಿಶೀಲಿಸಿ (ನಿಮ್ಮ ಮೊಬೈಲ್‌ಗೆ ಬರುವ OTP ಅಥವಾ ಇತರೆ ಪ್ರಶ್ನೆಗಳ ಮೂಲಕ)
ಐದನೇ ಹಂತ: ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿ.
ಈ ಮೇಲಿನ ಹಂತಗಳನ್ನು ಪೂರೈಸಿದ ಬಳಿಕ ಸಿಬಿಲ್, ನಿಮ್ಮ ಕ್ರೆಡಿಟ್ ಇನ್ಫರ್ಮೇಶನ್ ರಿಪೋರ್ಟ್ ಸ್ಕ್ರೀನ್ ತೋರಿಸುತ್ತದೆ.
ಸಿಬಿಲ್ ಸ್ಕೋರ್ ಅನ್ನು ಓದುವುದು ಹೇಗೆ?
ಸಿಬಿಲ್ ವರದಿಯಲ್ಲಿ ಗೃಹ ಸಾಲ, ವೈಯಕ್ತಿ ಸಾಲ, ಕ್ರೆಡಿಟ್ ಕಾರ್ಡ್ ಮತ್ತು ಓವರ್ ಡ್ರಾಫ್ಟ್ ಸೌಲಭ್ಯಗಳು ಸೇರಿದಂತೆ ಇಲ್ಲಿಯವರೆಗೆ ಪಡೆದ ಸಾಲಗಳ ಬಗ್ಗೆ ವಿವರವಾದ ಮಾಹಿತಿ ಇರುತ್ತದೆ. ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿದ್ದರೆ ಅನುಕೂಲಕರ ಬಡ್ಡಿದರದಲ್ಲಿ ಸಾಲ ಸಿಗುತ್ತದೆ.
ವೈಯಕ್ತಿಕ ಸಾಲ ಪಡೆಯಲು ಕನಿಷ್ಠ ಸಿಬಿಲ್ ಸ್ಕೋರ್ 750 ಅಥವಾ ಹೆಚ್ಚಿರಬೇಕು. ಅಸ್ತಿತ್ವದಲ್ಲಿರುವ ಸಾಲ ಮತ್ತು ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಾಕಿಗಳಂತಹ ಅಂಶಗಳು ಸಾಲದ ಅರ್ಹತೆ ಮೇಲೆ ಪರಿಣಾಮ ಬೀರುತ್ತವೆ.


Click it and Unblock the Notifications